ಮಹಿಳೆಯರೇ ಸ್ವಲ್ಪ ಕಾಳಜಿ ವಹಿಸಿ, ಇಲ್ಲಾಂದ್ರೆ ಆಪತ್ತು ಕಟ್ಟಿಟ್ಟ ಬುತ್ತಿ!

By: Arshad
Subscribe to Boldsky

ಒಂದು ವೇಳೆ ನೀವು ಗರ್ಭಿಣಿಯಾಗ ಬಯಸುತ್ತಿರುವ ಮಹಿಳೆಯಾಗಿದ್ದರೆ ಈ ಲೇಖನ ಖಂಡಿತಾ ನಿಮಗಾಗಿಯೇ ಇದೆ. ನಿಮ್ಮ ಕೆಲವು ದೈನಂದಿನ ಅಭ್ಯಾಸಗಳಲ್ಲಿ ತಡರಾತ್ರಿಯವರೆಗೆ ಟಿವಿ ನೋಡುವುದು, ತಡರಾತ್ರಿ ಮೊಬೈಲಿನಲ್ಲಿ ಆಟ ಅಥವಾ ಬೇರಾವುದಕ್ಕೋ ಬಳಸುವುದು, ರಾತ್ರಿಯಿಡೀ ಬೆಳಕನ್ನು ಹಾಸಿಗೆಯ ಮೇಲೆ ಬೇಳುವಂತೆ ಹಚ್ಚಿಡುವುದು ಮೊದಲಾದವು ಇವೆಯೇ?  ಕಾಸ್ಮೆಟಿಕ್ಸ್ ವ್ಯಾಮೋಹ, ಸಂತಾನ ಫಲವನ್ನೇ ಕಸಿಯಬಹುದು!

ನಿಮಗೆ ಅರಿವಿಲ್ಲದೇ ಇವನ್ನೆಲ್ಲಾ ನೀವು ಅನುಸರಿಸಿಕೊಂಡು ಬಂದಿದ್ದರೆ ಈ ಅಭ್ಯಾಸಗಳೇ ನಿಮ್ಮನ್ನು ಗರ್ಭಿಣಿಯಾಗದೇ ಇರಲು ಪರೋಕ್ಷವಾಗಿ ಕಾರಣವಾಗಿರಬಹುದು. ಏಕೆಂದರೆ ಗರ್ಭಾಂಕುರಗೊಳ್ಳಲು ಗಾಢಕತ್ತಲು ಅವಶ್ಯ ಎಂದು ತಜ್ಞರು ತಿಳಿಸುತ್ತಾರೆ.  ಮಹಿಳೆಯರಲ್ಲಿ ಬಂಜೆತನ ತಡೆಯುವ ವಿಧಾನಗಳು

ಅಲ್ಲದೆ ರಾತ್ರಿಯ ಸಮಯದಲ್ಲಿ ಕೊಂಚ ಬೆಳಕಿದ್ದರೂ ಗರ್ಭಾಂಕುರದ ಕ್ಷೀಣಸಾಧ್ಯತೆಯನ್ನು ಇದು ಇನ್ನಷ್ಟು ಕ್ಷೀಣವಾಗಿಸಲು ನೇರವಾದ ಕಾರಣವಾಗಿದೆ. ಬನ್ನಿ, ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ನೋಡೋಣ....  

ವಾಸ್ತವಾಂಶ #1

ವಾಸ್ತವಾಂಶ #1

ಜಪಾನ್ ದೇಶದಲ್ಲಿ ನಡೆಸಿದ ಸಂಶೋಧನೆಯಿಂದ ಕಂಡುಕೊಂಡಂತೆ ರಾತ್ರಿ ಹೊತ್ತು ಯಾವುದೇ ಕೃತಕ ಬೆಳಕು ಗರ್ಭಾಂಕುರಕ್ಕೆ ಮಾರಕ. ವಿಶೇಷವಾಗಿ ಎಲೆಕ್ಟ್ರಾನಿಕ್ ಉಪಕರಣಗಳ ಬೆಳಕನ್ನು ಕಣ್ಣುಗಳ ಮೂಲಕ ನೋಡಿದರೆ ಇದು ಫಲವತ್ತತೆಯ ಸಾಧ್ಯತೆಯನ್ನು ಬಹಳಷ್ಟು ಕಡಿಮೆಗೊಳಿಸುತ್ತದೆ.

ವಾಸ್ತವಾಂಶ #2

ವಾಸ್ತವಾಂಶ #2

ಇಲಿಗಳ ಮೇಲೆ ನಡೆಸಿದ ಸಂಶೋಧನೆಯ ಮೂಲಕ ಈ ವಿಷಯ ದೃಢಪಡಿಸಲಾಗಿದೆ. ವಿಶೇಷವಾಗಿ ನಡುವಯಸ್ಸಿನ, ಗರ್ಭಧರಿಸುವ ಪಕ್ವ ವಯಸ್ಸಿನ ಹೆಣ್ಣು ಇಲಿಗಳನ್ನು ರಾತ್ರಿಯ ಬೆಳಕಿನಲ್ಲಿರಿಸಿದಾಗ ಇವುಗಳ ದೇಹದಲ್ಲಿ ಫಲವತ್ತತೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದು ದೃಢಪಟ್ಟಿದೆ.

ವಾಸ್ತವಾಂಶ #3

ವಾಸ್ತವಾಂಶ #3

ನಮ್ಮ ದೇಹದಲ್ಲಿ ಬೆಳಕು ಮತ್ತು ಕತ್ತಲಿನ ಸಮತೋಲನದ ಜೈವಿಕ ಗಡಿಯಾರವೊಂದಿದೆ. ಈ ಗಡಿಯಾರದ ಮೂಲಕವೇ ನಾವು ರಾತ್ರಿ ಮಲಗುತ್ತೇವೆ ಹಾಗೂ ಬೆಳಿಗ್ಗೆ ಎಚ್ಚರಾಗುತ್ತದೆ. ಕೃತಕ ಬೆಳಕು ಈ ಗಡಿಯಾರದ ಸಮಯವನ್ನು ಮೇಲೆಕೆಳಗೆ ಮಾಡುವುದರಿಂದ ದೇಹದ ಸಮತೋಲನ (circadian rhythm) ಏರುಪೇರಗುವುದೇ ಫಲವತ್ತತೆ ಕ್ಷೀಣಿಸಲು ಕಾರಣ ಎಂದು ಕಂಡುಕೊಳ್ಳಲಾಗಿದೆ.

ವಾಸ್ತವಾಂಶ #4

ವಾಸ್ತವಾಂಶ #4

ಈ ಜೈವಿಕ ಗಡಿಯಾರ ಮಹಿಳೆಯರ ಋತುಚಕ್ರ, ಮಲಗುವ ಸಮಯ, ಅವಧಿ, ಹಾರ್ಮೋನುಗಳ ಸ್ರವಿಕೆ ಮೊದಲಾದ ಪ್ರಮುಖ ಕಾರ್ಯಗಳಿಗೆ ಮೂಲವಾಗಿದ್ದು ಜೈವಿಕ ಗಡಿಯಾರ ಏರುಪೇರಾದರೆ ಇವೆಲ್ಲವೂ ಏರುಪೇರಾಗುತ್ತವೆ. ವಿಶೇಷವಾಗಿ ಮೆದುಳಿಗೆ ತಲುಪುವ ಮೆಲಟೋನಿನ್ ಎಂಬ ರಸದೂತ ಜೈವಿಕ ಗಡಿಯಾರದ ಮೂಲಕವೇ ಬಿಡುಗಡೆಯಾಗುತ್ತಿದ್ದು ಈ ರಸದೂತ ಸ್ರವಿಕೆಯ ಸಮಯದಲ್ಲಿ ಏರುಪೇರಾದರೆ ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಮಹಿಳೆಯರು ಕೆಲವಾರು ತೊಂದರೆಗಳನ್ನು ಅನುಭವಿಸುತ್ತಾರೆ.

ವಾಸ್ತವಾಂಶ #5

ವಾಸ್ತವಾಂಶ #5

ಕತ್ತಲಾಗುತ್ತಿದ್ದಂತೆಯೇ ನಮ್ಮ ಮೆದುಳಿಗೆ ಮೆಲಟೋನಿನ್ ಸ್ರವಿಸಲು ಸೂಚನೆ ಸಿಗುತ್ತದೆ. ರಾತ್ರಿಯ ನಿಸರ್ಗದ ಸದ್ದುಗಳೂ ಈ ಸೂಚನೆಯನ್ನು ಬಲಗೊಳಿಸುತ್ತವೆ. ಪರಿಣಾಮವಾಗಿ ಶೀಘ್ರವೇ ನಿದ್ದೆ ಬರಲು ತೊಡಗುತ್ತದೆ. ಆದರೆ ಈ ಸಮಯದಲ್ಲಿ ಕೃತಕ ಬೆಳಕು ನೀಡಿದರೆ ಹಾಗೂ ನಿಸರ್ಗದ ಸದ್ದುಗಳನ್ನು ಆಲಿಸದೇ ಹೋಗುವ ಮೂಲಕ ಮೆದುಳಿಗೆ ಇನ್ನೂ ಕತ್ತಲಾಗಿಲ್ಲ ಎಂಬ ಸೂಚನೆ ದೊರೆತು ಮೆಲಟೋನಿನ್ ಬಿಡುಗಡೆಯಾಗುವುದೇ ಇಲ್ಲ. ತಡರಾತ್ರಿ ಮೆಲಟೋನಿನ್ ಬಿಡುಗಡೆಯಾದರೂ ಸಾಕಷ್ಟು ಪ್ರಮಾಣದಲ್ಲಿರುವುದಿಲ್ಲ ಅಥವಾ ಅಗತ್ಯವಿರುವ ಸಮಯ ಮೀರಿ ಲಭ್ಯವಾಗುತ್ತದೆ. ಪರಿಣಾಮವಾಗಿ ಫಲವತ್ತತೆಯ ಸಾಧ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ.

ವಾಸ್ತವಾಂಶ #6

ವಾಸ್ತವಾಂಶ #6

ಮಹಿಳೆಯರ ದೇಹದಲ್ಲಿ ಬಿಡುಗಡೆಯಾಗುವ ಫಲವತ್ತತೆ ಹಾಗೂ ಸಂತಾನಫಲವನ್ನು ನಿರ್ಧರಿಸುವ ಪ್ರೊಜೆಸ್ಟೆರಾನ್ ಮತ್ತು ಈಸ್ಟ್ರೋಜೆನ್ ರಸದೂತಗಳ ಸ್ರವಿಕೆಯೂ ಈ ಮೆಲಟೋನಿನ್ ರಸದೂತವನ್ನು ಅವಲಂಬಿಸಿದೆ. ಮೆಲಟೋನಿನ್ ಕಡಿಮೆಯಾದಷ್ಟೂ ಈ ಮುಖ್ಯ ರಸದೂತಗಳ ಪ್ರಮಾಣದ ಮೇಲೂ ಪ್ರಭಾವ ಬೀರಿ ಇದರ ಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ.

ವಾಸ್ತವಾಂಶ #7

ವಾಸ್ತವಾಂಶ #7

ಸಂಶೋಧನೆಯಲ್ಲಿ ಇಲಿಗಳ ಮೇಲೆ ಈ ವಿಷಯ ದೃಢಪಟ್ಟಿದ್ದರಿಂದ ಸಂಶೋಧಕರ ಪ್ರಕಾರ ಈ ವಿಷಯ ಮನುಷ್ಯರಿಗೂ ಹೆಚ್ಚೂ ಕಡಿಮೆ ಸರಿಸಮಾನವಾಗಿ ಅನ್ವಯಿಸುತ್ತದೆ. ವಿಶೇಷವಾಗಿ ಮೂವತ್ತೈದು ವರ್ಷ ಮೀರಿದ (ನಿಜವಾದ ವಯಸ್ಸು) ಮಹಿಳೆಯರು ಗರ್ಭಿಣಿಯಾಗಬಯಸಿದರೆ ರಾತ್ರಿಯ ಬೆಳಕಿನ ಬಗ್ಗೆ ಅತಿಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ.

 

 

 

English summary

This Habit Can Reduce Pregnancy Chances!

If you are trying to get pregnant, then read this! Do you watch TV till late night? Do you have the habit of playing with your mobile phone till late night? Do you leave the bed light on throughout the night? Well, all kinds of artificial light sources are bad when you are trying to conceive, say experts. Those light sources may drastically reduce the chances of getting pregnant, say researchers. Here are more details about the study.
Subscribe Newsletter