For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಸಡನ್ ಆಗಿ ಕಾಡುವ ಕೆಳಹೊಟ್ಟೆಯ ನೋವು! ನಿರ್ಲಕ್ಷಿಸ ಬೇಡಿ...

By Arshad
|

ಗರ್ಭಾವಸ್ಥೆಯ ಯಾವುದೇ ಹಂತದಲ್ಲಿ ಒಂದು ವೇಳೆ ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡರೆ ಮೊತ್ತ ಮೊದಲು ಮಾಡಬೇಕಾದ ಕೆಲಸವೆಂದರೆ ವೈದ್ಯರನ್ನು ಕಾಣುವುದು. ಸಾಮಾನ್ಯವಾಗಿ ಈ ನೋವಿಗೆ ಅಜೀರ್ಣ ಅಥವಾ ಆಮ್ಲೀಯತೆ ಕಾರಣವಾಗಿದ್ದು ಗಂಭೀರವಲ್ಲದ ಸಮಸ್ಯೆಯಾಗಿದ್ದರೂ ಇದರ ಚಿಕಿತ್ಸೆಗೆ ಸ್ವತಃ ಕ್ರಮ ಕೈಗೊಳ್ಳುವುದಕ್ಕಿಂತಲೂ ವೈದ್ಯರ ಸಲಹೆ ಪಡೆಯುವುದೇ ಉತ್ತಮ.

ಆದರೆ, ಕೆಲವು ಸಂದರ್ಭದಲ್ಲಿ ಈ ನೋವು ಕೊಂಚ ಗಂಭೀರವೇ ಆದ ಕಾರಣದಿಂದ ಎದುರಾಗಿರಬಹುದು. ಸಾಮಾನ್ಯವಾಗಿ ಕೆಲವು ಗರ್ಭಿಣಿಯರು, ಅದರಲ್ಲೂ ಪ್ರಥಮ ಬಾಗಿ ಗರ್ಭ ಧರಿಸಿದ ಮಹಿಳೆಯರು ಪ್ರಥಮ ಮೂರು ತಿಂಗಳ ಅವಧಿಯಲ್ಲಿ ಕೆಳಹೊಟ್ಟೆಯಲ್ಲಿ ಕೊಂಚವೇ ನೋವನ್ನು ಅನುಭವಿಸುತ್ತಾರೆ.

ಇದಕ್ಕೆ ಕಾರಣವೇನೆಂದರೆ ಗರ್ಭಾಶಯ ನಿಧಾನವಾಗಿ ಹಿಗುತ್ತಿದ್ದು ಇದು ಕರುಳುಗಳನ್ನು ಒತ್ತಲು ಹಾಗೂ ಮಲಬದ್ದತೆಗೆ ಕಾರಣವಾಗಬಹುದು. ಆದರೆ ಎರಡನೆಯ ಹಾಗೂ ಮೂರನೆಯ ತ್ರೈಮಾಸಿಕ ಅವಧಿಯಲ್ಲಿ ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡರೆ ಮಾತ್ರ ಇದನ್ನು ಖಂಡಿತಾ ನಿರ್ಲಕ್ಷಿಸಕೂಡದು. ಬನ್ನಿ, ಇದಕ್ಕೆ ಕಾರಣಗಳೇನೆಂದು ನೋಡೋಣ....

ಪದೇ ಪದೇ ಮೂತ್ರಕ್ಕೆ ಅವಸರವಾಗುವುದು

ಪದೇ ಪದೇ ಮೂತ್ರಕ್ಕೆ ಅವಸರವಾಗುವುದು

ಒಂದು ವೇಳೆ ಸತತವಾಗಿ ಮೂತ್ರಕ್ಕೆ ಅವಸರವಾಗುವುದು, ಮೂತ್ರ ವಿಸರ್ಜಿಸುವ ವೇಳೆ ಉರಿಯ ಅನುಭವ ಅಥವಾ ತುರಿಕೆಯ ಅನುಭವವಾಗುತ್ತಿದ್ದರೆ ಇದು ಮೂತ್ರವ್ಯವಸ್ಥೆಯಲ್ಲಿ ಸೋಂಕು ಉಂಟಾಗಿರುವ ಲಕ್ಷಣಗಳಾಗಿವೆ.

ರಕ್ತಸ್ರಾವ?

ರಕ್ತಸ್ರಾವ?

ಒಂದು ವೇಳೆ ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡ ಪರಿಣಾಮವಾಗಿ ರಕ್ತಸ್ರಾವವಾದರೆ ಅಥವಾ ಮೂತ್ರದಲ್ಲಿ ರಕ್ತದ ಗಡ್ಡೆಗಳು ಕಂಡುಬಂದರೆ ಅಥವಾ ಕೆಳಹೊಟ್ಟೆ ಬಿಗಿಹಿಡಿದಂತಾಗಿದ್ದರೆ ಇದು ಗರ್ಭಪಾತದ ಪೂರ್ವ ಅಥವಾ ಆಗುತ್ತಿರುವ ಲಕ್ಷಣಗಳಾಗಿರಬಹುದು. ಒಂದು ಕ್ಷಣವನ್ನೂ ವ್ಯರ್ಥ ಮಾಡದೇ ತಕ್ಷಣ ಸ್ತ್ರೀರೋಗ ತಜ್ಞರ ಅಥವಾ ಹತ್ತಿರ ಲಭ್ಯವಿರುವ ವೈದ್ಯರ ಬಳಿ ಕರೆದೊಯ್ಯಬೇಕು.

ಅಪಸ್ಥಾನೀಯ ಗರ್ಭ (Ectopic Pregnancy)

ಅಪಸ್ಥಾನೀಯ ಗರ್ಭ (Ectopic Pregnancy)

ಅಪರೂಪದ ಸಂದರ್ಭದಲ್ಲಿ ಫಲಿತಗೊಂಡ ಅಂಡಾಣು ಗರ್ಭಕೋಶದ ಒಳಗೆ ಅಲ್ಲದೇ ಗರ್ಭಕೋಶದ ಹೊರಗಿರುವ ಯಾವುದಾದರೊಂದು ಭಾಗದಲ್ಲಿ ಬೆಳೆಯಲಾರಂಭಿಸುತ್ತದೆ. ಹೆಚ್ಚಿನ ಸಾಧ್ಯತೆ ಇರುವ ಅಂಗವೆಂದರೆ ಗರ್ಭನಾಳ (Fallopian tube). ಒಂದು ಹಂತದ ಬೆಳವಣಿಯವರೆಗೆ ಇದು ನೋವು ಕೊಡದಿದ್ದರೂ ಸುಮಾರು ಆರರಿಂದ ಹತ್ತು ವಾರಗಳ ಅವಧಿಯಲ್ಲಿ ಗರ್ಭನಾಳದ ಗಾತ್ರಕ್ಕೂ ಹೆಚ್ಚು ಬೆಳೆದು ನೋವು ಕೊಡಲಾರಂಭಿಸುತ್ತದೆ. ಈ ಗರ್ಭ ಆರೋಗ್ಯವಂತ ಶಿಶುವಾಗುವ ಸಾಧ್ಯತೆ ಅತಿ ಕಡಿಮೆ. ಪರಿಣಾಮವಾಗಿ ರಕ್ತಸ್ರಾವವೂ ಎದುರಾಗುತ್ತದೆ. ಈ ಸ್ಥಿತಿಯನ್ನು ಪರೀಕ್ಷೆಗಳ ಮೂಲಕ ಖಾತ್ರಿಪಡಿಸಿಕೊಂಡ ಬಳಿಕ ವೈದ್ಯರು ಗರ್ಭಪಾತ ಮಾಡಿಸಿ ರೋಗಿಯನ್ನು ಉಳಿಸುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಆದರೆ ಈಗ ವೈದ್ಯವಿಜ್ಞಾನ ಮುಂದುವರೆದಿದ್ದು ಈ ಸ್ಥಿತಿ ಆಗಮಿಸಬಹುದಾದ ಹಂತಕ್ಕೂ ಮುನ್ನವೇ ಸೂಕ್ತ ಕ್ರಮಗಳಿಂದ ಗರ್ಭವನ್ನು ಉಳಿಸಬಹುದು. ಆದ್ದರಿಂದ ಮೊದಲ ತಿಂಗಳಿನಿಂದಲೂ ನಿಯಮಿತವಾಗಿ ವೈದ್ಯರಲ್ಲಿ ತಪಾಸಣೆಗೊಳಪಟ್ಟು ಸೂಕ್ತ ಚಿಕಿತ್ಸೆಗಳನ್ನು ಪಡೆಯುತ್ತಿರಬೇಕು.

ಗರ್ಭಾಶಯದಲ್ಲಿ ಗಾಯ

ಗರ್ಭಾಶಯದಲ್ಲಿ ಗಾಯ

ಅಪರೂಪದ ಸಂದರ್ಭದಲ್ಲಿ ಗರ್ಭಕೋಶದ ಒಳಗಿರುವ ಜರಾಯು (placenta) ಗರ್ಭಕೋಶದ ಗೋಡೆಯನ್ನು ಹರಿಯುತ್ತದೆ. ಇದು ಅಪಾರ ನೋವಿಗೆ ಕಾರಣವಾಗುತ್ತದೆ.

ಅವಧಿಗೂ ಮುನ್ನ ಎದುರಾಗುವ ಹೆರಿಗೆ ನೋವು

ಅವಧಿಗೂ ಮುನ್ನ ಎದುರಾಗುವ ಹೆರಿಗೆ ನೋವು

ಒಂದು ವೇಳೆ ಕಡೆಯ ತ್ರೈಮಾಸಿಕದ ಕಡೆಯ ದಿನಗಳಲ್ಲಿ ಯಾವ ಮುನ್ಸೂಚನೆಯೂ ಇಲ್ಲದೇ ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡರೆ ಇದು ನಿಗದಿತ ಅವಧಿಗಿಂತಲೂ ಮುಂಚಿತವಾಗಿ ಹೆರಿಗೆಯಾಗುವ ಸೂಚನೆಯಾಗಿದೆ.

English summary

What Causes Abdominal Pain During Pregnancy?

Most of the women experience slight pain in the abdomen during the first trimester. The reason behind that could be the expansion of the uterus that could cause constipation and some digestive issues. But pains during the second and third trimester should not be taken easily. Here are some reasons.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more