For Quick Alerts
ALLOW NOTIFICATIONS  
For Daily Alerts

ಗರ್ಭಿಣಿ ಮಹಿಳೆಯರ ಒತ್ತಡ ನಿವಾರಣೆಗೆ ಯೋಗಾಸನಗಳು

By Manu
|

ಪ್ರತೀ ವರ್ಷ ಜೂನ್ 21ರಂದು ವಿಶ್ವ ಯೋಗ ದಿನವನ್ನು ಆಚರಿಸಲ್ಪಡುತ್ತಿದೆ. ಭಾರತದಲ್ಲಿ ಹುಟ್ಟಿರುವಂತಹ ಯೋಗವು ಈಗ ವಿದೇಶದಲ್ಲಿ ಸದ್ದು ಮಾಡಿ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಯೋಗವು ಹಲವಾರು ರೋಗಗಳು ಬರದಂತೆ ನಡೆಯುತ್ತದೆ ಮತ್ತು ರೋಗಿಗಳನ್ನು ಕೂಡ ಆರೋಗ್ಯವಂತರನ್ನಾಗಿ ಮಾಡುವುದು. ಯೋಗವನ್ನು ಗರ್ಭಿಣಿ ಮಹಿಳೆಯರು ಮಾಡಬಹುದೇ ಎನ್ನುವ ಪ್ರಶ್ನೆ ಪ್ರತಿಯೊಬ್ಬರಲ್ಲೂ ಇದ್ದೇ ಇದೆ. ಆದರೆ ಗರ್ಭಿಣಿ ಮಹಿಳೆಯರ ಒತ್ತಡ ನಿವಾರಿಸುವಂತಹ ಹಲವಾರು ಯೋಗಾಸನಗಳು ಇವೆ.

ಮಗುವಿನ ಜನನದ ಬಗ್ಗೆ ಉಂಟಾಗುವಂತಹ ಒತ್ತಡ ನಿವಾರಣೆಗೆ ಯೋಗಾಸನವು ತುಂಬಾ ಪರಿಣಾಮಕಾರಿ. ಗರ್ಭಿಣಿ ಮಹಿಳೆಯನ್ನು ಮಾನಸಿಕ ಹಾಗೂ ದೈಹಿಕವಾಗಿ ಇದು ತಯಾರು ಮಾಡುತ್ತದೆ. ಯೋಗವು ಗರ್ಭಿಣಿ ಮಹಿಳೆಯನ್ನು ಬಲಗೊಳಿಸುವುದು ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವುದು. ಇದರಿಂದ ಮಗುವಿನ ಜನನದ ವೇಳೆ ಒತ್ತಡವು ಕಡಿಮೆಯಾಗುವುದು. ಗರ್ಭಿಣಿ ಮಹಿಳೆಯರು ಕೆಲವೊಂದು ಆಸನ, ಪ್ರಾಣಾಯಾಮ, ಧ್ಯಾನ, ಮುದ್ರೆ ಮತ್ತು ಇತರ ಕೆಲವೊಂದು ಒತ್ತಡ ನಿವಾರಣೆಯ ಯೋಗ ಮಾಡಬಹುದು.

ಆರೋಗ್ಯಕರ ಜೀವನಶೈಲಿಗೆ ಬೇಕು ನಿತ್ಯ ಯೋಗ

ಗರ್ಭಿಣಿ ಮಹಿಳೆಯರಿಗೆ ಹೇಳಿಕೊಡುವಂತಹ ಆಸನಗಳಲ್ಲಿ ಸ್ನಾಯುಗಳ ಸ್ಥಿತಿಸ್ಥಾಪಕತ್ವವು ಸುಧಾರಣೆಯಾಗುತ್ತದೆ. ಇದರಿಂದ ಶ್ವಾಸಕೋಶದ ವ್ಯವಸ್ಥೆಯು ಉತ್ತೇಜಿಸಲ್ಪಡುತ್ತದೆ. ಇದರಿಂದ ದೇಹ ಹಾಗೂ ಮನಸ್ಸು ನಿಯಂತ್ರಣದಲ್ಲಿರುತ್ತದೆ. ಗರ್ಭಧಾರಣೆ ವೇಳೆ ಮಹಿಳೆಯರು ಮಾನಸಿಕ ಹಾಗೂ ದೈಹಿಕ ಬದಲಾವಣೆಗೆ ಒಳಗಾಗುತ್ತಾರೆ. ಮಗುವಿನ ಜನನದ ಬಗ್ಗೆ ಹೆಚ್ಚು ಒತ್ತಡಕ್ಕೆ ಗುರಿಯಾಗುತ್ತಾರೆ. ಯೋಗಾಸನಗಳು ಬೆನ್ನುಹುರಿಯನ್ನು ಬಲಗೊಳಿಸಿ ದೇಹವು ಆರಾಮವಾಗಿರುವಂತೆ ಮಾಡುವುದು. ಗರ್ಭಿಣಿ ಮಹಿಳೆಯರಲ್ಲಿ ಒತ್ತಡ ನಿವಾರಣೆ ಮಾಡುವ ಯೋಗಾಸನಗಳು ಇಲ್ಲಿವೆ....

ಪ್ರಾಣಾಯಾಮ

ಪ್ರಾಣಾಯಾಮ

ಈ ವಿಧದ ಯೋಗಾಸನಗಳು ಗರ್ಭಿಣಿ ಮಹಿಳೆಯರಿಗೆ ಸುಲಭವಾಗಿ ಉಸಿರಾಡಲು ನೆರವಾಗುವುದು. ಇದು ತುಂಬಾ ಜನಪ್ರಿಯವಾಗಿರುವ ತಂತ್ರ ಮತ್ತು ಇದರಲ್ಲಿ ಹಲವಾರು ರೀತಿಯ ಲಾಭಗಳು ಇವೆ. ಗರ್ಭಿಣಿ ಮಹಿಳೆಯರಿಗೆ ಇದರಿಂದ ಮಾನಸಿಕ ಹಾಗೂ ದೈಹಿಕ ಆರಾಮ ಸಿಗುವುದು. ಮೂಗಿನ ಒಂದು ಬದಿ ಮುಚ್ಚಿ ಉಸಿರನ್ನು ಹೊರಹಾಕುವುದು ಮತ್ತು ಇನ್ನೊಂದು ಬದಿಯಿಂದ ತಾಜಾ ಗಾಳಿ ಒಳಗೆ ತೆಗೆದುಕೊಳ್ಳುವುದು. ಈ ತಂತ್ರವು ಆತಂಕ ಕಡಿಮೆ ಮಾಡಿ ನರವ್ಯವಸ್ಥೆಯು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ನೆರವಾಗುವುದು. ಒತ್ತಡಕ್ಕೆ ಈ ರೀತಿಯ ಯೋಗ ಒಳ್ಳೆಯದು.

ಆರೋಗ್ಯಕ್ಕೆ ನವ ಚೈತನ್ಯ ತುಂಬುವ ಪ್ರಾಣಾಯಾಮ

ಧ್ಯಾನ

ಧ್ಯಾನ

ಗರ್ಭಿಣಿ ಮಹಿಳೆಯರು ತಮ್ಮ ಮನಸ್ಸನ್ನು ಸಂಪೂರ್ಣವಾಗಿ ಪುನಶ್ಚೇತನಗೊಳಿಸಿ ಆರಾಮ ನೀಡುವುದು. ಒತ್ತಡಕ್ಕೆ ಧ್ಯಾನವು ಅತ್ಯುತ್ತಮವಾದ ಯೋಗಾಸನವಾಗಿದೆ. ಇದು ಒತ್ತಡ, ಭಯ, ಆತಂಕವನ್ನು ಕಡಿಮೆ ಮಾಡುವುದು. ಗರ್ಭಿಣಿ ಮಹಿಳೆಯರು ಈ ರೀತಿಯ ಯೋಗಾಭ್ಯಾಸ ಮಾಡಿ ಒತ್ತಡ ನಿವಾರಿಸಿದರೆ ಸಾಮಾನ್ಯ ಹೆರಿಗೆಯಾಗಬಹುದು. ಇದು ಮನಸ್ಸಿಗೆ ಶಾಂತಿ ನೀಡಿ ಆತಂಕ ಕಡಿಮೆ ಮಾಡುತ್ತದೆ. ಧಾನ್ಯವು ಉಸಿರಾಟಕ್ಕೆ ನೆರವಾಗಿ ಆರೋಗ್ಯಕರ ಹೆರಿಗೆಗೆ ನೆರವಾಗುವುದು.

ಗರ್ಭಿಣಿಯರೇ, ಪ್ರತಿದಿನ ಹತ್ತು ನಿಮಿಷದ ಧ್ಯಾನ ಅನುಸರಿಸಿ

ಯೋಗನಿದ್ರೆ

ಯೋಗನಿದ್ರೆ

ಈ ಯೋಗವು ಗರ್ಭಿಣಿ ಮಹಿಳೆಯರು ಮಾಡಲೇಬೇಕು. ಗರ್ಭಿಣಿ ಮಹಿಳೆಯರು ಸರಿಯಾಗಿ ನಿದ್ರೆ ಮಾಡುವುದೇ ಈ ಯೋಗನಿದ್ರೆ. ಗರ್ಭಿಣಿ ಮಹಿಳೆಯರಿಗೆ ಸೂಕ್ತ ರೀತಿಯ ನಿದ್ರೆ ಬೇಕೇಬೇಕು. ಇದು ಒತ್ತಡ ಕಡಿಮೆ ಮಾಡಿ ಮನಸ್ಸನ್ನು ಶಾಂತಗೊಳಿಸುವುದು. ಇದು ಒಳ್ಳೆಯ ನಿದ್ರೆ ನೀಡಿ ಗರ್ಭಿಣಿ ಮಹಿಳೆಯರು ಒಳಗಿನಿಂದ ಸಂತೋಷವಾಗಿರುವಂತೆ ಮಾಡುವುದು.ಗರ್ಭಿಣಿ ಮಹಿಳೆಯು ಆರೋಗ್ಯಕರವಾಗಿ ಮಗುವಿಗೆ ಜನ್ಮ ನೀಡುವಂತೆ ಮಾಡುವುದು.

ಈ ಯೋಗದಿಂದಾಗುವ ಪ್ರಯೋಜನಗಳು

ಈ ಯೋಗದಿಂದಾಗುವ ಪ್ರಯೋಜನಗಳು

ಈ ಯೋಗದಿಂದ ಮಗುವಿನ ಬೆಳವಣಿಗೆಯಾಗುವುದು. ಯೋಗವು ಗರ್ಭಿಣಿ ಮಹಿಳೆಯರಲ್ಲಿ ಧನಾತ್ಮಕ ಶಕ್ತಿ ಮತ್ತು ಆಲೋಚನೆಗಳನ್ನು ತುಂಬುವುದು. ಇದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಪ್ರಸವಕ್ಕೆ ಸ್ವಲ್ಪ ಸಮಯ ಮೊದಲು ಮಾಡಬಹುದಾದ ಕೆಲವೊಂದು ಯೋಗಗಳು ಮತ್ತು ಅದರ ಲಾಭಗಳು. ಆರೋಗ್ಯಕರ ಹಾಗೂ ಸಾಮಾನ್ಯ ಹೆರಿಗೆಗೆ ಗರ್ಭಿಣಿ ಮಹಿಳೆಯರು ಯೋಗ ಮಾಡಬೇಕು. ಈ ವ್ಯಾಯಾಮಗಳು ಗರ್ಭಿಣಿ ಮಹಿಳೆಯರಿಗೆ ತುಂಬಾ ಪರಿಣಾಮಕಾರಿ ಮತ್ತು ಪ್ರಸವಕ್ಕೆ ಕೆಲವು ಸಮಯ ಮೊದಲು ಇದನ್ನು ಮಾಡಬೇಕು.

ನಿದ್ರೆ ಬರುತ್ತಿಲ್ಲವೇ? ಮಾತ್ರೆ ಬಿಡಿ, ಯೋಗ ಮಾಡಿ

English summary

Yoga To Reduce Stress In Pregnant Women

Yoga for pregnant women is very beneficial. Prenatal yoga helps in reducing stress related to child birth. It helps in preparing the mother physically and mentally. Yoga helps in strengthening the expecting mothers body and increase flexibility. It prepares the body for child birth and reduces stress. Yoga benefits are various. Yoga for pregnant women include asanas, pranayama, dhyana(meditation), mudras and other relaxation techniques.
X
Desktop Bottom Promotion