For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಹೊಟ್ಟೆಯ ಮೇಲೆ ಕಾಣಿಸಿಕೊಳ್ಳುವ ಕಪ್ಪು ರೇಖೆ! ಯಾಕೆ ಹೀಗೆ?

|

ಮಹಿಳೆಯರ ಜೀವನದಲ್ಲಿ ಗರ್ಭಾವಸ್ಥೆ ಎನ್ನುವುದು ಒಂದು ಮಹತ್ತರವಾದ ಗಟ್ಟ. ಈ ಹಂತದಲ್ಲಿ ತಾಯಿಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತದೆ. ಗರ್ಭದಲ್ಲಿ ಮಗು ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಾ ಹೋದಂತೆ ತಾಯಿಯ ಹೊಟ್ಟೆ ಭಾಗವು ಸಾಕಷ್ಟು ವಿಸ್ತರಣೆ ಪಡೆಯುತ್ತಾ ಹೋಗುವುದು. ಹೀಗೆ ವಿಸ್ತಾರವಾಗುವ ಹೊಟ್ಟೆ ಭಾಗವು ಬಿರಿಯುವುದು, ಕಪ್ಪು ರೇಖೆ ಕಾಣಿಸಿಕೊಳ್ಳುವುದು, ಬಿರಿದ ಭಾಗದಲ್ಲಿ ತುರಿಕೆ ಹೀಗೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ.

ಗರ್ಭಾವಸ್ಥೆಯು ತಾಯಿಯ ಜೀವನದಲ್ಲಿ ಸಾರ್ಥಕ ಭಾವನೆ ನೀಡುತ್ತದೆ ನಿಜ. ಆದರೆ ಪ್ರಸವದ ನಂತರ ತಾಯಿಯ ದೇಹದಾಕಾರದಲ್ಲಿ ಸಾಕಷ್ಟು ನ್ಯೂನತೆಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಹೊಟ್ಟೆ ಜೋತು ಬೀಳುವುದು. ಮಾಂಸಖಂಡಗಳು ಜೋಲುವುದು, ಕಪ್ಪು ಗೆರೆಗಳು ಉಳಿದು ಕೊಳ್ಳುವುದು, ಅನಗತ್ಯ ಕೊಬ್ಬು ಶೇಖರಣೆ ಹೀಗೆ ಅನೇಕ ಸಮಸ್ಯೆಗಳು ತಲೆದೂರುತ್ತವೆ. ಅಂತಹ ಸಮಸ್ಯೆಗಳಲ್ಲಿ ಒಂದಾದ ಹೊಟ್ಟೆಯ ಮೇಲೆ ಕಾಣಿಸಿಕೊಳ್ಳುವ ಕಪ್ಪು ಗೆರೆ ಸಹ ಒಂದು. ಅದನ್ನು ಲೀನಿಯಾ ನಿಗ್ರ ಎಂದು ಕರೆಯುವರು.

What You Should Know About Pregnancy Belly Line

ಹೌದು, ಬಹುತೇಕ ಮಹಿಳೆಯರು ಗರ್ಭಾವಸ್ಥೆಯ ಸಮಯದಲ್ಲಿ ಹಾಗೂ ಗರ್ಭಾವಸ್ಥೆಯ ನಂತರದಲ್ಲಿ ಹೊಟ್ಟೆಯ ಮೇಲೆ ಗಾಢವಾಗಿ ಕಾಣಿಸಿಕೊಳ್ಳುವ ಕಪ್ಪು ರೇಖೆ/ಲೀನಿಯಾ ನಿಗ್ರದ ಬಗ್ಗೆ ಸಾಕಷ್ಟು ಹತಾಶೆಗಳನ್ನು ವ್ಯಕ್ತಪಡಿಸುತ್ತಾರೆ. ಈ ವಿಚಾರವಾಗಿ ಸಾಕಷ್ಟು ಸುಧಾರಣೆ ಕಾಣಲು ವಿವಿಧ ಆರೈಕೆಗಳ ಮೊರೆ ಹೋಗುವುದು ಸಹಜ. ಸಾಕಷ್ಟು ಮಾಹಿತಿಯನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ.

ಕಪ್ಪು ರೇಖೆ/ಲೀನಿಯಾ ನಿಗ್ರ ಎಂದರೇನು?

ಕಪ್ಪು ರೇಖೆ/ಲೀನಿಯಾ ನಿಗ್ರ ಎಂದರೇನು?

ಲೀನಿಯಾ ನಿಗ್ರ ಎಂದರೆ ಗರ್ಭಾವಸ್ಥೆಯಲ್ಲಿ ಇರುವಾಗ ಮಹಿಳೆಯರ ಹೊಟ್ಟೆ ಭಾಗದಲ್ಲಿ ಕಂಡುಬರುವ ಕಪ್ಪು ಬಣ್ಣದ ಲಂಬವಾದ ರೇಖೆಯಾಗಿದೆ. ಇದು ಎರಡನೆಯ ಅಥವಾ ಮೂರನೇ ತ್ರೈಮಾಸಿಕದಲ್ಲಿ ಕಂಡುಬರುತ್ತದೆ. ಲೀನಿಯಾ ನಿಗ್ರ ಎಂದರೆ "ಡಾರ್ಕ್ ಲೈನ್" ಎಂದು ಅರ್ಥ. ಇದು ಲ್ಯಾಟಿನ್ ಭಾಷೆಯ ಮೂಲ ಎಂದು ಹೇಳಲಾಗುವುದು. ಇದು ಗರ್ಭಿಣಿಯರ ಕಿಬ್ಬೊಟ್ಟೆಯ ಭಾಗದಲ್ಲಿ ಕಂಡುಬರುತ್ತದೆ. ಕೆಲವರಿಗೆ ಹೊಕ್ಕಳಿನಿಂದ ಪ್ರಾರಂಭವಾಗಿ ಪೆಲ್ವಿಕ್ ಮೂಳೆಯವರೆಗೆ ವಿಸ್ತರಿಸಿರುತ್ತದೆ. ಇನ್ನೂ ಕೆಲವರಿಗೆ ಎದೆಯ ಭಾಗದಿಂದ ಪೆಲ್ವಿಕ್ ಮೂಳೆಯವರೆಗೆ ಲಂಬವಾಗಿ ವಿಸ್ತಾರಗೊಂಡಿರುತ್ತದೆ ಎನ್ನಲಾಗುವುದು.

ಲೀನಿಯಾ ನಿಗ್ರ ಯಾವಾಗ ಕಾಣಿಸಿಕೊಳ್ಳುತ್ತದೆ?

ಲೀನಿಯಾ ನಿಗ್ರ ಯಾವಾಗ ಕಾಣಿಸಿಕೊಳ್ಳುತ್ತದೆ?

ಇದು ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಬದಲಾವಣೆಗಳಲ್ಲಿ ಒಂದು ಎಂದು ಪರಿಗಣಿಸಲಾಗುವುದು. ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭವಾಗುವುದು. ಗರ್ಭಾವಸ್ಥೆಯಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಯಿಂದ ಈ ಸಮಸ್ಯೆ ಉಂಟಾಗುವುದು ಎಂದು ಹೇಳಲಾಗುತ್ತದೆ. ಗರ್ಭಿಣಿಯರ ದೇಹದಲ್ಲಿ ಈಸ್ಟ್ರೋಜೆನ್ ಮಟ್ಟ ಹೆಚ್ಚಾದಂತೆ ಮೆಲನೊಸೈಟ್‍ಅನ್ನು ಉತ್ತೇಜಿಸುತ್ತದೆ. ಆಗ ಚರ್ಮದ ಕೋಶಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ ಎಂದು ಹೇಳಲಾಗುವುದು. ಬೆಳೆಯುವ ಭ್ರೂಣಕ್ಕೆ ಅನುಗುಣವಾಗಿ ಲೀನಿಯಾ ನಿಗ್ರ ನೋಟಕ್ಕೆ ದಾರಿ ನೀಡುತ್ತದೆ.

ಪ್ರತಿಯೊಬ್ಬರಿಗೂ ಲೀನಿಯಾ ನಿಗ್ರ ಉಂಟಾಗುವುದೇ?

ಪ್ರತಿಯೊಬ್ಬರಿಗೂ ಲೀನಿಯಾ ನಿಗ್ರ ಉಂಟಾಗುವುದೇ?

ಗರ್ಭಾವಸ್ಥೆಯಲ್ಲಿ ಶೇ. 70ರಷ್ಟು ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅವರವರ ದೇಹದಲ್ಲಿ ಉಂಟಾಗುವ ಮೆನನಿನ್ ಪ್ರಮಾಣದ ಆಧಾರದಲ್ಲಿ ರೇಖೆಯು ಗಾಢವಾದ ತಿರುವನ್ನು ಪಡೆದುಕೊಳ್ಳುವುದು. ಗರ್ಭಾವಸ್ಥೆಯಲ್ಲಿ ನಿಮಗೆ ಈ ರೇಖೆ ಕಾಣಿಸಲಿಲ್ಲ ಎಂದರೆ ಇಲ್ಲ ಎಂದರ್ಥವಲ್ಲ. ತಿಳಿಯಾಗಿ ಹೊಂದಿದ್ದೀರಿ ಅಥವಾ ಅಷ್ಟು ಪರಿಣಾಮಕಾರಿಯಾದ ರೂಪದಲ್ಲಿ ಇಲ್ಲ ಎಂದು ಹೇಳಲಾಗುವುದು. ಈ ರೇಖೆ ಭ್ರೂಣದ ಮೇಲೆ ಯಾವುದೇ ಪರಿಣಾಮಕಾರಿ ಪರಿಣಾಮವನ್ನು ಬೀರುವುದಿಲ್ಲ. ಈ ಕುರಿತು ಅಧಿಕ ಚಿಂತನೆಯನ್ನು ನಡೆಸುವ ಅಗತ್ಯವು ಇರುವುದಿಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಲೀನಿಯಾ ನಿಗ್ರ ಯಾವಾಗ ಕಣ್ಮರೆಯಾಗುವುದು?

ಲೀನಿಯಾ ನಿಗ್ರ ಯಾವಾಗ ಕಣ್ಮರೆಯಾಗುವುದು?

ಲೀನಿಯಾ ನಿಗ್ರ ಪ್ರಸವದ ನಂತರ ನಿಧಾನವಾಗಿ ಕಣ್ಮರೆಯಾಗುವುದು. ಪ್ರಾರಂಭದಲ್ಲಿ ಮಸುಕಾದಂತೆ ಕಾಣುತ್ತದೆಯಾದರೂ ಪ್ರಸವದ ನಂತರ ಅಂದರೆ 3-4 ತಿಂಗಳ ಬಳಿಕ ತಿಳಿಯಾಗುವುದು. ನಂತರ ದೇಹದಲ್ಲಿ ಮೆಲನಿನ್ ಉಪಸ್ಥಿತಿ ಹೇಗಿರುತ್ತದೆ ಎನ್ನುವುದರ ಆಧಾರದ ಮೇಲೆ ರೇಖೆಯ ಸ್ಪಷ್ಟತೆ ಅಡಗಿರುತ್ತದೆ. ಸಾಧ್ಯವಾದಷ್ಟು ಬೇಗ ಈ ರೇಖೆ ಕಣ್ಮರೆಯಾಗಬೇಕು ಎಂದು ಬಯಸಿದರೆ ನೀವು ಕ್ರೀಮ್‍ಗಳು ಅಥವಾ ಸೂರ್ಯನ ಬೆಳಕಿಗೆ ಆ ಪ್ರದೇಶವನ್ನು ತೆರೆದುಕೊಳ್ಳಬೇಕು. ಇಲ್ಲವೇ ವೈದ್ಯರ ಸಲಹೆಯ ಮೇರೆಗೆ ಕ್ರೀಮ್‍ಗಳನ್ನು ಬಳಸಬಹುದು.

ಲೀನಿಯಾ ನಿಗ್ರ ಮಗುವಿನ ಲಿಂಗವನ್ನು ಪ್ರತಿನಿಧಿಸುವುದೇ?

ಲೀನಿಯಾ ನಿಗ್ರ ಮಗುವಿನ ಲಿಂಗವನ್ನು ಪ್ರತಿನಿಧಿಸುವುದೇ?

ಕೆಲವು ನಂಬಿಕೆ ಹಾಗೂ ಪ್ರಾಚೀನಕಾಲದ ಊಹೆಯ ಆಧಾರದ ಮೇಲೆ ಲೀನಿಯಾ ನಿಗ್ರ ಭ್ರೂಣದ ಲಿಂಗವನ್ನು ನಿರ್ಧರಿಸುತ್ತದೆ ಎಂದು ಹೇಳಲಾಗುವುದು. ಎದೆಯ ಭಾಗದಿಂದ ಪೆಲ್ವಿಕ್ ಮೂಳೆಯ ವರೆಗೂ ಲಂಬವಾದ ಲೇನಿಯಾ ನಿಗ್ರ ರೇಖೆ ಇದ್ದರೆ ಅದು ಹೆಣ್ಣು ಮಗುವಿನ ಬೆಳವಣಿಗೆ ಹಾಗೂ ಹೊಕ್ಕಳಿನಿಂದ ಪೆಲ್ವಿಕ್ ಮೂಳೆಯ ವರೆಗೆ ಇರುವ ಲಂಬವಾದ ನಿಗ್ರ ರೇಖೆ ಇದ್ದರೆ ಅದನ್ನು ಗಂಡು ಮಗುವಿನ ಸೂಚನೆ ಎಂದು ತಿಳಿಯುತ್ತಾರೆ.

ಇದರಿಂದ ಯಾವುದೇ ತೊಂದರೆ ಇಲ್ಲ

ಇದರಿಂದ ಯಾವುದೇ ತೊಂದರೆ ಇಲ್ಲ

ಈ ರೇಖೆಯು ಕಾಣಿಸಿಕೊಳ್ಳುವುದಕ್ಕೂ ಮಗುವಿನ ಲಿಂಗ ನಿರ್ಧರಿಸುವುದಕ್ಕೂ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಈ ರೇಖೆಯಿಂದ ಭ್ರೂಣ ಬೆಳವಣಿಗೆಗೂ ಯಾವುದೇ ತೊಂದರೆ ಉಂಟಾಗದು ಎಂದು ಸಹ ಹೇಳಲಾಗುತ್ತದೆ. ಹಾರ್ಮೋನ್ ವ್ಯತ್ಯಾಸಗಳಿಂದ ಕಾಣಿಸಿಕೊಂಡು. ಪ್ರಸವದ ನಂತರ ನಿಧಾನವಾಗಿ ಕಣ್ಮರೆಯಾಗುವುದು ಎಂದು ಹೇಳಲಾಗುತ್ತದೆ.

English summary

What You Should Know About Pregnancy Belly Line?

During pregnancy, a lot of changes happen in a woman's body. While a few are frustrating and challenge you physically, some are fascinating as well. If you have been discussing your pregnancy body with your friends, chances are you must have heard them talk about their pregnancy belly line. Wondering what it means?
X
Desktop Bottom Promotion