For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಮಿತವಾಗಿ 'ಶುಂಠಿ ಟೀ' ಕುಡಿದರೆ-ಸಾಕಷ್ಟು ಪ್ರಯೋಜನಗಳಿವೆ

|

ಗರ್ಭಾವಸ್ಥೆಯ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಬೆಳಗ್ಗಿನ ಸಮಯದ ವಾಕರಿಕೆ ಸಾಮಾನ್ಯವಾಗಿದೆ. ಈ ತೊಂದರೆಯನ್ನು ಅನುಭವಿಸುವ ಗರ್ಭಿಣಿಯರು ಈ ವಾಕರಿಕೆಯನ್ನು ಕಡಿಮೆ ಮಾಡಲು ನೈಸರ್ಗಿಕ ಗಿಡಮೂಲಿಕೆಗಳ ಟೀ ಸೇವಿಸುವುದನ್ನು ಕೆಲವು ಅಧ್ಯಯನಗಳ ಬಳಿಕ ಸಲಹೆ ಮಾಡಲಾಗುತ್ತಿದೆ. ಇಂತಹ ಗುಣವಿರುವ ಒಂದು ಅದ್ಭುತ ಟೀ ಎಂದರೆ ಶುಂಠಿಯ ಟೀ. ಆದರೆ ಗರ್ಭಾವಸ್ಥೆಯಲ್ಲಿ ಈ ಟೀ ಸೇವನೆ ಎಷ್ಟು ಸುರಕ್ಷಿತ? ಈ ಪ್ರಶ್ನೆ ಶುಂಠಿಯ ಟೀ ಸೇವಿಸಬಯಸುವ ಪ್ರತಿ ಗರ್ಭವತಿಯ ಮನದಲ್ಲಿ ಎದುರಾಗುವುದು ಸಹಜ. ಈ ಪ್ರಶ್ನೆಗೆ ಇಂದಿನ ಲೇಖನದಲ್ಲಿ ಸೂಕ್ತ ಉತ್ತರ ಒದಗಿಸಿದೆ. ಬನ್ನಿ, ಈ ವಿಷಯಕ್ಕೆ ಸಂಬಂಧಿಸಿದ ಅಮೂಲ್ಯ ಮಾಹಿತಿಗಳನ್ನು ಅರಿಯೋಣ:

ಗರ್ಭಾವಸ್ಥೆಯಲ್ಲಿ ಶುಂಠಿಯ ಟೀ ಕುಡಿಯುವುದು ಸುರಕ್ಷಿತವೇ?

ಗರ್ಭಾವಸ್ಥೆಯಲ್ಲಿ ಶುಂಠಿಯ ಟೀ ಕುಡಿಯುವುದು ಸುರಕ್ಷಿತವೇ?

ಹೌದು, ಶುಂಠಿಯ ಟೀ ಯನ್ನು ಮಿತಪ್ರಮಾಣದಲ್ಲಿ ಸೇವಿಸಿದರೆ ಇದು ಗರ್ಭವತಿಯ ಆರೋಗ್ಯಕ್ಕೆ ಪೂರಕವೇ ಆಗಿದೆ. ಅಲ್ಲದೇ ನಿತ್ಯದ ಟೀ ಮತ್ತು ಕಾಫಿಗಳಿಗೆ ಬದಲಾಗಿ ಕುಡಿಯಲು ಅತ್ಯುತ್ತಮ ಪರ್ಯಾಯವೂ ಆಗಿದೆ. ಶುಂಠಿಯ ಟೀ ರುಚಿಕರ ಮಾತ್ರವಲ್ಲ, ಉಲ್ಲಾಸ ನೀಡುವ ಪರಿಮಳವನ್ನೂ ಹೊಂದಿದ್ದು ಪ್ರಥಮ ತ್ರೈಮಾಸಿಕದ ಅವಧಿಯಲ್ಲಿ ವಾಕರಿಕೆಗೆ ಕಾರಣವಾದ ಅಂಶಗಳನ್ನು ತಗ್ಗಿಸಲು ಈ ಪರಿಮಳ ಅಪಾರವಾಗಿ ನೆರವಾಗುತ್ತದೆ. ಆದರೆ ಈ ಪ್ರಮಾಣ ಮಿತವಾಗಿರಬೇಕು. ಎಷ್ಟು ಎಂದರೆ ದಿನಕ್ಕೆ ಒಂದು ಗ್ರಾಂ ಶುಂಠಿಯಷ್ಟು ಮಾತ್ರ! ಗರ್ಭಾವಸ್ಥೆಯಲ್ಲಿ ಶುಂಠಿಯ ಟೀ ಸೇವಿಸುವುದರಿಂದ ದೊರಕುವ ಪ್ರಯೋಜನಗಳೇನು? ಗರ್ಭವತಿಯರು ಶುಂಠಿಯ ಟೀ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿದ್ದು ಇವುಗಳಲ್ಲಿ ಪ್ರಮುಖವಾದವನ್ನು ಕೆಳಗೆ ವಿವರಿಸಲಾಗಿದೆ:

ಮುಂಜಾನೆಯ ವಾಕರಿಕೆಯನ್ನು ಇಲ್ಲವಾಗಿಸುತ್ತದೆ:

ಮುಂಜಾನೆಯ ವಾಕರಿಕೆಯನ್ನು ಇಲ್ಲವಾಗಿಸುತ್ತದೆ:

ಪ್ರಥಮ ತ್ರೈಮಾಸಿಕದಲ್ಲಿ ವಿಶೇಷವಾಗಿ ಎದುರಾಗುವ ವಾಕರಿಕೆ, ವಾಂತಿಯನ್ನೇ ಮುಂಜಾನೆಯ ವಾಕರಿಕೆ ಎಂದು ಕರೆಯಲಾಗುತ್ತದೆ. ಇಲ್ಲಿ ಮುಂಜಾನೆ ಎಂಬ ಪದ ಗರ್ಭಾವಸ್ಥೆಯ ಪ್ರಾರಂಭಿಕ ದಿನಗಳಿಗೆ ಉಪಮೇಯವಾಗಿದೆಯೇ ಹೊರತು ದಿನದ ಬೆಳಗ್ಗಿನ ಹೊತ್ತು ಅಲ್ಲ! ಗರ್ಭವತಿಗೆ ಎದುರಾಗುವ ಈ ವಾಕರಿಕೆಯ ಅನುಭವವನ್ನು ಕೊನೆಗಾಣಿಸಲು ಶುಂಠಿ ಉತ್ತಮವಾಗಿದ್ದು ಮುಂದಿನ ಸಮಯದಲ್ಲಿ ಮತ್ತೆ ಮರುಕಳಿಸದಂತೆ ನಿಯಂತ್ರಿಸುತ್ತದೆ. ಇದಕ್ಕಾಗಿ ಮುಂಜಾನೆಯ ಎದ್ದ ಬಳಿಕ ಮತ್ತು ರಾತ್ರಿ ಮಲಗುವ ಮುನ್ನ ಒಂದೊಂದು ಲೋಟ ಶುಂಠಿಯ ಟೀ ಕುಡಿಯುವ ಮೂಲಕ ಮುಂಜಾನೆಯ ವಾಕರಿಕೆಯ ತೊಂದರೆ ಆವರಿಸದಂತೆ ನಿಯಂತ್ರಿಸಬಹುದು.

ಜೀರ್ಣಕ್ರಿಯೆಗೆ ಸಹಕರಿಸುತ್ತದೆ

ಜೀರ್ಣಕ್ರಿಯೆಗೆ ಸಹಕರಿಸುತ್ತದೆ

ಜೀರ್ಣಕ್ರಿಯೆಗೆ ಶುಂಠಿ ಹೆಚ್ಚಿನ ನೆರವನ್ನು ನೀಡುತ್ತದೆ ಹಾಗೂ ಜಠರದಲ್ಲಿ ನೇರವಾಗಿ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ದಿನಕ್ಕೆರಡು ಶುಂಠಿಯ ಟೀ ಸೇವಿಸುವ ಮೂಲಕ ಜೀರ್ಣಾಂಗಗಳಲ್ಲಿ ಹೆಚ್ಚಿನ ಪ್ರಚೋದನೆ ಒದಗಿಸಿ ಜೀರ್ಣಕ್ರಿಯೆ ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುವಂತೆ ನೆರವಾಗುತ್ತದೆ.

Most Read: ಗರ್ಭಿಣಿಯರು ಅರಿಶಿನ ಬೆರೆಸಿದ ಹಾಲು ಕುಡಿಯಬಹುದೇ? ಖಂಡಿತವಾಗಿಯೂ ಮಿತವಾಗಿ ಸೇವಿಸಬಹುದು

ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ

ಶುಂಠಿಯಲ್ಲಿ ಉರಿಯೂತ ನಿವಾರಕ ಗುಣ ಪ್ರಬಲವಾಗಿದ್ದು ರೋಗ ನಿರೋಧಕ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಕೇವಲ ಶುಂಠಿಯ ಟೀ ಮಾತ್ರವಲ್ಲ ಶುಂಠಿ ಇರುವ ಬೇರೆ ಯಾವುದೇ ಆಹಾರದ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ತಮವಾಗಿರಲು ಸಹಕರಿಸುವ ಮೂಲಕ ಹಲವಾರು ರೋಗಗಳ ವಿರುದ್ದ ರಕ್ಷಣೆ ಒದಗಿಸುತ್ತದೆ.

ಗಂಟಲ ಕೆರೆತದಿಂದ ರಕ್ಷಿಸುತ್ತದೆ

ಗಂಟಲ ಕೆರೆತದಿಂದ ರಕ್ಷಿಸುತ್ತದೆ

ಶುಂಠಿಯ ಟೀ ಕುಡಿಯುವ ಮೂಲಕ ಇದರಲ್ಲಿರುವ ಶಮನಕಾರಿ ಗುಣ ಗಂಟಲ ಬೇನೆಯನ್ನು ಶೀಘ್ರವಾಗಿ ಇಲ್ಲವಾಗಿಸಲು ನೆರವಾಗುತ್ತದೆ. ತನ್ಮೂಲಕ ಕೆಮ್ಮು, ಫ್ಲೂ ಮೊದಲಾದ ಗಂಟಲ ಸೋಂಕಿನಿಂದ ಎದುರಾಗುವ ಕಾಯಿಲೆಗಳಿಂದ ರಕ್ಷಿಸುತ್ತದೆ.

ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರಲು ನೆರವಾಗುತ್ತದೆ

ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರಲು ನೆರವಾಗುತ್ತದೆ

ಶುಂಠಿಯ ಟೀ ಸೇವನೆಯಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾಗಲು ಸಾಧ್ಯವಾಗುತ್ತದೆ ಹಾಗೂ ರಕ್ತದಲ್ಲಿ ಉತ್ತಮ ಪ್ರಮಾಣದ ಗ್ಲೂಕೋಸ್ ಮಟ್ಟ ಪಡೆಯಲು ನೆರವಾಗುತ್ತದೆ. ಇದೇ ಕಾರಣಕ್ಕೆ ಗರ್ಭಾವಸ್ಥೆಯ ಮಧುಮೇಹ ಸ್ಥಿತಿ (gestational diabetes) ಪಡೆಯುವ ಗರ್ಭವತಿಯರಿಗೆ ಸೇವಿಸಲು ಶುಂಠಿಯ ಟೀ ಅತ್ಯುತ್ತಮ ಪೇಯವಾಗಿದೆ.

ಸ್ನಾಯುಗಳ ಬಳಲಿಕೆಯನ್ನು ಕಡಿಮೆ ಮಾಡುತ್ತದೆ

ಸ್ನಾಯುಗಳ ಬಳಲಿಕೆಯನ್ನು ಕಡಿಮೆ ಮಾಡುತ್ತದೆ

ಶುಂಠಿ ಉರಿಯೂತ ನಿವಾರಕ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿದ್ದು ಗರ್ಭಾವಸ್ಥೆಯಲ್ಲಿ ಎದುರಾಗುವ ಹಲವು ಬಗೆಯ ನೋವುಗಳನ್ನು ನಿವಾರಿಸಲು ನೆರವಾಗುತ್ತದೆ. ತನ್ಮೂಲಕ ಉರಿಯೂತ ಮತ್ತು ಸ್ನಾಯುಗಳ ಬಳಲಿಕೆಯನ್ನೂ ಕಡಿಮೆ ಮಾಡುತ್ತದೆ.

ಪೋಷಕಾಂಶಗಳ ಹೀರಲ್ಪಡುವಿಕೆಗೆ ನೆರವಾಗುತ್ತದೆ.

ಪೋಷಕಾಂಶಗಳ ಹೀರಲ್ಪಡುವಿಕೆಗೆ ನೆರವಾಗುತ್ತದೆ.

ಆಹಾರದಲ್ಲಿರುವ ಪೋಷಕಾಂಶಗಳನ್ನು ಜೀರ್ಣಾಂಗಗಳು ಗರಿಷ್ಟ ಪ್ರಮಾಣದಲ್ಲಿ ಹೀರಿಕೊಳ್ಳಲು ಶುಂಠಿ ಪ್ರಚೋದಿಸುತ್ತದೆ. ಈ ಮೂಲಕ ದೇಹದಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು ಹಾಗೂ ಖನಿಜಗಳ ಮಟ್ಟ ಲಭಿಸಲು ಸಾಧ್ಯವಾಗುತ್ತದೆ. ಗರ್ಭಾವಸ್ಥೆಯಲ್ಲಿ ಎಷ್ಟು ಪ್ರಮಾಣದ ಶುಂಠಿಯ ಟೀ ಸೇವನೆ ಸೂಕ್ತ? ದಿನವೊಂದರಲ್ಲಿ ಎರಡರಿಂದ ಮೂರು ಕಪ್ ಶುಂಠಿಯ ಟೀ ಕುಡಿಯುವುದು ಸೂಕ್ತ. ಅಂದರೆ ಈ ಮೂರೂ ಕಪ್ ಮೂಲಕ ಸೇವಿಸುವ ಒಟ್ಟಾರೆ ಶುಂಠಿಯ ಪ್ರಮಾಣ ಮಾತ್ರ್ತಒಂದು ಗ್ರಾಂ ಮೀರದಿರುವಂತೆ ನೋಡಿಕೊಳ್ಳಬೇಕು.

Most Read: ಗರ್ಭಿಣಿಯರು ಪಪ್ಪಾಯ, ದ್ರಾಕ್ಷಿ ಹಾಗೂ ಅನಾನಸ್ ಹಣ್ಣುಗಳನ್ನು ತಿನ್ನಲೇಬಾರದು!

ಗರ್ಭವತಿಯರಿಗೆ ಸೂಕ್ತವಾದ ಶುಂಠಿಯ ಪಾಕವಿಧಾನ

ಗರ್ಭವತಿಯರಿಗೆ ಸೂಕ್ತವಾದ ಶುಂಠಿಯ ಪಾಕವಿಧಾನ

ಇಂದು ಕೆಲವು ವಿಶೇಷ ಟೀ ತಯಾರಿಕಾ ವಿಧಾನವನ್ನು ಪ್ರಸ್ತುತಪಡಿಸಲಾಗುತ್ತಿದ್ದು ಗರ್ಭಿಣಿಯರಿಗೆ ಸೂಕ್ತವಾಗಿದೆ:

ಲಿಂಬೆ-ಶುಂಠಿಯ ಟೀ

ಲಿಂಬೆ-ಶುಂಠಿಯ ಟೀ

ನಿಮ್ಮ ನೆಚ್ಚಿನ ಕಪ್ಪ ಟೀ ಪುಡಿಯನ್ನು ಹಾಕಿ ಕುದಿಯುತ್ತಿರುವ ನೀರಿಗೆ ಒಂದು ಚಿಕ್ಕ ಚಮಚದಷ್ಟು ತುರಿದ ಶುಂಠಿಯನ್ನು ಹಾಕಿ ತಕ್ಷಣವೇ ಉರಿ ಆರಿಸಿ. ಇದಕ್ಕೆ ಅರ್ಧ ಲಿಂಬೆಯ ರಸವನ್ನು ಹಿಂಡಿ. ಸುಮಾರು ಅರ್ಧಚಮಚದಷ್ಟು ಅಪ್ಪಟ ಜೇನು ಬೆರೆಸಿ, ಕಡೆಯಲ್ಲಿ ಒಂದೆರಡು ಪುದಿನಾ ಎಲೆಗಳನ್ನು ಕಿವುಚಿ ಬೆರೆಸಿ. ಈ ಟೀಯನ್ನು ಬಿಸಿಬಿಸಿಯಾಗಿಯೇ ಸೇವಿಸಿ.

ಶುಂಠಿ-ಹಸಿರು ಟೀ

ಶುಂಠಿ-ಹಸಿರು ಟೀ

ಕುದಿಯುತ್ತಿರುವ ನೀರಿಗೆ ಒಂದು ಚಿಕ್ಕ ಚಮಚ ತುರಿದ ಶುಂಠಿಯನ್ನು ಬೆರೆಸಿ. ಬಳಿಕ ಉರಿ ಆರಿಸಿ ಒಂದು ಕಪ್ ನಲ್ಲಿ ಬಿಸಿನೀರನ್ನು ಸಂಗ್ರಹಿಸಿ. ಈ ನೀರಿನಲ್ಲಿ ಒಂದು ಬ್ಯಾಗ್ ಹಸಿರು ಟೀ ಮುಳುಗಿಸಿ ಸುಮಾರು ಮೂರು ನಿಮಿಷ ಹಾಗೇ ಬಿಡಿ. ಬಳಿಕ ಅರ್ಧ ಚಿಕ್ಕ ಚಮಚ ಜೇನು ಬೆರೆಸಿ ಕಲಕಿ ಬಿಸಿಬಿಸಿಯಾಗಿಯೇ ಕುಡಿಯಿರಿ.

Most Read: ಗರ್ಭಿಣಿಯರು ಪ್ರತಿದಿನ ದಿನಕ್ಕೆ ಒಂದಾದರೂ ಬಾಳೆಹಣ್ಣು ತಿನ್ನಬೇಕಂತೆ

ಶುಂಠಿ-ಲವಂಗ ಟೀ

ಶುಂಠಿ-ಲವಂಗ ಟೀ

ಒಂದು ಲೋಟ ನೀರನ್ನು ಕುದಿಸಿ ಇದಕ್ಕೆ ಒಂದು ಚಿಕ್ಕ ಚಮದ ತುರಿದ ಹಸಿಶುಂಠಿ ಹಾಗೂ ಮೂರು ಲವಂಗಗಳನ್ನು ಹಾಕಿ ಬೆರೆಸಿ. ನಂತರ ಕೊಂಚವೇ ಟೀಪುಡಿಯನ್ನು ಬೆರೆಸಿ ಸುಮಾರು ಎರಡು ನಿಮಿಷಗಳವೆರೆಗೆ ಕುದಿಸುವುದನ್ನು ಮುಂದುವರೆಸಿ. ಬಳಿಕ ಹಾಗೇ ಅಥವ ಕೊಂಚವೇ ಜೇನು ಬೆರೆಸಿ ಸೇವಿಸಿ.

ಕ್ಯಾಮೋಮೈಲ್ ಶುಂಠಿಯ ಟೀ

ಕ್ಯಾಮೋಮೈಲ್ ಶುಂಠಿಯ ಟೀ

ಒಂದು ಲೋಟ ನೀರನ್ನು ಕುದಿಸಿ ಇದಕ್ಕೆ ಒಂದು ಚಿಕ್ಕ ಚಮದ ತುರಿದ ಹಸಿಶುಂಠಿ ಬೆರೆಸಿ ಬಳಿಕ ಉರಿ ಆರಿಸಿ ಸೋಸಿ ನೀರನ್ನು ಒಂದು ಕಪ್ ನಲ್ಲಿ ಸಂಗ್ರಹಿಸಿ. ಇದಕ್ಕೆ ಕೊಂಚ ಜೇನು ಮತ್ತು ಕ್ಯಾಮೋಮೈಲ್ ಟೀ ಬ್ಯಾಗ್ ಒಂದನ್ನು ಮುಳುಗಿಸಿ ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಕಾಲ ಇರಿಸಿ ಬಿಸಿಬಿಸಿಯಾಗಿಯೇ ಕುಡಿಯಿರಿ.

English summary

Benefits of Drinking Ginger Tea During Pregnancy

Morning sickness is a common symptom during the first trimester of pregnancy. Studies suggest that most women who experience it prefer herbal teas including ginger as a remedy for relief from all that nausea. But how safe is ginger tea during pregnancy? If safe, what are its benefits and risks? In this article, all of these questions and more to clear your doubts ginger tea is safe to consume in moderate amounts. It is an excellent alternative to tea and coffee and has a great aroma, taste, and a wide range of health benefits. It is highly beneficial for managing nausea and vomiting, especially in your first trimester .
X
Desktop Bottom Promotion