For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ದ್ವಿಚಕ್ರ ವಾಹನಗಳ ಚಾಲನೆ: ಸುರಕ್ಷತೆ ಮತ್ತು ಮುನ್ನೆಚ್ಚರಿಕೆ

|

ಆಧುನಿಕತೆ ಹಾಗೂ ಶಿಕ್ಷಣದಿಂದ ಇಂದಿನ ಮಹಿಳೆ ಸಾಕಷ್ಟು ವಿಕಾಸವನ್ನು ಹಾಗೂ ಪ್ರೌಢಿಮೆಯನ್ನು ಪಡೆದುಕೊಂಡಿದ್ದಾಳೆ. ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿಯೂ ಸಾಕಷ್ಟು ಸ್ವಾವಲಂಭನೆಯನ್ನು ಪಡೆದುಕೊಂಡಿದ್ದಾಳೆ ಎನ್ನುವುದು ಬಹಳ ಸಂತೋಷದ ಸಂಗತಿ. ಮನೆಗೆ ಬೇಕಾದ ವಸ್ತುಗಳನ್ನು ಸಹ ತಾನೇ ಸ್ವಯಂ ವಾಹನಗಳ ಚಾಲನೆಯ ಮೂಲಕ ತಂದುಕೊಳ್ಳುತ್ತಾಳೆ. ಆಕೆಯ ಕಲಿಕೆ ಹಾಗೂ ಜ್ಞಾನವು ಅವಳನ್ನು ಸಮಾಜದಲ್ಲಿ ಸಾಕಷ್ಟು ಎತ್ತರದ ಸ್ಥಾನದಲ್ಲಿ ನಿಲ್ಲಿಸಿದೆ. ಭಾವನಾತ್ಮಕವಾಗಿ ಸೂಕ್ಷ್ಮತೆಯನ್ನು ಹೊಂದಿದ್ದರೂ ಸಹ ಎಲ್ಲಾ ಕೆಲಸ ಕಾರ್ಯಗಳಲ್ಲೂ ಸೈ ಎನಿಸಿಕೊಂಡಿದ್ದಾಳೆ.

ಹಾಗಾಗಿಯೇ ಇಂದು ಬಹುತೇಕ ಮಹಿಳೆಯರು ತಮ್ಮದೇ ಆದ ವೃತ್ತಿ, ಹವ್ಯಾಸಗಳನ್ನು ಹೊಂದಿವುದರ ಮೂಲಕ ಇತರರಿಗೆ ಮಾದರಿಯ ವ್ಯಕ್ತಿಯಾಗಿದ್ದಾಳೆ ಎಂದರೆ ತಪ್ಪಾಗಲಾರದು. ಮನೆಯ ನಿರ್ವಹಣೆ, ಕಛೇರಿಯ ಕೆಲಸ, ಬಂಧು ಬಾಂಧವರೊಂದಿಗೆ ಒಡನಾಟ ಎಲ್ಲವನ್ನು ಬಹಳ ಜಾಣ್ಮೆಯಿಂದ ನಿರ್ವಹಿಸುವ ಜಾಣೆ. ಸ್ವಾವಲಂಬಿಯಾಗಿ ಬದುಕನ್ನು ನಡೆಸುವ ಮಹಿಳೆಯರು ಇಂದು ದ್ವಿಚಕ್ರವಾಹನ ದಿಂದ ಹಿಡಿದು ವಿಮಾನ ಚಲಾವಣೆಯ ವರೆಗೆದೂ ತಮ್ಮ ಸಾಧನೆಯನ್ನು ತೋರಿಸಿಕೊಟ್ಟಿದ್ದಾರೆ.

ಮನೆಗೆ ಬೇಕಾದ ಸಣ್ಣ ಪುಟ್ಟ ವಸ್ತುಗಳನ್ನು ಹಿಡಿದು ಎಲ್ಲಾ ಬಗೆಯ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ತನ್ನದೇ ಆದ ದ್ವಿಚಕ್ರವಾಹನವನ್ನು ಓಡಿಸುತ್ತಾಳೆ. ಕಚೇರಿಯ ಕೆಲಸಕ್ಕೆ ತೆರಳುವಾಗ ಹಾಗೂ ದೂರದ ಸ್ಥಳಗಳಿಗೆ ಹೋಗುವಾಗ ಹೀಗೆ ಬಹುತೇಕ ಸಂದರ್ಭದಲ್ಲಿ ದ್ವಿಚಕ್ರವಾಹನಗಳ ಮೂಲಕ ತೆರಳುತ್ತಾಳೆ. ಈ ದ್ವಿಚಕ್ರವಾಹನ ಮಹಿಳೆಗೆ ಒಂದು ಸಂಗಾತಿ, ಸಹಕಾರ ಮೂರ್ತಿ ಎಂದು ಹೇಳಬಹುದು. ಮಹಿಳೆಯು ಗರ್ಭಾವಸ್ಥೆಯಲ್ಲಿ ಇರುವಾಗ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಾಕಷ್ಟು ಸೂಕ್ಷ್ಮತೆಯನ್ನು ಪಡೆದುಕೊಂಡಿರುತ್ತಾಳೆ. ಅಂತಹ ಸಂದರ್ಭದಲ್ಲಿ ತನ್ನ ಆರೋಗ್ಯದ ಬಗ್ಗೆ ಹೆಚ್ಚು ಆರೈಕೆ ಹಾಗೂ ಕಾಳಜಿಯನ್ನು ಕೈಗೊಳ್ಳಬೇಕಾಗುವುದು.

ಮಹಿಳೆ ಗರ್ಭಾವಸ್ಥೆಯಲ್ಲಿ ಇರುವಾಗ ತನ್ನ ಸಾಮಾನ್ಯ ಜೀವನ ಶೈಲಿಯಿಂದ ಕೆಲವು ಬದಲಾವಣೆಯನ್ನು ಮಾಡಬೇಕಾಗುವುದು. ಗರ್ಭಾವಸ್ಥೆಯಲ್ಲಿ ಇರುವಾಗ ಹಾರ್ಮೋನ್‍ಗಳ ವ್ಯತ್ಯಾಸ ಉಂಟಾಗುವುದರಿಂದ ಆಯಾಸ, ವಾಕರಿಕೆ, ಭಾವನೆಗಳಲ್ಲಿ ಬದಲಾವಣೆ ಹಾಗೂ ದೈಹಿಕ ಆರೋಗ್ಯದಲ್ಲಿ ಉಂಟಾಗುವ ವ್ಯತ್ಯಾಸಗಳನ್ನು ಧನಾತ್ಮಕ ರೀತಿಯಲ್ಲಿ ಸ್ವೀಕರಿಸುತ್ತಾ ಹೋಗಬೇಕಾಗುವುದು. ಅಂತಹ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳನ್ನು ದೂರದ ಸ್ಥಳಗಳಿಗೆ ಓಡಿಸಿಕೊಮಡು ಹೋಗುವುದು ಎಂದರೆ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುವುದು.

ದ್ವಿಚಕ್ರವಾಹನ ಬಹುತೇಕ ಮಹಿಳೆಯರಿಗೆ ಅತ್ಯುತ್ತಮ ಸಂಗಾತಿಯಂತೆ ನಿಂತಿರುತ್ತದೆ ಎನ್ನುವುದು ಸತ್ಯ. ಅಂತೆಯೇ ಗರ್ಭಾವಸ್ಥೆಯಲ್ಲಿ ಅದನ್ನು ಅತಿಯಾಗಿ ಓಡಿಸುವುದು ಸಹ ಅಷ್ಟೇ ಅಪಾಯಕಾರಿ. ದ್ವಿಚಕ್ರ ವಾಹನದ ಚಲಾವಣೆಯಿಂದ ಗರ್ಭಾವಸ್ಥೆಯಲ್ಲಿ ಯಾವ ರೀತಿಯ ಬದಲಾವಣೆ ಉಂಟಾಗುವುದು? ಅದರಿಂದ ಎಂತಹ ಅಪಾಯ ಎದುರಾಗಬಹುದು ಎನ್ನುವುದರ ಬಗ್ಗೆ ನೀವು ಸಾಕಷ್ಟು ವಿಷಯವನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಹಾಗೂ ಆಕಾಂಕ್ಷೆಯನ್ನು ಹೊಂದಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

ಗರ್ಭಾವಸ್ಥೆಯಲ್ಲಿ ದ್ವಿಚಕ್ರವಾಹನ ಚಲಾಯಿಸುವುದು ಸುರಕ್ಷಿತವೇ?

ಗರ್ಭಾವಸ್ಥೆಯಲ್ಲಿ ದ್ವಿಚಕ್ರವಾಹನ ಚಲಾಯಿಸುವುದು ಸುರಕ್ಷಿತವೇ?

ಸಾಮಾನ್ಯ ದಿನದಲ್ಲಿ ದ್ವಿಚಕ್ರವಾಹನವನ್ನು ನಿರಾತಂಕವಾಗಿ ಓಡಿಸುವ ಮಹಿಳೆಯರು ಗರ್ಭಾವಸ್ಥೆಯಲ್ಲೂ ಓಡಿಸಬಹುದು ಎಂದು ಭಾವಿಸುತ್ತಾರೆ. ತಮ್ಮ ಅಗತ್ಯತೆಗೆ ತಕ್ಕಂತೆ ದ್ವಿಚಕ್ರವಾಹನವನ್ನು ಓಡಿಸಬಹುದು. ಆದರೆ ಅದು ಅತ್ಯಂತ ಅಪಾಯಕಾರಿ ಎಂದು ಹೇಳಲಾಗುವುದು. ದ್ವಿಚಕ್ರ ವಾಹನದ ಸವಾರಿ ನೇರವಾಗಿ ಗರ್ಭದ ಮೇಲೆ ಪರಿಣಾಮ ಬೀರುವುದು. ಗರ್ಭಾವಸ್ಥೆಯಲ್ಲಿ ಇರುವ ಮಹಿಳೆ ಕಾರಿನಲ್ಲಿ ಪ್ರಯಾಣಿಸುವುದಕ್ಕೂ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವುದಕ್ಕೂ ವ್ಯತ್ಯಾಸವಿದೆ. ದ್ವಿಚಕ್ರ ವಾಹನದಲ್ಲಿ ಹೋಗುವಾಗ ಒರಟಾದ ರಸ್ತೆ ಇದ್ದರೆ ಅದು ಸಾಕಷ್ಟು ಕುಸಿತ ಹಾಗೂ ಒತ್ತಡದ ಅನುಭವವನ್ನು ನೀಡುತ್ತದೆ. ಅದು ಮಹಿಳೆಯ ಗರ್ಭದ ಮೇಲೆ ನೇರ ಪರಿಣಾಮ ಬೀರುವುದು.

Most Read: ಗರ್ಭಿಣಿಯರು ಅರಿಶಿನ ಬೆರೆಸಿದ ಹಾಲು ಕುಡಿಯಬಹುದೇ? ಖಂಡಿತವಾಗಿಯೂ ಮಿತವಾಗಿ ಸೇವಿಸಬಹುದು

ದ್ವಿಚಕ್ರ ವಾಹನ ಓಡಿಸುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಇರುವಾಗ ಅದನ್ನು ನಿರಾಕರಿಸುವುದು ಉತ್ತಮ. ಮೊದಲ ತ್ರೈ ಮಾಸಿಕದಲ್ಲಿ ನಯವಾದ ರಸ್ತೆ ಮಾರ್ಗ ಹಾಗೂ ಬಹಳ ಹತ್ತಿರದ ಸ್ಥಳಗಳಿಗೆ ಮಾತ್ರ ದ್ವಿಚಕ್ರವಾಹನದ ಪ್ರಯಾಣ ಕೈಗೊಳ್ಳಬಹುದು. ದಿನಕಳೆದಂತೆ ಗರ್ಭದಲ್ಲಿ ಮಗುವಿನ ಬೆಳವಣಿಗೆ ಹೆಚ್ಚುತ್ತಾ ಹೋಗುವುದು. ಅದರ ಬದಲಾವಣೆಯಿಂದ ಗರ್ಭ ಕೋಶವು ಸಾಕಷ್ಟು ಸೂಕ್ಷ್ಮತೆ ಯನ್ನು ಪಡೆದುಕೊಂಡಿರುತ್ತದೆ. ಅಂತಹ ಸಂದರ್ಭದಲ್ಲಿ ಒರಟಾದ ರಸ್ತೆ ಮಾರ್ಗದಲ್ಲಿ ದ್ವಿಚಕ್ರವಾಹನ ಓಡಿಸುವುದು ಅಥವಾ ರಸ್ತೆ ಮಾರ್ಗದಲ್ಲಿ ಹಾಕಲಾಗಿರುವ ಅಧಿಕ ಹಂಪ್ಸ್‍ಗಳನ್ನು ದಾಟಿ ಸಾಗುವುದು ಬಹಳ ಅಪಾಯಕಾರಿಯಾಗಿರುತ್ತದೆ. ಮೊದಲ ತ್ರೈ ಮಾಸಿಕದಲ್ಲಿ ತಲೆ ಸುತ್ತು, ವಾಕರಿಕೆ ಹಾಗೂ ಇನ್ನಿತರ ಅಸಹನೀಯ ಸ್ಥಿತಿ ಇರುವುದರಿಂದ ವಾಹನ ಚಲಾಯಿಸುವಾಗ ಆಕಸ್ಮಿಕವಾಗಿ ಸಂಭವಿಸಿದರೆ ಅಪಘಾತ ಉಂಟಾಗು ಸಾಧ್ಯತೆಗಳು ಇರುತ್ತವೆ.

ಗರ್ಭಾವಸ್ಥೆಯಲ್ಲಿ ದ್ವಿಚಕ್ರವಾಹನ ಚಲಿಸುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು:

ಗರ್ಭಾವಸ್ಥೆಯಲ್ಲಿ ದ್ವಿಚಕ್ರವಾಹನ ಚಲಿಸುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು:

ಮನೆಯಲ್ಲಿ ಅನಾನುಕೂಲತೆ ಅಥವಾ ಕೆಲವು ಸಮಯದಲ್ಲಿ ದ್ವಿಚಕ್ರವಾಹನವನ್ನು ಓಡಿಸಬೇಕಾದ ಅನಿವಾರ್ಯತೆಗಳಿರುತ್ತವೆ. ಗರ್ಭಾವಸ್ಥೆಯಲ್ಲಿ ಇದ್ದೇನೆ ಎಂದು ಸಂಪೂರ್ಣವಾಗಿ ದ್ವಿಚಕ್ರವಾಹನವನ್ನು ಓಡಿಸದೆ ಬಿಡಲೂ ಸಾಧ್ಯವಿಲ್ಲ. ಕೆಲವು ಸಮಯ ಸಂದರ್ಭಗಳಿಗೆ ಅನುಗುಣವಾಗಿ ನಾವು ನಮ್ಮ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದರ ಮೂಲಕ ಕೆಲಸ-ಕಾರ್ಯಗಳನ್ನು ಕೈಗೊಳ್ಳಬೇಕಾಗುವುದು. ನೀವು ಗರ್ಭಾವಸ್ಥೆಯಲ್ಲಿ ಇದ್ದೀರಿ, ದ್ವಿಚಕ್ರ ವಾಹನ ಓಡಿಸುವುದು ಅನಿವಾರ್ಯ ಎಂದಾಗ ಕೆಲವು ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸುವುದನ್ನು ಮರೆಯದಿರಿ.

* ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಧರಿಸುವುದನ್ನು ಮರೆಯದಿರಿ. ಗಾಡಿಯನ್ನು ಓಡಿಸಲು ಬೇರೆಯವರು ಅಥವಾ ನಿಮ್ಮ ಸಂಗಾತಿ ಇದ್ದಾರೆ ಎಂದಾದರೆ ನೀವು ಹಿಂದಿನ ಸೀಟ್‍ಅಲ್ಲಿ ಸ್ವಲ್ಪ ಆರಾಮದಾಯಕವಗಿ ಕುಳಿತು ಸಾಗಿರಿ.

* ನಡೆಯುವಾಗ ಆದಷ್ಟು ಸಮತಟ್ಟಾದ ಸ್ಲಿಪ್ಪರ್ ಅಥವಾ ಚಪ್ಪಲಿಯನ್ನು ಧರಿಸಿ. ಹಿಮ್ಮಡಿ ಎತ್ತರವಾಗಿರುವ ವಿನ್ಯಾಸದ ಚಪ್ಪಲಿ ಅಥವಾ ಶೂ ಗಳನ್ನು ಧರಿಸದಿರಿ.

* ಅತಿಯಾದ ಜನ ಸಂದಣಿ ಇರುವ ಜಾಗದಲ್ಲಿ ವಾಹನ ಚಾಲನೆ ಮಾಡಲು ಮುಂದಾಗದಿರಿ. ಆದಷ್ಟು ಅಂತಹ ಮಾರ್ಗವನ್ನು ತಪ್ಪಿಸಲು ಪ್ರಯತ್ನಿಸಿ.

* ಹೊಸದಾದ ಅಥವಾ ಸುದೀರ್ಘ ಸಮಯವನ್ನು ತೆಗೆದುಕೊಳ್ಳುವ ರಸ್ತೆ ಮಾರ್ಗವನ್ನು ಬಳಸದಿರಿ. ಆದಷ್ಟು ಸಮತಟ್ಟಾದ ಹಾಗೂ ಕಿರು ರಸ್ತೆ ಮಾರ್ಗದಲ್ಲಿ ಚಲಿಸಿ.

* ರಾತ್ರಿ ವೇಳೆ ದ್ವಿಚಕ್ರ ವಾಹನ ಚಲಿಸುವಾಗ ಸಾಕಷ್ಟು ಎಚ್ಚರವಹಿಸಬೇಕು. ಹೊಂಡಗಳು, ರಸ್ತೆಯ ಏರು ತಗ್ಗುಗಳು ಸಾಕಷ್ಟು ನೋವನ್ನು ಉಂಟುಮಾಡುತ್ತವೆ. ಕೆಲವೊಮ್ಮೆ ನಿಯಂತ್ರಣ ತಪ್ಪಿ ಬೀಳುವ ಸಾಧ್ಯತೆಗಳು ಇರುತ್ತವೆ. ಆಗ ಹೊಟ್ಟೆ ಭಾಗಕ್ಕೆ ನೋವು ಹಾಗೂ ಪೆಟ್ಟು ಬಿದ್ದರೆ ತೊಂದರೆ ಉಂಟಾಗುವುದು.

* ರಸ್ತೆಯಲ್ಲಿ ನೀರು ಬಿದ್ದಿರುವಾಗ ಅಥವಾ ಮಳೆ ಬಂದು ಹೊಂಡದ ಭಾಗ ನೀರು ತುಂಬಿದ್ದರೆ ನಿಮಗೆ ಅದರ ಅಂದಾಜು ಇಲ್ಲದೆ ಹೋಗಬಹುದು. ಅದರಲ್ಲಿ ಸವಾರಿ ಮಾಡುವುದರಿಂದ ಬೀಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

* ನಿಮ್ಮ ಸ್ಕೂಟರ್ ಅನ್ನು ಸೂಕ್ತ ರಿಪೇರಿ ಮಾಡಿಸುವುದರ ಮೂಲಕ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಿ. ಕಿಕ್‍ಗಳ ಸಹಾಯದಿಂದ ಸ್ಕೂಟರ್‍ಅನ್ನು ಆನ್ ಮಾಡಬೇಡಿ. ಆಟೋಮೆಟಿಕ್ ಬಟನ್‍ಗಳ ಸಹಾಯದಿಂದಲೇ ಆರಂಭವಾಗುವಂತೆ ಮಾಡಿ. ಕಿಕ್ ಹೊಡೆಯುವುದು ಹೊಟ್ಟೆ ಮತ್ತು ಗರ್ಭದ ಮೇಲೆ ಒತ್ತಡ ಮತ್ತು ಪೆಟ್ಟು ಬೀಳುವಂತೆ ಮಾಡುವುದು.

* ತುರ್ತು ಪರಿಸ್ಥಿತಿಯಲ್ಲಿ ಸಮೀಪದಲ್ಲಿ ಇರುವ ಆಸ್ಪತ್ರೆಗೆ ಹೋಗಿ ತಪಾಸಣೆ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳುವುದನ್ನು ಮರಯದಿರಿ. ನಿಮ್ಮ ಆರೋಗ್ಯದಲ್ಲಿ ಉಂಟಾಗುವ ಸಣ್ಣ ಪುಟ್ಟ ಸಮಸ್ಯೆ ಅಥವಾ ಗೊಂದಲಗಳಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಮೊದಲು ತಪಾಸಣೆ ಮಾಡಿಸಿ.

* ಹವಾಮಾನಕ್ಕೆ ತಕ್ಕಂತೆ ಅನುಕೂಲಕರವಾದ ಉಡುಗೆಯನ್ನು ತೊಡಿ. ಇಲ್ಲವಾದರೆ ಆರೋಗ್ಯದಲ್ಲಿ ಒಂದಿಷ್ಟು ಕಿರಿಕಿರಿ ಉಂಟಾಗುವ ಸಾಧ್ಯತೆಗಳಿರುತ್ತವೆ.

* ರಸ್ತೆ ಮಾರ್ಗದಲ್ಲಿ ಇರುವ ಏರು-ಪೇರು ಹಾಗೂ ಉಬ್ಬು-ತಗ್ಗುಗಳು ಅನಿರೀಕ್ಷಿತವಾಗಿ ಹೊಟ್ಟೆಯ ಭಾಗಕ್ಕೆ ಒಮ್ಮೆಲೇ ಒತ್ತಡ ಹಾಗೂ ಪೆಟ್ಟು ಬೀಳುವಂತೆ ಮಾಡುತ್ತದೆ. ಇದರ ಪರಿಣಾಮವಾಗಿ ಅಕಾಲಿಕ ಹೆರಿಗೆ ಅಥವಾ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ತೊಂದರೆ ಉಂಟಾಗಬಹುದು.

Most Read: ಗರ್ಭಿಣಿಯರು ಪಪ್ಪಾಯ, ದ್ರಾಕ್ಷಿ ಹಾಗೂ ಅನಾನಸ್ ಹಣ್ಣುಗಳನ್ನು ತಿನ್ನಲೇಬಾರದು!

ದ್ವಿಚಕ್ರ ವಾಹನ ಸವಾರಿಯಿಂದ ಹೊರಬರಲು ಮಾಡಬಹುದಾದ ಪ್ರಯತ್ನಗಳು:

ದ್ವಿಚಕ್ರ ವಾಹನ ಸವಾರಿಯಿಂದ ಹೊರಬರಲು ಮಾಡಬಹುದಾದ ಪ್ರಯತ್ನಗಳು:

* ಉದ್ಯೋಗಕ್ಕೆ ಹೋಗುವ ಮಹಿಳೆಯರಾಗಿದ್ದರೆ ನಿಮ್ಮ ಸಹೋದ್ಯೋಗಿಗಳು ನಿಮ್ಮ ಮನೆಯ ಹತ್ತಿರದಿಂದಲೇ ಬರುತ್ತಾರೆಯೇ ಎಂದು ನೋಡಿ. ಹಾಗಿದ್ದರೆ ಅವರ ಸಹಾಯದ ಜೊತೆಗೆ ಮನೆಯಿಂದ ಆಫೀಸ್‍ಗೆ ಬನ್ನಿ.

* ಅನುಕೂಲತೆ ಇದ್ದರೆ ಕ್ಯಾಬ್, ಕಾರ್‍ಗಳ ಸಹಾಯದಿಂದ ಪ್ರಯಾಣವನ್ನು ಬೆಳೆಸಿ. ಶೇರಿಂಗ್ ಮೂಲಕ ಕ್ಯಾಬ್‍ಗಳಲ್ಲಿ ಪ್ರಯಾಣ ಬೆಳೆಸಿ. ಆಗ ಆರ್ಥಿಕವಾಗಿಯೂ ಅಷ್ಟು ವೆಚ್ಛತಗುಲದು.

* ನೀವು ಹೋಗಬೇಕಿದ್ದ ಸ್ಥಳಕ್ಕೆ ಅಥವಾ ಕಚೇರಿಯ ಮಾರ್ಗದಲ್ಲಿ ರೈಲು, ಮೆಟ್ರೋ ಸೌಕರ್ಯ ಇದ್ದರೆ ಅದರ ಸಹಾಯದಿಂದ ಸಾಗಿ. ದ್ವಿಚಕ್ರ ವಾಹನಕ್ಕಿಂತ ಇಂತಹ ವಾಹನಗಳಲ್ಲಿ ಪ್ರಯಾಣ ಬೆಳೆಸುವುದು ಅತ್ಯುತ್ತಮವಾದದ್ದು.

* ಮೂರನೇ ತ್ರೈ ಮಾಸಿಕದ ನಂತರ ಗರ್ಭ ಕೋಶದಲ್ಲಿ ಹಾಗೂ ನಿಮ್ಮ ದೇಹದ ಮೇಲೂ ಸಾಕಷ್ಟು ಬದಲಾವಣೆ ಉಂಟಾಗುವುದು. ಜೊತೆಗೆ ಸಾಕಷ್ಟು ಆಯಾಸ ಹಾಗೂ ಅಸಹನೀಯ ಸ್ಥಿತಿಗಳು ಎದುರಾಗುತ್ತವೆ. ಹಾಗಾಗಿ ನೀವು ಮೃಲಾಧಿಕಾರಿಗಳೊಂದಿಗೆ ಮಾತನಾಡಿ ನಿಮ್ಮ ಕೆಲಸದ ಅವಧಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸಿ. ಆಗ ಕೆಲವು ಜನಸಂದಣಿಯ ಸಮಯವನ್ನು ತಪ್ಪಿಸಬಹುದು.

* ಮನೆಯಿಂದ ಕೆಲಸ ಮಾಡುವ ಅನುಕೂಲತೆ ಇದ್ದರೆ ನಿಮಗೆ ಅತ್ಯಂತ ಅನುಕೂಲವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ನೀವು ಮನೆಯಿಂದಲೇ ಕೆಲಸ ಮಾಡಲು ಪ್ರಾರಂಭಿಸಿ.

Most Read: ಗರ್ಭನಿರೋಧಕ ಸುಳ್ಳುಗಳನ್ನು ನಂಬಬೇಡಿ, ಇದರಿಂದ ಕೂಡ ಗರ್ಭಿಣಿಯಾಗುವ ಸಾಧ್ಯತೆ ಇದೆಯಂತೆ!

ದ್ವಿಚಕ್ರ ವಾಹನ ಸವಾರಿಯಿಂದ ಹೊರಬರಲು ಮಾಡಬಹುದಾದ ಪ್ರಯತ್ನಗಳು:

ದ್ವಿಚಕ್ರ ವಾಹನ ಸವಾರಿಯಿಂದ ಹೊರಬರಲು ಮಾಡಬಹುದಾದ ಪ್ರಯತ್ನಗಳು:

* ಅಗತ್ಯವಿದ್ದಾಗ ಸಹೋದ್ಯೋಗಿಗಳಲ್ಲಿ ಸಹಾಯ ಪಡೆದುಕೊಳ್ಳಲು ಹಿಂಜರಿಯ ಬೇಡಿ.

* ಕಾಲ ಕಾಲಕ್ಕೆ ಸೂಕ್ತ ತಪಾಸಣೆ ಹಾಗೂ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ. ಜೊತೆಗೆ ಪ್ರಸವದ ವರೆಗೂ ಪಾಲಿಸಬೇಕಾದ ಔಷಧ ಹಾಗೂ ಆಹಾರಗಳನ್ನು ಸೇವಿಸುವುದರಲ್ಲಿ ಯಾವುದೇ ವ್ಯತ್ಯಾಸ ಅಥವಾ ನಿರ್ಲಕ್ಷ್ಯವನ್ನು ತೋರದಿರಿ.

* ಕೆಲವೊಮ್ಮೆ ನೀವು ನಿಮ್ಮ ಆರೋಗ್ಯದ ವಿಷಯದಲ್ಲಿ ತೋರಿಸುವ ನಿರ್ಲಕ್ಷ್ಯವು ಗಂಭೀರ ಪರಿಸ್ಥಿತಿಗೆ ಕರೆದೊಯ್ಯಬಹುದು. ಹಾಗಾಗಿ ನಿತ್ಯವೂ ಸೂಕ್ತ ಕಾಳಜಿ ಹಾಗೂ ಆರೈಕೆಯನ್ನು ಪಡೆದುಕೊಳ್ಳಲು ಮರೆಯದಿರಿ.

* ಮನೆಯಲ್ಲಿ ಇರುವಾಗಲೇ ಏನಾದರೂ ಗಮಭೀರ ಸಮಸ್ಯೆ ಉಂಟಾದರೆ ನೆರೆಹೊರೆಯವರಿಂದ ಅಥವಾ ಸ್ನೇಹಿತರ ಸಹಾಯ ಪಡೆದು ಮೊದಲು ಆಸ್ಪತ್ರೆಗೆ ತೆರಳಿ, ತಪಾಸಣೆಗೆ ಒಳಗಾಗಿ.

English summary

Driving Two Wheeler during Pregnancy – Safety and Precautions

Many pregnant women may question is it safe to ride a two-wheeler while pregnant. Well, driving two-wheeler during pregnancy is safe provided you take extra care. A pregnant woman while driving a two-wheeler may be more susceptible to losing her balance and falling. Unlike in a car, two-wheelers don’t have airbags to protect in case of a crash. Moreover, on a two-wheeler one may be more exposed to rough roads.
X
Desktop Bottom Promotion