For Quick Alerts
ALLOW NOTIFICATIONS  
For Daily Alerts

ಬುದ್ಧಿವಂತ ಮಗು ಹುಟ್ಟಬೇಕೆ? ಗರ್ಭಾವಸ್ಥೆಯಲ್ಲಿ ಸೇವಿಸುವ ಆಹಾರಗಳ ಡಯಟ್ ಹೀಗಿರಲಿ

|

ಗರ್ಭಧಾರಣೆ ಮಾಡಿರುವ ಪ್ರತಿಯೊಬ್ಬ ಮಹಿಳೆಯು ಬಯಸುವುದು ತನ್ನ ಮಗು ಸುಂದರ ಹಾಗೂ ಜಾಣ್ಮೆಯಿಂದ ಇರಬೇಕೆಂದು. ಮಹಿಳೆಯರು ಹೆಚ್ಚಾಗಿ ಸುಂದರ ಮಗುವನ್ನು ಪಡೆದುಕೊಳ್ಳಲು ಹರಸಾಹಸ ಪಡುವರು. ಆಹಾರ ಕ್ರಮದಿಂದ ಹಿಡಿದು ದೇವರ ಪ್ರಾರ್ಥನೆ ತನಕ ಪ್ರತಿಯೊಂದು ಮಾಡುವರು. ಆದರೆ ಒಂದಿಷ್ಟು ಮಹಿಳೆಯರಿಗೆ ಸೌಂದರ್ಯಕ್ಕಿಂತ ಬುದ್ಧವಂತಿಕೆಯು ಒಳ್ಳೆಯದೆಂದು ಅನಿಸುವುದು. ಇಂತಹ ಮಹಿಳೆಯರು ತಮ್ಮ ಮಗುವು ಇತರ ಮಕ್ಕಳಿಗಿಂತ ಜಾಣನಾಗಿರಬೇಕೆಂದು ಬಯಸುವರು.

Right diet during pregnancy for an intelligent baby

ಇದಕ್ಕಾಗಿ ಅವರು ಗರ್ಭಧಾರಣೆ ವೇಳೆ ಬುದ್ಧಿಶಕ್ತಿ ಹೆಚ್ಚಿಸಲು ಬೇಕಾಗುವ ಆಹಾರ ಸೇವನೆ ಮಾಡುವರು. ಕೆಲವೊಂದು ಆಹಾರಗಳು ಗರ್ಭಿಣಿಯರಿಗೆ ಅದ್ಭುತವನ್ನೇ ಮಾಡುವುದು. ಮೊಟ್ಟೆ, ಒಣಹಣ್ಣುಗಳು, ಅಗಸೆಬೀಜ, ಅಕ್ರೋಟ, ಇಡೀ ಧಾನ್ಯ, ಧಾನ್ಯಗಳು, ಕೆಂಪು ಮಾಂಸ, ಹಸಿರೆಲೆ ತರಕಾರಿಗಳು, ಬಸಲೆ ಮತ್ತು ಎಣ್ಣೆಯಂಶವಿರುವ ಮೀನುಗಳಾಗಿರುವ ಟ್ಯುನಾ ಮತ್ತು ಸಾಲ್ಮನ್ ಪ್ರಮುಖವಾಗಿ ಮಹಿಳೆಯರಿಗೆ ಪೋಷಕಾಂಶ ನೀಡುವುದು ಮಾತ್ರವಲ್ಲದೆ ಮಗುವಿನ ಬೆಳವಣಿಗೆ ಹಾಗೂ ಮೆದುಳಿನ ಬೆಳವಣಿಗೆಗೆ ಪೂರಕವಾಗಿರುವುದು. ಬುದ್ಧವಂತ ಮಗುವನ್ನು ಪಡೆಯಲು ಗರ್ಭಧಾರಣೆ ವೇಳೆ ಏನು ಸೇವಿಸಬೇಕು? ಮುಂದೆ ಓದಿ ...

*ಆರೋಗ್ಯಕರ ಸಮತೋಲಿತ ಆಹಾರ ಸೇವಿಸಿ

*ಆರೋಗ್ಯಕರ ಸಮತೋಲಿತ ಆಹಾರ ಸೇವಿಸಿ

ಮಗುವಿನ ಮೆದುಳಿಗೆ ಶಕ್ತಿ ನೀಡುವ ಪೋಷಕಾಂಶಗಳನ್ನು ಸೇವಿಸಿ. ಇದರಲ್ಲಿ ಪ್ರಮುಖವಾಗಿ ಕೋಲೀನ್, ಕಬ್ಬಿನಾಂಶ, ಒಮೆಗಾ-3 ಕೊಬ್ಬಿನಾಮ್ಲ, ಪ್ರೋಟೀನ್ ಮತ್ತು ಸತು. ಪೋಷಕಾಂಶಗಳು ಸಮತೋಲಿತ ಆಹಾರ ಸೇವನೆಯಿಂದಾಗಿ ನಿಮ್ಮ ಆರೋಗ್ಯವನ್ನು ಚೆನ್ನಾಗಿಡಬಹುದು. ಆದರೆ ಗರ್ಭಧರಿಸುವಾಗ ನೀವು ಮಾತ್ರವಲ್ಲದೆ ಗರ್ಭದಲ್ಲಿರುವ ಮಗು ಕೂಡ ನೀವು ಸೇವಿಸುವಂತಹ ಪೋಷಕಾಂಶಗಳನ್ನು ಅವಲಂಬಿಸಿರುವುದು. ಮಗುವಿನ ಬೆಳವಣಿಗೆಗೆ ಈ ಪೋಷಕಾಂಶಗಳು ಪ್ರಮುಖ ಪಾತ್ರ ವಹಿಸುವುದು.

ಮಗುವಿನ ಮೆದುಳಿನ ಬೆಳೆಯುವ ಸಮಯದಲ್ಲಿ

ಮಗುವಿನ ಮೆದುಳಿನ ಬೆಳೆಯುವ ಸಮಯದಲ್ಲಿ

ಮಗುವಿನ ಮೆದುಳು ಸಾಮಾನ್ಯವಾಗಿ ಬೆಳೆಯುವಂತಹ ಅವಧಿಯಾಗಿರುವ 24ನೇ ವಾರದಿಂದ 42ನೇ ವಾರದ ತನಕ ನೀವು ಪ್ರಮುಖವಾಗಿ ಪೋಷಕಾಂಶಗಳನ್ನು ಸೇವಿಸಬೇಕು. ಯಾಕೆಂದರೆ ಈ ವೇಳೆ ಯಾವುದೇ ರೀತಿಯ ಪೋಷಕಾಂಶಗಳ ಕೊರತೆ ಉಂಟಾದರೆ ಆಗ ಮಗುವಿನ ಮೆದುಳಿನ ಮೇಲೆ ಪರಿಣಾಮ ಬೀರಬಹುದು. ನೀವು ಸೇವಿಸುವ ಆಹಾರವು ಮಗುವಿನ ಮೆದುಳಿನ ಬೆಳವಣಿಗೆಯಲ್ಲಿ ಎಷ್ಟರ ಮಟ್ಟಿಗೆ ಪಾತ್ರ ವಹಿಸುವುದು ಎಂದು ಈ ಲೇಖನದಲ್ಲಿ ನೀವು ತಿಳಿಯಬಹುದು.

ಬುದ್ಧಿವಂತ ಮಗುವಿಗೆ ಆರೋಗ್ಯಕರ ಹಾಗೂ ಸಮತೋಲಿತ ಆಹಾರ

ಬುದ್ಧಿವಂತ ಮಗುವಿಗೆ ಆರೋಗ್ಯಕರ ಹಾಗೂ ಸಮತೋಲಿತ ಆಹಾರ

ಗರ್ಭಧಾರಣೆ ವೇಳೆ ನೀವು ಆರೋಗ್ಯಕರ ಹಾಗೂ ಸಮತೋಲಿತ ಆಹಾರ ಸೇವನೆ ಮಾಡಿದರೆ ಅದು ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕಾರಣವಾಗುವುದು. ಗರ್ಭಿಣಿಯರಿಗೆ ದಿನಕ್ಕೆ 300 ಕ್ಯಾಲರಿ ಹೆಚ್ಚುವರಿಯಾಗಿ ಬೇಕಾಗುತ್ತದೆ. ಗರ್ಭಿಣಿಯರು ಆಹಾರ ಕ್ರಮದಲ್ಲಿ ವೈವಿಧ್ಯತೆಯನ್ನು ಅನುಸರಿಸಬೇಕು. ನೀವು ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಪ್ರೋಟೀನ್ ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಬೇಕು.

ಹಣ್ಣುಗಳು ಮತ್ತು ತರಕಾರಿಗಳು

ಹಣ್ಣುಗಳು ಮತ್ತು ತರಕಾರಿಗಳು

•ಹಣ್ಣುಗಳು ಮತ್ತು ತರಕಾರಿಗಳಲ್ಲಿ ಹಲವಾರು ರೀತಿಯ ಪ್ರಮುಖ ಪೋಷಕಾಂಶಗಳು ಇವೆ. ದ್ರಾಕ್ಷಿ, ಕಿತ್ತಳೆ, ಟೊಮೆಟೋದಲ್ಲಿ ವಿಟಮಿನ್ ಸಿ ಮತ್ತು ಹಸಿರೆಲೆ ತರಕಾರಿಗಳಾಗಿರು ಬಸಲೆಯಲ್ಲಿ ಫಾಲಿಕ್ ಆಮ್ಲವಿದೆ. ನೀವು ದಿನನಿತ್ಯ ನಾಲ್ಕು ಬಗೆಯ ಹಣ್ಣುಗಳು ಹಾಗೂ ತರಕಾರಿಗಳನ್ನು ಸೇವಿಸಬೇಕು.

•ಬ್ರೆಡ್ ಹಾಗೂ ಧಾನ್ಯಗಳು ಕಾರ್ಬ್ರೋಹೈಡ್ರೇಟ್ಸ್ ನ ಮುಖ್ಯ ಮೂಲವಾಗಿದ್ದು, ದೇಹಕ್ಕೆ ಶಕ್ತಿಯನ್ನು ಒದಗಿಸುವುದು. ಇದರಲ್ಲಿ ಪ್ರಮುಖ ವಿಟಮಿನ್ ಗಳು ಹಾಗೂ ನಾರಿನಾಂಶಗಳು ಇವೆ. ಗರ್ಭಿಣಿಯರು ಪ್ರತಿನಿತ್ಯ ಆರರಿಂದ ಹನ್ನೊಂದು ಬ್ರೆಡ್ ಅಥವಾ ಧಾನ್ಯಗಳನ್ನು ಸೇವಿಸಬೇಕು.

•ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಮಗುವಿಗೆ ಹೆಚ್ಚಿನ ಪ್ರೋಟೀನ್ ಬೇಕಾಗುತ್ತದೆ. ಪ್ರತಿನಿತ್ಯ ನೀವು ಮೂರು ಬಗೆಯ ಪ್ರೋಟೀನ್ ಇರುವ ಆಹಾರ ಸೇವಿಸಿ. ಮಾಂಸ, ಮೊಟ್ಟೆ ಮತ್ತು ಬೀನ್ಸ್ ನಲ್ಲಿ ಒಳ್ಳೆಯ ಮಟ್ಟದ ಪ್ರೋಟೀನ್ ಇದೆ.

•ಹಾಲಿನ ಉತ್ಪನ್ನಗಳಾಗಿರುವ ಹಾಲು ಮತ್ತು ಮೊಸರಿನಲ್ಲಿ ಉತ್ತಮ ಮಟ್ಟದ ಕ್ಯಾಲ್ಸಿಯಂ ಇದೆ. ಮಗುವಿನ ಬೆಳವಣಿಗೆಗೆ ಇದು ಮುಖ್ಯವಾಗಿ ಬೇಕು. ಇದರಿಂದ ನಾಲ್ಕು ಸಲ ಹಾಲಿನ ಉತ್ಪನ್ನ ಸೇವಿಸಿ. ಮಗುವಿನ ಮೆದುಳಿನ ಬೆಳವಣಿಗೆಗೆ ಬೇಕಾಗಿರುವ ಪೋಷಕಾಂಶಗಳು ಮಗುವಿನ ಬೆಳವಣಿಗೆಗೆ ಕೆಲವೊಂದು ಪೋಷಕಾಂಶಗಳು ಅತೀ ಅಗತ್ಯವಾಗಿರುವುದು. ಇದು ಯಾವುದೆಂದು ನೀವು ತಿಳಿಯಿರಿ.

ಮೊಟ್ಟೆಗಳನ್ನು ಸೇವಿಸಿ

ಮೊಟ್ಟೆಗಳನ್ನು ಸೇವಿಸಿ

ಮೊಟ್ಟೆಗಳಲ್ಲಿ ಕೋಲೈನ್ ಎಂಬ ಅಮೈನೋ ಆಮ್ಲ ಹೆಚ್ಚಿನ ಪ್ರಮಾಣದಲ್ಲಿದ್ದು ಇದು ಮಕ್ಕಳ ಮೆದುಳಿನ ಬೆಳವಣಿಗೆ ಹಾಗೂ ಸ್ಮರಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಗರ್ಭಿಣಿಯರು ಪ್ರತಿದಿನ ಎರಡು ಮೊಟ್ಟೆಗಳನ್ನಾದರೂ ಸೇವಿಸಬೇಕು, ಇದರಿಂದ ಗರ್ಭಾವಸ್ಥೆಯಲ್ಲಿ ಅಗತ್ಯವಿರುವ ದೈನಂದಿನ ಅಗತ್ಯದ ಕೋಲೈನ್ ಅಮೈನೋ ಆಮ್ಲವನ್ನು ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ಮೊಟ್ಟೆಗಳಲ್ಲಿ ಪ್ರೋಟೀನ್ ಮತ್ತು ಕಬ್ಬಿಣದ ಅಂಶವೂ ಹೆಚ್ಚಾಗಿದ್ದು ಮಗು ಅಗತ್ಯ ತೂಕ ಪಡೆಯಲು ನೆರವಾಗುತ್ತದೆ. ಅಗತ್ಯಕ್ಕೂ ಕಡಿಮೆ ತೂಕದೊಂದಿಗೆ ಹುಟ್ಟಿದ ಮಕ್ಕಳ ಐಕ್ಯೂ ಮಟ್ಟ ಇತರ ಮಕ್ಕಳಿಗಿಂತ ಕಡಿಮೆ ಇರುವುದನ್ನು ಗಮನಿಸಲಾಗಿದೆ.

Most Read: ಗರ್ಭಿಣಿಯರು ಅಪ್ಪಿತಪ್ಪಿಯೂ ಇಂತಹ ಮೂರು ಹಣ್ಣುಗಳನ್ನು ತಿನ್ನಲೇಬಾರದು!

ಕಬ್ಬಿನಾಂಶ

ಕಬ್ಬಿನಾಂಶ

ಮಗುವಿನ ಬೆಳವಣಿಗೆಗೆ ಬೇಕಾಗುವ ಮತ್ತೊಂದು ಖನಿಜಾಂಶವೆಂದರೆ ಕಬ್ಬಿಣ. 278 ಮಕ್ಕಳ ಮೇಲೆ ನಡೆಸಿರುವಂತಹ ಅಧ್ಯಯನದ ಪ್ರಕಾರ ಕಬ್ಬಿನಾಂಶದ ಕೊರತೆಯು ಭ್ರೂಣದಲ್ಲಿರುವ ಮಗುವಿಗೆ ಕಡಿಮೆಯಾದರೆ ಬೆಳೆಯುತ್ತಿರುವಂತೆ ಅದರ ಬುದ್ಧಿ, ಭಾಷಾ ಸಾಮರ್ಥ್ಯ ಮತ್ತು ಏಕಾಗ್ರತೆಯು ತುಂಬಾ ಕಡಿಮೆಯಾಗಿರುವುದು ಎಂದು ತಿಳಿದುಬಂದಿದೆ. ಒಣ ಬೀನ್ಸ್ ಗಳು, ಒಣ ಹಣ್ಣುಗಳು(ಉದಾಹರಣೆಗೆ ದ್ರಾಕ್ಷಿ ಮತ್ತು ಅಪ್ರಿಕಾಟ್) ಕೆಂಪುಮಾಂಸ(ಉದಾಹರಣೆಗೆ ಬೀಫ್) ಮತ್ತು ಹಸಿರೆಲೆ ತರಕಾರಿಗಳಾಗಿರುವ ಬಸಲೆ ಮತ್ತು ಕಾಲೆ ಹೆಚ್ಚಿನ ಮಟ್ಟದ ಕಬ್ಬಿನಾಂಶವನ್ನು ಹೊಂದಿದೆ. ವಿಟಮಿನ್ ಸಿ ಹೊಂದಿರುವ ಆಹಾರಗಳು(ಉದಾಹರಣೆಗೆ(ಟೊಮೆಟೋ, ಸ್ಟ್ರಾಬೆರಿ ಮತ್ತು ಆಲೂಗಡ್ಡೆ) ಕಬ್ಬಿನಾಂಶವನ್ನು ಬೇಗೆ ಹೀರಿಕೊಳ್ಳಲು ನೆರವಾಗುವುದು. ಇವುಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.

ಒಮೆಗಾ-3 ಕೊಬ್ಬಿನಾಮ್ಲ

ಒಮೆಗಾ-3 ಕೊಬ್ಬಿನಾಮ್ಲ

ಮಗುವಿನ ಮೆದುಳಿನ ಬ್ಲಾಕ್ ಗಳು ಮತ್ತು ರೆಟಿನಾದ ಬೆಳವಣಿಗೆಗೆ ಪ್ರಮುಖವಾಗಿ ಒಮೆಗಾ-3 ಕೊಬ್ಬಿನಾಮ್ಲವು ಬೇಕು. ಇಷ್ಟು ಮಾತ್ರವಲ್ಲದೆ ಇದು ಗರ್ಭಿಣಿಯರಲ್ಲಿ ಕಾಡುವಂತಹ ಖಿನ್ನತೆ ದೂರ ಮಾಡುವುದು. ದೇಹದಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಉತ್ಪತ್ತಿಯಾಗದೆ ಇರುವ ಕಾರಣದಿಂದಾಗಿ ನೀವು ಆಹಾರ ಕ್ರಮದಲ್ಲಿ ಇದನ್ನು ಬಳಸಿಕೊಳ್ಳಿ. ಎಣ್ಣೆಯಂಶವಿರುವಂತಹ ಮೀನುಗಳಾಗಿರುವ ಟ್ಯುನಾ ಮತ್ತು ಸಾಲ್ಮನ್ ನಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ-3 ಕೊಬ್ಬಿನಾಮ್ಲವಿದೆ. ಆದರೆ ಅಪರೂಪದಲ್ಲಿ ಮೀನಿನಲ್ಲಿ ಪಾದರಸವು ಇರುವುದು. ಇದು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದು. ಕಿಂಗ್ ಮರ್ಕೆಲ್, ಶಾರ್ಕ್ ಮತ್ತು ಸ್ವಾರ್ಡ್ ಫಿಶ್ ಗಳನ್ನು ಕಡೆಗಣಿಸಿ. ಇವುಗಳಲ್ಲಿ ಹೆಚ್ಚಿನ ಮಟ್ಟದ ಪಾದರಸದ ಅಂಶವಿರುವುದು. ಚಿಯಾ ಕಾಳುಗಳು, ಅಕ್ರೋಟ, ಸೋಯಾಬೀನ್, ತೌಫು, ಅಗಸೆ ಬೀಜಗಳು, ಅಗಸೆಬೀಜದ ಎಣ್ಣೆ ಮತ್ತು ಕಾನೋಲಾ ತೈಲವನ್ನು ಬಳಸುವುದರಿಂದ ನೀವು ಒಮೆಗಾ-3 ಕೊಬ್ಬಿನಾಮ್ಲವನ್ನು ಪಡೆದುಕೊಳ್ಳಬಹುದು.

Most Read: ಮೀನು ಸೇವಿಸಿದರೆ, ಹೃದಯಕ್ಕೆ ಒಳ್ಳೆಯದು ಅಲ್ಲದೆ ಹಲವಾರು ಕಾಯಿಲೆಗಳನ್ನೂ ನಿವಾರಿಸಬಹುದು

ಪ್ರೋಟೀನ್

ಪ್ರೋಟೀನ್

ಪ್ರೋಟೀನ್ ಅನ್ನುವುದು ಪ್ರತಿಯೊಬ್ಬ ಮನುಷ್ಯನ ದೇಹವು ಕಾರ್ಯನಿರ್ವಹಿಸಲು ಅತೀ ಅಗತ್ಯವಾಗಿ ಬೇಕು. ಭ್ರೂಣದಲ್ಲಿರುವ ಮಗುವಿಗೂ ಇದು ಅತೀ ಅಗತ್ಯವಾಗಿರುವುದು. ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್ ಸೇವನೆ ಮಾಡದೆ ಇದ್ದರೆ ಆಗ ನರಗಳ ಬೆಳವಣಿಗೆ ಮೇಲೆ ಪರಿಣಾಮ ಬೀರುವುದು. ಇದರಿಂದ ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮವಾಗುವುದು. ಮಗು ಜನಿಸಿದ ಬಳಿಕ ಬೆಳೆದು ದೊಡ್ಡದಾದಾಗ ಕಲಿಯುವ ಸಮಸ್ಯೆಯು ಕಾಣಿಸಬಹುದು. ಗರ್ಭಧಾರಣೆ ವೇಳೆ ನೀವು ಪ್ರೋಟೀನ್ ಸರಿಯಾಗಿ ಸೇವನೆ ಮಾಡಿ. ಕೋಳಿ ಮಾಂಸ, ಕಡಿಮೆಕೊಬ್ಬು ಇರುವ ಹಾಲಿನ ಉತ್ಪನ್ನಗಳು ಮತ್ತು ಮಾಂಸದಿಂದ ಪ್ರೋಟೀನ್ ಸಿಗುವುದು. ಧಾನ್ಯಗಳು, ಬೀನ್ಸ್, ಸೋಯಾ ಮತ್ತು ಬೀಜಗಳಲ್ಲಿ(ಉದಾಹರಣೆಗೆ ಬಾದಾಮಿ, ನೆಲಗಡೆಲೆ) ಪ್ರೋಟೀನ್ ಇದೆ. ಧಾನ್ಯವಾಗಿರುವ ಕ್ವಿನೊದಲ್ಲಿ ಕೂಡ ಪ್ರೋಟೀನ್ ಇದೆ.

ಸತು

ಸತು

ಮೆದುಳಿನ ಬೆಳವಣಿಗೆಯ ಮೇಲೆ ಸತು ಎಷ್ಟರ ಮಟ್ಟಿಗೆ ಪರಿಣಾಮ ಬೀರುವುದು ಎನ್ನುವುದರ ಮೇಲೆ ನಡೆಸಿರುವ ಅಧ್ಯಯನಗಳ ಪ್ರಕಾರ ಇದು ಮಗುವಿನ ಮೆದುಳಿನ ಬೆಳವಣಿಗೆ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಬೀರುವುದು. ಇದರಿಂದಾಗಿ ನೀವು ಆಹಾರದಲ್ಲಿ ಸತುವಿನ ಪ್ರಮಾಣ ಹೆಚ್ಚಾಗಿರುವುದನ್ನು ಸೇವನೆ ಮಾಡಬೇಕು. ಬೀಫ್, ಕುರಿಮಾಂಸ, ಹಂದಿ ಮಾಂಸ, ಬೀಜಗಳು, ಕಾಳುಗಳು ಮತ್ತು ಇಡೀ ಧಾನ್ಯಗಳಲ್ಲಿ ಸತುವಿನ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿದೆ.

ವಿಟಮಿನ್ ಡಿ

ವಿಟಮಿನ್ ಡಿ

ಮಗುವಿನ ಬೆಳವಣಿಗೆಗೆ ಈ ವಿಟಮಿನ್ ಸಹಾ ತುಂಬಾ ಅಗತ್ಯವಾಗಿದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಗರ್ಭಾವಸ್ಥೆಯಲ್ಲಿ ಸಾಮಾನ್ಯಕ್ಕಿಂತಲೂ ಕಡಿಮೆ ವಿಟಮಿನ್ ಡಿ ಪ್ರಮಾಣ ಹೊಂದಿದ್ದ ತಾಯಂದಿರಿಗೆ ಕಡಿಮೆ ಬುದ್ದಿಮತ್ತೆ ಹೊಂದಿರುವ ಮಕ್ಕಳು ಜನಿಸಿರುತ್ತಾರೆ. ಆದ್ದರಿಂದ ವಿಟಮಿನ್ ಡಿ ಕೊರತೆ ಇದ್ದರೆ ವೈದ್ಯರ ಸಲಹೆ ಮೇರೆಗೆ ಸೂಕ್ತ ಔಷಧಿಗಳನ್ನೂ, ಸಾಕಷ್ಟು ಬಿಸಿಲಿಗೂ ಒಡ್ಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಜೊತೆಗೇ ಆಹಾರದಲ್ಲಿ ಸಾಕಷ್ಟು ಮೊಟ್ಟೆಗಳು, ಚೀಸ್, ಹಸುವಿನ ಮಾಂಸ, ಯಕೃತ್ ಮೊದಲಾದವುಗಳನ್ನು ಸೇವಿಸುವುದು ಸೂಕ್ತ.

ಆಹಾರೋಗ್ಯಕರ ಆಹಾರ ಕ್ರಮದಲ್ಲಿ ಗರ್ಭಿಣಿಯರು

ಆಹಾರೋಗ್ಯಕರ ಆಹಾರ ಕ್ರಮದಲ್ಲಿ ಗರ್ಭಿಣಿಯರು

ಆಹಾರೋಗ್ಯಕರ ಆಹಾರ ಕ್ರಮದಲ್ಲಿ ಗರ್ಭಿಣಿಯರು ಈ ಮೇಲಿನ ಆಹಾರಗಳನ್ನು ಸೇರಿಸಿಕೊಳ್ಳುವುದು ಅಗತ್ಯವಾಗಿದೆ. ವೈದ್ಯರು ಸಲಹೆ ಮಾಡದೆ ನೀವು ಯಾವುದೇ ರೀತಿಯ ಸಪ್ಲಿಮೆಂಟ್ ಸೇವನೆ ಮಾಡಲು ಹೋಗಬೇಡಿ. ಅತಿಯಾದ ಕಬ್ಬಿನಾಂಶ ಸೇವನೆಯಿಂದಾಗಿ ಅದು ತದ್ವಿರುದ್ಧ ಪರಿಣಾಮ ಬೀರಬಹುದು ಮತ್ತು ಮೆದುಳಿನ ಅಸಾಮಾನ್ಯ ಬೆಳವಣಿಗೆಗೂ ಕಾರಣವಾಗಬಹುದು. ಇದರಿಂದ ನೀವು ವೈದ್ಯರ ಸಲಹೆ ಪಡೆದ ಬಳಿಕ ಸಪ್ಲಿಮೆಂಟ್ ಸೇವನೆ ಮಾಡಿ. ಆದರೆ ಆಹಾರ ಸೇವನೆ ಮಾಡಲು ನೀವು ವೈದ್ಯರ ಸಲಹೆ ಪಡೆಯಲೂಬಹುದು.

English summary

Right diet during pregnancy for an intelligent baby

A nutritious balanced diet plays an important part in keeping you healthy. But it’s especially important when you’re pregnant because your baby depends on you for nutrients vital for her growth and development. And your baby’s rapidly growing brain can be vulnerable to any nutrient deficiency, especially, between the twenty-fourth and forty-second week of gestation where rapid brain development takes place. So let’s take a look at how your diet can influence your baby’s intelligence.
X
Desktop Bottom Promotion