ಗರ್ಭಾವಸ್ಥೆಯಲ್ಲಿ ಕಾಡುವ ಉಬ್ಬಸ ಸಮಸ್ಯೆ, ಅಲಕ್ಷ್ಯ ಮಾಡಬೇಡಿ

By: Hemanth
Subscribe to Boldsky

ಉಬ್ಬಸವೆನ್ನುವುದು ಅಸ್ತಮಾದ ಲಕ್ಷಣಗಳಲ್ಲಿ ಒಂದಾಗಿದೆ. ಶ್ವಾಸನಾಳಗಳಲ್ಲಿ ಏನಾದರೂ ತೊಂದರೆಗಳಾದರೆ ಉಬ್ಬಸ ಉಂಟಾಗುತ್ತದೆ. ಆದರೆ ಉಬ್ಬಸ ಬರುವುದು ಯಾಕೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಉಬ್ಬಸ ಎಂದರೆ ನಮ್ಮ ಶ್ವಾಸನಾಳದಿಂದ ತುಂಬಾ ಕಠಿಣವಾಗಿ ಹೊರಬೀಳುವಂತಹ ಶಬ್ಧವಾಗಿದೆ. ಉಸಿರಾಡುವ ನಾಳಗಳು ತುಂಬಾ ಕುಗ್ಗಿದಾಗ ಮೂಗಿನ ಮೂಲಕ ಗಾಳಿ ಹೊರಬರಲು ತುಂಬಾ ಕಷ್ಟವಾಗುತ್ತದೆ.

ಉಸಿರು ಹೊರಗಡೆ ಹೋಗುವಾಗ ಉಬ್ಬಸ ಬರುತ್ತದೆ. ಪದೇ ಪದೇ ಉಬ್ಬಸ ಬರುವುದು ಉಸಿರಾಟದ ತೊಂದರೆಯಾಗಿದೆ. ಶ್ವಾಸನಾಳಗಳಲ್ಲಿ ಆಗುವಂತಹ ಹಾನಿ ಮತ್ತು ಅಸ್ತಮಾದಿಂದಲೂ ಉಬ್ಬಸ ಬರಬಹುದು. ಶ್ವಾಸನಾಳದಲ್ಲಿ ಕಫ ತುಂಬಿಕೊಳ್ಳುವುದು ಹಾಗೂ ಧೂಮಪಾನವು ಉಬ್ಬಸಕ್ಕೆ ಪ್ರಮುಖ ಕಾರಣವಾಗಿದೆ. ಗರ್ಭಿಣಿ ಮಹಿಳೆಯರಿಗೆ ಉಬ್ಬಸ ಬರುವುದು ಅಸ್ತಮಾದ ಲಕ್ಷಣ.

ಅಸ್ತಮಾ ಇಲ್ಲದೇ ಇರುವಂತಹ ಮಹಿಳೆಯರಿಗೂ ಗರ್ಭಧಾರಣೆ ಸಮಯದಲ್ಲಿ ಉಬ್ಬಸ ಬರಬಹುದು.ಆದರೆ ಹೀಗೆ ಉಬ್ಬಸ ಬರುವುದರಿಂದ ಮಗುವಿಗೆ ಸಮಸ್ಯೆಯಾಗಬಹುದು. ಇದರ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ವಿವರವಾಗಿ ತಿಳಿಸಲಿದೆ...

ಉಬ್ಬಸದಿಂದ ಆಗುವ ಸಮಸ್ಯೆಗಳೇನು?

ಉಬ್ಬಸದಿಂದ ಆಗುವ ಸಮಸ್ಯೆಗಳೇನು?

ಗರ್ಭಿಣಿ ಮಹಿಳೆಯರಲ್ಲಿ ಉಬ್ಬಸ ಉಂಟಾದರೆ ಆಗ ಗರ್ಭದಲ್ಲಿರುವ ಮಗುವಿಗೆ ಆಮ್ಲಜನಕದ ಕೊರತೆ ಕಾಣಿಸಿಕೊಳ್ಳಬಹುದು. ಸರಿಯಾದ ಆರೈಕೆ ಮಾಡಿದರೆ ಅಸ್ತಮಾ ಇರುವಂತಹ ಗರ್ಭಿಣಿ ಮಹಿಳೆಯರು ಕೂಡ ಸುರಕ್ಷಿತವಾಗಿ ಗರ್ಭಧಾರಣೆ ಸಮಯವನ್ನು ಕಳೆಯಬಹುದು.

ಇದಕ್ಕೆ ಚಿಕಿತ್ಸೆ ಬೇಕೇ?

ಇದಕ್ಕೆ ಚಿಕಿತ್ಸೆ ಬೇಕೇ?

ಗರ್ಭಧಾರಣೆ ವೇಳೆ ಅಸ್ತಮಾ ಕಾಣಿಸಿಕೊಂಡರೆ ಆಗ ಚಿಕಿತ್ಸೆ ಮಾಡಿಕೊಳ್ಳಬೇಕು. ಯಾಕೆಂದರೆ ಚಿಕಿತ್ಸೆ ಮಾಡದೆ ಇದ್ದರೆ ಅದರಿಂದ ಮುಂದೆ ಅನಾಹುತವಾಗಬಹುದು.

ಚಿಕಿತ್ಸೆ ನೀಡದೆ ಇದ್ದರೆ ಏನಾಗಬಹುದು?

ಚಿಕಿತ್ಸೆ ನೀಡದೆ ಇದ್ದರೆ ಏನಾಗಬಹುದು?

ಅಸ್ತಮಾವನ್ನು ಆರಂಭದಲ್ಲೇ ನಿಯಂತ್ರಿಸದಿದ್ದರೆ ಗರ್ಭಿಣಿ ಮಹಿಳೆಯರಲ್ಲಿ ರಕ್ತದೊತ್ತಡವು ಹೆಚ್ಚಾಗುವ ಸಾಧ್ಯತೆಯಿದೆ. ಚಿಕಿತ್ಸೆ ನೀಡದೆ ಇದ್ದರೆ ಪ್ರಿಕ್ಲಾಂಪ್ಸಿಯ ಎನ್ನುವ ಪರಿಸ್ಥಿತಿ ಉಂಟಾಗಬಹುದು. ಇದರಿಂದ ಮೆದುಳು, ಯಕೃತ್, ಕಿಡ್ನಿ ಮತ್ತು ಜರಾಯುವಿಗೆ ಹಾನಿಯಾಗಬಹುದು.

ಗರ್ಭಕ್ಕೆ ಏನಾಗುತ್ತದೆ?

ಗರ್ಭಕ್ಕೆ ಏನಾಗುತ್ತದೆ?

ಉಬ್ಬಸವು ಗರ್ಭದ ಮೇಲೆ ಏನಾದರೂ ಪರಿಣಾಮ ಉಂಟಾ ಮಾಡುವುದೇ ಎನ್ನುವ ಪ್ರಶ್ನೆಗೆ ಹೌದು ಎನ್ನಬೇಕಾಗುತ್ತದೆ. ಇದು ಭ್ರೂಣದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಮಗುವಿನ ದೇಹ ತುಂಬಾ ಸಣ್ಣದಾಗಿರಬಹುದು. ಇದರಿಂದ ಅಕಾಲಿಕ ಹೆರಿಗೆ ಮತ್ತು ಜನನ ವೇಳೆ ಮಗುವಿನ ತೂಕ ಕಡಿಮೆಯಾಗಬಹುದು. ಕೆಲವೊಂದು ಸಂದರ್ಭಗಳಲ್ಲಿ ಮಗುವಿನ ಸಾವು ಸಂಭವಿಸಬಹುದು. ಅಸ್ತಮಾವನ್ನು ನಿಯಂತ್ರಣ ಮಾಡಿಕೊಂಡರೆ ಅಪಾಯ ಕಡಿಮೆ ಮಾಡಬಹುದು.

ಇದನ್ನು ನಿಯಂತ್ರಿಸುವುದು ಹೇಗೆ?

ಇದನ್ನು ನಿಯಂತ್ರಿಸುವುದು ಹೇಗೆ?

ಗರ್ಭಿಣಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಅಸ್ತಮಾವನ್ನು ಕಡಿಮೆ ಮಾಡಲು ಉರಿಯೂತ ನಿಯಂತ್ರಿಸಬೇಕಾಗಿದೆ. ಅಸ್ತಮಾ ಇರುವಂತಹ ಮಹಿಳೆಯರ ಗರ್ಭದಲ್ಲಿರುವ ಮಗುವಿನ ಚಟುವಟಿಕೆ ಗಮನಹರಿಸುತ್ತಾ ಇರಬೇಕು. ಉಬ್ಬಸವು ಗರ್ಭಿಣಿ ಮಹಿಳೆಯರಲ್ಲಿ ಅತಿಯಾಗಿದ್ದರೆ ನೀವು ವೈದ್ಯರ ನೆರವು ಪಡೆಯುವುದು ಅತೀ ಅಗತ್ಯ.

ಮೇಲ್ವಿಚಾರಣೆ ಅಗತ್ಯ ಯಾಕೆ?

ಮೇಲ್ವಿಚಾರಣೆ ಅಗತ್ಯ ಯಾಕೆ?

ಭ್ರೂಣದಲ್ಲಿರುವ ಮಗುವಿನ ಶ್ವಾಸಕೋಶದ ಚಟುವಟಿಕೆ ಮತ್ತು ಆಮ್ಲಜನಕದ ಸರಬರಾಜನ್ನು ಯಾವಾಗಲೂ ಪರಿಶೀಲಿಸುತ್ತಾ ಇರಬೇಕು. ಗರ್ಭಿಣಿ ಮಹಿಳೆಯರು ಉಬ್ಬಸಕ್ಕೆ ಒಳಗಾದಾಗ ಇದನ್ನು ಪರಿಶೀಲಿಸುವುದು ಅತೀ ಅಗತ್ಯ.

ತೆಗೆದುಕೊಳ್ಳಬೇಕಾದ ಕ್ರಮಗಳು

ತೆಗೆದುಕೊಳ್ಳಬೇಕಾದ ಕ್ರಮಗಳು

ಧೂಳು, ಹೊಗೆ ಮತ್ತು ಗರ್ಭಿಣಿ ಮಹಿಳೆಯರಲ್ಲಿ ಉಂಟಾಗುವ ಉಬ್ಬಸದ ಲಕ್ಷಣಗಳನ್ನು ತಡೆಗಟ್ಟಬೇಕು. ಅಸ್ತಮಾವನ್ನು ಹೊರತುಪಡಿಸಿ ಬೇರೆ ಯಾವುದೇ ಅಲರ್ಜಿಯಿದ್ದರೆ ಅದಕ್ಕೆ ಬೇಗನೆ ಚಿಕಿತ್ಸೆ ನೀಡುವುದು ಅತೀ ಅಗತ್ಯ. ಯಾವುದೇ ಗೊಂದಲಗಳಿದ್ದರೆ ವೈದ್ಯರನ್ನು ಭೇಟಿಯಾಗಿ.

English summary

Wheezing During Pregnancy: What To Do!

Firstly, what is wheezing? It is nothing but a kind of sound that comes when you breathe with great difficulty. When the breathing tubes become narrow, air moves through them making a different noise. The sound occurs mainly during exhaling. Wheezing is a sign of breathing issues. It indicates asthma, or a damage in the airways. It could also be due to the build up of mucus in the airways.
Story first published: Thursday, July 6, 2017, 7:02 [IST]
Subscribe Newsletter