For Quick Alerts
ALLOW NOTIFICATIONS  
For Daily Alerts

ನಿಮಗೆ ಗೊತ್ತಾ? ರಾಶಿಚಕ್ರದ ಅನುಸಾರ ಗರ್ಭಾವಸ್ಥೆ ನಿರ್ಣಯವಾಗುತ್ತದೆಯಂತೆ!

By Divya Pandit
|

ಹೆಣ್ಣಿಗೊಂದು ಸುಂದರ ಅನುಭವ ಹಾಗೂ ಪರಿಪೂರ್ಣ ಭಾವವನ್ನು ನೀಡುವುದು ಗರ್ಭಾವಸ್ಥೆ. ತಾಯಿಯಾಗಿ ಒಂದು ಮಗುವಿಗೆ ಜನ್ಮ ನೀಡುವುದು ಸೃಷ್ಟಿಯ ಅದ್ಭುತ ಪರಿಕಲ್ಪನೆ. ಈ ಒಂದು ವಿಶಿಷ್ಟ ಅನುಭವವು ಮಹಿಳೆಯಿಂದ ಮಹಿಳೆಗೆ ವಿಭಿನ್ನವಾಗಿರಬಹುದು. ಅದಕ್ಕೆ ಕಾರಣ ಅವರನ್ನು ಆಳುವ ಗ್ರಹಗಳು ಎಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗರ್ಭಿಣಿಯರ ರಾಶಿಚಕ್ರದ ಅನುಸಾರ ಗರ್ಭಾವಸ್ಥೆಯು ಸುಂದರವಾದ ಅನುಭವವನ್ನು ನೀಡುವುದು.

horoscope prediction

ಕೆಲವೊಮ್ಮೆ ರಾಶಿಚಕ್ರದ ಅನುಸಾರ ಅನುಕೂಲಕರ ಪ್ರಭಾವ ಇಲ್ಲದೆ ಇದ್ದರೆ ಅನೇಕ ಸಮಸ್ಯೆಯನ್ನು ಅನುಭವಿಸಬೇಕಾಗುವುದು ಎಂದು ಹೇಳಲಾಗುವುದು. ನೀವು ಅಥವಾ ನಿಮ್ಮವರು ಗರ್ಭಾವಸ್ಥೆಯಲ್ಲಿ ಇದ್ದಾರೆ, ಅವರ ಮೇಲೆ ರಾಶಿಚಕ್ರದ ಪ್ರಭಾವ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ

ಮೇಷ

ಈ ರಾಶಿಯವರು ಉತ್ತಮ ವಿಶ್ವಾಸ, ನಿರ್ಣಯವನ್ನು ತೆಗೆದುಕೊಳ್ಳುವ ಶಕ್ತಿ ಹೊಂದಿರುತ್ತಾರೆ. ಇವರು ಕೆಲವು ದೈಹಿಕ ಸವಾಲುಗಳನ್ನು ಎದುರಿಸುವುದರಿಂದ ಗರ್ಭಾವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಸ್ವಾಗತಿಸಬೇಕಾಗುವುದು. ಭಾವನಾತ್ಮಕವಾದ ಸವಾಲುಗಳನ್ನು ತೆಗೆದುಕೊಳ್ಳಲು ಆಶಾವಾದಿ ಪ್ರವೃತ್ತಿಯು ಇವರಿಗೆ ಸಹಾಯ ಮಾಡುವುದು.

ಇವರು ತೀವ್ರವಾದ ಕೋಪ ಹಾಗೂ ಆಕ್ರಮಣಶೀಲ ಪ್ರವೃತ್ತಿ ಹೊಂದಿರುವುದರಿಂದ ಗರ್ಭಾವಸ್ಥೆಯಲ್ಲಿ ಹಾರ್ಮೋನ್‍ಗಳ ಬದಲಾವಣೆ ಉಂಟಾಗಬಹುದು. ಇದರಿಂದ ಕೆಲವು ಆರೋಗ್ಯ ಸಮಸ್ಯೆ ಉದ್ಭವ ಆಗುವ ಸಾಧ್ಯತೆಗಳಿರುತ್ತವೆ. ಮುಂಜಾನೆಯ ಅನಾರೋಗ್ಯ ಲಕ್ಷಣ ಹೆಚ್ಚಾಗಿ ಕಾಡುವುದು. ಈ ಕುರಿತು ಆದಷ್ಟು ಎಚ್ಚರಿಕೆ ವಹಿಸಬೇಕು.

ವೃಷಭ

ವೃಷಭ

ಇವರು ವಿಶ್ವಾಸಾರ್ಹ ಮತ್ತು ಪ್ರಾಯೋಗಿಕ ಸ್ವಭಾವದವರಾಗಿರುವುದರಿಂದ ಗರ್ಭಾವಸ್ಥೆಯ ಒತ್ತಡವನ್ನು ಸುಲಭವಾಗಿ ನಿರ್ವಹಿಸಬಲ್ಲರು. ಇವರು ನಿಯಮಿತವಾಗಿ ವೈದ್ಯರ ತಪಾಸಣೆಗೆ ಒಳಗಾಗುವುದರಿಂದ ವಂಚಿತರಾಗಬಹುದು. ಆದರೆ ಅದೃಷ್ಟದಿಂದಾಗಿ ಇವರ ಗರ್ಭಾವಸ್ಥೆಯಲ್ಲಿ ಆರೋಗ್ಯವು ಉತ್ತಮ ಸ್ಥಿತಿಯಲ್ಲಿ ಇರುವುದು. ಕೆಲವೊಮ್ಮೆ ಹಠಾತ್ ಬದಲಾವಣೆಯು ಆರೋಗ್ಯದಲ್ಲಿ ಕಾಣಿಸಿಕೊಳ್ಳುವ ಸಾದ್ಯತೆಗಳು ಇರುತ್ತವೆ ಎನ್ನಲಾಗುವುದು.

ಮಿಥುನ

ಮಿಥುನ

ಭಯ ಹಾಗೂ ಕೆಲವು ಆರೋಗ್ಯ ಸಮಸ್ಯೆಯಿಂದಾಗಿ ಮಿಥುನ ರಾಶಿಯವರು ಗರ್ಭಾವಸ್ಥೆಯಲ್ಲಿ ಕಠಿಣ ಸ್ಥಿತಿಯನ್ನು ಎದುರಿಸುವರು. ಕೆಲವೊಮ್ಮೆ ಇವರ ಭಾವನೆಗಳು ಸೀಮಿತವಾಗಿರದ ಕಾರಣ ಕೆಲವು ತೊಂದರೆ ಅನುಭವಿಸಬಹುದು. ಗರ್ಭಾವಸ್ಥೆಯಲ್ಲಿ ಏನು ತಿನ್ನ ಬೇಕು? ಏನು ಕುಡಿಯಬಹುದು ಎನ್ನುವುದರ ಬಗ್ಗೆ ನಿಯಂತ್ರಣ ಇರುವುದಿಲ್ಲ. ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಕಷ್ಟಪಡುವುದರಿಂದ ಗರ್ಭಧಾರಣೆಯ ಸ್ಥಿತಿಯಲ್ಲಿ ಕೆಲವು ಒತ್ತಡದ ಸ್ಥಿತಿ ಉಂಟಾಗುವುದು.

ಕರ್ಕ

ಕರ್ಕ

ಗರ್ಭಾವಸ್ಥೆಯನ್ನು ಅನುಭವಿಸುವುದು ಇವರಿಗೊಂದು ಬಗೆಯ ಆರಾಮದಾಯಕವಲ್ಲದ ಅನುಭವವನ್ನು ನೀಡುವುದು. ಭಾವನಾತ್ಮಕವಾಗಿ ಸೂಕ್ಷ್ಮ ಪ್ರವೃತ್ತಿಯನ್ನು ಹೊಂದಿರುವ ವ್ಯಕ್ತಿಗಳು ಇವರಾಗಿರುತ್ತಾರೆ. ಹಾರ್ಮೋನ್‍ಗಳ ಬದಲಾವಣೆ ಹಾಗೂ ದೈಹಿಕವಾಗಿ ಉಂಟಾಗುವ ಬದಲಾವಣೆಗಳು ಇವರಿಗೊಂದು ಬಗೆಯ ಒತ್ತಡ ಹಾಗೂ ಭಯವನ್ನು ಸೃಷ್ಟಿಸುವುದು. ಬೆಳೆಯುತ್ತಿರುವ ಹೊಟ್ಟೆಯ ಬಗ್ಗೆ ಒಂದು ಬಗೆಯ ಮಾನಸಿಕ ಚಿಂತನೆಗಳು ಕಾಡಬಹುದು. ಇದರಿಂದಾಗಿ ಮನಃಸ್ಥಿತಿಯು ಬದಲಾವಣೆ ಹೊಂದುತ್ತಲೇ ಇರುತ್ತವೆ.

ಸಿಂಹ

ಸಿಂಹ

ಈ ರಾಶಿಯವರಲ್ಲಿ ಸ್ವಲ್ಪ ಮೊಂಡುತನ ಹಾಗೂ ಎಂತಹ ಸ್ಥಿತಿಗಾದರೂ ಹೊಂದಿಕೊಳ್ಳುವ ಗುಣವಿರುತ್ತದೆ. ಹಾಗಾಗಿ ಇವರಿಗೆ ಗರ್ಭಾವಸ್ಥೆಯು ಒಂದು ಹೊರೆ ಅಥವಾ ಕಷ್ಟಕರವಾದ ಸಂಗತಿ ಎಂದು ಪರಿಗಣಿಸುವುದಿಲ್ಲ. ಇವರು ಕೆಲವು ನಾಟಕೀಯ ವರ್ತನೆ ತೋರುವುದರ ಮೂಲಕ ಐಶಾರಾಮಿ ಸೇವೆಯನ್ನು ಪಡೆದುಕೊಳ್ಳುವರು. ತಮ್ಮ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಆರೈಕೆಯ ಕುರಿತು ಸೂಕ್ತ ಕಾಳಜಿ ವಹಿಸುವರು.

ಕನ್ಯಾ

ಕನ್ಯಾ

ಇವರಿಗೆ ಗರ್ಭಾವಸ್ಥೆ ಒಂದು ಕಷ್ಟಕರ ಹಾಗೂ ಪ್ರಾಯೋಗಿಕವಾದ ಸಂಗತಿಯಾಗುವುದು. ಗರ್ಭಾವಸ್ಥೆಯ ಸಂದರ್ಭದಲ್ಲಿ ಸೂಕ್ತ ನಿರ್ವಹಣೆಯನ್ನು ಕೈಗೊಳ್ಳುವರು. ಆರೋಗ್ಯಕರ ಆಹಾರ ಸೇವನೆ, ಉತ್ತಮ ಬರಹಗಳ ಪುಸ್ತಕ ಓದುವುದು ಸೇರಿದಂತೆ ಧನಾತ್ಮಕ ಚಿಂತನೆಗಳ ಮೂಲಕ ಗರ್ಭಧಾರಣೆಯನ್ನು ಉತ್ತಮವಾಗಿ ಆನಂದಿಸುವರು. ಅತಿಯಾದ ಟೀಕೆ ಮಾಡುವುದು ಮತ್ತು ಜಾರಿ ಬೀಳುವುದರಿಂದ ಗರ್ಭದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಅವುಗಳ ಬಗ್ಗೆ ಸೂಕ್ತ ಕಾಳಜಿ ಕೈಗೊಳ್ಳಬೇಕು.

ತುಲಾ

ತುಲಾ

ಸ್ವ ಕರುಣೆಗೆ ಸಂಬಂಧಿಸಿದಂತೆ ತುಲಾ ರಾಶಿಯವರು ಗರ್ಭಾವಸ್ಥೆಯನ್ನು ಕಠಿಣ ಸ್ಥಿತಿ ಎಂದು ಪರಿಗಣಿಸುವರು. ಏಕಾಂಗಿತನವನ್ನು ದ್ವೇಷಿಸುವ ಇವರಿಗೆ ಗರ್ಭಾವಸ್ಥೆಯಲ್ಲಿ ಮುಂಜಾನೆಯ ಅನಾರೋಗ್ಯ ಸ್ಥಿತಿ ಕಾಡಬಹುದು. ತಿಂಗಳಲ್ಲಿ ಒಮ್ಮೆ ವೈದ್ಯರ ತಪಾಸಣೆಯಿಂದ ಕಾಳಜಿ ತೆಗೆದುಕೊಳ್ಳಬೇಕಾಗುವುದು.

ವೃಶ್ಚಿಕ

ವೃಶ್ಚಿಕ

ಶಾಂತ ಹಾಗೂ ಸಮಾಧಾನದ ಪ್ರವೃತ್ತಿ ಹೊಂದಿರುವುದರಿಂದ ಈ ರಾಶಿಯವರು ಗರ್ಭಧಾರಣೆಯನ್ನು ಒತ್ತಡ ಎಂದು ಪರಿಗಣಿಸರು. ಗರ್ಭಧಾರಣೆಯ ಸಂದರ್ಭದಲ್ಲಿ ಎಂತಹ ಒತ್ತಡ ಎದುರಾದರೂ ಅದನ್ನು ಸೂಕ್ತ ನಿರ್ವಹಣೆಯ ಮೂಲಕ ಎದುರಿಸುವರು. ಕೆಚ್ಚೆದೆಯ ಪ್ರವೃತ್ತಿಯವರಾದರೂ ಹೆರಿಗೆಯ ಕುರಿತು ಕೊಂಚ ಭಯವನ್ನು ಹೊಂದಬಹುದು.

ಧನು

ಧನು

ಬೇರೆಯವರ ಕಷ್ಟಗಳು ಅಥವಾ ಸ್ಥಿತಿಯನ್ನು ನೋಡುವುದರ ಮೂಲಕ ಇವರು ಸ್ವತಹ ಗರ್ಭಾವಸ್ಥೆ ಹೊಂದಲು ಕೊಂಚ ಭಯವನ್ನು ವ್ಯಕ್ತಪಡಿಸುವರು. ಸ್ವಾತಂತ್ರ್ಯ ಹಾಗೂ ಪ್ರಯಾಣವನ್ನು ಇಷ್ಟಪಡುವ ಈ ವ್ಯಕ್ತಿಗಳಿಗೆ ಗರ್ಭಾವಸ್ಥೆಯು ಒಂದು ನಿರ್ಬಂಧ ಎನಿಸಬಹುದು. ಆದರೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವರು.

ಮಕರ

ಮಕರ

ಗರ್ಭಧಾರಣೆಯ ವಿಚಾರಕ್ಕೆ ಬಂದರೆ ಈ ರಾಶಿಚಕ್ರದವರು ಸಾಕಷ್ಟು ಪೂರ್ವತಯಾರಿ ಕೈಗೊಳ್ಳುವರು. ಆಹಾರ ಪಾಲನೆ ಹಾಗೂ ಸೂಕ್ತ ವ್ಯಾಯಾಮ ಮಾಡುವುದರ ಮೂಲಕ ತಮ್ಮ ಆರೋಗ್ಯವನ್ನು ಕಾಯ್ದುಕೊಳ್ಳುವರು. ಜೊತೆಗೆ ಮಗುವಿನ ಆರೋಗ್ಯ ಉತ್ತಮವಾಗಿರಲು ಬೇಕಾದ ತಯಾರಿಯನ್ನು ಕೈಗೊಳ್ಳುವರು. ಹಾಗಾಗಿ ಇವರು ಅತ್ಯುತ್ತಮ ತಾಯಿಯಾಗಿ ನಿಲ್ಲುವರು.

ಕುಂಭ

ಕುಂಭ

ಸ್ವತಂತ್ರ ಸ್ವರೂಪವನ್ನು ಬಯಸುವ ಇವರು ಏಕ ವ್ಯಕ್ತಿಯಾಗಿ ಜವಾಬ್ದಾರಿಯನ್ನು ನಿರ್ವಹಿಸಲು ಸಾಕಷ್ಟು ಸಾಹಸ ಮಾಡುವರು. ಭಾವನಾತ್ಮಕ ಜೀವಿಗಳಾಗಿರುವ ಇವರು ಗರ್ಭಾವಸ್ಥೆಯ ಬಗ್ಗೆ ಅತಿಯಾದ ಉತ್ಸುಕತೆ ಹೊಂದಿರುವುದಿಲ್ಲ ಎನ್ನಬಹುದು. ತಾಯಿತನದ ಬಗ್ಗೆ ಈ ಮೊದಲು ಅನುಭವ ಹೊಂದಿರುವವರು ಹೆಚ್ಚು ಉತ್ಸಾಹ ತೋರಬಲ್ಲರು ಎನ್ನಲಾಗುವುದು.

ಮೀನ

ಮೀನ

ಈ ರಾಶಿಯವರು ಸ್ವಲ್ಪ ಭಯದ ಸ್ವಭಾವ ಹೊಂದಿದವರಾಗಿರುತ್ತಾರೆ. ಗರ್ಭಾವಸ್ಥೆಯಲ್ಲಿ ಕೆಲವು ಚಿಂತನೆಗಳಿಗೆ ಒಳಗಾಗುವರು. ತಮ್ಮ ಗಮನವನ್ನು ಆಧ್ಯಾತ್ಮ, ಸಂಗೀತ ಸೇರಿದಂತೆ ಇನ್ನಿತರ ಚಿಂತನೆಗಳ ಕಡೆಗೆ ತಿರುಗಿಸಿಕೊಳ್ಳುವುದರ ಮೂಲಕ ಖಿನ್ನತೆಯಿಂದ ದೂರವಾಗುವರು. ಇಲ್ಲವಾದರೆ ಇವರಲ್ಲಿ ತೀವ್ರತರವಾದ ಖಿನ್ನತೆ ಕಾಡುವುದು. ಹಾಗಾಗಿ ಸಾಕಷ್ಟು ಕಾಳಜಿ ವಹಿಸುವುದು ಸೂಕ್ತ.

English summary

Type Of Pregnancy You Will Have, According to Your Zodiac Sign

Find your zodiac sign below and see how well you will handle the “beautiful” process of pregnancy, according to astrology.
X
Desktop Bottom Promotion