For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಕಾಡುವ ಯೋನಿ ವಿಸರ್ಜನೆ ಸಮಸ್ಯೆ- ಇದಕ್ಕೆ ಕಾರಣವೇನು?

|

ಯೋನಿ ವಿಸರ್ಜನೆ ಅರ್ಥಾತ್ ಬಿಳಿಸೆರಗು ಎಂದರೆ ಮಹಿಳೆಯರ ಜನನಾಂಗದಿಂದ ಆಗಾಗ ಸ್ರವಿಸುವ ತಿಳಿ ಬಣ್ಣದ ಹಾಗೂ ವಾಸನಾರಹಿತ ದ್ರವವಾಗಿದ್ದು ಇದು ದೇಹದ ಒಂದು ರೋಗನಿರೋಧಕ ವ್ಯವಸ್ಥೆಯ ಅಂಗವಾಗಿದೆ. ಗರ್ಭಾಶಯ ಹಾಗೂ ಗರ್ಭನಾಳದ ಒಳಭಾಗದ ಪದರಗಳ ಹಳೆಯ ಜೀವಕೋಶಗಳು ಸತ್ತು ಕಳಚಿ ಹೊಸ ಜೀವಕೋಶಗಳಿಗೆ ಜಾಗಮಾಡಿಕೊಟ್ಟ ಬಳಿಕ ಈ ಜೀವಕೋಶಗಳು ದೇಹದಿಂದ ಹೊರಹೋಗುವುದೇ ಬಿಳಿಸೆರಗು.

ಅಲ್ಲದೇ ಯೋನಿ ಮತ್ತು ಗರ್ಭನಾಳದ ಒಳಭಾಗದಲ್ಲಿ ಎದುರಾಗುವ ಸೋಂಕುಕಾರಕ ಬ್ಯಾಕ್ಟೀರಿಯಾಗಳೂ ಈ ಮೂಲಕ ದೇಹದಿಂದ ವಿಸರ್ಜನೆಗೊಳ್ಳುತ್ತವೆ. ಇತರ ಸಮಯದಲ್ಲಿ ಸಾಮಾನ್ಯ ಪ್ರಮಾಣದಲ್ಲಿರುವ ಈ ಸ್ರಾವ ಗರ್ಭಾವಸ್ಥೆಯಲ್ಲಿ ತುಸು ಹೆಚ್ಚೇ ಪ್ರಮಾಣದಲ್ಲಿ ಸ್ರವಿಸತೊಡಗುತ್ತದೆ. ಈ ಬದಲಾವಣೆಯಿಂದ ಗರ್ಭಿಣಿ ಕೊಂಚ ಗಾಬರಿಯಾಗುವುದು ಸಹಜವಾದರೂ ಇದರಿಂದೇನೋ ತೊಂದರೆಯಿಲ್ಲ, ಬದಲಿಗೆ ಒಳ್ಳೆಯದೇ ಹೌದು.

ಎಲ್ಲಿಯವರೆಗೆ ಈ ಸ್ರಾವದಲ್ಲಿ ರಕ್ತ ಮಿಶ್ರಿತವಾಗಿರುವುದು ಕಂಡುಬರುವುದಿಲ್ಲವೋ ಅಲ್ಲಿಯವರೆಗೆ ಆತಂಕಕ್ಕೆ ಕಾರಣವಿಲ್ಲ. ಬಿಳಿಸೆರಗಿನ ಬಗ್ಗೆ ಇಂದಿನ ಲೇಖನದಲ್ಲಿ ಕೆಲವು ಅಮೂಲ್ಯ ಮಾಹಿತಿಗಳನ್ನು ಒದಗಿಸಲಾಗಿದ್ದು ಪ್ರತಿ ಗರ್ಭಿಣಿಯೂ ಅರಿತಿರುವುದು ಅಗತ್ಯವಾಗಿದೆ. ಗರ್ಭಾವಸ್ಥೆಯಲ್ಲಿ ಎದುರಾಗುವ ಹಲವಾರು ಅನಿರೀಕ್ಷಿತ ಬದಲಾವಣೆಗಳಲ್ಲಿ ಇದೂ ಒಂದಾಗಿದ್ದು ಈ ಲೇಖನದ ಪ್ರತಿ ಮಾಹಿತಿಯನ್ನೂ ಓದಿ ಆತಂಕಗಳನ್ನೆಲ್ಲಾ ನಿವಾರಿಸಿಕೊಳ್ಳಿ.

ಗರ್ಭಾವಸ್ಥೆಯ ಪ್ರಾರಂಭಿಕ ಹಂತದ ಸೂಚನೆ

ಗರ್ಭಾವಸ್ಥೆಯ ಪ್ರಾರಂಭಿಕ ಹಂತದ ಸೂಚನೆ

ಒಂದು ವೇಳೆ ಇತರ ಸಮಯದ ಸ್ರಾವಕ್ಕೂ ಕೊಂಚ ಹೆಚ್ಚೇ ಪ್ರಮಾಣದ ಸ್ರಾವ ಕಂಡುಬಂದರೆ ಇದು ಗರ್ಭ ನಿಂತಿರುವ ಮೊದಲ ಸೂಚನೆಯಾಗಿದೆ. ಏಕೆಂದರೆ ಗರ್ಭಾಂಕುರಗೊಂಡ ದಿನದಿಂದಲೇ ಮಹಿಳೆಯ ದೇಹದಲ್ಲಿ ಈಸ್ಟ್ರೋಜೆನ್ ಎಂಬ ರಸದೂತದ ಸ್ರಾವ ಹೆಚ್ಚಾಗುತ್ತದೆ ಹಾಗೂ ಇದು ಯೋನಿಭಾಗದಲ್ಲಿ ಹೆಚ್ಚಿನ ಸ್ರಾವಕ್ಕೆ ಕಾರಣವಾಗುತ್ತದೆ.

ಹೆಚ್ಚಳವಾದ ರಕ್ತ ಪರಿಚಲನೆ

ಹೆಚ್ಚಳವಾದ ರಕ್ತ ಪರಿಚಲನೆ

ಗರ್ಭಾವಸ್ಥೆಯಲ್ಲಿ ಮಹಿಳೆಯ ಜನನಾಂಗಗಳಲ್ಲಿ ಹೆಚ್ಚಿನ ಪ್ರಮಾಣದ ರಕ್ತಪರಿಚಲನೆ ಕಂಡುಬರುತ್ತದೆ. ಬಹುತೇಕ ದ್ವಿಗುಣಗೊಳ್ಳುತ್ತದೆ. ಪರಿಣಾಮವಾಗಿ ಈ ಭಾಗದಿಂದ ಸ್ರಾವವೂ ದ್ವಿಗುಣಗೊಳ್ಳುತ್ತದೆ.

ರಸದೂತದ ಪ್ರಭಾವ

ರಸದೂತದ ಪ್ರಭಾವ

ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹ ಹಲವಾರು ಬದಲಾವಣೆಗೆ ಒಳಗಾಗುತ್ತದೆ ಹಾಗೂ ಇದಕ್ಕಾಗಿ ಹಲವಾರು ಬಗೆಯ ರಸದೂತಗಳೂ ಸ್ರವಿಸಲ್ಪಡುತ್ತವೆ. ವಿಶೇಷವಾಗಿ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಎಂಬ ರಸದೂತಗಳು ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸಲ್ಪಡುತ್ತವೆ ಹಾಗೂ ಪರಿಣಾಮವಾಗಿ ಯೋನಿಯ ಸ್ರಾವವೂ ಹೆಚ್ಚಾಗುತ್ತದೆ.

ಹೆರಿಗೆಯ ಸಮಯ ಬಂದಿದೆ ಎಂದು ತಿಳಿಸುವ ಸೂಚನೆ

ಹೆರಿಗೆಯ ಸಮಯ ಬಂದಿದೆ ಎಂದು ತಿಳಿಸುವ ಸೂಚನೆ

ಗರ್ಭಾವಸ್ಥೆಯ ಎಲ್ಲಾ ತಿಂಗಳುಗಳಲ್ಲಿ ಈ ಸ್ರಾವ ಹೆಚ್ಚೇ ಇದ್ದರೂ ಹೆರಿಗೆಯ ಸಮಯ ಆಗಮಿಸುತ್ತಿದ್ದಂತೆಯೇ ಈ ಪ್ರಮಾಣ ಅತಿರೇಕಕ್ಕೇರುತ್ತದೆ. ಒಂದು ವೇಳೆ ಒಮ್ಮೆಲೇ ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಸ್ರಾವ ಕಂಡುಬಂದರೆ ಇದು ಹೆರಿಗೆಯ ಸಮಯ ಎಂದು ತಿಳಿದುಕೊಳ್ಳಬೇಕು. ಒಂದು ವೇಳೆ ಇದರೊಂದಿಗೆ ರಕ್ತಮಿಶ್ರಣವಾಗಿರುವುದು ಕಂಡುಬಂದರೆ ಇದು ಹೆರಿಗೆ ಪೂರ್ವದ ಸೂಚನೆಯಾಗಿದ್ದು ತಕ್ಷಣವೇ ಹೆರಿಗೆಗಾಗಿ ಕರೆದೊಯ್ಯಬೇಕು.

ಸ್ನಿಗ್ಧತೆಯ ತಡೆ

ಸ್ನಿಗ್ಧತೆಯ ತಡೆ

ಗರ್ಭಾವಸ್ಥೆಯಲ್ಲಿ ಗರ್ಭಾಶಯದೊಳಗಿನ ಶಿಶುವನ್ನು ಆವರಿಸಿರುವ ದ್ರವ ಹೊರಬರದಂತೆ ಗರ್ಭಕಂಠ ಒಂದು ಬಗೆಯ ಸ್ನಿಗ್ದ ದ್ರವ (The Mucus Plug) ಬಿರಟೆಯಂತೆ ತಡೆದು ಹಿಡಿದಿರುತ್ತದೆ. ಈ ದ್ರವ ಮೊಟ್ಟೆಯ ಬಿಳಿಭಾಗದಂತೆ ತೋರುತ್ತದೆ. ಇದರಲ್ಲಿಯೂ ಬಿಳಿಸೆರಗಿನಲ್ಲಿ ಕಂಡುಬರುವ ಅಂಶಗಳೇ ಕಂಡುಬರುತ್ತವೆ. ಕೆಲವೊಮ್ಮೆ ಈ ಭಾಗವೂ ಕೊಂಚ ಸಡಿಲವಾಗಿ ಕರಗಿ ಕೊಂಚ ಪ್ರಮಾಣ ಹೊರಬಂದು ಇತರ ದ್ರವದೊಂದಿಗೆ ಕರಗುವ ಮೂಲಕ ಈ ಸ್ರಾವದ ಪ್ರಮಾಣವೂ ಹೆಚ್ಚುತ್ತದೆ.

ರಕ್ತಸ್ರಾವದ ಸಾಧ್ಯತೆ

ರಕ್ತಸ್ರಾವದ ಸಾಧ್ಯತೆ

ಗರ್ಭಾಶಯದಲ್ಲಿ ಶಿಶುವಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ರಕ್ತಸ್ರಾವವಾಗುವುದು ಸಾಮಾನ್ಯವಾಗಿದೆ. ವಿಶೇಷವಾಗಿ ಹೆರಿಗೆಗೂ ಮುನ್ನ ರಕ್ತಭರಿತ ಸ್ರಾವ ತೀವ್ರವಾಗಿ ಹೆಚ್ಚಾಗಿರುವುದು ಕಂಡುಬರುತ್ತದೆ. ಇದರ ಹೊರತಾಗಿ ಗರ್ಭಾವಸ್ಥೆಯಲ್ಲಿ ರಕ್ತದ ಸ್ರಾವ ಹೆಚ್ಚಿನ ಪ್ರಮಾಣದಲ್ಲಿದ್ದರೆ ಇದನ್ನು ಖಂಡಿತವಾಗಿಯೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ವೈದ್ಯರನ್ನು ಕಾಣುವುದು ಅವಶ್ಯವಾಗಿದ್ದು ಮುಂದಿನ ಕ್ರಮಗಳನ್ನು ನುರಿತ ವೈದ್ಯರೇ ಕೈಗೊಳ್ಳುತ್ತಾರೆ.

ಗರ್ಭಾವಸ್ಥೆಯಲ್ಲಿ ಎದುರಾಗುವ ಇತರ ತೊಂದರೆ-ಒಳಮುಖ ಬೆಳೆದ ರೋಮಗಳು

ಗರ್ಭಾವಸ್ಥೆಯಲ್ಲಿ ಎದುರಾಗುವ ಇತರ ತೊಂದರೆ-ಒಳಮುಖ ಬೆಳೆದ ರೋಮಗಳು

ಈಸ್ಟ್ರೋಜೆನ್ ಪ್ರಮಾಣ ಹೆಚ್ಚಾದಷ್ಟೂ ತಲೆಗೂದಲೂ ದಟ್ಟವಾಗುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಸ್ರವಿಸುವ ಇತರ ರಸದೂತಗಳು ವಿಶೇಷವಾಗಿ ಜನನಾಂಗದ ಭಾಗದ ರೋಮಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಅನಗತ್ಯ ರೋಮ ನಿವಾರಣಾ ಕ್ರೀಮುಗಳು, ವ್ಯಾಕ್ಸಿಂಗ್ ಅಥವಾ ಶೇವಿಂಗ್ ಕ್ರಮದಿಂದಾಗಿ ಈ ರೋಮಗಳನ್ನು ಹಿಂದಿನಷ್ಟು ಸುಲಭವಾಗಿ ನಿವಾರಿಸಲು ಸಾಧ್ಯವಿಲ್ಲ. ಏಕೆಂದರೆ ಈ ಅವಧಿಯಲ್ಲಿ ಈ ಭಾಗದ ರೋಮಗಳು ಒಳಮುಖವಾಗಿ ಬೆಳೆಯತೊಡಗುತ್ತವೆ. ಈ ಅವಧಿಯಲ್ಲಿ ತ್ವಚೆಯ ಅಡಿಯಲ್ಲಿರುವ ಸ್ವೇದಗ್ರಂಥಿಗಳ ತುದಿ ಬೆವರು ಮತ್ತು ಸತ್ತ ಜೀವಕೋಶಗಳಿಂದ ಮುಚ್ಚಿಹೋಗುತ್ತದೆ ಹಾಗೂ ಕೂದಲಿನ ತುದಿ ಹೊರಬರದಂತೆ ತಡೆಯುತ್ತದೆ. ಕೂದಲಬುಡದಿಂದ ಕೂದಲು ಬೆಳೆಯುತ್ತಾ ದೂಡುತ್ತಿದ್ದಂತೆಯೇ ಒಳಮುಖರೋಮ ಹೊರಗಿಣಿಕತೊಡಗುತ್ತದೆ. ಈ ಬೆಳವಣಿಗೆಗೆ ಪ್ರೊಜೆಸ್ಟರಾನ್ ರಸದೂತ ಪ್ರಮುಖ ಕಾರಣವಾಗಿದೆ ಹಾಗೂ ಗರ್ಭಾವಸ್ಥೆಯಲ್ಲಿ ಏರಿರುವ ಜೀವರಾಸಾಯನಿಕ ಕ್ರಿಯೆಯೂ ನೆರವಾಗುತ್ತದೆ. ಒಂದು ವೇಳೆ ಈ ರೋಮಗಳನ್ನು ನಿವಾರಿಸಲು ಬ್ರೆಜಿಲಿಯನ್ ವ್ಯಾಕ್ಸ್ ಅಥವಾ ಇತರ ಕ್ರಮಗಳನ್ನು ಕೈಗೊಂದರೆ ಇದು ಅತೀವ ನೋವಿನಿಂದ ಕೂಡಿರುತ್ತದೆ. ಹಾಗಾಗಿ ಹೆರಿಗೆಯಾಗಿ ಸಹಜ ಸ್ಥಿತಿಗೆ ಮರಳುವವರೆಗೂ ಇವುಗಳ ತಂಟೆಗೆ ಹೋಗದಿರುವುದೇ ವಾಸಿ.

 ರಕ್ತ ವಿಸರ್ಜನೆ

ರಕ್ತ ವಿಸರ್ಜನೆ

ಭ್ರೂಣದ ಸೇರುವಿಕೆಯ ಸಂದರ್ಭದಲ್ಲಿ ರಕ್ತ ವಿಸರ್ಜನೆ ಸಾಮಾನ್ಯವಾಗಿರುತ್ತದೆ. ಗರ್ಭಾಸ್ಥೆಯ ಸಮಯದಲ್ಲಿ ಉಂಟಾಗುವ ಯಾವುದೇ ರಕ್ತ ಸ್ರಾವ ಸಾಮಾನ್ಯವಾಗಿರುವುದಿಲ್ಲ. ನೀವು ನಿಮ್ಮ ವೈದ್ಯರನ್ನು ಕೂಡಲೇ ಸಂದರ್ಶಿಸುವುದು ಅಗತ್ಯವಾಗಿರುತ್ತದೆ. ನೀವು ಗರ್ಭಿಣಿಯಾಗಿರುವಾಗ ನಿಮ್ಮ ತಲೆಯಲ್ಲಿ ನೀವು ಅತ್ಯವಶ್ಯಕವಾಗಿ ಇರಿಸಿಕೊಳ್ಳಬೇಕಾದ ಅಗತ್ಯ ಮಾಹಿತಿಗಳು ಇದಾಗಿದೆ. ಅಲ್ಲದೆ ಕೆಲವೊಮ್ಮೆ ಗರ್ಭಾಸ್ಥೆಯಲ್ಲಿ ಲೋಳೆ ಅಂಶಗಳು ಗರ್ಭಕೋಶಗಳನ್ನು ಸೀಲ್ ಮಾಡುವುದರಿಂದ ಬಿಳಿ ಸ್ರವಿಸುವಿಕೆಯ ಅಂಶಗಳೊಂದಿಗೆ ಇದು ರಚನೆಗೊಂಡಿರುತ್ತದೆ. ಅದಾಗ್ಯೂ ಇದು ನೋಡಲು ಭಿನ್ನವಾಗಿರುತ್ತದೆ. ಈ ಲೋಳೆ ಅಂಶ ನೋಡಲು ಮೊಟ್ಟೆಯ ಬಿಳಿ ಬಣ್ಣದಂತಿರುತ್ತದೆ. ಗರ್ಭಕಂಠ ದಪ್ಪ ಮತ್ತು ಸಡಿಲಗೊಂಡಾಗ ನಿಮ್ಮ ಮ್ಯೂಕಸ್ ಅಂಶಗಳನ್ನು ನೀವು ಕಳೆದುಕೊಳ್ಳಬಹುದು.

English summary

Facts about vaginal discharge in pregnancy

Vaginal discharge is the white coloured normally odourless liquid that comes out of your vagina on a regular basis. It contains the old crumbling cells from the cervix and uterine walls. It also contains bacteria that grows in the vagina. But during pregnancy, vaginal discharge is suddenly increased. There is nothing to be alarmed about this change. Until and unless you see blood discharge during pregnancy, you need not panic. Here are some very important facts about vaginal discharge during pregnancy that you might want to know. To prevent any surprises during your pregnancy, read up all you need to know.
X
Desktop Bottom Promotion