For Quick Alerts
ALLOW NOTIFICATIONS  
For Daily Alerts

  ಗರ್ಭವಾಸ್ಥೆಯಲ್ಲಿ ಚರ್ಮ ಕಪ್ಪಗಾಗುವುದು ತಡೆಯಲು ಸಾಧ್ಯವೇ?

  By Sushma Charhra
  |

  ತಾಯಿಯಾಗುವ ಸಂದರ್ಭವೆಂದರೆ ಅದು ಸಾಮಾನ್ಯ ದಿನಗಳಲ್ಲ. ಕೇವಲ ಭಾವನಾತ್ಮಕ ಏರುಪೇರುಗಳು ಮಾತ್ರ ಈ ದಿನಗಳಲ್ಲಿ ಸಂಭವಿಸುವುದಿಲ್ಲ. ಬದಲಾಗಿ ಹಾರ್ಮೋನಿನಲ್ಲಿ ಆಗುವ ಬದಲಾವಣೆಗಳು ನಿಮ್ಮ ದೇಹದಲ್ಲಿ ಅನೇಕ ವ್ಯತ್ಯಾಸಗಳಿಗೆ ಕಾರಣವಾಗಬಲ್ಲದು. ಕೆಲವೊಂದು ಬಹಳ ವಿಚಿತ್ರವಾಗಿರುತ್ತೆ ಮತ್ತು ನೀವಿದನ್ನು ಹಿಂದೆಂದೂ ಯಾರಿಂದಲೂ ಕೇಳಿಲ್ಲದೆಯೂ ಇರಬಹುದು.

  ಕೆಲವೊಂದು ಬಸುರಿ ದಿನಗಳ ಚಿಹ್ನೆಗಳು ನಿಮ್ಮನ್ನು ಅಷ್ಟು ಯೋಚನಾ ಲಹರಿಗೆ ದೂಡುವುದಿಲ್ಲ ಮತ್ತು ಅದು ಯಾರಿಗೂ ಕಾಣುವುದಿಲ್ಲ. ಆದರೆ ಕೆಲವು ಚಿಹ್ನೆಗಳಿರುತ್ತವೆ ಅದನ್ನು ಬೇರೆಯವರಿಗೆ ಗೊತ್ತಾಗದೆ ಇರುವಂತೆ ಮಾಡಲು ಸಾಧ್ಯವೇ ಆಗುವುದಿಲ್ಲ. ಹೊಟ್ಟೆ ಮುಂದಕ್ಕೆ ಬಂದ ಹಾಗೆ ಕೆಲವರಿಗೆ ತಮ್ಮ ಚರ್ಮದ ಬಣ್ಣ ಕಪ್ಪಾಗುತ್ತಲೇ ಸಾಗುತ್ತೆ. ಇದನ್ನು ಯಾರಿಂದಲೂ ಮುಚ್ಚುಮರೆ ಮಾಡಲು ಸಾಧ್ಯವಾಗುವುದೇ ಇಲ್ಲ. ಕೆಲವರಿಗೆ ಮುಖದಲ್ಲಿ ಗುಳ್ಳೆಗಳು ಏಳಬಹುದು. ಪ್ಯಾಚ್ ಲೈನ್ ಗಳಾಗಬಹುದು, ಕೆಲವರಿಗೆ ಚರ್ಮದ ಬಣ್ಣ ತೀರಾ ಕಪ್ಪಗಾಗುತ್ತಾ ಸಾಗಬಹುದು. ಇಂತವುಗಳನ್ನು ಬೇರೆಯವರಿಗೆ ತಿಳಿಯದಂತೆ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮನ್ನು ನೋಡಿದವರಿಗೆ ಕೂಡಲೇ ಈ ಚಿಹ್ನೆಗಳು ಗೋಚರಿಸಿಬಿಡುತ್ತವೆ.

  ಗರ್ಭವಾಸ್ಥೆಯಲ್ಲಿ ಚರ್ಮದ ಬಣ್ಣ ಕಪ್ಪಗಾಗುವುದು

  ಗರ್ಭವಾಸ್ಥೆಯಲ್ಲಿ ನಿಮ್ಮ ಚರ್ಮದ ಬಣ್ಣದಲ್ಲಿ ಆಗುವ ಬದಲಾವಣೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು ಹಲವಾರು ಇದೆ. ಅವುಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ಜಸ್ಟ್ ಗೋ ಫಾರ್ ಇಟ್..

  • ಪ್ರೆಗ್ನೆನ್ಸಿಯಲ್ಲಿ ನಿಮ್ಮ ಮುಖದಲ್ಲಿ ಕಾಣಿಸಿಕೊಳ್ಳುವ ಡಾರ್ಕ್ ಪ್ಯಾಚ್ ಗಳಿಗೆ ಕ್ಲೋಸ್ಮಾ ಎಂದು ಕರೆಯಲಾಗುತ್ತೆ. ಕೆಲವೊಂದು ಸಂದರ್ಬದಲ್ಲಿ ಇದನ್ನು ಪ್ರೆಗ್ನೆನ್ಸಿಯ ಮುಖವಾಡ ಎಂದು ಕರೆಯಲಾಗುತ್ತೆ. ಆದರೆ ಕಪ್ಪು ಕಲೆಗಳು ನಿಮಗೆ ಪ್ರಸೂತಿ ಆದ ನಂತರದ ಕೆಲವು ತಿಂಗಳುಗಳಲ್ಲಿ ಹೊರಟು ಹೋಗುತ್ತೆ. ಹಾಗಾಗಿ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

  Darkening During Pregnancy

  • ಎದೆಯ ನಿಪ್ಪಲ್ ಗಳು ಮೊದಲಿಗಿಂತ ಹೆಚ್ಚು ಕಪ್ಪಗಾಗಬಹುದು. ಸೆನ್ಸಿಟೀವ್ ನಿಪ್ಪಲ್ಸ್ ಇರುವವರಿಗೆ ಹೀಗಾಗುವ ಸಾಧ್ಯತೆಗಳಿರುತ್ತೆ. ಇದು ಪ್ರಗ್ನೆನ್ಸಿಯ ಮೊದಲ ಚಿಹ್ನೆಯಾಗಿರುತ್ತೆ.

  ನೀವು ಮನೆಯಲ್ಲೇ ಹೋಮ್ ಪ್ರಗ್ನೆನ್ಸಿ ಟೆಸ್ಟ್ ಮಾಡಿಕೊಳ್ಳುವುದಕ್ಕೂ ಮುನ್ನವೇ ಈ ಚಿಹ್ನೆ ಕಾಣಿಸಿಕೊಳ್ಳುವ ಸಾದ್ಯತೆ ಇರುತ್ತೆ.

  • ನಿಪ್ಪಲ್ಲಿನ ಸುತ್ತಲಿನ ಕಪ್ಪು ವರ್ತುಲ ಕೂಡ ಮತ್ತಷ್ಟು ಕಪ್ಪಾಗುವ ಸಾಧ್ಯತೆಗಳಿರುತ್ತೆ.

  • ನಿಮ್ಮ ಗುಪ್ತಾಂಗದ ಭಾಗದಲ್ಲೂ ಕೂಡ ಕಪ್ಪು ಕಲೆಗಳಾಗುವ ಸಾಧ್ಯತೆಗಳಿರುತ್ತೆ. ನಿಮ್ಮ ಕಾಲಿನ ಮೇಲ್ಬಾಗ ಮತ್ತು ಕಂಕುಳ ಭಾಗವೂ ಕೂಡ ನಾರ್ಮಲ್ ಆಗಿರದೆ,ಮತ್ತಷ್ಟು ಕಪ್ಪು ಬಣ್ಣಕ್ಕೆ ತಿರುಗುವು ಸಾಧ್ಯತೆ ಇರುತ್ತೆ. ಎಲ್ಲರಿಗೂ ಇದು ಆಗಲೇಬೇಕು ಎಂದೇನಿಲ್ಲ. ಕೆಲವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತೆ.

  • ಕೆಲವರಲ್ಲಿ ಕಾಲಿನ ಪಾದ ಮತ್ತು ಅಂಗೈ ಭಾಗ ಕೆಂಪಗಾಗಬಹುದು.

  • ನಿಮ್ಮ ದೇಹದಲ್ಲಿನ ಮಚ್ಚೆಗಳ ಬಣ್ಣ ಮತ್ತಷ್ಟು ಡಾರ್ಕ್ ಆಗಬಹುದು. ಅದರಲ್ಲೂ ಪ್ರಮುಖವಾಗಿ ಕೆಲವರಿಗೆ ಮುಖದ ಮೇಲೆ ಮಚ್ಚೆಗಳಿರುತ್ತೆ. ಅವುಗಳ ಪ್ರೆಗ್ನೆನ್ಸಿಯಲ್ಲಿ ಮತ್ತಷ್ಟು ಡಾರ್ಕ್ ಆಗುತ್ತವೆ. ನಾರ್ಮಲ್ ಆಗಿದ್ದಾಗ ಗೋಚರಿಸದೇ ಇರುವ ಮುಖದ ಮಚ್ಚೆಗಳು , ಪ್ರಗ್ನೆನ್ಸಿಯಲ್ಲಿ ಬೇರೆಯವರಿಗೆ ತಿಳಿಯುವಷ್ಟು ಡಾರ್ಕ್ ಆಗುವ ಸಾಧ್ಯತೆಗಳಿರುತ್ತೆ.

  • ನಿಮ್ಮ ಹೊಟ್ಟೆಯ ಭಾಗದಲ್ಲಿ ಸ್ಟ್ರೆಚ್ ಮಾರ್ಕ್ ಗಳಾಗುವುದು ಕಾಮನ್. ಇದರ ಜೊತೆಗೆ ಕೆಲವು ಕಪ್ಪು ಮಾರ್ಕ್ ಗಳಾಗುತ್ತವೆ. ಇದನ್ನು ಲಿನಿಯಾ ನಿಗ್ರಾ ಎಂದು ಕರೆಯಲಾಗುತ್ತೆ. ನಾರ್ಮಲ್ ಆಗಿ ಈ ಕಲೆಗಳು ಮಗು ಹುಟ್ಟಿದ ನಂತರದ ನಾಲ್ಕೈದು ತಿಂಗಳಲ್ಲಿ ಹೊರಟು ಹೋಗುತ್ತದೆ.

  •ಬಿಳಿ ಚರ್ಮ ಇರುವ ಮಹಿಳೆಯರಿಗೆ ಹೋಲಿಸಿದರೆ ಕಪ್ಪು ಚರ್ಮದ ಮಹಿಳೆಯರಲ್ಲಿ ಅಥವಾ ಗೋಧಿ ಬಣ್ಣದ ಚರ್ಮವಿರುವ ಮಹಿಳೆಯರಲ್ಲಿ ಇಂತಹ ಚಿಹ್ನೆಗಳು ಪ್ರೆಗ್ನೆನ್ಸಿಯಲ್ಲಿ ಹೆಚ್ಚಾಗಿ ಕಾಣಿಸುತ್ತೆ.

  ಪಿಗ್ಮೆಂಟೇಷನ್ ಅನ್ನು ಗರ್ಭವಾಸ್ಥೆಯಲ್ಲಿ ಕಡಿಮೆಗೊಳಿಸುವುದು ಹೇಗೆ?

  ಈ ರೀತಿ ಪಿಗ್ಮೆಂಟೇಷನ್ ಸಮಸ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಅಥವಾ ಆಗದೇ ಇರುವಂತೆ ತಡೆಯಲು ಸಾಧ್ಯವಿಲ್ಲ. ಇದೊಂದು ಪ್ರಾಕೃತಿಕ ಗುಣಲಕ್ಷಣಗಳು. ಆದರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವಂತೆ ನೋಡಿಕೊಳ್ಳಬಹುದು. ಆ ನಿಟ್ಟಿನಲ್ಲಿ ನೀವು ಸ್ವಲ್ಪ ಜಾಗೃತಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂತದ ಕೆಲವು ಜಾಗೃತಿ

  ಕ್ರಮಗಳ ವಿವರ ಇಲ್ಲಿದೆ ನೋಡಿ...

  • ಸೂರ್ಯನ ಕಿರಣಗಳ ನೇರ ಪ್ರಭಾವಕ್ಕೆ ಒಳಗಾಗುವ ಸಂದರ್ಬದಲ್ಲಿ ಆದಷ್ಟು ಟೊಪ್ಪಿ ಧರಿಸಿ. ಹೆಚ್ಚು ಎಸ್ಪಿಎಫ್ ಕಂಟೆಂಟ್ ಇರುವ ಉತ್ತಮ ಕ್ವಾಲಿಟಿಯ ಸನ್ಸ್ ಸ್ಕ್ರೀನ್ ಗಳನ್ನು ಹಚ್ಚುವುದು ಮರೆಯಬೇಡಿ.

  • ಸೂರ್ಯನ ನೇರಳಾತೀತ ಕಿರಣಗಳಿಂದ ನಿಮ್ಮನ್ನ ರಕ್ಷಿಸಿಕೊಳ್ಳಲು ಉದ್ದ ತೋಳಿನ ಬಟ್ಟೆಗಳನ್ನು ಧರಿಸಿ. ಸೂರ್ಯ ಕಿರಣಗಳ ನೇರ ಪ್ರಭಾವಕ್ಕೆ ಒಳಗಾಗದಂತೆ ತಡೆದರೆ ಚರ್ಮದ ಬಣ್ಣ ಬದಲಾಗುವುದನ್ನು ದೊಡ್ಡ ಮಟ್ಟದಲ್ಲಿ ನಿಯಂತ್ರಿಸಿಕೊಳ್ಳಬಹುದು.

  •ಮಧ್ಯಾಹ್ನದ ಸಂದರ್ಬದಲ್ಲಿ ಮನೆಯಿಂದ ಹೊರಹೋಗಿ ನೇರವಾಗಿ ಬಿಸಿಲಿಗೆ ನಿಲ್ಲುವುದನ್ನು ಕಡಿಮೆ ಮಾಡಿ. ಒಂದು ವೇಳೆ ಅನಿವಾರ್ಯವಾಗಿ ಹೀಗೆ ಮಾಡಬೇಕಾಗಿದ್ದರೆ, ಆದಷ್ಟು ನಿಮ್ಮ ಚರ್ಮವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ.

  •ನಿಮ್ಮ ಡಾಕ್ಟರ್ ಒಂದು ವೇಳೆ ಕೋಲಾಸ್ಮ ಸಮಸ್ಯೆಯಲ್ಲಿದ್ದೀರಿ ಎಂದು ಪರಿಗಣಿಸಿದರೆ, ಅವರೇ ನಿಮಗೆ ಸನ್ ಕ್ರೀಮ್ ಬಳಕೆ ಮಾಡುವಂತೆ ಸಲಹೆ ಮಾಡುತ್ತಾರೆ. ಯಾಕೆಂದರೆ ಸೂರ್ಯನ ಕಿರಣ ಕಿಟಕಿ, ಬಾಗಿಲುಗಳ ಮೂಲಕ ನಿಮ್ಮ ಮನೆಯೊಳಗೂ ಪ್ರವೇಶಿಸುತ್ತೆ ಅದು ಅಷ್ಟೇ ಸಾಕಾಗಿರುತ್ತೆ ನಿಮ್ಮ ಚರ್ಮವನ್ನು ಹಾನಿಗೊಳಿಸಲು. ಹಾಗಾಗಿ ವೈದ್ಯರೇ ನಿಮಗೆ ಸಲಹೆ ನೀಡುತ್ತಾರೆ.

  •ಕೆಲವು ಮಹಿಳೆಯರು ಹರ್ಬಲ್ ಪ್ರೊಡಕ್ಟ್ ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇದು ಕೂಡ ಉತ್ತಮ ವಿಧಾನ. ಕೆಲವು ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಆರೋಗ್ಯವಾಗಿರಲು ಸಾಧ್ಯವಿದೆ. ಆದರೆ ಈ ರೀತಿ ಎಣ್ಣೆ ಹಚ್ಚಿಕೊಳ್ಳುವುದನ್ನು 12 ತಿಂಗಳಾದ ನಂತರ ಮಾಡಬಾರದು ಎಂದು ಹೇಳಲಾಗುತ್ತೆ. ಎಣ್ಣೆ ಮತ್ತು ಕ್ರೀಮ್ ಗಳನ್ನು ಬಳಕೆ ಮಾಡುವಾಗ ವೈದ್ಯರ ಸಲಹೆ ಪಡೆಯಿರಿ ಆ ಮೂಲಕ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದನ್ನು ಕರ್ನ್ಫರ್ಮ್ ಮಾಡ್ಕೊಳ್ಳಿ.

  •ಕೆಲವು ಡಾಕ್ಟರ್ ಗಳು ಹೇಳುವ ಪ್ರಕಾರ ಈ ರೀತಿ ಕಲರ್ ಬದಲಾವಣೆಯಾಗುವುದು ದೇಹದಲ್ಲಿ ಫೋಲಿಕ್ ಆಸಿಡ್ ನ ಕೊರತೆ ಇದ್ದಾಗ ಎನ್ನುವುದು. ಫೋಲಿಕ್ ಆಸಿಡ್ ಪ್ರಗ್ನೆನ್ಸಿಯಲ್ಲಿ ಮಹಿಳೆಯರಿಗೆ ಅಧಿಕವಾಗಿ ಬೇಕಾಗುತ್ತೆ. ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸರಿಯಾದ ಬದಲಾವಣೆ ಮಾಡಿಕೊಂಡರೆ ಚರ್ಮದ ಬಣ್ಣ ಬದಲಾಗುವುದನ್ನು ತಡೆಗಟ್ಟಿಕೊಳ್ಳಬಹುದು ಎಂಬುದು ಕೆಲವು ವೈದ್ಯರ ಸಲಹೆ. ಫೋಲೀಕ್ ಆಸಿಡ್ ಸೇವನೆಗೆ ವೈದ್ಯರು ಹೆಚ್ಚು ಮಹತ್ವ ನೀಡುತ್ತಾರೆ. ನಿಮ್ಮ ಗರ್ಭವಾಸ್ಥೆ ಖಾತ್ರಿಯಾದ ಕೂಡಲೇ ವೈದ್ಯರು ನೀಡುವ ಮೊದಲ ಔಷಧಿ ಅಥವಾ ಮಾತ್ರೆಯೇ ಫೋಲಿಕ್ ಆಸಿಡ್ ಆಗಿರುತ್ತದೆ.

  •ಡಾಕ್ಟರ್ ಲೋಡಾಗ್ ಹೇಳುವಂತೆ, ಸೂರ್ಯನ ಕಿರಣಗಳ ನೇರ ಪ್ರಭಾವಕ್ಕೆ ಒಳಗಾಗದೇ ಇರುವುದೇ ಎಲ್ಲಕ್ಕಿಂತ ಪ್ರಮುಖ ಅಂಶವಾಗಿದ್ದು..ಆ ಮೂಲಕ ಸ್ಕಿನ್ ಡಾರ್ಕ್ ಆಗುವುದನ್ನ ಮತ್ತು ಪಿಗ್ಮೆಂಟೇಷನ್ ನ್ನು ಗರ್ಭವಾಸ್ಥೆಯಲ್ಲಿ ನಿಂಯತ್ರಿಸಿಕೊಳ್ಳಬಹುದು. ಅಮೇರಿಕನ್ ಅಕಾಡಮಿ ಆಫ್ ಡರ್ಮಾಟಲಜಿಯ ಮಾಹಿತಿಯ ಪ್ರಕಾರ ಶೇಕಡಾ 70 ರಷ್ಟು ಮಹಿಳೆಯರು ತಮ್ಮ ಗರ್ಭವಾಸ್ಥೆಯಲ್ಲಿ ಚರ್ಮದ ಬಣ್ಣ ಬದಲಾಗುವುದು ಮತ್ತು ಪಿಗ್ಮೆಂಟೇಷನ್ ಸಮಸ್ಯೆಯನ್ನು ಎದುರಿಸುತ್ತಾರಂತೆ.

  ಹೆಚ್ಚಿನವರ ಕೇಸ್ ಗಳಲ್ಲಿ ಈ ಕಲರ್ ಬದಲಾವಣೆ ಹೆರಿಗೆಯ ನಂತರ ಮತ್ತೆ ಸರಿಯಾಗುತ್ತದೆ. ಅದಕ್ಕೆ ನಾಲ್ಕರಿಂದ ಐದು ತಿಂಗಳು ಬೇಕಾಗಬಹುದು. ಒಂದು ವೇಳೆ ಈ ರೀತಿ ಕಡಿಮೆಯಾಗದಿದ್ದರೆ ನೀವು ಚರ್ಮ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಪ್ರಮುಖವಾಗಿ ಕಾಸ್ಮೆಟಿಕ್ ಗಳ ಬಳಕೆಯನ್ನು ಮಾಡುವಾಗ ಗರ್ಭವಾಸ್ಥೆಯಲ್ಲಿ ಮತ್ತು ಗರ್ಭವಾಸ್ಥೆಯ ನಂತರದ ದಿನಗಳಲ್ಲಿ ಕೇರ್ ಫುಲ್ ಆಗಿರಿ. ಎಸ್ಪೆಷಲಿ ಬ್ಲೀಚಿಂಗ್ ಕ್ರೀಮ್ ಗಳನ್ನು ಬಳಕೆ ಮಾಡುವಾಗ ಎಚ್ಚರದಿಂದಿರಿ. ಎದೆಹಾಲು ಉಣಿಸುವ ಸಂದರ್ಭದಲ್ಲಂತೂ ಬ್ಲೀಚಿಂಗ್ ಕ್ರೀಮ್ ಗಳನ್ನು ಬಳಸದೇ ಇರುವುದೇ ಸೂಕ್ತವಾದದ್ದು. ಡೆಲಿವರಿಯ ನಂತರ ನಿಮ್ಮ ಆರೋಗ್ಯಕ್ಕೆ ಏನು ಮಾಡುಬೇಕು ಎಂಬುದನ್ನು ವೈದ್ಯರು ಹೆಚ್ಚು ತಿಳಿದುಕೊಂಡಿರುತ್ತಾರೆ. ಮಗು ನಿಮ್ಮ ಹೊಟ್ಟೆಯಲ್ಲಿದ್ದಾಗ ಮಾತ್ರವಲ್ಲ, ಹೊರ ಬಂದ ನಂತರವೂ ನೀವು ನಿಮ್ಮ ಬಗ್ಗೆ ಹೆಚ್ಚು ಕೇರ್ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ವೈದ್ಯರ ಸಲಹೆ ಪಡೆಯುವುದನ್ನು ಮರೆಯಬೇಡಿ.

  ಒಂದು ವೇಳೆ ಮಗು ಜನಿಸಿದ ನಾಲ್ಕೈದು ತಿಂಗಳ ನಂತರವೂ ನಿಮ್ಮ ಚರ್ಮದ ಬಣ್ಣ ಕಪ್ಪಾಗಿಯೇ ಇದ್ದರೆ. ವೈದ್ಯರು ಲೇಸರ್ ಟ್ರೀಟ್ ಮೆಂಟ್ ಪಡೆಯಲು ಸಲಹೆ ನೀಡಬಹುದು. ಒಂದೇ ರಾತ್ರಿಯಲ್ಲಿ ಯಾವ ಮಹಿಳೆಗೂ ಗರ್ಭವಾಸ್ಥೆಯಲ್ಲಿ ತಮ್ಮ ದೇಹದ ಬಣ್ಣ ಕಪ್ಪಾಗಿ ಬಿಡುವುದಿಲ್ಲ. ಒಂದು ನಿಧಾನಗತಿಯಲ್ಲಿ ನಡೆಯುವ ಒಂದು ಪ್ರಕ್ರಿಯೆ. ನಿಮ್ಮ ಹಾರ್ಮೋನುಗಳು ಬದಲಾದಂತೆ ಚರ್ಮದ ಬಣ್ಣವೂ ಬದಲಾಗುತ್ತಾ ಸಾಗಬಹುದು. ಒಂದು ವೇಳೆ ನಿಮ್ಮ ಕೈ ಮೀರಿ ನಿಮ್ಮ ಚರ್ಮದ ಬಣ್ಣ ಬದಲಾಗುತ್ತಿದ್ದರೆ. ಆದಷ್ಟು ಸೂರ್ಯನ ಶಾಖದಿಂದ ದೂರವಿರಿ ಮತ್ತು ಮೈ ತುಂಬಾ ಬಟ್ಟೆ ಧರಿಸಿ ಸುರಕ್ಷಿತವಾಗಿರಿ.

  ಹೈಪರ್ ಪಿಗ್ಮೆಂಟೇಷನ್ ಗರ್ಭವಾಸ್ಥೆಯಲ್ಲಿ ಸರ್ವೇ ಸಾಮಾನ್ಯವಾಗಿ ಗೋಚರಿಸುವ ಒಂದು ಸಮಸ್ಯೆ. ಇದಕ್ಕಾಗಿ ಹೆಚ್ಚು ಒತ್ತಡಕ್ಕೆ ಒಳಗಾಗುವ ಅಗತ್ಯವಿಲ್ಲ. ಇದರ ಪರಿಹಾರಕ್ಕೆ ಹತ್ತಾರು ಮಾರ್ಗಗಳಿವೆ. ಮತ್ತು ನೀವು ಯಾವುದೇ ಮಾರ್ಗ ಬಳಸದೇ ಇದ್ದರೂ ಅದು ನೈಸರ್ಗಿಕವಾಗಿಯೇ ಡೆಲವರಿಯ ನಂತರ ಸರಿಹೋಗುತ್ತದೆ. ಹಾಗಾಗಿ ಜಸ್ಟ್ ತಾಯ್ತನದ ಸುಖವನ್ನು ಅನುಭವಿಸಿ. ಎಂಜಾಯ್ ಮಾಡಿ.. ಬಣ್ಣದ ಮತ್ತೆ ಅಷ್ಟು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

  English summary

  Skin Darkening During Pregnancy

  Pregnancy is definitely not a cakewalk. It is a roller-coaster ride that not just fills you with emotional ups and downs, but the hormonal changes can affect your body in various ways, some of which are peculiar and you might not have even heard about its existence. Some of the pregnancy symptoms when hidden do not bother you much, but there are some that cannot be hidden - like your bulging tummy and for many to-be-moms the issue with skin darkening.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more