For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯ ಎಂಟನೇಯ ತಿಂಗಳ ಆಹಾರ ಕ್ರಮ ಹೀಗಿರಲಿ

|

ತಾಯಿಯಾಗುವ ಸಂಭ್ರಮದಲ್ಲಿ ಮೈಮರೆಯದೆ ನಾವು ಅತಿ ಶ್ರದ್ದೆ ವಹಿಸಬೇಕಾಗುವುದು ನಮ್ಮ ಆಹಾರ ಕ್ರಮದಲ್ಲಿ. ನಾವು ತೆಗೆದುಕೊಳ್ಳುವ ಆಹಾರ ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿನ ಸಂಪೂರ್ಣ ಬೆಳವಣಿಗೆಗೆ ಸಹಕಾರಿ. ಅದೇ ಅಲ್ಲದೆ ಗರ್ಭಿಣಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಎಷ್ಟೋ ರೀತಿಯಲ್ಲಿ ಉಪಯೋಗ. ಬೆಳೆಯುತ್ತಿರುವ ಶಿಶುವನ್ನು ಮನಸಿನಲ್ಲಿ ಇಟ್ಟುಕೊಂಡು ನಾವು ಏನನ್ನು ತಿನ್ನುತ್ತೇವೆ ಹಾಗೂ ಎಷ್ಟು ಪ್ರಮಾಣದಲ್ಲಿ ಎಂಬುದನ್ನು ಅತಿ ಜಾಗರೂಕತೆಯಿಂದ ನಿರ್ಣಯಿಸಬೇಕು.

ಎಂಟನೆಯ ತಿಂಗಳು ಗರ್ಭಾವಸ್ಥೆಯಲ್ಲಿ ಒಂದು ಪ್ರಮುಖ ಘಟ್ಟ. ಒಂದು ಹಂತಕ್ಕೆ ಬೆಳೆದಿರುವ ಮಗು ಇನ್ನು ಸ್ವಲ್ಪವೇ ಸಮಯದಲ್ಲಿ ತಾಯಿಯ ಕೈಗಳಿಗೆ ಬರಲು ತಯಾರಾಗುತ್ತಿರುತ್ತದೆ. ತಾಯಿಯು ಮುಂದೆ ಬರಲಿರುವ ಹೆರಿಗೆಯ ಭಯದ ಜೊತೆಗೆ ಕೆಲವೇ ವಾರಗಳಲ್ಲಿ ತನ್ನ ಹೊಟ್ಟೆಯಲ್ಲಿ ಜೋಪಾನವಾಗಿ ಇರುವ ಮಗುವನ್ನು ತಬ್ಬಿಕೊಳ್ಳುವ ಘಳಿಗೆಗಾಗಿ ಕಾಯುತ್ತಿರುತ್ತಾಳೆ. ಇಂತಹ ಮುಖ್ಯ ಘಟ್ಟದಲ್ಲಿ ನಾವು ನಮ್ಮ ಆಹಾರದಲ್ಲಿ ಏನನ್ನು ಸೇರಿಸಿಕೊಳ್ಳಬಹುದು ಹಾಗೂ ಯಾವ ಆಹಾರಗಳಿಂದ ದೂರವಿರಬೇಕು ಎಂಬುದನ್ನು ನೋಡೋಣ....

ಮೀನು

ಮೀನು

ಮೀನು ಅತ್ಯಂತ ಪೌಷ್ಟಿಕ ಆಹಾರ. ಅದರಲ್ಲಿರುವ ಪ್ರೋಟೀನ್ ಹಾಗೂ ಕಬ್ಬಿಣದ ಅಂಶ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಪೋಷಣೆಗೆ ಬಹಳ ಉಪಯೋಗ. ಹಾಗೆಯೇ ರಕ್ತದ ನ್ಯೂನತೆ ಅಥವಾ ಅನಿಮಿಯದಿಂದ ಬಳಲುತ್ತಿರುವ ಗರ್ಭಿಣಿಗೆ ಸುಸ್ತು ಆಗದಂತೆ ಪುಷ್ಟಿ ನೀಡುತ್ತದೆ. ಆದರೆ ಕೆಲವು ರೀತಿಯ ಮೀನಿನಲ್ಲಿ ಪಾದರಸ ಅಥವಾ ಕೆಲವು ವಿಷಕಾರಿ ಅಂಶಗಳು ಇರುತ್ತವೆ. ಇದು ನಮ್ಮ ಭಾರತ ದೇಶದಲ್ಲಿ ಸಿಗುವ ಮೀನುಗಳಲ್ಲಿ ಈ ಸಾಧ್ಯತೆ ಕಡಿಮೆ ಆದರೂ ನಾವು ಮೀನು ಕೊಳ್ಳುವ ಅಥವಾ ತಿನ್ನುವ ಮುನ್ನ ಸ್ವಲ್ಪ ಜಾಗರೂಕತೆ ವಹಿಸಿ ಆರಿಸಿ ತಿಂದರೆ ಉತ್ತಮ.

ಬಾಳೆಹಣ್ಣು

ಬಾಳೆಹಣ್ಣು

ಹಣ್ಣುಗಳಲ್ಲಿಯೇ ಬಹಳಷ್ಟು ಪೌಷ್ಟಿಕ ಹಾಗೂ ಅತಿ ಕಡಿಮೆ ದರದಲ್ಲಿ ಸಿಗುವ ಒಂದು ಪ್ರಮುಖ ಹಣ್ಣು ಬಾಳೆಹಣ್ಣು. ಬಾಳೆಹಣ್ಣಿನಲ್ಲಿ ವಿವಿಧ ರೀತಿಯ ವಿಟಮಿನ್ ಹಾಗೂ ಮಿನರಲ್ ಗಳು ಇವೆ. ಬಾಳೆಹಣ್ಣಿನಲ್ಲಿ ಇರುವ ಐರನ್, ಕಾಲ್ಸಿಯುಂ ಹಾಗೂ ಅತಿ ಹೆಚ್ಚು ಪ್ರಮಾಣದ ಪೊಟಾಷಿಯುಂ ಪ್ರತಿ ಮಹಿಳೆಗೂ ಬೇಕು. ಅಷ್ಟೇ ಅಲ್ಲದೆ ಬಾಳೆಹಣ್ಣು ಆಹಾರ ಜೀರ್ಣಿಸಲು ಬಹಳ ಉಪಯೋಗ. ಗರ್ಭಿಣಿಯರಿಗೆ ಬಹು ದೊಡ್ಡ ತೊಂದರೆಯಾದ ಮಲಬದ್ದತೆಯನ್ನು ಇದು ನಿವಾರಿಸುತ್ತದೆ.

Most Read: ಗರ್ಭಿಣಿಯರು ಆಲೂಗಡ್ಡೆ ಸೇವಿಸಬಹುದೇ? ಇದರಿಂದ ಆರೋಗ್ಯಕ್ಕೆ ಸಮಸ್ಯೆ ಇದೆಯೇ?

ಹಾಲಿನ ಪದಾರ್ಥಗಳು

ಹಾಲಿನ ಪದಾರ್ಥಗಳು

ಮಗುವಿನ ಮೊದಲ ಆಹಾರವೇ ಹಾಲು. ಮಕ್ಕಳು ಮೊದಲ ಕೆಲವು ವರ್ಷಗಳಲ್ಲಿ ಬಹಳಷ್ಟು ಹಾಲಿನ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ಇದಕ್ಕೆ ಕಾರಣವಿಲ್ಲದೆ ಇಲ್ಲ. ಹಾಲು, ಮೊಸರು, ಮಜ್ಜಿಗೆ, ಪನೀರ್, ತುಪ್ಪ, ಬೆಣ್ಣೆ ಹೀಗೆ ಹಾಲಿನ ಉತ್ಪನ್ನಗಳಲ್ಲಿ ಇರುವ ಪ್ರೋಟೀನ್, ವಿಟಮಿನ್, ಕಾಲ್ಶಿಯುಂ ಹಾಗೂ ಇತರ ಅನೇಕ ಪೋಷ್ಕಾಂಶಗಳು ನಮ್ಮ ದೇಹಕ್ಕೆ ಮಾಡುವ ಉಪಯೋಗಗಳು ಎಷ್ಟೋ. ಮಕ್ಕಳಿಗೆ ಅಲ್ಲದೆ ಗರ್ಭದ ಶಿಶುವಿಗೆ ಹಾಗೂ ಗರ್ಭಿಣಿ ಸ್ತ್ರೀ ಯರಿಗೆ ಈ ಪೋಷಕಾಂಶಗಳು ಬಹಳ ಮುಖ್ಯ.

ಸೊಪ್ಪು

ಸೊಪ್ಪು

ದೇಹಕ್ಕೆ ನಾರಿನಂಶ ಬೇಕೇಬೇಕು. ಅದರಲ್ಲೂ ಬಹಳಷ್ಟು ಹಾರ್ಮೋನ್ ವ್ಯತ್ಯಾಸ, ತೂಕ ವ್ಯತ್ಯಾಸ ಆಗುತ್ತಿರುವ ಗರ್ಭಿಣಿಯರಿಗೆ ತೊಂದರೆಗಳು ಅನೇಕ. ಅದರಲ್ಲೂ ಜೀರ್ಣಕ್ರಿಯೆ ತೊಂದರೆಗಳು ಹಾಗೂ ಮಲಬದ್ದತೆ ಬಹು ದೊಡ್ಡದು. ನಮ್ಮ ಆಹಾರದಲ್ಲಿ ಸೊಪ್ಪನ್ನು ತಪ್ಪದೆ ಬಳಸುವುದರಿಂದ ಇಂತಹ ತೊಂದರೆಗಳನ್ನು ನಿವಾರಿಸುವುದೇ ಅಲ್ಲದೆ ಇನ್ನೂ ಅನೇಕ ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಸೇರಿಸಿಕೊಳ್ಳಬಹುದು. ನಾವು ನಮ್ಮ ಅಡುಗೆಗಳಲಿ ಬಳಸುವ ಮೆಂತ್ಯ, ಪಾಲಕ್, ದಂಟು ಸೊಪ್ಪಿನಲ್ಲಿ ವಿವಿಧ ರೀತಿಯ ಸಾರು ಹಾಗೂ ಪಲ್ಯಗಳನ್ನು ಮಾಡಿ ತಿನ್ನಬಹುದು. ಉತ್ತರ ಭಾರತದ ಊಟದ ಶೈಲಿ ಪ್ರಿಯರು ಪಾಲಕ್ ಪನ್ನೀರ್, ಮೇಥಿ ದಾಲ್, ಮೇಥಿ ಆಲೂ, ಪಾಲಕ್ ದಾಲ್ ಹಾಗೂ ಇನ್ನೂ ಅನೇಕ ವಿಧಗಳಲ್ಲಿ ಸೊಪ್ಪುಗಳನ್ನು ಬಳಸಬಹುದು.

Most Read: ಗರ್ಭಿಣಿಯರು ಮೂಲಂಗಿ ತಿನ್ನಬಹುದು! ಆದರೆ ಇದೆಲ್ಲಾ ಸಂಗತಿಗಳು ನೆನಪಿರಲಿ

ಪೀನಟ್ ಬಟರ್

ಪೀನಟ್ ಬಟರ್

ಬಸಿರಿನ ಕೊನೆಯ ಮೂರು ತಿಂಗಳಲ್ಲಿ ಕೂಡ ದೇಹಕ್ಕೆ ಕೊಬ್ಬಿನ ಅಂಶ ಬೇಕು. ಕೆಲವರು ಮಗುವಿನ ತೂಕ ತುಂಬಾ ಹೆಚ್ಚಾಗಿ ಬಿಡುತ್ತದೆ ಎಂದು ಬಹಳಷ್ಟು ಪಠ್ಯ ಮಾಡಲು ತೊಡಗಿ ಬಿಡುತ್ತಾರೆ. ಇದು ತಪ್ಪು. ಮಗುವಿನ ಬೆಳವಣಿಗೆಗೆ ಬಹಳಷ್ಟು ಪೋಷಕಾಂಶಗಳು ಅವಸರ. ನಾವು ಮಿತಿ ಮೀರದೆ ಕೊಬ್ಬಿನ ಪದಾರ್ಥಗಳನ್ನು ಸಹ ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಪೀನಟ್ ಬಟರ್ ನಲ್ಲಿ ಕೆಲವು ಪೋಷಕಾಂಶಗಳು ಹಾಗೂ ಒಮೆಗಾ 3 ಫಾಟಿ ಆಸಿಡ್ ಗಳಿವೆ. ಇದನ್ನು ಸಂಜೆ ಬ್ರೆಡ್ ಮೇಲೆ ಅಥವಾ ಚಪಾತಿ ಮೇಲೆ ಹಚ್ಚಿ ತಿನ್ನಬಹುದು. ಬಸಿರಿನಲ್ಲಿ ಹಟಾತ್ ಎಂದು ಬರುವ ಹಸಿವನ್ನು ಮಾಯಾ ಮಾಡಲು ಬಳಸ ಬಹುದು. ಕಡಲೆಬೀಜ ಯಾರಿಗಾದರೂ ಅಲರ್ಜಿ ಇದ್ದರೆ ಅವರು ಬಳಸಬೇಡಿ. ಆದರೆ ಮಿತಿ ಅರಿತು ಬಳಸಿದರೆ ಇದು ಕೂಡ ಉತ್ತಮ ಸ್ನಾಕ್ ಐಟಮ್ ಆಗಿದೆ.

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು

ಅಪಾರ ಪ್ರಮಾಣದ ನಾರಿನ ಅಂಶ ಅಷ್ಟೇ ಅಲ್ಲದೆ ತನ್ನ ಪೂರ ವಿಟಮಿನ್ ಸಿ ತುಂಬಿಕೊಂಡಿರುವ ಒಂದು ಅತ್ಯುತ್ತಮ ಹಣ್ಣು ಕಿತ್ತಳೆ. ಗರ್ಭಿಣಿಯರಿಗೆ ಹಾಗೂ ಶಿಶುವಿಗೆ ಮುಖ್ಯವಾದ ವಿಟಮಿನ್ ಸಿ ತಾನು ಒಂದೇ ಅಲ್ಲದೆ ಆಹಾರದಲ್ಲಿ ಇರುವ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ಕೂಡ ದೇಹಕ್ಕೆ ಸಹಾಯ ಮಾಡುತ್ತದೆ. ಅನಿಮಿಯಾ ಹಾಗೂ ಸುಸ್ತು ಇರುವ ಈ ಎಂಟನೆಯ ತಿಂಗಳಿನಲ್ಲಿ ಕಿತ್ತಳೆ ತಿನ್ನುವುದರಿಂದ ಬಹಳಷ್ಟು ಉಪಯೋಗಗಳು ಉಂಟು. ಎಂಟನೆಯ ತಿಂಗಳಿನ ಬಸುರಿಗೆ ದೈಹಿಕವಾಗಿಯೇ ಅಲ್ಲದೆ ಮಾನಸಿಕವಾಗಿಯೂ ಬೆಂಬಲ ಅವಶ್ಯ. ಆಹಾರ ಕ್ರಮದಲ್ಲಿ ಎಚ್ಚರದಿಂದ ಇದ್ದರೆ ಅದು ನಮ್ಮ ದೇಹಕ್ಕೆ ಬಲವನ್ನು ಕೊಡುತ್ತದೆ. ದೇಹದಲ್ಲಿ ಬಲ ಹಾಗೂ ಶಕ್ತಿ ಇದ್ದರೆ ಮಾನಸಿಕವಾಗಿಯೂ ಬಲ ಹಾಗೂ ಧೈರ್ಯ ತುಂಬುತ್ತದೆ. ಮುಂದೆ ಬರುವ ಹೊಸ ಜವಾಬ್ದಾರಿಯನ್ನು ಖುಷಿಯಿಂದ ಎದುರುಗೊಳ್ಳಲು ದೇಹ ಹಾಗೂ ಮನಸ್ಸು ಸಿದ್ದವಾಗಿರುತ್ತದೆ.

English summary

Eighth Month Pregnancy Diet

An important aspect to care for during pregnancy is the diet. It can have a telling effect on the health of the baby and also affect the mental and physical well-being of the mother in a number of ways. The diet needs to be created with utmost care, keeping in mind the effects of the food items on the growing baby.Let us look at some foods which are to be avoided in the third-trimester diet and some food items which can be had safely, during the third trimester, or the eighth month of pregnancy.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more