ಗರ್ಭಿಣಿ ಸ್ತ್ರೀಯರು ಕಲ್ಲಂಗಡಿ ಹಣ್ಣು ತಿನ್ನಬಹುದಾ?

Posted By: Sushma Charhra
Subscribe to Boldsky

ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಅಧಿಕವಾಗಿರುತ್ತೆ. ಹಾಗಾಗಿ ತಾಯಿಯಾಗುವ ಸಂದರ್ಬದಲ್ಲಿ ನೀವಿದ್ದರೆ ಖಂಡಿತವಾಗ್ಲೂ ಈ ಹಣ್ಣನ್ನು ಸೇವಿಸಲೇ ಬೇಕು. ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಎ ಅಂಶ ಕಲ್ಲಂಗಡಿಯಲ್ಲಿರುತ್ತೆ. ಪೊಟಾಷಿಯಂ ಮತ್ತು ಮೆಗ್ನೇಷಿಯಂ ಅಂಶಗಳೂ ಇರುವುದರಿಂದ ಇದು ಹೃದಯ ಮತ್ತು ಹೊಟ್ಟೆಗೆ ಬಹಳ ಒಳ್ಳೆಯದು. ಆರೋಗ್ಯದ ಹಿತದೃಷ್ಟಿಯಿಂದ ಹಲವು ಲಾಭಗಳು ಕಲ್ಲಂಗಡಿ ಸೇವನೆಯಿಂದ ಪ್ರಗ್ನೆನ್ಸಿಯಲ್ಲಿ ಆಗಲಿದೆ. ಅವುಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಮಲಬದ್ಧತೆ ಸಮಸ್ಯೆ ಪ್ರಗ್ನೆನ್ಸಿಯಲ್ಲಿ ಸರ್ವೇಸಾಮಾನ್ಯ, ಅದರ ನಿವಾರಣೆಗೆ ಕಲ್ಲಂಗಡಿ ಉಪಕಾರಿ. ಇನ್ನು ಕೈ ಮತ್ತು ಕಾಲುಗಳು ಊದಿಕೊಂಡು ನೋವಾಗುವುದನ್ನು ತಡೆಯಲು ಇದು ಸಹಕಾರಿ. ಬೆಳಿಗ್ಗೆ ಎದ್ದ ಕೂಡಲೇ ಅನಾರೋಗ್ಯದಂತೆ ಅನ್ನಿಸುವುದು ಪ್ರಗ್ನೆನ್ಸಿಯಲ್ಲಿ ಕಾಮನ್.. ಕಲ್ಲಂಗಡಿ ಸೇವನೆಯಿಂದ ಇದು ನಿವಾರಣೆಯಾಗಲಿದೆ. ಹಾಗಂತ ಕಲ್ಲಂಗಡಿ ಒಂದನ್ನೇ ಸೇವಿಸುತ್ತಿರುವುದಲ್ಲ, ಬದಲಾಗಿ ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಬಹಳ ಮಹತ್ವ ಇದರಿಂದಾಗಿ ನಿಮ್ಮ ರಕ್ತದೊತ್ತಡ ಕೂಡ ಪ್ರಗ್ನೆನ್ಸಿಯಲ್ಲಿ ನಿಯಂತ್ರಣದಲ್ಲಿರುತ್ತೆ...

ಆಸಿಡಿಟಿ, ಹಾರ್ಟ್ ಬರ್ನ್, ಜೀರ್ಣಕ್ರಿಯೆಗೆ ಸಹಕಾರಿ

ಆಸಿಡಿಟಿ, ಹಾರ್ಟ್ ಬರ್ನ್, ಜೀರ್ಣಕ್ರಿಯೆಗೆ ಸಹಕಾರಿ

ಗರ್ಭಧಾರಣೆ ಸಂದರ್ಭದಲ್ಲಿ ಆಸಿಡಿಟಿ, ಹಾರ್ಟ್ ಬರ್ನ್ ಮತ್ತು ಜೀರ್ಣಕ್ರಿಯೆ ಸಂಬಂಧಿ ಕಾಯಿಲೆಗಳು ಇದ್ದೇ ಇರುತ್ತೆ. ಕಲ್ಲಂಗಡಿ ಹಣ್ಣು ಆಸಿಡಿಟಿ ಆಗದಂತೆ ತಡೆಯುತ್ತೆ ಮತ್ತು ಹಾರ್ಟ್ ಬರ್ನ್ ಗೆ ಕಾರಣವಾಗುವ ಆಹಾರದ ಕೊಳವೆಯಲ್ಲಿನ ಆಸಿಡ್ ಅಂಶವನ್ನು ನಿವಾರಿಸಿ ಸಮಸ್ಯೆಯನ್ನು ನಿವಾರಿಸುತ್ತೆ. ಪ್ರತಿ ದಿನ ಬೆಳಿಗ್ಗೆ ಕಲ್ಲಂಗಡಿ ಹಣ್ಣಿನ ರಸ ಸೇವಿಸುವುದರಿಂದ ಗರ್ಭ ಧರಿಸಿದಾಗ ಕಾಣಿಸಿಕೊಳ್ಳುವ ವಾಂತಿಯನ್ನು ಕಡಿಮೆಗೊಳಿಸಿಕೊಳ್ಳಬಹುದು. ಮತ್ತು ಮಾರ್ನಿಂಗ್ ಸಿಕ್ ನೆಸ್ ಕೂಡ ಇರುವುದಿಲ್ಲ. ಹೆಚ್ಚು ನ್ಯೂಟ್ರೀಷಿಯಸ್ ಆಗಿರುವ ಹಣ್ಣು ಕಲ್ಲಂಗಡಿಯಾಗಿರುವುದರಿಂದ ನಿಮಗೆ ಮತ್ತು ನಿಮ್ಮ ಮಗುವಿನ ಬೆಳವಣಿಗೆಗೆ ಇದು ಸಹಕರಿಸುತ್ತೆ

ನೋವನ್ನು ಕಡಿಮೆಗೊಳಿಸುತ್ತೆ

ನೋವನ್ನು ಕಡಿಮೆಗೊಳಿಸುತ್ತೆ

ಪ್ರಗ್ನೆನ್ಸಿಯಲ್ಲಿ ಮಗುವಿನ ತೂಕದ ಒತ್ತಡದಿಂದಾಗಿ ಕಾಲುಗಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ಸ್ರವಿಸಿದೆ, ಕಾಲು ಮತ್ತು ಕೈಗಳಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳುತ್ತೆ. ಕಲ್ಲಂಗಡಿಯಲ್ಲಿನ ನೀರಿನಂಶದಿಂದಾಗಿ ನೋವನ್ನು ಕಡಿಮೆಗೊಳಿಸುವ ತಾಕತ್ತು ಕಲ್ಲಂಗಡಿ ಹಣ್ಣಿಗಿದೆ.

ಮುಖದ ಕಾಂತಿ ಬದಲಾಗುವುದು

ಮುಖದ ಕಾಂತಿ ಬದಲಾಗುವುದು

ಮುಖದ ಪಿಗ್ಮೆಂಟೇಷನ್ ಅಂದರೆ ವರ್ಣದ್ರವ್ಯಗಳ ಸ್ರವಿಕೆಯಿಂದ ಮುಖದ ಕಾಂತಿ ಬದಲಾಗುತ್ತೆ. ದೇಹದಲ್ಲಾಗುವ ಹಲವು ಹಾರ್ವೋನುಗಳ ವ್ಯತ್ಯಾಸದಿಂದಾಗಿ ಮುಖದ ಕಾಂತಿ ಹಾಳಾಗುತ್ತೆ. ಗರ್ಭ ಧರಿಸಿದಾಗ ಕಲ್ಲಂಗಡಿ ಸೇವಿಸುವುದರಿಂದ ದೇಹದಲ್ಲಿ ಅನಗತ್ಯ ಟಾಕ್ಸಿನ್ಸ್ ಅಂಶವನ್ನು ಹೊರಗಡೆ ಹಾಕುವ ಸಾಮರ್ಥ್ಯ ಇದಕ್ಕಿದೆ. ಹಾಗಾಗಿ ಚರ್ಮ ಕಪ್ಪಾಗುವುದು, ಇಲ್ಲವೇ ಕೆಂಪಗಾಗುವುದು ಇಂತಹ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ನಿರ್ಜಲೀಕರಣ ಸಮಸ್ಯೆ ನಿವಾರಣೆ

ನಿರ್ಜಲೀಕರಣ ಸಮಸ್ಯೆ ನಿವಾರಣೆ

ಪ್ರಗ್ನೆನ್ಸಿಯಲ್ಲಿ ದೇಹಕ್ಕೆ ಅಗತ್ಯ ನೀರಿನ ಪೂರೈಕೆ ಆಗಲೇಬೇಕು. ನೀರಿನ ಕಡಿಮೆ ಸೇವನೆಯಿಂದ ಮಗು ಬೇಗ ಹುಟ್ಟುವುದು, ಯುಟ್ರಸ್ ನಲ್ಲಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಅಧಿಕವಾಗಿರುತ್ತೆ. ನೀರಿನ ಪೂರೈಕೆಗಾಗಿ ಕಲ್ಲಂಗಡಿ ಉತ್ತಮ ಹಣ್ಣು. ಸರಿಯಾದ ಪ್ಲೂಯಿಡ್ಸ್ ಮತ್ತು ವಿಟಮಿನ್ಸ್ ಕಲ್ಲಂಗಡಿ ಸೇವನೆಯಿಂದ ಸಿಗಲಿದೆ.

ಮಲಬದ್ಧತೆಯನ್ನು ನಿವಾರಿಸುತ್ತೆ

ಮಲಬದ್ಧತೆಯನ್ನು ನಿವಾರಿಸುತ್ತೆ

ಕ್ಯಾಲ್ಸಿಯಂ ಮತ್ತು ವಿಟಮಿನ್ ಮಾತ್ರೆಗಳನ್ನು ಸೇವಿಸುವ ಕಾರಣದಿಂದಾಗಿ ಗರ್ಭಧಾರಣೆ ಸಂದರ್ಬದಲ್ಲಿ ಮಲಬದ್ಧತೆ ಸಮಸ್ಯೆ ಪ್ರತಿ ಮಹಿಳೆಯನ್ನೂ ಕಾಡುತ್ತೆ. ಅದಕ್ಕೆ ಸರಿಯಾದ ಪ್ರಮಾಣದ ನೀರಿನ ಸೇವನೆಯಿಂದ ಮಾತ್ರ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಒಂದು ವೇಳೆ ಮಲಬದ್ಧತೆ ಅಧಿಕವಾದರೆ ಬೆನ್ನುನೋವು ಕಾಣಿಸಿಕೊಂಡು ಯಮಯಾತನೆ ನೀಡಲಿದೆ. ಹಾಗಾಗಿ ಆಗಾಗ ಕಲ್ಲಂಗಡಿ ಹಣ್ಣು ಸೇವಿಸಿ ಗರ್ಭ ಧರಿಸಿದಾಗ ಕಾಣಿಸಿಕೊಳ್ಳುವ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

ಮಾಂಸ ಹಿಡಿದುಕೊಂಡಂತಾಗುವುದನ್ನು ತಡೆಯುತ್ತೆ

ಮಾಂಸ ಹಿಡಿದುಕೊಂಡಂತಾಗುವುದನ್ನು ತಡೆಯುತ್ತೆ

ಹಾರ್ಮೋನುಗಳ ವ್ಯತ್ಯಾಸ ಮತ್ತು ಅತಿಯಾದ ತೂಕ ಹೆಚ್ಚಳದಿಂದಾಗ ಮಾಂಸಖಂಡಗಳು ನೀವು ಹೇಳಿದಂತೆ ಕೇಳುವುದಿಲ್ಲ. ಆಗಾಗ ಅವುಗಳು ಹಿಡಿದುಕೊಂಡಂತಾಗಿ ನಿಮ್ಮನ್ನು ಹೈರಾಣು ಮಾಡಿ ಬಿಡುತ್ತವೆ. ಮಸಲ್ ಕ್ಯಾಚ್ ಆದರೆ ಪ್ರಾಣ ಹೋಗುವಷ್ಟು ಹಿಂಸೆ ಅನ್ನಿಸುತ್ತೆ. ಆದರೆ ಈ ಸಮಸ್ಯೆ ಕಾಣಿಸಿಕೊಳ್ಳಬಾರದು ಅಂದ್ರೆ ನೀವು ಕಲ್ಲಂಗಡಿ ಹಣ್ಣು ಸೇವಿಸಬೇಕು.

ಉಷ್ಣತೆಯಿಂದ ಉಂಟಾಗುವ ತುರಿಕೆ ನಿವಾರಣೆ

ಉಷ್ಣತೆಯಿಂದ ಉಂಟಾಗುವ ತುರಿಕೆ ನಿವಾರಣೆ

ಪ್ರಗ್ನೆನ್ಸಿಯಲ್ಲಿ ಉಷ್ಣತೆಯನ್ನು ಸಹಿಸಿಕೊಳ್ಳುವುದು ಅಸಾಧ್ಯ. ಅದರಲ್ಲೂ ಬಿಸಿಲಿನ ಬೇಗೆ ನಿಮಗೆ ಬೇಡವೇ ಬೇಡ ಅನ್ನಿಸುತ್ತಿರುತ್ತೆ. ಬಿಸಿಲಿನ ತಾಪದಲ್ಲಿ ದೇಹದ ಉಷ್ಣತೆ ಅಧಿಕಕೊಂಡರೆ ತುರಿಕೆ ಉಂಟಾಗಬಹುದು. ಈ ನೆವೆಯನ್ನು ತಡೆಗಟ್ಟಲು ಕಲ್ಲಂಗಡಿ ಹಣ್ಣು ನಿಮ್ಮ ಸಹಾಯಕ್ಕೆ ಬರಲಿದೆ.

ಮೂತ್ರ ವಿಸರ್ಜನೆ ಸರಾಗ

ಮೂತ್ರ ವಿಸರ್ಜನೆ ಸರಾಗ

ಮೊದಲ ಹಂತಹ ಪ್ರಗ್ನೆನ್ಸಿ ಸಮಯದಲ್ಲಿ ಮೂತ್ರದ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತೆ. ಆದ್ರೆ ಯಾವುದೇ ರೀತಿಯ ಇತರೆ ಮೆಡಿಸಿನ್ ಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳು ಪ್ರಗ್ನೆನ್ಸಿಯಲ್ಲಿ ಕಡಿಮೆ. ಅದು ಹೊಟ್ಟೆಯೊಳಗಿನ ಮಗುವಿಗೂ ಸಮಸ್ಯೆ ಉಂಟುಮಾಡುವ ಸಂಭವವಿರುವುದರಿಂದ ವೈದ್ಯರೂ ಕೂಡ ಇಂತಹ ಸಮಸ್ಯೆಗಳಿಗೆ ಯಾವುದೇ ಮೆಡಿಸಿನ್ ನೀಡುವುದಿಲ್ಲ. ಹಾಗಾಗಿ ಇಂತಹ ಸಂದರ್ಬದಲ್ಲಿ ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ಸೋಂಕು ತರುವ ಬ್ಯಾಕ್ಟೀರಿಯಾಗಳು ಮೂತ್ರ ವಿಸರ್ಜನೆಯಲ್ಲಿ ಸರಾಗವಾಗಿ ಹೋಗುತ್ತೆ ಮತ್ತು ಸಮಸ್ಯೆ ನಿವಾರಣೆಯಾಗುತ್ತೆ

ಚರ್ಮದ ತುರಿಕೆ

ಚರ್ಮದ ತುರಿಕೆ

ದೇಹದ ಅಧಿಕ ಉಷ್ಣತೆಯಿಂದ ಉಂಟಾಗುವ ತುರಿಕೆ ಮತ್ತು ನೆವೆಯನ್ನು ತಡೆಯಲು ಕಲ್ಲಂಗಡಿ ಹಣ್ಣು ಸಹಕಾರಿ. ಕೊನೆಯ ಹಂತದ ಪ್ರಗ್ನೆನ್ಸಿಯಲ್ಲಿ ಸ್ಟ್ರೆಚ್ ಮಾರ್ಕ್ ಗಳಾಗಿದ್ದರೆ ಅದರ ತುರಿಕೆಯನ್ನು ಕಂಟ್ರೋಲ್ ಮಾಡುವ ಶಕ್ತಿ ಕಲ್ಲಂಗಡಿ ಹಣ್ಣಿಗಿರುವುದರಿಂದಾಗಿ ಬಸುರಿ ಹೆಂಗಸರು ಕಲ್ಲಂಗಡಿ ಹಣ್ಣು ಸೇವಿಸುವುದು ಒಳಿತು.

English summary

Healthy Reasons To Eat Watermelon During Pregnancy

Many pregnant ladies get confused whether to eat watermelons in their condition or not.Actually, watermelon is such a fruit that has lots of benefits. So, here are some of the reasons you should consider the water melon have a look