For Quick Alerts
ALLOW NOTIFICATIONS  
For Daily Alerts

ಮದುವೆ ಆದ ಒಂದೇ ತಿಂಗಳಿಗೆ ಗುಡ್ ನ್ಯೂಸ್ ಕೊಡಬೇಕಾ? ಹಾಗಾದ್ರೆ ಹೀಗೆ ಮಾಡಿ...

By Sushma Charhra
|

ತಾಯ್ತನ ಅನ್ನುವುದು ಪ್ರಾಕೃತಿಯ ಅನುಭೂತಿಯ ದಿವ್ಯದರ್ಶನ.. ನಿಮ್ಮ ಜೀವನದ ಮಹತ್ವದ ಅನುಭವ ಅದು. ಆದರೆ ಅಂತಹ ಒಂದು ಅನುಭವ ನಿಮಗೆ ಅದ್ಭುತವಾಗಿರಬೇಕು ಅಂದರೆ ನೀವು ಅದನ್ನು ಸ್ವೀಕರಿಸಲು ಸಂಪೂರ್ಣ ತಯಾರಾಗಿರಬೇಕಾಗುತ್ತದೆ. ಹಾಗಾಗಿ ತಾಯಿಯಾಗುವುದಕ್ಕೆ ಒಂದಷ್ಟು ಪೂರ್ವ ತಯಾರಿಗಳ ಅಗತ್ಯವಿರುತ್ತೆ. ಆ ತಯಾರಿ ಸರಿಯಾಗಿದ್ದಲ್ಲಿ ನಿಮ್ಮ ಮಗು ಸಾಕಷ್ಟು ಸುರಕ್ಷಿತವಾಗಿ ನಿಮ್ಮ ತೋಳನ್ನು ಸೇರಲು ಅನುಕೂಲವಾಗುತ್ತೆ.
ಮೊದಲೆಲ್ಲ ಹೀಗೆಲ್ಲಿತ್ತು. ಮದುವೆ ಆದ ಕೂಡಲೇ ಹೆಣ್ಣು ಮಕ್ಕಳು ಬಸುರಿಯಾಗೋರು, ತನ್ನಿಂದ ತಾನೇ ಮಗು ಹುಟ್ಟುತ್ತಿತ್ತು. ಇಷ್ಟೆಲ್ಲ ಯೋಚಿಸುತ್ತಲೇ ಇರಲಿಲ್ಲ ಅಂತ ಕೆಲವರು ಹೇಳಬಹುದು. ಆದರೆ ಅದು ಆ ಕಾಲವಲ್ಲ. ಹಾಗಾಗಿ ಪೂರ್ವ ತಯಾರಿಯ ಅಗತ್ಯತೆ ಇದೆ. ಮದುವೆ ಆದ ಒಂದೇ ತಿಂಗಳಲ್ಲಿ ನೀವು ಪ್ರಗ್ನೆಂಟ್ ಆಗಬೇಕು ಎಂದಾದರೆ ನೀವು ಏನೆಲ್ಲಾ ಮಾಡಬೇಕಾಗುತ್ತೆ ಗೊತ್ತಾ?

ನೀವು ನಿಮ್ಮ ಜೀವನದ ಹೆಚ್ಚಿನ ಸಮಯವನ್ನು ವ್ಯಯಿಸಲು ಇಷ್ಟ ಪಡದೆ, ಮದುವೆ ಆದ ಕೂಡಲೇ ಒಂದು ಬ್ರೇಕ್ ತೆಗೆದುಕೊಂಡು ಮಗು ಆದ ಮೇಲೆ ನಿಮ್ಮ ಮುಂದಿನ ಪ್ಲಾನಿಂಗ್ ಗಳನ್ನು ಮಾಡಲು ಸಿದ್ಧರಿದ್ದೀರಾದರೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡರೆ ಒಳ್ಳೆಯದು ಮತ್ತು ಕೆಲವು ವಿಚಾರಗಳ ಬಗ್ಗೆ ಪೂರ್ವ ತಯಾರಿ ಮಾಡಿಕೊಂಡರೆ ಪ್ರಗ್ನೆಂಟ್ ಆಗಲು ಅನುಕೂಲವಾಗುತ್ತೆ.

pregnancy health care tips in kannada

ಹೀಗೆ ಬೇಗನೆ ಮಗು ಮಾಡಿಕೊಳ್ಳಬೇಕು ಎಂದುಕೊಳ್ಳಲು ಹಲವು ಕಾರಣಗಳಿರಬಹುದು. ನೀವು ನಂಬುವ ಜ್ಯೋತಿಷ್ಯ ಶಾಸ್ತ್ರ ಇದನ್ನೇ ಹೇಳಿರಬಹುದು ಅಥವಾ ನಿಮ್ಮ ಜೀವಶಾಸ್ತ್ರ ತಜ್ಞರ ಸಲಹೆ ಹೀಗೆ ಇರಬಹುದು, ಅಥವಾ ಕೌಟುಂಬಿಕ ಸಲಹೆಯೂ ಕೂಡ ಬೇಗ ಒಂದು ಮಗು ಆಗಿ ಬಿಡಲಿ ಎಂದು ಹೇಳುತ್ತಿರಬಹುದು, ಅದು ಏನೇ ಇರಲಿ ನಿಮ್ಮ ತಯಾರಿ ಮತ್ತು ನೀವು ಯಾವೆಲ್ಲ ವಿಚಾರಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ಮಗು ಮಾಡಿಕೊಳ್ಳುವುದು ಸುಲಭವಾಗುತ್ತೆ ಎಂಬುದನ್ನು ಈ ಲೇಖನ ನಿಮಗೆ ತಿಳಿಸಲಿದೆ. ಈ ಸಲಹೆಗಳನ್ನು ಮನಸ್ಸಲ್ಲಿ ಇಟ್ಟುಕೊಂಡರೆ, ನೀವು ಬೇಗನೇ ಕನ್ಸೀವ್ ಆಗಲು ನೆರವಾಗುತ್ತೆ.

ಇಲ್ಲಿ ನಾವು ತಿಳಿಸುವ ಸಲಹೆಗಳಲ್ಲಿ ಹೆಚ್ಚಿನವು ತಾಯಿಗೆ ಸಂಬಂಧಿಸಿದ್ದು, ಆದರೆ ತಂದೆ ಸಂಬಂಧಿಸಿದ ವಿಚಾರಗಳೂ ಕೂಡ ಬಹಳ ಮಹತ್ವಪೂರ್ಣವಾದದ್ದು ಅನ್ನುವುದನ್ನು ಯಾರೂ ಮರೆಯುವಂತಿಲ್ಲ. ಅವರ ಸಂಪೂರ್ಣ ಸಹಕಾರದಿಂದ ಮಾತ್ರ ತಾಯಿಯ ತೆಗೆದುಕೊಂಡ ಮುಂಜಾಗ್ರತ ಕ್ರಮಗಳು ಸಹಾಯಕ್ಕೆ ಬರಬಲ್ಲದು. ಒಟ್ಟಾರೆ ಗಂಡಹೆಂಡತಿಯ ಇಬ್ಬರೂ ಕೂಡ ಸಮಾನ ಪಾತ್ರಧಾರಿಗಳಾಗಿರುತ್ತಾರೆ. ಈ ವಿಚಾರದಲ್ಲಿ ಯಾರೂ ಹೆಚ್ಚಲ್ಲ., ಯಾರೂ ಕಡಿಮೆಯಲ್ಲ.

ನಿಮ್ಮ ಮುಟ್ಟಿನ ದಿನಾಂಕಗಳ ರೆಕಾರ್ಡ್ ಇರಲಿ

ನಿಮ್ಮ ಮುಟ್ಟಿನ ದಿನಾಂಕಗಳ ರೆಕಾರ್ಡ್ ಇರಲಿ

ಪ್ರತಿ ಮಹಿಳೆಗೂ ತನ್ನ ಮುಟ್ಟಿನ ಅನುಭವ ಭಿನ್ನವಾಗಿರುತ್ತೆ ಮತ್ತು ಬೇರೆಬೇರೆ ದಿನಾಂಕಗಳಲ್ಲಿರುತ್ತೆ. ನೀವು ಬೇಗನೆ ಪ್ರಗ್ನೆಂಟ್ ಆಗಲು ಬಯಸುತ್ತೀರಾದರೆ, ನೀವು ನಿಮ್ಮ ಮುಟ್ಟಿನ ದಿನಾಂಕಗಳನ್ನು ಮರೆಯದೇ ನೆನೆಪಿಟ್ಟುಕೊಂಡಿರುವುದು ಬಹಳ ಮುಖ್ಯವಾದ ವಿಚಾರ. ಹೀಗೆ ಮಾಡುವುದರಿಂದ, ನೀವು ನಿಮ್ಮ ದೇಹದೊಳಗಿನ ಪ್ರಕ್ರಿಯೆ ಅಂದರೆ ಅಂಡೋತ್ಪತ್ತಿ ಪ್ರಕ್ರಿಯೆಗೆ ಸಹಕರಿಸುವ ದಿನವನ್ನು ಚೆನ್ನಾಗಿ ಲೆಕ್ಕಾಚಾರ ಹಾಕಲು ಸಾಧ್ಯವಾಗುತ್ತೆ. ವೈಜ್ಞಾನಿಕವಾಗಿ ತಿಳಿಸುವುದಾದರೆ, ಅಂಡೋತ್ಪತ್ತಿ ಪ್ರಕ್ರಿಯೆಯು ನಿಮ್ಮ ಅಂಡಾಶಯದಿಂದ ಮೊಟ್ಟೆಗಳು ಬಿಡುಗಡೆ ಹೊಂದುವ ದಿನಗಳಂದು ಮಾತ್ರ ಸಾಧ್ಯವಿದೆ. ಮೊಟ್ಟೆಗಳು ಬಿಡುಗಡೆಯಾಗಿ ಅದು ಫಲೋತ್ಪತ್ತಿಯಾಗುವುದು ದೇಹದಲ್ಲಿ ಅವು ಬಿಡುಗಡೆಗೊಂಡ 12 ರಿಂದ 24 ತಾಸುಗಳ ನಂತರ. ಹಾಗಾಗಿ ನೀವು ಈ ಸಂದರ್ಭವನ್ನು ಸರಿಯಾಗಿ ಲೆಕ್ಕಾಚಾರ ಹಾಕಿ ಅದೇ ಸಮಯಕ್ಕೆ ಲೈಂಗಿಕ ಸಂಪರ್ಕ ಮಾಡಿಕೊಂಡರೆ, ನೀವು ತಾಯಿಯಾಗುವ ಚಾನ್ಸ್ ಅಧಿಕವಾಗಿರುತ್ತೆ.

ಜಂಕ್ ಫುಡ್ ಗಳನ್ನು ದೂರವಿರಿಸಿ

ಜಂಕ್ ಫುಡ್ ಗಳನ್ನು ದೂರವಿರಿಸಿ

ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣಾಂಶ ಸೇರಿದಂತೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ನಿಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿದ್ದು ಅವು ನೀವು ಕನ್ಸೀವ್ ಆಗಲು ಸಹಕಾರ ನೀಡುವಂತಿರಬೇಕು. ಮೊದಲನೆಯದಾಗಿ ಡ್ರೈಫ್ರೂಟ್ಸ್, ತರಕಾರಿಗಳು ನಿಮ್ಮ ಪ್ರತಿನಿತ್ಯದ ಆಹಾರದಲ್ಲಿ ಇರಲೇಬೇಕು, ಜೊತೆಗೆ ಹಾಲು, ಮೊಸರು ಇತ್ಯಾದಿ ಡೈರಿ ಪ್ರೊಡಕ್ಟ್ ಗಳು, ಬೇಳೆಕಾಳುಗಳನ್ನು ಚೆನ್ನಾಗಿ ಸೇವಿಸಿ. ಆದರೆ ನೆನಪಿರಲಿ ಜಂಕ್ ಫುಡ್ ಗಳು ನಿಮ್ಮ ಆಹಾರ ಕ್ರಮದಿಂದ ದೂರವಿರುವುದೇ ಲೇಸು.

ಚೀಸು, ಕರಿದ ತಿಂಡಿಗಳು, ಅತಿಯಾದ ಎಣ್ಣೆ ಪದಾರ್ಥಗಳು ನಿಮ್ಮ ದೇಹಕ್ಕೆ ಅಷ್ಟು ಹಿತವಲ್ಲ. ಗ್ರೀನ್ ಟೀ ಸೇವನೆ ಬಹಳ ಒಳ್ಳೆಯದು. ನೀವು ಪ್ರಗ್ನೆಂಟ್ ಆಗಲು ಬಯಸುತ್ತಿದ್ದೀರಾದರೆ, ಹೈ ಮರ್ಕ್ಯುರಿ ಫಿಶ್ ಗಳನ್ನು ಸೇವಿಸಬೇಡಿ. ಯಾಕೆಂದರೆ ಇವು ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಸಂತಾನೋತ್ಪತ್ತಿ ಫಲವತ್ತತೆಯನ್ನು ಕಡಿಮೆಗೊಳಿಸುತ್ತೆ ಎಂದು ಹೇಳಲಾಗುತ್ತೆ.ಮರ್ಕ್ಯುರಿ ಫಿಶ್ ಗಳೆಂದರೆ, ಕತ್ತಿಮೀನು, ಕಿಂಗ್ ಬಂಗಡೆ,ಟೈಲ್ ಫಿಶ್, ಶಾರ್ಕ್ ಇತ್ಯಾದಿಗಳು. ಆದರೆ ಉಪ್ಪು ನೀರಿನ ಮೀನುಗಳು ಅಷ್ಟು ಕೆಟ್ಟದಲ್ಲ. ನೀವು ಮರ್ಕ್ಯುರಿ ಫಿಶ್ ಗಳ ಬದಲಾಗಿ ಸಮುದ್ರ ಮೀನುಗಳನ್ನು ಆಯ್ಕೆ ಮಾಡಿಕೊಂಡರೆ ಸ್ವಲ್ಪ ಮಟ್ಟಿಗೆ ಓಕೆ ಹೇಳಬಹುದು.

ಧೂಮಪಾನ ಮತ್ತು ಮಧ್ಯಪಾನ ನಿಷೇಧಿಸಿಕೊಳ್ಳಿ

ಧೂಮಪಾನ ಮತ್ತು ಮಧ್ಯಪಾನ ನಿಷೇಧಿಸಿಕೊಳ್ಳಿ

ನಿಕೋಟಿನ್ ಮತ್ತು ಕಾರ್ಬನ್ ಮೋನಾಕ್ಸೈಡ್ ಅಂಶಗಳು ಸಿಗಕೇಟ್ ನಲ್ಲಿರುವ ಪ್ರಮುಖ ಕಂಪೌಂಡ್ ಗಳು. ಇವು ಮಹಿಳೆಯರಲ್ಲಿ ಅವರ ಅಂಡಾಶಯಕ್ಕೆ ಅನುಸಾರವಾಗಿ ಮೊಟ್ಟೆಗಳ ಉತ್ಪತ್ತಿಯನ್ನು ತಗ್ಗಿಸುತ್ತೆ. ಹಾಗಾಗಿ ನೀವು ಪ್ರಗ್ನೆಂಟ್ ಆಗಬೇಕು ಎಂದಾದರೆ ಮೊದಲು ಮಾಡಬೇಕಾಗಿರುವ ಕೆಲಸ ಅಂದರೆ ಧೂಮಪಾನ ಬಿಟ್ಟುಬಿಡುವುದು. ಇಂತಹ ಸಂರ್ಬದಲ್ಲಿ ಯಾರೋ ಸ್ಮೋಕ್ ಮಾಡುತ್ತಿದ್ದಾರೆ ಎಂದರೆ ನೀವು ಅವರ ಬಳಿಯೂ ಸುಳಿಯಬಾರದು. ಪ್ರಗ್ನೆಂಟ್ ಆದಾಗ ಮಾತ್ರವಲ್ಲ. ಪ್ರಗ್ನೆಂಟ್ ಆಗಲು ಪ್ರಯತ್ನಿಸುವ ಸಂದರ್ಬದಲ್ಲೂ ಕೂಡ ಈ ನಿಟ್ಟಿನಲ್ಲಿ ಜಾಗೃತೆ ವಹಿಸಬೇಕು.

ರೀಕ್ರಿಯೇಷನಲ್ ಡ್ರಗ್ಸ್ ಗಳಾದ ಮರಿಜೂನಾ ಗಳನ್ನು ಕೂಡ ದೂರವಿಡುವುದು ಬಹಳ ಒಳ್ಳೆಯದು. ಈ ಮೂಲಕ ನೀವು ಸುಲಭವಾಗಿ ಬಸುರಿಯಾಗಲು ಸಾಧ್ಯವಾಗುತ್ತೆ. ತಾಯಿ ಮಾತ್ರವಲ್ಲ, ತಂದೆ ಕೂಡ ಧೂಮಪಾನ ಮಾಡುವುದನ್ನು ಬಿಡಬೇಕಾಗುತ್ತೆ. ಆ ಮೂಲಕ ಕನ್ಸೀವ್ ಪ್ರೊಸೆಸ್ ಗೆ ತಂದೆಯೂ ಸಂಪೂರ್ಣ ಬೆಂಬಲ ನೀಡಬಹುದು.ಈ ಸಣ್ಣ ಪ್ರಯತ್ನವು ಆರೋಗ್ಯಯುತವಾಗಿ ಮಗು ಜನಿಸಲು ಮತ್ತು ಆರಾಮದಾಯಕವಾಗ ಪ್ರಗ್ನೆನ್ಸಿ ಹೊಂದಲು ನೆರವಾಗುತ್ತೆ.

ಶ್ರಮದಾಯಕವಾದ ದೈಹಿಕ ಕೆಲಸಗಳನ್ನು ಬಿಟ್ಟುಬಿಡಿ.

ಶ್ರಮದಾಯಕವಾದ ದೈಹಿಕ ಕೆಲಸಗಳನ್ನು ಬಿಟ್ಟುಬಿಡಿ.

ದೇಹಕ್ಕೆ ವ್ಯಾಯಾಮ ಬೇಕು ಹಾಗಾಗಿ ಪ್ರತಿನಿತ್ಯ ಬೆಳಿಗ್ಗೆ ಎದ್ದು ವ್ಯಾಯಾಮ ಮಾಡಿ ಎಂದು ಹೇಗೆ ಸಲಹೆ ನೀಡುತ್ತೆವೆಯೋ ಹಾಗೆಯೇ ಅತಿಯಾದ ದೈಹಿಕ ಕೆಲಸಗಳನ್ನು ಮಾಡಿ ದೇಹಕ್ಕೆ ದಣಿವು ಮಾಡಿಕೊಳ್ಳಬೇಡಿ ಎಂಬುದನ್ನೂ ಕಡ ಹೇಳಲಾಗುತ್ತೆ. ಅತಿಯಾದ ಕೆಲಸ ನಿರ್ವಹಣೆಯಿಂದಾಗಿ ನಿಮ್ಮ ದೇಹವು ಪ್ರಗ್ನೆಂಟ್ ಆಗಲು ಅನುಕೂಲ ಮಾಡಿಕೊಡುವುದಿಲ್ಲ. ನೀವು ಮಗು ಮಾಡಿಕೊಳ್ಳುವ ವಿಚಾರದಲ್ಲಿ ಗಂಭೀರ ತೀರ್ಮಾನ ಕೈಗೊಂಡಿರುವುದಾದರೆ, ಅತಿಯಾಗಿ ದೈಹಿಕ ಶ್ರಮ ಮಾಡುವುದನ್ನು ಕಡಿಮೆ ಮಾಡಬೇಕು ಮತ್ತು ಎಷ್ಟು ಅಗತ್ಯವೋ ಅಷ್ಟು ಪ್ರಮಾಣದ ವ್ಯಾಯಮವನ್ನು ದೇಹಕ್ಕೆ ನೀಡಬೇಕು. ಹೀಗೆ ಅತೀ ಶ್ರಮ ಪಡುವುದರಿಂದಾಗಿ ನೀವು ಪ್ರಗ್ನೆಂಟ್ ಆಗಬೇಕೆಂದುಕೊಂಡಿರುವ ಸಮಯ ಮುಂದೂಡುತ್ತಲೇ ಸಾಗಬಹುದು ಎಚ್ಚರಿಕೆ.

ವಯಸ್ಸಿಗೆ ಸಂಬಂಧಿಸಿದ ಸಂತೋನಾತ್ಪತ್ತಿ ವಿಚಾರಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಿ

ವಯಸ್ಸಿಗೆ ಸಂಬಂಧಿಸಿದ ಸಂತೋನಾತ್ಪತ್ತಿ ವಿಚಾರಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಿ

ನಿಮ್ಮ ವಯಸ್ಸು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತೆ. ನೀವು ಒಂದು ವೇಳೆ 30 ಅಥವಾ ಆಸುಪಾಸಿನ ವಯಸ್ಸಿನವರಾದರೆ, ಒಂದು ನೆನಪಿರಲಿ 10 ವರ್ಷದ ಮುಂಚೆ ಅಂದರೆ ನಿಮ್ಮ 20 ರ ಹರೆಯದಲ್ಲಿ ಪ್ರಗ್ನೆಂಟ್ ಆಗುವಷ್ಟು ಸುಲಭದಲ್ಲಿ ಕನ್ಸೀವ್ ಆಗುವುದು ಈ ವಯಸ್ಸಿನಲ್ಲಿ ಸ್ವಲ್ಪ ಕಷ್ಟ. ನೀವು ಪ್ರಗ್ನೆಂಟ್ ಆಗಲು ಸ್ವಲ್ಪ ಕಷ್ಟಪಡಬೇಕಾಗಬಹುದು ಮತ್ತು ಅದಕ್ಕೆ ನೀವು ಮಾನಸಿಕವಾಗಿ ಸಿದ್ಧರಾಗಿರಬೇಕಾಗುತ್ತದೆ. ಒಂದು ವೇಳೆ ಮದುವೆಯ ನಂತರ ಕೂಡಲೇ ಪ್ರಗ್ನೆಂಟ್ ಆಗಬೇಕು ಎಂದು ನೀವು ಬಯಸುತ್ತೀರಾದ್ರೆ ಕೂಡಲೇ ಪ್ರಸೂತಿ ತಜ್ಞರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳಿ. ಆ ಮೂಲಕ ಎಂಡೋಮೆಟ್ರಿಸಿಸ್, ಫಾಲೋಫೈನ್ ಟ್ಯೂಬ್ ನಲ್ಲಿನ ಬ್ಲಾಕೇಜ್ ಮತ್ತು ಯೂಟ್ರೀನ್ ಫೈಬ್ರಾಯ್ಡ್ಸ್ ಗಳ ನಿವಾರಣೆಗೆ ಅವರು ಸಲಹೆ ನೀಡುತ್ತಾರೆ. ಇದು ನೀವು ಆರಾಮದಾಯಕವಾಗಿ ಪ್ರಗ್ನೆಂಟ್ ಆಗಲು ನೆರವು ನೀಡುತ್ತೆ.

ಪ್ರೀ-ನಟಲ್ ವಿಟಮಿನ್ ಗಳನ್ನು ತೆಗೆದುಕೊಳ್ಳಿ

ಪ್ರೀ-ನಟಲ್ ವಿಟಮಿನ್ ಗಳನ್ನು ತೆಗೆದುಕೊಳ್ಳಿ

ಪ್ರಗ್ನೆಂಟ್ ಆದ ನಂತರ ಮಾತ್ರೆಗಳನ್ನು ತೆಗೆದುಕೊಳ್ಳುವುದು ಸರ್ವೇಸಾಮಾನ್ಯ. ಆದರೆ ಕೆಲವು ಮಾತ್ರೆಗಳಿದ್ದು, ಅವುಗಳು ನೀವು ಪ್ರಗ್ನೆಂಟ್ ಆಗಲು ಸಹಕರಿಸುತ್ತವೆ. ಅವುಗಳನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳುವುದರಿಂದ ಪ್ರಗ್ನೆಂಟ್ ಆಗುವ ಸಾಧ್ಯತೆಗಳು ಅಧಿಕವಾಗಿರುತ್ತೆ. ಅದ್ರಲ್ಲೂ ಪ್ರಮುಖವಾಗಿ ಫೋಲಿಕ್ ಆಸಿಡ್ ಮಾತ್ರೆಗಳು ಬಹಳ ಬೇಕಾಗುತ್ತೆ. ಯಾಕೆಂದರೆ ಹೆಚ್ಚಿನ ಪ್ರಗ್ನೆಂಟ್ ಮಹಿಳೆಯರು ಅನೀಮಿಯಾ ಮತ್ತು ಕಬ್ಬಿಣಾಂಶದ ಕೊರತೆಯನ್ನು ಪ್ರಗ್ನೆನ್ಸಿಯ ಮೊದಲ ಹಂತದ ಕೆಲವು ತಿಂಗಳು ಅನುಭವಿಸುತ್ತಾರೆ. ಇದು ಪ್ರಗ್ನೆನ್ಸಿಯ ಮುಂದಿನ ಹಂತಗಳಲ್ಲಿ ಸರಿಯಾಗಿ ಟ್ರೀಟ್ ಮಾಡದೇ ಇದ್ದರೆ ಸಮಸ್ಯೆ ನೀಡಬಹುದು. ಹಾಗಾಗಿ ಬಸುರಿಯಾಗಲು ಪೂರ್ವ ತಯಾರಿ ಎಂಬಂತೆ ನಿಮ್ಮ ದೇಹಕ್ಕೆ ಬೇಕಾಗುವ ಅಗತ್ಯ ಕಬ್ಬಿಣಾಂಶ ಮತ್ತು ಅಗತ್ಯ ಪೋಷಕಾಂಶಗಳ ಸರಬರಾಜನ್ನು ಪ್ರಗ್ನೆನ್ಸಿ ಆಗಲು ಯೋಚಿಸುವ ಸಂದರ್ಬದಲ್ಲೇ ಮಾಡಿದರೆ ಹೆಚ್ಚು ಪ್ರಯೋಜನ ಪಡೆಯಬಹುದು. ಮತ್ತು ನೀವಂದುಕೊಂಡಂತೆ ಒಂದೇ ತಿಂಗಳಲ್ಲಿ ಗುಡ್ ನ್ಯೂಸ್ ಪಡೆಯಲು ಸಾಧ್ಯವಾಗುತ್ತೆ.

English summary

How To Ensure To Conceive A Baby In A Month

Conceiving a child will be one of the most enriching experiences of your life. But such a thing will happen only if you are prepared to welcome the baby with open arms. For that, a significant amount of planning is involved on the part of both the partners. Now, having planned all of it, you are ready to conceive a child and you do not want to waste even a moment at it. You just want to conceive a child in the very next month and in less than a year, you want to hold your little one in your arms.
X
Desktop Bottom Promotion