For Quick Alerts
ALLOW NOTIFICATIONS  
For Daily Alerts

ಒಂದು ಗಂಟೆಯಲ್ಲಿ ಎರಡು ಬಾರಿ ಸೆಕ್ಸ್ ನಡೆಸಿದರೆ ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚು!

|

ಪ್ರಾಯಕ್ಕೆ ಬಂದ ಪ್ರತಿಯೊಬ್ಬ ವ್ಯಕ್ತಿಯು ಸಂಗಾತಿ, ಸಂಸಾರ ಹಾಗೂ ಮಕ್ಕಳನ್ನು ಪಡೆದುಕೊಳ್ಳುವ ಕನಸನ್ನು ಹೊಂದಿರುತ್ತಾರೆ. ಆದರೆ ಕೆಲವು ದಂಪತಿಗಳಿಗೆ ಮಕ್ಕಳನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಇರಬಹುದು. ಅದಕ್ಕೆ ಕಾರಣ ಅನಿರ್ದಿಷ್ಟ ಆಹಾರ ಸೇವನೆ, ಮಹಿಳೆಯರಲ್ಲಿ ಅಥವಾ ಪುರುಷರಲ್ಲಿ ಇರುವ ವೈಜ್ಞಾನಿಕ ದೋಷಗಳು ಆಗಿರಬಹುದು. ಇನ್ನೂ ಕೆಲವೊಮ್ಮೆ ವ್ಯಕ್ತಿಗಳಿಗೆ ಇರುವ ಧೂಮಪಾನ ಹಾಗೂ ಮದ್ಯಪಾನ ಸೇವನೆಯ ಪ್ರಭಾವ ಇರಬಹುದು.

Having Sex Twice-in-an-Hour,Chances of Getting Pregnant!

ಸಂಭೋಗ ಎನ್ನುವುದು ನೈಸರ್ಗಿಕ ಕ್ರಿಯೆ. ಆದರೆ ಇದು ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಅವಲಂಬಿಸಿರುತ್ತದೆ. ಇನ್ನು ಅನಾರೋಗ್ಯದಲ್ಲಿ ಇರುವಾಗ ಕೈಗೊಳ್ಳುವ ಸಂಭೋಗ ಅಥವಾ ಸೆಕ್ಸ್ ನಿಂದಾಗಿ ಮಗುವಿನ ಆರೋಗ್ಯವೂ ಹದಗೆಟ್ಟಿರುತ್ತದೆ. ಹಾಗಾಗಿ ಮಗುವನ್ನು ಪಡೆದುಕೊಳ್ಳಬೇಕು ಎನ್ನುವ ಆಶಯ ಹೊಂದಿರುವ ದಂಪತಿಗಳು ತಮ್ಮ ಆರೋಗ್ಯ ಹಾಗೂ ಜೀವನ ಶೈಲಿಯ ಬಗ್ಗೆಯೂ ಸೂಕ್ತ ತಿಳುವಳಿಕೆ ಹಾಗೂ ಕ್ರಮವನ್ನು ಕೈಗೊಳ್ಳಬೇಕಾಗುವುದು.

ಅಧ್ಯಯನದ ಪ್ರಕಾರ

ಅಧ್ಯಯನದ ಪ್ರಕಾರ

ಇತ್ತೀಚೆಗೆ ಮಗುವನ್ನು ಪಡೆದುಕೊಳ್ಳಲು ವೈಜ್ಞಾನಿಕ ಕ್ಷೇತ್ರದಲ್ಲಿ ಅನೇಕ ಸಂಶೋಧನೆಯನ್ನು ಕೈಗೊಂಡಿದ್ದಾರೆ. ಅದಕ್ಕೆ ಅನುಗುಣವಾಗಿ ಕೆಲವು ಅಧ್ಯಯನದಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು ಎನ್ನುವುದು ಸಾಭೀತಾಗಿವೆ. ಅಂತಹದ್ದೇ ಒಂದು ಸಂಶೋಧನೆ ಹಾಗೂ ಅಧ್ಯಯನವು ಮಕ್ಕಳನ್ನು ಹಂಬಲಿಸುವ ದಂಪತಿಗಳಿಗೆ ಸಂತಸದ ಸುದ್ದಿಯನ್ನು ನೀಡಲಿದೆ.

Most Read: ಮಹಿಳೆಯರು ಸೆಕ್ಸ್ ಬಳಿಕ, ಗುಪ್ತಾಂಗದ ಆರೋಗ್ಯಕ್ಕಾಗಿ ಮಾಡಲೇಬೇಕಾದ ಕಾರ್ಯಗಳು

ಮಿಡ್ಲ್‍ಸೆಕ್ಸ್ ಆಸ್ಪತ್ರೆಯೊಂದು ಕೈಗೊಂಡ ಸಂಶೋಧನೆಯ ಪ್ರಕಾರ

ಮಿಡ್ಲ್‍ಸೆಕ್ಸ್ ಆಸ್ಪತ್ರೆಯೊಂದು ಕೈಗೊಂಡ ಸಂಶೋಧನೆಯ ಪ್ರಕಾರ

ಹೌದು, ನಾರ್ತ್ ಮಿಡ್ಲ್‍ಸೆಕ್ಸ್ ಆಸ್ಪತ್ರೆಯೊಂದು ಕೈಗೊಂಡ ಸಂಶೋಧನೆಯ ಪ್ರಕಾರ "ಒಂದು ಗಂಟೆಯ ಒಳಗೆ ಎರಡು ಬಾರಿ ಸಂಭೋಗ ಹೊಂದುವುದರಿಂದ ಮಹಿಳೆ ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚೆಂದು ದೃಢಪಡಿಸಿದೆ". ಒಂದು ಗಂಟೆಯೊಳಗೆ ಎರಡು ಬಾರಿ ಸಂಭೋಗ ನಡೆಸುವುದು ವ್ಯಕ್ತಿಗೆ ಮೂರು ಪಟ್ಟು ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾಗುವುದು. ಇತ್ತೀಚೆಗೆ ಯುರೋಪಿಯನ್ ಹೆಲ್ತ್ ಅಂಡ್ ಕೇರ್ ಎಕ್ಸಲೆನ್ಸ್ ಸಂಸ್ಥೆಯು ಈ ಅಧ್ಯಯನವನ್ನು ಪ್ರಸ್ತುತಪಡಿಸಿದೆ. ಇವರು ಹೇಳುವ ಪ್ರಕಾರ ಒಂದು ಗಂಟೆಯೊಳಗೆ ಎರಡು ಬಾರಿ ಕೈಗೊಳ್ಳುವ ಸಂಭೋಗ ಕ್ರಿಯೆಯು ಗರ್ಭಧಾರಣೆಗೆ ಸಹಾಯ ಮಾಡುವುದು.

ಈ ಅಧ್ಯಯನಕ್ಕೆ 73 ಜೋಡಿಗಳನ್ನು ಒಳಪಡಿಸಲಾಗಿತ್ತು!

ಈ ಅಧ್ಯಯನಕ್ಕೆ 73 ಜೋಡಿಗಳನ್ನು ಒಳಪಡಿಸಲಾಗಿತ್ತು!

ಈ ಅಧ್ಯಯನಕ್ಕೆ ಸುಮಾರು 73 ಜೋಡಿಗಳನ್ನು ಒಳಪಡಿಸಲಾಗಿತ್ತು. ಈ ಅಧ್ಯಯನದ ಪ್ರಕಾರ ವೀರ್ಯಾಣುಗಳು ಗರ್ಭಾಶಯದ ಒಳಗೆ ಚುಚ್ಚು ಮದ್ದಿನಂತೆ ನೇರವಾಗಿ ಪ್ರವೇಶ ಪಡೆಯುತ್ತವೆ ಎನ್ನಲಾಗುವುದು. ಎರಡು ಗುಂಪನ್ನಾಗಿ ಮಾಡಿ ನಡೆಸಿದ ಈ ಸಂಶೋಧನೆಯಲ್ಲಿ ಒಂದು ಗಂಟೆಯೊಳಗೆ ಎರಡು ಬಾರಿ ಸಂಭೋಗ ನಡೆಸಿದ ಗುಂಪುನವರಲ್ಲಿ ಶೇ.20 ಕ್ಕಿಂತಲೂ ಹೆಚ್ಚು ಮಹಿಳೆಯರು ಗರ್ಭಿಣಿಯರಾಗಿದ್ದಾರೆ ಎನ್ನುವುದನ್ನು ಕಂಡುಕೊಂಡರು. ಈ ಫಲವಂತಿಕೆಯ ವಿಧಾನವನ್ನು ಅನುಸರಿಸಿದರೆ ಗರ್ಭಧಾರಣೆಯ ಯಶಸ್ಸಿನ ಫಲಿತಾಂಶವು ಮೂರುಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳಲಾಗುವುದು.

ನೈಸರ್ಗಿಕವಾಗಿ ಮಗುವನ್ನು ಪಡೆದುಕೊಳ್ಳುವ ದಂಪತಿಗಳಿಗೆ ಇದು ಸಹಕಾರಿ

ನೈಸರ್ಗಿಕವಾಗಿ ಮಗುವನ್ನು ಪಡೆದುಕೊಳ್ಳುವ ದಂಪತಿಗಳಿಗೆ ಇದು ಸಹಕಾರಿ

ಇದು ತುಲನಾತ್ಮಕವಾಗಿ ಸಣ್ಣ ಅಧ್ಯಯನವಾಗಿದ್ದರೂ, ಇದು ಒಂದು ದೊಡ್ಡ ಹೆಜ್ಜೆಯೆಂದು ಪರಿಗಣಿಸಲಾಗಿದೆ. ಇದು ಗರ್ಭಾವಸ್ಥೆಯ ದರಗಳಿಗೆ ಒಂದು ಪ್ರಮುಖವಾದ ವ್ಯತ್ಯಾಸವನ್ನುಂಟುಮಾಡಬಹುದು. ನೈಸರ್ಗಿಕವಾಗಿ ಮಗುವನ್ನು ಪಡೆದುಕೊಳ್ಳುವ ದಂಪತಿಗಳಿಗೆ ಇದೊಂದು ಅತ್ಯುತ್ತಮವಾದ ವಿಧಾನವಾಗಿದೆ. ಸಂಸ್ಥೆ ಕೈಗೊಂಡಿರುವ ಅಧ್ಯಯನದಲ್ಲಿ ಮಹಿಳೆಯರು ಫಲವತ್ತತೆಯ ಚಕ್ರಗಳಿಗೆ ಉತ್ತೇಜನ ನೀಡುವ ಔಷಧವನ್ನು ಸ್ವೀಕರಿಸಿದ್ದರೇ ಎನ್ನುವುದನ್ನು ಗಮನಿಸಬೇಕಾದ ಸಂಗತಿ ಅಷ್ಟೆ.

Most Read: ಪರಾಕಾಷ್ಠೆಯಷ್ಟೇ ಸೆಕ್ಸ್ ಸುಖ ನೀಡುವ ಇತರ ಕೆಲಸಗಳು!

ವೀರ್ಯವನ್ನು ಹೆಚ್ಚಿಸಿಕೊಳ್ಳಲು

ವೀರ್ಯವನ್ನು ಹೆಚ್ಚಿಸಿಕೊಳ್ಳಲು

ವೀರ್ಯವನ್ನು ಹೆಚ್ಚಿಸಿಕೊಳ್ಳಲು ಪುರುಷರು ಸಂಭೋಗವನ್ನು ನಡೆಸದೆ ಇರಬೇಕೆಂದೇನೂ ಇಲ್ಲ. ಹಸ್ತ ಮೈಥುನ, ಸಲಿಂಗಕಾಮ, ಅನುಚಿತ ಚಟಗಳಿಂದ ದೂರ ಇರಬೇಕು. ಆಗ ಪುರುಷರಲ್ಲಿ ಆರೋಗ್ಯಕರ ವೀರ್ಯಗಳ ಉತ್ಪತ್ತಿಯಾಗುವುದು. ಅಲ್ಲದೆ ವೀರ್ಯಗಳ ಎಣಿಕೆಯಲ್ಲೂ ಹೆಚ್ಚಾಗುತ್ತವೆ. ಮಗುವನ್ನು ಹೊಂದಲು ವೀರ್ಯದ ಗುಣಮಟ್ಟ, ಮಹಿಳೆಯರ ಋತುಚಕ್ರಗಳು, ಅಂಡಾಣು ಬಿಡುಗಡೆ, ಪುರುಷರ ಹಾಗೂ ಮಹಿಳೆಯರ ಆರೋಗ್ಯ ಸ್ಥಿತಿ ಎಲ್ಲವೂ ಗಮನಾರ್ಹವಾದದ್ದು. ಇವೆಲ್ಲವೂ ಉತ್ತಮವಾಗಿದ್ದು, ಒಂದು ಗಂಟೆಯೊಳಗೆ ಸಂಭೋಗ ನಡೆಸಿದರೆ ಗರ್ಭಿಣಿಯರಾಗುವ ಸಾಧ್ಯತೆಗಳು ಹೆಚ್ಚೆಂದು ಹೇಳಲಾಗುವುದು.

English summary

Having Sex Twice-in-an-Hour,Chances of Getting Pregnant!

New research from North Middlesex Hospital suggests that having sex twice within an hour could triple a man's chances of becoming a father. The study, which was recently presented at the European Health and Care Excellence, suggests that it's the second time that could help another line appear on the pregnancy test.
X
Desktop Bottom Promotion