Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ಗರ್ಭಿಣಿಯರು ಮುಡಿ ಗೆಣಸು ಸೇವಿಸಬಹುದೇ? ಇದರಿಂದ ಏನಾದರೂ ಸಮಸ್ಯೆ ಇದೆಯೇ?
ಗರ್ಭಧಾರಣೆ ಎನ್ನುವುದು ತುಂಬಾ ಸಂಭ್ರಮ ಹಾಗೂ ಸವಾಲನ್ನು ಉಂಟು ಮಾಡುವ ಸಮಯ. ಹೀಗಾಗಿ ಮಹಿಳೆಯರು ಈ ಸಮಯದಲ್ಲಿ ತುಂಬಾ ಎಚ್ಚರಿಕೆ ವಹಿಸಿಕೊಳ್ಳಬೇಕು. ದೈಹಿಕ ಹಾಗೂ ಮಾನಸಿಕವಾಗಿ ಹಲವಾರು ಬದಲಾವಣೆಗಳು ಆಗುವ ನಿಟ್ಟಿನಲ್ಲಿ ಈ ಸಮಯವು ಅತೀ ಪ್ರಾಮುಖ್ಯವಾಗಿರುವುದು. ಸೇವಿಸುವ ಆಹಾರದಿಂದ ಹಿಡಿದು ಮಾಡುವಂತಹ ಕಾರ್ಯದ ಬಗ್ಗೆ ಪ್ರತಿಯೊಂದರಲ್ಲೂ ಎಚ್ಚರಿಕೆ ಅಗತ್ಯವಾಗಿರುವುದು. ಅದರಲ್ಲೂ ಆಹಾರದಲ್ಲಿ ಮುಖ್ಯವಾಗಿ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎನ್ನುವ ಗೊಂದಲವು ಇರುವುದು. ಯಾಕೆಂದರೆ ಗರ್ಭಿಣಿ ಸೇವಿಸುವ ಆಹಾರವು ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆ ಮೇಲೆ ಪ್ರಮುಖ ಪಾತ್ರ ವಹಿಸುವುದು.

ಹೀಗಾಗಿ ಗರ್ಭಿಣಿಯು ಸೇವಿಸುವ ಪ್ರತಿಯೊಂದು ಆಹಾರವು ಹೆಚ್ಚಿನ ಪೋಷಕಾಂಶಗಳಿಂದ ಕೂಡಿರಬೇಕು. ಗರ್ಭಿಣಿಯರು ಮುಡಿಗೆಣಸನ್ನು ಸೇವಿಸಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಹಲವಾರು ವಾದಗಳಿವೆ. ಗರ್ಭಿಣಿಯರು ಮುಡಿಗೆಣಸು ಸೇವನೆ ಮಾಡಬಾರದು ಎಂದು ಹೇಳಿರುವುದನ್ನು ಕೇಳಿರಬಹುದು. ಆದರೆ ಇದು ಖಂಡಿತವಾಗಿಯೂ ನಿಜವಲ್ಲ. ಮುಡಿಗೆಣಸು ಕೂಡ ಸಿಹಿ ಗೆಣಸಿನಂತೆ ಇರುವುದು. ಇದು ಯಾವುದೇ ರೂಪದಲ್ಲಿ ಸೇವಿಸಲು ತುಂಬಾ ಸುರಕ್ಷಿತ ಮತ್ತು ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ಅದು ಗರ್ಭಿಣಿಯರಿಗೆ ಒಳ್ಳೆಯದು. ಕಾಡು ಮುಡಿಗೆಣಸು ಗರ್ಭಿಣಿಯರಿಗೆ ಒಳ್ಳೆಯದಲ್ಲವೆಂದು ಹೇಳಲಾಗುತ್ತದೆ. ಅದಾಗ್ಯೂ, ಇದೇ ಕಾರಣದಿಂದಾಗಿ ಮುಡಿಗೆಣಸು ಒಳ್ಳೆಯದಲ್ಲವೆಂದು ಹೇಳಲಾಗುತ್ತಿರಬಹುದು.

ಮುಡಿ ಗೆಣಸು ಮತ್ತು ಸುರಕ್ಷತೆ
ತಿನ್ನಲು ಯೋಗ್ಯವಾಗಿರುವಂತಹ ಮುಡಿ ಗೆಣಸು ಗರ್ಭಿಣಿಯರಿಗೆ ಸೇವಿಸಲು ಸುರಕ್ಷಿತವಾಗಿದೆ. ತಾಜಾ ಮುಡಿಗೆಣಸಿನಲ್ಲಿ ಗರ್ಭಿಣಿಯರಿಗೆ ಹಾಗೂ ಮಗುವಿಗೆ ಹಾನಿ ಉಂಟು ಮಾಡುವ ಯಾವುದೇ ಅಂಶಗಳು ಇಲ್ಲ. ಅದಾಗ್ಯೂ, ನೀವು ಮುಡಿಗೆಣಸನ್ನು ತುಂಬಾ ಸುರಕ್ಷಿತ ವಿಧಾನದಿಂದ ತಯಾರಿಸಿಕೊಂಡು ತಿನ್ನಿ. ಇತರ ಆಹಾರಗಳಂತೆ ಮುಳ್ಳು ಗೆಣಸಿನ ಖಾದ್ಯವನ್ನು ತಯಾರಿಸಿಕೊಂಡು ಇಟ್ಟುಕೊಂಡ ಬಳಿಕ ಇಟ್ಟರೆ ಅದರಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾ ನಿರ್ಮಾಣವಾಗುವುದು. ಇದರಿಂದ ಆಹಾರ ವಿಷವಾಗಬಹುದು. ಆಗ ಗರ್ಭಿಣಿಯರಿಗೆ ಅದರಿಂದ ಪರಿಣಾಮವಾಗಬಹುದು. ಗರ್ಭಿಣಿಯರು ಮುಡಿ ಗೆಣಸನ್ನು ತಯಾರಿಸಿಕೊಂಡ ಬಳಿಕ ಅದನ್ನು ಬೇಗನೆ ಸೇವಿಸಬೇಕು. ಇದನ್ನು ರೆಫ್ರಿಜರೇಟರ್ ನಲ್ಲಿ ಇಟ್ಟುಕೊಂಡಷ್ಟು ಅದರಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಆಗುವುದು ಹೆಚ್ಚಾಗುವುದು.

ಕಾಡು ಮುಡಿ ಗೆಣಸು
ಕಾಡು ಮುಡಿ ಗೆಣಸನ್ನು ಗರ್ಭಧಾರಣೆ ಸಮಯದಲ್ಲಿ ಸೇವನೆ ಮಾಡಬಾರದು ಎಂದು ಹೇಳಲಾಗಿದೆ. ಇದನ್ನು ಒಂದು ಸಪ್ಲಿಮೆಂಟ್ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಈ ಸಪ್ಲಿಮೆಂಟ್ ನ್ನು ಋತುಚಕ್ರದ ವೇಳೆ ಕಾಣಿಸುವ ಬಿಸಿಹವೆ ಮತ್ತು ಬಂಜೆತನಕ್ಕೆ ಬಳಸಲಾಗುತ್ತದೆ. ಈ ಸಪ್ಲಿಮೆಂಟ್ ನ್ನು ಗರ್ಭಿಣಿಯರು ಕಡೆಗಣಿಸಬೇಕು. ಯಾಕೆಂದರೆ ಇದಕ್ಕೆ ಯುಎಸ್ ಎಫ್ ಡಿಎ ಯಿಂದ ಯಾವುದೇ ಅನುಮತಿ ಸಿಕ್ಕಿಲ್ಲ. ಗರ್ಭಧಾರಣೆ ವೇಳೆ ಕಾಡು ಮುಡಿಗೆಣಸು ಸೇವನೆ ಬಗ್ಗೆ ಸಾಕಷ್ಟು ಅಧ್ಯಯನಗಳು ಕೂಡ ನಡೆದಿಲ್ಲ. ಇದರಿಂದ ಈ ಸಪ್ಲಿಮೆಂಟ್ ಗರ್ಭಿಣೆ ಹಾಗೂ ಮಗುವಿಗೆ ಸುರಕ್ಷಿತವೇ ಎಂದು ತಿಳಿದಿಲ್ಲ.

ಮುಡಿ ಗೆಣಸಿನಲ್ಲಿ ಇರುವ ಪೋಷಕಾಂಶಗಳು
ತಾಜಾ ಮುಡಿ ಗೆಣಸಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಆರೋಗ್ಯಕಾರಿ ಮಗುವಿನ ಬೆಳವಣಿಗೆಗೆ ನೆರವಾಗುವುದು. ಒಂದು ಕಪ್ ಬೇಯಿಸಿದ ಮುಡಿ ಗೆಣಸಿನಲ್ಲಿ 0.71 ಮಿ.ಗ್ರಾಂ. ಕಬ್ಬಿನಾಂಶವಿದ್ದು, ಇದು ಮಗುವಿಗೆ ಆಮ್ಲಜನಕ ಸರಬರಾಜು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಪ್ರತಿನಿತ್ಯ ನಮಗೆ ಬೇಕಿರುವ 27 ಮಿ.ಗ್ರಾಂ.ನಲ್ಲಿ ಶೇ.3ರಷ್ಟಿದೆ. ಇಷ್ಟೇ ಅಲ್ಲದೆ 16.5 ಮಿ.ಗ್ರಾಂ ವಿಟಮಿನ್ ಸಿ ಇದ್ದು, ಇದು ನಮ್ಮ ದೈನಂದಿನ ಅಗತ್ಯತೆಗೆ ಬೇಕಾಗುವ ಶೇ.50ರಷ್ಟಾಗಿದೆ. ಇದರಲ್ಲಿ ಫಾಲಟೆ ಕೂಡ ಇದ್ದು, ಇದು ಹುಟ್ಟುವ ಮಗುವಿನಲ್ಲಿ ಅಂಗ ವೈಕಲ್ಯ ದೂರ ಮಾಡುವುದು.

ತಿನ್ನಲು ಸಲಹೆಗಳು
ನೀವು ಯಾವಾಗಲೂ ಬೇಯಿಸಿದ ಆಲೂಗಡ್ಡೆ ತಿನ್ನುವ ಬದಲು ಹೊಸ ರುಚಿ ಹಾಗೂ ಹಲವಾರು ಪೋಷಕಾಂಶಗಳು ಇರುವಂತಹ ಬೇಯಿಸಿದ ಮುಡಿಗೆಣಸನ್ನು ತಿನ್ನಬಹುದು. ಬೇಯಿಸಿರುವ ಮುಡಿಗೆಣಸನ್ನು ನೀವು ಕೊಬ್ಬು ಕಡಿಮೆ ಇರುವಂತಹ ಮೊಸರಿನ ಜತೆಗೆ ಸೇವಿಸಿ ಮತ್ತು ಇದರಿಂದ ನಿಮಗೆ ಪ್ರೋಟೀನ್ ಹಾಗೂ ಇತರ ಕೆಲವೊಂದು ಪೋಷಕಾಂಶಗಳು ಸಿಗುವುದು. ಇದು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಸೂಪ್ ಅಥವಾ ಬೇರೆ ಖಾದ್ಯಗಳಿಗೆ ಇದನ್ನು ಬಳಸಿಕೊಳ್ಳಿ. ಇದು ರುಚಿ ಜತೆಗೆ ಪೋಷಕಾಂಶಗಳನ್ನು ನೀಡುವುದು. ಬೇಯಿಸಿರುವ ಮುಡಿ ಗೆಣಸು ಹಸಿರು ಸಲಾಡ್ ಮತ್ತು ಪಾಸ್ತಾ ಸಲಾಡ್ ಗೆ ಒಳ್ಳೆಯದು.



Click it and Unblock the Notifications











