For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗಿರುವಾಗ ಸೆಕ್ಸ್: ಇಂತಹ ಸಮಯದಲ್ಲಿ ಕೇಳಲಾಗುವ ಸಾಮಾನ್ಯ ಪ್ರಶ್ನೆಗಳು

|

ಮಹಿಳೆ ಗರ್ಭ ಧರಿಸಿದ ಅವಧಿಯಲ್ಲಿ ಆಕೆ ಸೆಕ್ಸ್ ಕ್ರಿಯೆಯಲ್ಲಿ ತೊಡಗಬಹುದಾ? ಇದರಿಂದ ಏನಾದರೂ ಸಮಸ್ಯೆಗಳು ಆಗಬಹುದಾ? ಈ ರೀತಿಯ ಹಲವಾರು ಪ್ರಶ್ನೆಗಳು ತಾಯಿಯಾಗಲಿರುವ ಮಹಿಳೆಗೆ ಕಾಡುತ್ತಿರುತ್ತವೆ.

ಗರ್ಭಿಣಿಯಾಗಿರುವಾಗ ಸೆಕ್ಸ್ ಮಾಡಿದಲ್ಲಿ ಹೊಟ್ಟೆಯೊಳಗೆ ಬೆಳೆಯುತ್ತಿರುವ ಮಗುವಿಗೆ ಏನಾದರೂ ತೊಂದರೆಯಾಗಬಹುದು ಎಂಬ ಕಾರಣದಿಂದ ಬಹುತೇಕ ಮಹಿಳೆಯರು ಗರ್ಭಾವಧಿಯಲ್ಲಿ ಸೆಕ್ಸ್ ನಡೆಸಲು ಹಿಂಜರಿಯುತ್ತಾರೆ. ಆದರೆ ಗರ್ಭಾವಧಿಯಲ್ಲಿಯೂ ಸೆಕ್ಸ್ ಮಾಡುವುದು ಸಹಜವಾಗಿದೆ ಎಂಬುದು ಗೊತ್ತಿರಲಿ.

Common Questions About Sex During Pregnancy

ಮಿಲನ ಕ್ರಿಯೆಯಿಂದ ಹೊಟ್ಟೆಯಲ್ಲಿನ ಮಗುವಿಗೆ ಯಾವುದೇ ಹಾನಿಯಾಗುವುದಿಲ್ಲ. ಆದರೆ ಗರ್ಭಾವಧಿಯ ಕೊನೆಯ ದಿನಗಳಲ್ಲಿ ಸೆಕ್ಸ್ ಮಾಡದಂತೆ ಕೆಲ ಬಾರಿ ವೈದ್ಯರು ಸೂಚಿಸುತ್ತಾರೆ. ವೀರ್‍ಯದಲ್ಲಿರುವ ಹಾರ್ಮೋನಗಳಿಂದ ಗರ್ಭಾಶಯದ ಸಂಕೋಚನ ಆರಂಭವಾಗಬಹುದು ಎಂಬ ಕಾರಣದಿಂದ ಈ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ವೈದ್ಯರು ಸೂಚಿಸಿದ ಸಂದರ್ಭ ಅಥವಾ ನಿಮಗೆ ಯಾವುದೇ ಅನಾರೋಗ್ಯ ಕಾಡುತ್ತಿರುವ ಸಂದರ್ಭಗಳನ್ನು ಬಿಟ್ಟರೆ ಗರ್ಭ ಧರಿಸಿದ ಅವಧಿಯಲ್ಲಿ ಸಹಜ ಸೆಕ್ಸ್ ಜೀವನ ನಡೆಸಲು ಯಾವುದೇ ತೊಂದರೆಗಳಿಲ್ಲ. ಆದರೆ ಅದಕ್ಕೂ ಮುನ್ನ ಈ ಕೆಳಗೆ ತಿಳಿಸಲಾದ ಕೆಲ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅಗತ್ಯ.

ಗರ್ಭ ಧರಿಸಿದಾಗ ಸೆಕ್ಸ್ ಅನುಭವ ಬೇರೆಯಾಗಿರುತ್ತದೆಯೆ?

ಗರ್ಭ ಧರಿಸಿದಾಗ ಸೆಕ್ಸ್ ಅನುಭವ ಬೇರೆಯಾಗಿರುತ್ತದೆಯೆ?

ಕೆಲ ದೈಹಿಕ ಬದಲಾವಣೆಗಳಿಂದಾಗಿ ಅನೇಕ ಮಹಿಳೆಯರಲ್ಲಿ ಗರ್ಭಾವಧಿಯ ಸೆಕ್ಸ್ ಅನುಭವ ತುಸು ಬೇರೆಯಾಗಿರುತ್ತದೆ. ದೇಹದ ಕೆಳಭಾಗದಲ್ಲಿ ರಕ್ತ ಪರಿಚಲನೆ ಹೆಚ್ಚಾಗಿರುವುದರಿಂದ ಗರ್ಭ ಧರಿಸಿದ ಮಹಿಳೆಗೆ ಸೆಕ್ಸ್‌ನ ಭಾವಾತಿರೇಕ ಹೆಚ್ಚಾಗಿರುವಂತೆ ಅನಿಸಬಹುದು. ಜೊತೆಗೆ ಕೆಲವರಲ್ಲಿ ಹೆಚ್ಚು ದ್ರವ ಸೋರಿಕೆಯಿಂದ ಹೆಚ್ಚು ಸುಖದ ಅನುಭವವವೂ ಆಗಬಹುದು. ಆದರೆ ಎಲ್ಲ ಮಹಿಳೆಯರಿಗೂ ಇದೇ ಅನುಭವ ಆಗುತ್ತದೆ ಎನ್ನುವಂತಿಲ್ಲ. ಕೆಲವರಲ್ಲಿ ಹಾರ್ಮೋನ್‌ಗಳ ವ್ಯತ್ಯಾಸದಿಂದ ಆಯಾಸವಾಗುವುದು ಅಥವಾ ಹೆಚ್ಚಿನ ರಕ್ತ ಪರಿಚಲನೆಯಿಂದ ಅಸೌಖ್ಯ ಹಾಗೂ ಕಿರಿಕಿರಿಯ ಭಾವನೆ ಉಂಟಾಗಬಹುದು.

ಗರ್ಭಧಾರಣೆಯಿಂದ ಕಾಮಾಸಕ್ತಿ ಕಡಿಮೆಯಾಗುತ್ತದೆಯೆ?

ಗರ್ಭಧಾರಣೆಯಿಂದ ಕಾಮಾಸಕ್ತಿ ಕಡಿಮೆಯಾಗುತ್ತದೆಯೆ?

ಗರ್ಭಧಾರಣೆಯ ಸಂದರ್ಭದಲ್ಲಿ ಎಲ್ಲ ಮಹಿಳೆಯರ ಆರೋಗ್ಯವೂ ಒಂದೇ ತೆರನಾಗಿರುವುದಿಲ್ಲ. ಆದರೆ ಹಾರ್ಮೋನ್‌ಗಳ ವ್ಯತ್ಯಾಸದಿಂದ ಕೆಲ ಮಹಿಳೆಯರಲ್ಲಿ ಕಾಮಾಸಕ್ತಿ ಕಡಿಮೆಯಾಗಬಹುದು. ಗರ್ಭಧಾರಣೆಯ ಮೊದಲ ಕೆಲ ತಿಂಗಳುಗಳಲ್ಲಿ ಆಯಾಸ, ವಾಕರಿಕೆ ಹಾಗೂ ಕಿರಿಕಿರಿಯ ಭಾವನೆಯಿಂದ ಸಹ ಸೆಕ್ಸ್‌ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಆದರೆ ಮೂರು ತಿಂಗಳು ಕಳೆದ ನಂತರ ಈ ಸಮಸ್ಯೆಗಳು ಕಡಿಮೆಯಾಗುವುದರಿಂದ ದೇಹದಲ್ಲಿ ಚೈತನ್ಯ ಮೂಡಿ ಮತ್ತೆ ಕಾಮಾಸಕ್ತಿ ಹೆಚ್ಚಾಗುತ್ತದೆ.

Most Read: ಗರ್ಭಿಣಿಯಾಗುವ ಸಾಧ್ಯತೆಯನ್ನು ಹೆಚ್ಚಿಸುವ ಅವಶ್ಯಕ ತೈಲಗಳು

ತಂದೆಯಾಗಲಿರುವವನ ಮೇಲೆ ಪರಿಣಾಮಗಳೇನು?

ತಂದೆಯಾಗಲಿರುವವನ ಮೇಲೆ ಪರಿಣಾಮಗಳೇನು?

ಪತ್ನಿಯ ಹೊಟ್ಟೆಯಲ್ಲಿರುವ ತನ್ನ ಮಗುವಿಗೆ ತನ್ನಿಂದ ಯಾವುದೇ ಸಮಸ್ಯೆ ಆಗಬಾರದು ಎಂದು ಪುರುಷ ಸಂಗಾತಿ ಬಯಸುತ್ತಾನೆ. ಹೀಗಾಗಿ ಗರ್ಭಿಣಿ ಪತ್ನಿಯೊಂದಿಗೆ ಸೆಕ್ಸ್ ನಡೆಸಲು ಆತ ಹಿಂದೇಟು ಹಾಕಬಹುದು. ಆದಾಗ್ಯೂ ಮಹಿಳೆಯು ದೈಹಿಕವಾಗಿ ಗುಂಡಗಾದಂತೆ ಆತನಿಗೆ ಆಕರ್ಷಣೆ ಹೆಚ್ಚಾಗುವ ಸಾಧ್ಯತೆಗಳೂ ಇವೆ. ಏನೇ ಆದರೂ ತಾಯಿಯಾಗುವವಳು ತನ್ನ ಸೆಕ್ಸ್ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಮಿಲನ ಕ್ರಿಯೆ ನಡೆಸುವುದು ಬೇಡ ಎಂದಾದಲ್ಲಿ ಬೇರೆ ಪರ್ಯಾಯ ವಿಧಾನಗಳ ಮೂಲಕ ರತಿ ಸುಖ ಪಡೆಯಲು ಯತ್ನಿಸಬಹುದು.

Most Read: ಬುದ್ಧಿವಂತ ಮಗು ಹುಟ್ಟಬೇಕೆ? ಗರ್ಭಾವಸ್ಥೆಯಲ್ಲಿ ಸೇವಿಸುವ ಆಹಾರಗಳ ಡಯಟ್ ಹೀಗಿರಲಿ

ಯಾವ ಭಂಗಿಗಳು ಸೂಕ್ತ?

ಯಾವ ಭಂಗಿಗಳು ಸೂಕ್ತ?

ಗರ್ಭಿಣಿಯ ಹೊಟ್ಟೆಯಲ್ಲಿ ಮಗು ಬೆಳೆಯಲಾರಂಭಿಸಿದಂತೆ ಸಹಜ ಭಂಗಿಯಲ್ಲಿ ಮಿಲನ ಕ್ರಿಯೆ ನಡೆಸುವುದು ಕಷ್ಟಕರವಾಗುತ್ತದೆ. ಇದರ ಬದಲು ಕೆಳಗೆ ತಿಳಿಸಲಾದ ಕೆಲ ಆರಾಮದಾಯಕ ಭಂಗಿಗಳನ್ನು ಬಳಸಬಹುದು.

ಸಂಗಾತಿ ಕುರ್ಚಿಯಲ್ಲಿ ಕುಳಿತಾಗ ಮಹಿಳೆ ಕಾಲು ಅಗಲಿಸಿದ ಭಂಗಿಯನ್ನು ಅನುಸರಿಬಹುದು.

ಹೊಟ್ಟೆಯ ಮೇಲೆ ಭಾರ ಬೀಳದಂತಿರಲು ಪುರುಷ ಅಂಗಾತ ಮಲಗಿದಾಗ ಆತನ ಮೇಲೆ ಕುಳಿತು ಮಿಲನ ಕ್ರಿಯೆ ನಡೆಸಬಹುದು. ಇದರಲ್ಲಿ ನಿಮಿರುವಿಕೆ ಹಾಗೂ ವೇಗಗಳೆರಡನ್ನೂ ನಿಯಂತ್ರಿಸಬಹುದು.

ಯಾವ ಭಂಗಿಗಳು ಸೂಕ್ತ?

ಯಾವ ಭಂಗಿಗಳು ಸೂಕ್ತ?

ಅತಿ ಆಳವಾಗಿ ನುಗ್ಗದಂತಿರಲು ಮಹಿಳೆ ಪಕ್ಕಕ್ಕೆ ವಾಲಿದಂತೆ ಮಲಗಿ, ಪಕ್ಕದಿಂದ ಸಂಗಾತಿಯು ಜೊತೆಯಾಗಬಹುದು. ಪಾದಗಳು ನೆಲಕ್ಕೆ ತಾಗುವಂತೆ ಮಂಚದ ಕೊನೆಯಲ್ಲಿ ಮಹಿಳೆ ಮಲಗಬೇಕು. ಈಗ ಸಂಗಾತಿಯು ನಿಂತ ಭಂಗಿಯಲ್ಲಿ ಮಿಲನ ಕ್ರಿಯೆ ನಡೆಸಬಹುದು. ಮೊದಲ ಮೂರು ತಿಂಗಳ ಅವಧಿಯ ನಂತರ ಬೆನ್ನ ಮೇಲೆ ಅಂಗಾತವಾಗಿ ಮಹಿಳೆ ಮಲಗಕೂಡದು ಹಾಗೂ ಮಿಲನ ಸಂದರ್ಭದಲ್ಲಿ ಒಂದು ಬದಿಗೆ ದಿಂಬು ಬಳಸುವುದು ಸೂಕ್ತ

English summary

Common Questions About Sex During Pregnancy

Pregnant women often don't want to have sex because they think that it may harm the baby inside the uterus, but sex is a normal part of pregnancy. (Intercourse movement or penetration doesn't harm the baby, but in the final weeks of pregnancy many doctors suggest avoiding sex as a safety precaution, since hormones present in semen may stimulate contractions.) Other than that, there's no reason to make changes in your sex life during pregnancy, unless your specialist advises, or you have a medical condition.
X
Desktop Bottom Promotion