For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಇಂತಹ ಲಕ್ಷಣಗಳನ್ನು ಅಪ್ಪಿತಪ್ಪಿಯೂ ನಿರ್ಲಕ್ಷಿಸದಿರಿ

By Divya
|

ಗರ್ಭಧಾರಣೆಯು ಮಹಿಳೆಯರಿಗೊಂದು ಅದ್ಭುತ ಅನುಭವ ನೀಡುವುದು. ಅದು ಅವರಿಗೆ ಪ್ರಕ್ಷುಬ್ಧ ಸಮಯ ಎನ್ನಬಹುದು. ತನ್ನ ದೇಹದಲ್ಲಿ ಇನ್ನೊಂದು ಜೀವವನ್ನು ಹೊತ್ತು, ರಕ್ಷಣೆ ನೀಡುವ ಒಂದು ವಿಸ್ಮಯ ಅನುಭವ ಅವಳಿಗೆ. ಈ ಸಮಯದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಅನೇಕ ಬದಲಾವಣೆಗಳು ಆಗುತ್ತವೆ. ಹಾರ್ಮೋನ್‍ಗಳ ವ್ಯತ್ಯಾಸವೇ ಇವುಗಳಿಗೆ ಕಾರಣ ಎನ್ನಬಹುದು.

ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಯು ಎಲ್ಲರಿಗೂ ಒಂದೇ ಬಗೆಯಲ್ಲಿ ಇರಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ವಿಭಿನ್ನ ರೀತಿಯ ಅನುಭವಾಗುತ್ತದೆ. ಗರ್ಭಾವಸ್ಥೆಯಲ್ಲಿರುವಾಗ ಉಂಟಾಗುವ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಚಿಕಿತ್ಸೆ ಅಥವಾ ಮಾತ್ರೆ ನೀಡಲಾಗುವುದಿಲ್ಲ.

ಗರ್ಭಿಣಿಯರ ಆರೋಗ್ಯಕ್ಕೆ ಹೇಳಿ ಮಾಡಿಸಿದ ಹಣ್ಣುಗಳು

ಕೆಲವೊಂದು ಸಮಸ್ಯೆಗಳನ್ನು ಮಾತ್ರ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಹಾಗಾಗಿ ಅದ್ಯಾವ ಸಮಸ್ಯೆ ಇದ್ದರೂ ಮೊದಲು ವೈದ್ಯರಿಗೆ ತೋರಿಸಿ, ಸಲಹೆ ಪಡೆಯಬೇಕು. ಮೇಲ್ನೋಟಕ್ಕೆ ಸಣ್ಣ ಸಮಸ್ಯೆ ಎನಿಸಿದರೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ....

ಮೇಲ್ಭಾಗದ ಹೊಟ್ಟೆ ನೋವು

ಮೇಲ್ಭಾಗದ ಹೊಟ್ಟೆ ನೋವು

ಮಧ್ಯ ಮತ್ತು ಮೇಲಿನ ಹೊಟ್ಟೆಯ ನೋವುಂಟಾದಾಗ ವಾಂತಿ, ವಾಕರಿಕೆ ಒಟ್ಟಿಗೆ ಕಾಣಿಸಿಕೊಳ್ಳುತ್ತದೆ. ಇದು ಹೃದಯ ಸುಡುವಿಕೆ, ಆಮ್ಲೀಯತೆ, ಅಜೀರ್ಣದ ಸಮಸ್ಯೆಯಿಂದಲೂ ಉಂಟಾಗಬಹುದು. ಗರ್ಭಧಾರಣೆಯ ಸಮಯದಲ್ಲಿ ಉಂಟಾಗುವ ಪ್ರಿ-ಎಕ್ಲಾಂಪ್ಸಿಯಾ ಎಂಬ ಸಮಸ್ಯೆಯಿಂದ ಉಂಟಾಗಬಹುದು. ಹಾಗಾಗಿ ಹೊಟ್ಟೆ ನೋವು ಬಂದಾಗ ಸಾಮಾನ್ಯ ಹೊಟ್ಟೆನೋವು ಎಂದು ಸುಮ್ಮನಾಗದಿರಿ. ಇದರ ಬಗ್ಗೆ ವೈದ್ಯರಲ್ಲಿ ಸೂಕ್ತ ತಪಾಸಣೆ ಮಾಡಿಸಿ.

ಕೆಳ ಹೊಟ್ಟೆ ನೋವು

ಕೆಳ ಹೊಟ್ಟೆ ನೋವು

ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಅಸ್ಥಿರಜ್ಜು ಕಾರಣದಿಂದ ಕೆಳಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಹೆಚ್ಚು ಭಯಪಡುವ ಅಗತ್ಯವಿಲ್ಲ. ಕೆಲವೊಮ್ಮೆ ಇದು ಅಪಸ್ಥಾನೀಯ ಗರ್ಭಧಾರಣೆ, ಗರ್ಭಪಾತ ಆಗುವ ಸೂಚನೆಯೂ ಆಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಉದಾಸೀನ ತೋರದಿರಿ.

ಜ್ವರ ಬಂದರೆ

ಜ್ವರ ಬಂದರೆ

ಗರ್ಭಿಣಿಯರಿಗೆ 100 ಡಿಗ್ರಿಗಿಂತ ಹೆಚ್ಚಿನ ಜ್ವರಬಂದು ಯಾವುದೇ ಶೀತದ ಅನುಭವ ಆಗದಿದ್ದರೆ ತಕ್ಷಣ ವೈದ್ಯರ ಬಳಿ ಹೋಗಬೇಕು. ದೇಹದ ಉಷ್ಣತೆ ಅತಿಯಾದರೆ ಮಗುವಿಗೆ ತೊಂದರೆಯಾಗುವುದು.

ದೃಷ್ಟಿ ಸಮಸ್ಯೆ

ದೃಷ್ಟಿ ಸಮಸ್ಯೆ

ದೃಷ್ಟಿ ಮಬ್ಬಾಗುವುದು, ಕಣ್ಣು ಕುಣಿಯುವುದು, ಚುಕ್ಕೆಗಳ ಮಸುಕು ಕಾಣಿಸಿಕೊಂಡರೆ ವೈದ್ಯರಲ್ಲಿ ಮಾತನಾಡಿ. ಇದು ಪ್ರಿ-ಎಕ್ಲಾಂಪ್ಸಿಯಾದ ತೊಂದರೆಯಿಂದ ಉಂಟಾಗುವುದು.

ಊತ ಉಂಟಾಗುವುದು

ಊತ ಉಂಟಾಗುವುದು

ಗರ್ಭಾವಸ್ಥೆಯಲ್ಲಿ ಇರುವಾಗ ಮುಖದ ಊತ, ಸಂಧಿ ಊತ ಮತ್ತು ಪಾದಗಳ ಸೆಳೆತ ಉಂಟಾಗುತ್ತದೆ. ಇದು ಒಳ ಹೊಟ್ಟೆಯ ನೋವಿನಿಂದ ಉಂಟಾಗಬಹುದು. ಈ ಬಗ್ಗೆ ವೈದ್ಯರಲ್ಲಿ ಸೂಕ್ತ ಸಲಹೆ ಪಡೆಯಬೇಕು.

ಗರ್ಭಾವಸ್ಥೆಯಲ್ಲಿ ಪಾದಗಳ ಊತ- ಇಲ್ಲಿದೆ ಫಲಪ್ರದ ಟಿಪ್ಸ್

ತಲೆನೋವು

ತಲೆನೋವು

ಆಹಾರ ತೆಗೆದುಕೊಳ್ಳುವ ಸಮಯದ ವ್ಯತ್ಯಾಸ ಮತ್ತು ಗ್ಯಾಸ್ ಸಮಸ್ಯೆಯಿಂದ ತಲೆನೋವು ಉಂಟಾಗಬಹುದು. ಆದರೆ ಕಡಿಮೆಯಾಗದೇ ಇರುವಂತಹ ತಲೆ ನೋವು ಕಾಣಿಸಿಕೊಂಡರೆ ವೈದ್ಯರಲ್ಲಿ ತೋರಿಸಬೇಕು.

ಅತಿಯಾದ ಬಾಯಾರಿಕೆ

ಅತಿಯಾದ ಬಾಯಾರಿಕೆ

ಅತಿಯಾದ ಬೆವರುವಿಕೆ, ಮೂತ್ರ ಗಾಢ ಹಳದಿಬಣ್ಣಕ್ಕೆ ತಿರುಗಿದಾಗ ಬಾಯಾರಿಕೆ ಆಗುವುದು. ಅದು ನಿರ್ಜಲೀಕರಣದ ಸಮಸ್ಯೆಯಿಂದ ಉಂಟಾಗಿದೆ ಎಂದು ಹೇಳಲಾಗುತ್ತದೆ. ಮೂತ್ರವಿಸರ್ಜನೆ ಸರಿಯಾಗಿಯೇ ಇದ್ದು ಸಹ ಅತಿಯಾದ ಬಾಯಾರಿಕೆ ಇದ್ದರೆ ಅದು ಮಧು ಮೇಹದ ಲಕ್ಷಣದ ಸಾಧ್ಯತೆ ಇರುತ್ತದೆ. ಇದರಿಂದ ಮಗುವಿಗೂ ತೊಂದರೆ ಉಂಟಾಗುವುದು. ಈ ಸಮಸ್ಯೆ ಕಾಣಿಸಿಕೊಂಡಾಗ ಬಹು ಬೇಗ ವೈದ್ಯರಲ್ಲಿ ತೋರಿಸಿಕೊಳ್ಳಬೇಕು.

ಉರಿ ಮೂತ್ರವಿಸರ್ಜನೆ

ಉರಿ ಮೂತ್ರವಿಸರ್ಜನೆ

ಮೂತ್ರವಿಸರ್ಜನೆಯ ಸಮಯದಲ್ಲಿಉರಿಯ ಸಂವೇದನೆ ಉಂಟಾದರೆ ಅದು ಯುಟಿಐ ಸೋಂಕಿನ ಪರಿಣಾಮ ಎಂದು ಪರಿಗಣಿಸಲಾಗುವುದು. ಆ ಸಂದರ್ಭದಲ್ಲಿ ಪ್ರತಿಜೀವಕಗಳ ಮೂಲಕ ಚಿಕಿತ್ಸೆ ಪಡೆಯಬೇಕಾಗುತ್ತದೆ. ಈ ಸಮಸ್ಯೆಯ ನಿವಾರಣೆಗೆ ವೈದ್ಯರನ್ನು ಭೇಟಿಯಾಗಬೇಕು.

ವಾಂತಿ

ವಾಂತಿ

ಗರ್ಭಧಾರಣೆಯ ಸಾಮಾನ್ಯ ಲಕ್ಷಣ ವಾಂತಿ ಮಾಡುವುದು. ಹಾಗಂತ ದಿನದಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಸಮಯ ವಾಂತಿಯಾದರೆ, ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಜೊತೆಗೆ ಜೀವದಲ್ಲಿ ಶಕ್ತಿ ಕಡಿಮೆಯಾಗುತ್ತದೆ. ಅತಿಯಾಗಿ ವಾಂತಿಯಾಗುತ್ತಿದ್ದರೆ ವೈದ್ಯರ ಸಲಹೆ ಪಡೆಯಲೇ ಬೇಕು.

English summary

Symptoms That Shouldn’t Be Ignored During Pregnancy

Pregnancy is an important period for any woman. It is miraculous to feel a new life developing and taking roots within one's body. However, pregnancy is also a very tumultuous time for a woman. The body undergoes a lot of changes, both physically and mentally. You must know of certain symptoms that should not be ignored during pregnancy.
X
Desktop Bottom Promotion