Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಗರ್ಭಾವಸ್ಥೆಯಲ್ಲಿ ಹೆಚ್ಚುವ ಹಸಿವಿಗೆ ಕಾರಣಗಳು ಮತ್ತು ಪರಿಹಾರೋಪಾಯಗಳು
ಗರ್ಭಾವಸ್ಥೆಯಲ್ಲಿ ಇರುವಾಗ ಗರ್ಭಿಣಿಯ ಬಾಯಿ ರುಚಿಯಲ್ಲಿ ಬದಲಾವಣೆ ಉಂಟಾಗುವುದು ಸಹಜ. ಅಂತೆಯೇ ಅವಳ ಆಹಾರ ಕ್ರಮಗಳು ಬದಲಾವಣೆಯಾಗುತ್ತಾ ಹೋಗುವುದು. ಜೊತೆಗೆ ಪದೇ ಪದೇ ಹಸಿವಿನ ಪ್ರಚೋದನೆ ಉಂಟಾಗುವುದು. ಕೆಲವು ಆಹಾರ ಪದಾರ್ಥಗಳ ಸೇವಿಸುವುದರಿಂದ ವಾಕರಿಕೆ ಉಂಟಾಗಬಹುದು. ಆದರೆ ಹಸಿವು ಪದೇ ಪದೇ ಕಾಡುತ್ತಲೇ ಇರುತ್ತದೆ. ಕೆಲವರಿಗೆ ರಾತ್ರಿ ನಿದ್ರೆಯಲ್ಲಿ ಇರುವಾಗಲೂ ಹಸಿವಿನಿಂದ ಎಚ್ಚರವಾಗುವುದು. ಬಳಿಕ ಏನಾದರೂ ಸೇವಿಸಿದರೆ ಹಸಿವಿನ ನೋವು ಇಂಗುವುದು. ಪದೇ ಪದೇ ಕಾಡುವ ಹಸಿವು ಕಿರಿಕಿರಿಯನ್ನುಂಟುಮಾಡುವ ಸಾಧ್ಯತೆಗಳಿರುತ್ತವೆ.

ಗರ್ಭಾವಸ್ಥೆಯಲ್ಲಿ ಇರುವಾಗ ಏಕೆ ಪದೇ ಪದೇ ಹಸಿವು ಕಾಡುವುದು? ಅದಕ್ಕೆ ಕಾರಣವೇನು? ಹಸಿವು ಇಂಗಿಸಲು ಯಾವ ಬಗೆಯ ಆಹಾರವನ್ನು ಸೇವಿಸಬೇಕು ಎನ್ನುವುದನ್ನು ಅನೇಕರು ತಿಳಿದಿರುವುದಿಲ್ಲ. ನಾವು ಸೇವಿಸುವ ಆಹಾರ ಪದ್ಧತಿಯ ಮೇಲೂ ಹಸಿವು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಇಂತಹ ಒಂದು ಸಮಸ್ಯೆಯು ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವುದು ಸಹಜ. ಆದರೆ ಅದರ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಂಡಿದ್ದರೆ ಸಮಸ್ಯೆಯನ್ನು ನಿಭಾಯಿಸಲು ಅನುಕೂಲವಾಗುವುಸು. ನೀವು ಅಥವಾ ನಿಮ್ಮವರು ಗರ್ಭಾವಸ್ಥೆಯಲ್ಲಿದ್ದಾರೆ, ಇಂತಹ ಸಮಸ್ಯೆಗಳಿಂದ ಬೇಸತ್ತಿದ್ದೀರಿ ಎಂದಾದರೆ ನಿಮಗೆ ಈ ಲೇಖನದ ಮಾಹಿತಿ ಉಪಯುಕ್ತವಾಗುವುದು...

ಗರ್ಭಾವಸ್ಥೆಯಲ್ಲಿ ಹಸಿವು ಹೆಚ್ಚಾಗಲು ಕಾರಣಗಳು
ತಾಯಿ ತನ್ನ ದೇಹದಲ್ಲಿ ಇನ್ನೊಂದು ಜೀವವನ್ನು ಹೊತ್ತಿರುವ ಸಂದರ್ಭ ಇದಾಗಿದ್ದುದರಿಂದ ಎರಡು ಜೀವಗಳಿಗೆ ಬೇಕಾಗುವ ಪೋಷಕಾಂಶವನ್ನು ಗರ್ಭಿಣಿ ಸೇವಿಸಬೇಕಾಗುವುದು. ದೇಹವು ಹೆಚ್ಚು ಪೋಷಕಾಂಶಗಳನ್ನು ಹೀರಿಕೊಳ್ಳುವುದರಿಂದ ಹಸಿವಿನ ಪ್ರಚೋದನೆಯು ಹೆಚ್ಚುವುದು. ಅಲ್ಲದೆ ನಾವು ಸೇವಿಸುವ ಆಹಾರದಲ್ಲಿ ಪೋಷಕಾಂಶದ ಪ್ರಮಾಣ ಕಡಿಮೆಯಿದ್ದರೂ ಪದೇ ಪದೇ ಹಸಿವು ಉಂಟಾಗುವುದು. ಮಗುವಿನ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕಾಂಶ ಭರಿತ ಆಹಾರವನ್ನು ಸೇವಿಸಬೇಕಾಗುವುದು.

ಗರ್ಭಾವಸ್ಥೆಯಲ್ಲಿ ಕಾಡುವ ಹಸಿವಿಗೆ ಪರಿಹಾರ ಕ್ರಮಗಳು
* ಕ್ಯಾಲೋರಿ ಭರಿತ ಆಹಾರ ಸೇವನೆಯ ಯೋಜನೆ.
* ಊಟದ ಸಂಖ್ಯೆ ಕಡಿಮೆ ಮಾಡಿ.
* ಆರೋಗ್ಯಕರ ಉಪಹಾರವನ್ನು ಸ್ವೀಕರಿಸಿ.
* ನಿಮ್ಮ ಕ್ಯಾಲ್ಸಿಯಂ ಪ್ರಮಾಣವನ್ನು ಪರಿಶೀಲಿಸಿ.
* ನಿಧಾನವಾಗಿ ಆಹಾರ ಸೇವನೆ ಮಾಡಿ.
* ಬೆಳಗಿನ ಉಪಹಾರ ತ್ಯಜಿಸದಿರಿ.
* ಸಾಕಷ್ಟು ನೀರನ್ನು ಕುಡಿಯಿರಿ.

ಕ್ಯಾಲೋರಿ ಭರಿತ ಆಹಾರ ಸೇವನೆಯ ಯೋಜನೆ
ಎರಡು ಜೀವ ಒಂದೇ ದೇಹದಲ್ಲಿ ಇರುವುದರಿಂದ ಹೆಚ್ಚು ಆಹಾರ ಸೇವನೆಯನ್ನು ಮಾಡಬೇಕಾಗುವುದು. ಆದರೆ ಮಿತಿಮೀರಿ ಸೇವಿಸುವುದು ಸಹ ಸೂಕ್ತ ವಿಧಾನ ಆಗಿರದು. ಹಾಗಾಗಿ ನೀವು ನಿತ್ಯ ಎಷ್ಟು ಕ್ಯಾಲೋರಿ ಇರುವ ಆಹಾರವನ್ನು ಸ್ವೀಕರಿಸಬೇಕು ಎನ್ನುವುದರ ಕುರಿತು ಸೂಕ್ತ ಮಾಹಿತಿ ಹೊಂದಬೇಕು. ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ 300ಕ್ಕಿಂತಲೂ ಹೆಚ್ಚು ಕ್ಯಾಲೋರಿಯನ್ನು ಹೊಂದಬೇಕಾಗುವುದು. ಮೂರು ತಿಂಗಳಲ್ಲಿ 450ಕ್ಕಿಂತಲೂ ಹೆಚ್ಚು ಕ್ಯಾಲೋರಿಯನ್ನು ಸೇವಿಸಬೇಕಾಗುವುದು. ಹಾಗಾಗಿ ಇವುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕ್ಯಾಲೋರಿ ಭರಿತ ಆಹಾರವನ್ನು ಎಷ್ಟು ಸೇವಿಸಬೇಕು ಎನ್ನುವುದನ್ನು ಪಟ್ಟಿಮಾಡಿಕೊಳ್ಳಿ.

ಊಟದ ಸಂಖ್ಯೆ ಕಡಿಮೆ ಮಾಡಿ
ದಿನದಲ್ಲಿ ಮೂರು ದೊಡ್ಡ ಊಟ ಮಾಡುವ ಬದಲು, ನೀವು 6 ಅಥವಾ 7 ಸಣ್ಣ ಊಟವನ್ನು ಆರಿಸಿಕೊಳ್ಳುವುದು ಸೂಕ್ತ. ಹೀಗೆ ಮಾಡುವುದರಿಂದ ಊಟದ ಅವಧಿಯು ಪರಸ್ಪರ ಅಧಿಕ ಸಮಯದ ಅಂತರವನ್ನು ಹೊಂದುವುದಿಲ್ಲ. ಹೆಚು ಸಮಯಗಳ ಕಾಲ ಹಸಿವಿನ ನೋವು ಉಂಟಾಗುವುದಿಲ್ಲ. ನೈಸರ್ಗಿಕವಾಗಿ ಉಂಟಾಗುವ ಹಸಿವಿನ ಸಮಸ್ಯೆಯನ್ನು ಇದು ತಪ್ಪಿಸುವುದು. ಜೊತೆಗೆ ಅಗತ್ಯಕ್ಕಿಂತ ಹೆಚು ತಿನ್ನಬಾರದು ಎನ್ನುವುದನ್ನು ಮರೆಯದೆ ಪಾಲಿಸಬೇಕು.

ಆರೋಗ್ಯಕರ ಉಪಹಾರವನ್ನು ಸ್ವೀಕರಿಸಿ
ಹಸಿವಾದಾಗ ಏನಾದರೂ ತಿಂದು ಹಸಿವನ್ನು ಮರೆಮಾಚುವುದು ಸಹಜ. ಆದರೆ ಗರ್ಭಾವಸ್ಥೆಯಲ್ಲಿ ಇರುವಾಗ ಹಸಿವು ಹೆಚ್ಚುವುದು ಹೇಗೆ ಸ್ವಾಭಾವಿಕ ಕ್ರಿಯೆಯಾಗಿರುತ್ತದೆಯೋ ಹಾಗೆಯೇ ನೀವು ನಿಮ್ಮ ಆಹಾರ ಸೇವನೆಯ ಬಗ್ಗೆಯೂ ಕಾಳಜಿ ವಹಿಸಬೇಕಾಗುವುದು. ಹಸಿವಾದ ತಕ್ಷಣ ಮನಸ್ಸಿಗೆ ಬಂದಿದ್ದನ್ನು ಸೇವಿಸಬಾರದು. ಅನಗತ್ಯ ಕ್ಯಾಲೋರಿಗಳು ದೇಹದಲ್ಲಿ ತೊಂದರೆಯನ್ನುಂಟು ಮಾಡುವ ಸಾಧ್ಯತೆಗಳಿವೆ. ಹಠಾತ್ ಉಂಟಾಗುವ ಹಸಿವಿನ ನೋವಿಗೆ ಮೊಸರು, ಹಣ್ಣುಗಳು, ಒಣ ಹಣ್ಣು, ಮೊಳಕೆ ಭರಿಸಿದ ಕಾಳುಗಳನ್ನು ಸೇವಿಸುವುದರಿಂದ ಪರಿಹಾರ ದೊರೆಯುವುದು. ಮಿತಿಮೀರಿದ ಕುರುಕಲು ತಿಂಡಿ, ಮಸಾಲೆ ಭರಿತ ಆಹಾರ ಹಾಗೂ ಇನ್ನಿತರ ಬೇಕರಿ ತಿನಿಸುಗಳಿಂದ ದೂರವಿರಿ.

ನಿಮ್ಮ ಕ್ಯಾಲ್ಸಿಯಂ ಪ್ರಮಾಣವನ್ನು ಪರಿಶೀಲಿಸಿ
ಗರ್ಭಾವಸ್ಥೆಯಲ್ಲಿ ಹಸಿವು ಉಂಟಾಗುವುದು ನೈಸರ್ಗಿಕ ಕ್ರಿಯೆ ಆಗಿರಬಹುದು. ಅಂತೆಯೇ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಿದ್ದರೆ ಅಥವಾ ಕೊರತೆಯಿಂದ ಕೂಡಿದ್ದರೆ ಪದೇ ಪದೇ ಹಸಿವು ಉಂಟಾಗುವುದು. ಹಾಗಾಗಿ ಹಾಲಿನ ಉತ್ಪನ್ನಗಳನ್ನು ಸೇವಿಸುವುದರ ಮೂಲಕ ಹಸಿವಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಗರ್ಭಾವಸ್ಥೆಯಲ್ಲಿ ಇರುವಾಗ ಲ್ಯಾಕ್ಟೋಸ್ ಕೊರತೆಯನ್ನು ಹೊಂದಿದ್ದರೆ ದೈನಂದಿನ ಪೋಷಣೆಯ ಪ್ರಮಾಣವನ್ನು ಪೂರೈಸಲು ಮೇಕೆ ಹಾಲನ್ನು ಆಯ್ಕೆ ಮಾಡಿಕೊಳ್ಳಬಹುದು. ಕ್ಯಾಲ್ಸಿಯಂ ಪ್ರಮಾಣದಲ್ಲಿ ಸಮಾನತೆ ಸೃಷ್ಟಿಸಿಕೊಂಡರೆ ಹಸಿವಿನ ಪ್ರಮಾಣವು ಸಾಮಾನ್ಯ ಸ್ಥಿತಿಗೆ ಬರುವುದು.

ನಿಧಾನವಾಗಿ ಆಹಾರ ಸೇವನೆ ಮಾಡಿ
ವೇಗದಲ್ಲಿ ಆಹಾರ ಸೇವನೆ ಮಾಡುವುದರಿಂದ ದೇಹಕ್ಕೆ ಆಹಾರ ಪೂರೈಕೆ ಸಮಪ್ರಮಾಣದಲ್ಲಿ ಆಗಿದೆಯೇ ಎನ್ನುವ ಸಂವೇದನೆ ಸೂಕ್ತವಾಗಿ ದೊರೆಯದು. ಆಹಾರ ಸೇವಿಸುವಾಗ ನಿಧಾನವಾಗಿ ಅಗೆಯುವುದು ಹಾಗೂ ಅದರ ಸ್ವಾದವನ್ನು ಅನುಭವಿಸುತ್ತಾ ತಿಂದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಹೊಟ್ಟೆ ತುಂಬಿರುವ ಸಂವೇದನೆ ಹಾಗೂ ಸಂತೃಪ್ತ ಭಾವ ಉಂಟಾಗುವುದು. ಗರ್ಭಾವಸ್ಥೆಯಲ್ಲಿ ಇರುವಾಗಲೂ ಸೂಕ್ತ ರೀತಿಯಲ್ಲಿ ನಿಧಾನವಾಗಿ ಆಹಾರ ಸೇವಿಸುವುದು ಉತ್ತಮ.

ಬೆಳಗಿನ ಉಪಹಾರ ತ್ಯಜಿಸದಿರಿ
ಮುಂಜಾನೆಯ ಸಮಯವು ಗರ್ಭಿಣಿಯರಿಗೆ ಕಿರಿಕಿರಿಯನ್ನು ಉಂಟುಮಾಡುವುದು ಸಹಜ. ಮುಂಜಾನೆಯ ಸಮಯದಲ್ಲಿ ವಾಕರಿಕೆ, ತಲೆ ಸುತ್ತು, ಆಹಾರ ಸೇವನೆಗೆ ಮನಸ್ಸು ಒಗ್ಗದಿರುವುದು ಉಂಟಾಗಬಹುದು. ಹಾಗಂತ ಮುಂಜಾನೆಯ ಉಪಹಾರವನ್ನು ತ್ಯಜಿಸಬಾರದು. ಮುಂಜಾನೆಯ ಉಪಹಾರ ತ್ಯಜಿಸಿದರೆ ದಿನವಿಡೀ ಹಸಿವಿನ ನೋವು ಕಾಡುವುದು. ಆರೋಗ್ಯ ಭರಿತ ಉಪಹಾರವನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ಆರೋಗ್ಯ ಸುಧಾರಣೆ ಹಾಗೂ ಹಸಿವಿನ ನೋವು ಕಡಿಮೆಯಾಗುವುದು.

ಸಾಕಷ್ಟು ನೀರನ್ನು ಕುಡಿಯಿರಿ
ಕೆಲವರು ನೀರು ಕುಡಿಯುವುದು ಎಂದರೆ ಒಂದು ಬಗೆಯ ಬೇಸರ ವ್ಯಕ್ತಪಡಿಸುತ್ತಾರೆ. ಗರ್ಭಾವಸ್ಥೆಯಲ್ಲಿ ಇರುವಾಗ ಸಾಧ್ಯವಾದಷ್ಟು ಹೆಚ್ಚು ನೀರನ್ನು ಕುಡಿಯಬೇಕು. ಗರ್ಭಿಣಿಯು ನಿತ್ಯ 10 ಕಪ್ ನೀರನ್ನು ಕುಡಿಯಲೇ ಬೇಕು. ಅದು ನೀರು, ಚಹಾ, ಕಾಫಿ ಅಥವಾ ಇನ್ಯಾವುದೇ ಪಾನೀಯಗಳನ್ನು ಒಳಗೊಂಡಿರಬಹುದು. ಆರೋಗ್ಯಕರ ಗರ್ಭಧಾರಣೆಗೆ ಸೂಕ್ತ ಪ್ರಮಾಣದ ನೀರು ಸೇವನೆಯು ಅತ್ಯಗತ್ಯ ಎನ್ನುವುದನ್ನು ನೆನಪಿಡಿ.



Click it and Unblock the Notifications