For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಆತಂಕ ಹುಟ್ಟಿಸುವ ಸ್ತನಗಳ ಬಣ್ಣದ ಬದಲಾವಣೆ!

By Arshad
|

ತಾಯ್ತನವೆನ್ನುವುದು ಯಾವುದೇ ಹೆಣ್ಣಿಗೆ ಅತ್ಯಂತ ಅಪ್ಯಾಯಮಾನವಾದ ಅನುಭವವಾಗಿದೆ. ವಿಶೇಷವಾಗಿ ಪ್ರಥಮವಾಗಿ ಗರ್ಭ ಧರಿಸಿದ ಮಹಿಳೆಯರಿಗೆ ಪ್ರತಿದಿನವೂ ಹೊಸ ಹೊಸ ಅಚ್ಚರಿಗಳೇ ಎದುರಾಗುತ್ತವೆ. ಒಂಬತ್ತು ತಿಂಗಳ ಅವಧಿಯಲ್ಲಿ ಇವರ ದೇಹ ಹಾಗೂ ಮನೋಭಾವದಲ್ಲಿ ಬಹಳಷ್ಟು ಬದಲಾವಣೆಗಳು, ಹೊಸತನ ಕಂಡುಬರುತ್ತದೆ.

ದೇಹದ ಬದಲಾವಣೆಗಳಲ್ಲಿ ಉಬ್ಬುವ ಹೊಟ್ಟೆಗೇ ಹೆಚ್ಚಿನ ಆದ್ಯತೆ ನೀಡುವ ಕಾರಣ ಈ ಬಗ್ಗೆ ಹೆಚ್ಚಿನ ಚರ್ಚೆ ಹಾಗೂ ಮಾಹಿತಿಗಳು ಲಭ್ಯವಾಗುತ್ತವೆ. ಆದರೆ ಉಳಿದ ಭಾಗಗಳ ಬದಲಾವಣೆಗಳ ಬಗ್ಗೆ ಕಡಿಮೆ ಆದ್ಯತೆ ನೀಡುವ ಕಾರಣ ಈ ಬಗ್ಗೆ ಸ್ವಾಭಾವಿಕವಾಗಿಯೇ ಕಡಿಮೆ ಚರ್ಚೆಗಳಾಗಿವೆ.

Breast Colour Change During Pregnancy

ನವಮಾಸಗಳಲ್ಲಿ ಒಂದೊಂದೇ ಮಾಸ ಕಳೆಯುತ್ತಿದ್ದಂತೆಯೇ ಗರ್ಭವತಿಯ ದೇಹದಲ್ಲಾಗುವ ಪ್ರಮುಖ ಬದಲಾವಣೆಗಳೆಂದರೆ ಹೊಟ್ಟೆ ಮತ್ತು ಸ್ತನಗಳ ಗಾತ್ರಗಳು ಹೆಚ್ಚುವುದು. ಕೆಲವು ಮಹಿಳೆಯರ ಸ್ತನಗಳಿಂದ ಕೊಲೆಸ್ಟ್ರಮ್ ಎಂಬ ದ್ರವವೂ ಜಿನುಗಬಹುದು. ಇದು ತಿಳಿ ಹಳದಿ ಬಣ್ಣದ ಜೀವದ್ರವವಾಗಿದ್ದು ಹುಟ್ಟುವ ಮಗುವಿಗೆ ರೋಗ ನಿರೋಧಕ ಶಕ್ತಿ ನೀಡಲು ಅತ್ಯಂತ ಅಗತ್ಯವಾಗಿದೆ. ರಕ್ತಪರಿಚಲನೆ ಹೆಚ್ಚುವ ಕಾರಣ ಸ್ತನಗಳ ಚರ್ಮದಡಿಯ ನರಗಳೂ ಹೆಚ್ಚು ಸ್ಪಷ್ಟವಾಗಿ ಗೋಚರಿಸಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ....

ಹಾರ್ಮೋನುಗಳು
ದೇಹದಲ್ಲಾಗುವ ಯಾವುದೇ ಬದಲಾವಣೆಗೆಗೆ ಹಾರ್ಮೋನುಗಳು ಪ್ರಮುಖ ಕಾರಣವಗಿವೆ. ಗರ್ಭಾವಸ್ಥೆಯ ಬದಲಾವಣೆಗಳಿಗೂ ಹಾರ್ಮೋನುಗಳೇ ಕಾರಣ. ಈ ಅವಧಿಯಲ್ಲಿ ಈಸ್ಟ್ರೋಜೆನ್ ಹಾಗೂ ಪ್ರೊಜೆಸ್ಟರಾನ್ ಎಂಬ ಎರಡು ರಸದೂತಗಳು ಹೆಚ್ಚು ಸ್ರಾವಗೊಂಡು ಅಗತ್ಯ ಬದಲಾವಣೆಗಳಿಗೆ ಪ್ರಚೋದನೆ ನೀಡುತ್ತವೆ. ದೇಹದಲ್ಲಿ ಈ ಎರಡೂ ರಸದೂತಗಳ ಪ್ರಮಾಣ ಥಟ್ಟನೇ ಏರುವ ಕಾರಣ ದೇಹದಲ್ಲಿರುವ ಮೆಲನಿನ್ ಎಂಬ ವರ್ಣದ್ರವ್ಯವೂ ಹೆಚ್ಚು ಉತ್ಪತ್ತಿಗೊಳ್ಳುತ್ತದೆ. ಈ ವರ್ಣದ್ರವ್ಯ ನಮ್ಮ ಚರ್ಮ, ಕೂದಲು, ಕಣ್ಣುಗಳು, ಉಗುರುಗಳಿಗೆ ಬಣ್ಣ ನೀಡುವ ಅಂಶವಾಗಿದ್ದು ಈ ವರ್ಣದ್ರವ್ಯ ಹೆಚ್ಚು ಸಂಗ್ರಹಗೊಂಡ ಪರಿಣಾಮವಾಗಿ ಸ್ತನತೊಟ್ಟುಗಳ ಸುತ್ತಲ ಚರ್ಮದ ಬಣ್ಣ ಗಾಢವಾಗುತ್ತದೆ.

ಬಿಸಿಲಿಗೆ ಒಡ್ಡಿಕೊಳ್ಳುವುದು
ಈ ವಾದಕ್ಕೆ ಪುಷ್ಟಿ ನೀಡಲು ಯಾವುದೇ ಸಂಶೋಧನೆ ನಡೆದಿಲ್ಲ. ಆದರೂ ಬಿಸಿಲಿಗೆ ಹೆಚ್ಚು ಹೊತ್ತು ಒಡ್ಡಿಕೊಳ್ಳುವ ಮೂಲಕ ಸ್ತನಗಳ ಸೂಕ್ಷ್ಮ ಚರ್ಮದ ಬಣ್ಣವೂ ಗಾಢಗೊಳ್ಳುತ್ತದೆ ಎಂದು ನಂಬಲಾಗಿದೆ. ಬಿಸಿಲಿಗೆ ಹೆಚ್ಚು ಒಡ್ಡಿಕೊಂಡಷ್ಟೂ ಹೆಚ್ಚು ಮೆಲನಿಸ್ ಉತ್ಪತ್ತಿಯಾಗುತ್ತದೆ. ಪರಿಣಾಮವಾಗಿ ಸ್ತನತೊಟ್ಟು ಹಾಗೂ ಇದರ ಸುತ್ತಲ ವರ್ತುಲದ ಭಾಗದ ಬಣ್ಣ ಗಾಢಗೊಳ್ಳುತ್ತದೆ.

ಮಗುವಿಗೆ ನೆರವಾಗಲು
ಈ ವಾದಕ್ಕೆ ಹೆಚ್ಚಿನ ಅರ್ಥವಿದೆ. ನವಜಾತ ಶಿಶುಗಳ ಕಣ್ಣಿನ ದೃಷ್ಟಿ ಇನ್ನೂ ಮಂಜಾಗಿರುತ್ತದೆ. ಈ ದೃಷ್ಟಿಯಿಂದ ಮಗು ಕೇವಲ ಗಾಢ ಮತ್ತು ತಿಳಿ ಬಣ್ಣದ ವ್ಯತ್ಸಾಸವನ್ನು ಮಾತ್ರವೇ ಗುರುತಿಸಬಲ್ಲುದು. ಆದ್ದರಿಂದ ಸ್ತನದ ತೊಟ್ಟು ಗಾಢವಾಗಿದ್ದಷ್ಟೂ ಮಗುವಿಗೆ ಹಾಲು ಕುಡಿಯಲು ಅನುಕೂಲಕರವಾಗುತ್ತದೆ. ಆದ್ದರಿಂದ ನಿಸರ್ಗವೇ ಈ ಭಾಗವನ್ನು ಉಳಿದ ಭಾಗಕ್ಕಿಂತ ಗಾಢವಾಗಿಸುವ ಕ್ರಮ ಕೈಗೊಂಡಿದೆ. ತನ್ಮೂಲಕ ಮಗು ಜಗತ್ತಿನ ಅತ್ಯುತ್ತಮ ಆಹಾರವನ್ನು ಸುಲಭವಗಿ ಪಡೆಯಲು ಸಾಧ್ಯವಾಗುತ್ತದೆ.

ಈ ಬಣ್ಣದ ಬದಲಾವಣೆ ಎಷ್ಟು ಕಾಲ ಇರುತ್ತದೆ?
ಈ ಬಗ್ಗೆ ತಜ್ಞರು ನೀಡುವ ವಿವರಣೆಯ ಪ್ರಕಾರ ಸ್ತನತೊಟ್ಟು ಹಾಗೂ ಇದರ ಸುತ್ತಲ ವರ್ತುಲದ ಬಣ್ಣ ಗಾಢಗೊಳ್ಳುವುದು ತಾತ್ಕಾಲಿಕವಾಗಿದ್ದು ಹೆರಿಗೆಯ ಬಳಿಕ ನಿಧಾನವಾಗಿ ತಮ್ಮ ಮೂಲ ಬಣ್ಣವನ್ನು ಪಡೆಯುತ್ತಾ ಬರುತ್ತವೆ. ಸರಿಯಾಗಿ ಹೇಳಬೇಕೆಂದರೆ ತಾಯಿ ಎಷ್ಟು ಕಾಲ ತನ್ನ ಮಗುವಿಗೆ ಹಾಲೂಡಿಸುತ್ತಾಳೋ ಅಲ್ಲಿಯವರೆಗೆ ಈ ಬಣ್ಣ ಇರುತ್ತದೆ. ಹಾಲೂಡಿಸುವುದನ್ನು ನಿಲ್ಲಿಸಿದ ಬಳಿಕ ಮೂಲಬಣ್ಣಕ್ಕೆ ಶೀಘ್ರವಾಗಿ ಮರಳುತ್ತದೆ. ಹಾಲೂಣಿಸದ ತಾಯಂದಿರ ಸ್ತನಗಳ ಬಣ್ಣ ಇನ್ನೂ ಶೀಘ್ರವಾಗಿ ಮರಳುತ್ತದೆ. ಆದರೆ ಕೆಲವು ಮಹಿಳೆಯರಲ್ಲಿ ಗಾಢಗೊಂಡ ಬಣ್ಣ ಜೀವನಪರ್ಯಂತ ಉಳಿದುಕೊಳ್ಳುತ್ತದೆ. ಆದರೆ ಇದು ನೈಸರ್ಗಿಕವಾಗಿದ್ದು ಇದರ ಬಗ್ಗೆ ಚಿಂತಿಸುವ ಯಾವುದೇ ಕಾರಣವಿಲ್ಲ. ಈ ಬಣ್ಣ ಹಿಂದಿರುಗುವ ಸಾಧ್ಯತೆಯನ್ನು ಇನ್ನೂ ಕೆಲವಾರು ಸ್ಥಿತಿಗಳು ನಿರ್ಧರಿಸುತ್ತವೆ. ಇವೆಂದರೆ ಅನುವಂಶೀಯ ಗುಣಗಳು, ದೇಹಕ್ಕೆ ತಕ್ಕನಾಗಿ ಇರಬೇಕಾದ ತೂಕ, ಸ್ಥೂಲಕಾಯ, ಧೂಮಪಾನ ಇತ್ಯಾದಿಗಳು.

ಬಣ್ಣದ ಹೊರತಾಗಿ ಸ್ತನತೊಟ್ಟು ಮತ್ತು ಸುತ್ತಲ ವರ್ತುಲದಲ್ಲಿ ಕಾಣುವ ಬದಲಾವಣೆಗಳು
ಹೆರಿಗೆಯ ಮುನ್ನ ಸ್ತನತೊಟ್ಟುಗಳು ಚಿಕ್ಕದಾಗಿದ್ದು ಒಳಗೆ ಮುದುರಿಕೊಂಡಿರುತ್ತವೆ. ಈಗ ಈ ತೊಟ್ಟುಗಳು ಹೊರಸೆಳೆದಂತಿದ್ದು ಹೆಚ್ಚು ಸ್ಪಷ್ಟವಾಗಿರುತ್ತವೆ. ಇವು ಕೊಂಚ ಊದಿಕೊಂಡಂತಿದ್ದು ಹೆಚ್ಚು ಸಂವೇದನಾಶಾಲಿಯೂ ಆಗಿರುತ್ತವೆ. ಈ ಭಾಗದಲ್ಲಿ ಸದಾ ಕಚಗುಳಿಯಾಗುವ ಅನುಭವವಾಗುತ್ತಿರುತ್ತದೆ. ಸ್ತನತೊಟ್ಟಿನ ಸುತ್ತಲ ವರ್ತುಲದ ವ್ಯಾಸ ಈಗ ಹಿಗ್ಗುತ್ತದೆ. ಹೆರಿಗೆಯ ದಿನ ಸಮೀಪಿಸುತ್ತಿದ್ದಂತೆಯೇ ವ್ಯಾಸವೂ ಹಿಗ್ಗುತ್ತಾ ಬರುತ್ತದೆ. ಹೆರಿಗೆಯ ಬಳಿಕ ಈ ವರ್ತುಲ ಕೊಂಚ ಕಡಿಮೆಯಾಗಬಹುದಾದರೂ ಮೂಲ ಗಾತ್ರಕ್ಕೆ ಬರುವ ಸಾಧ್ಯತೆ ಕಡಿಮೆ.

ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಸ್ತನತೊಟ್ಟು ಹಾಗೂ ಸುತ್ತಲ ವರ್ತುಲದ ಭಾಗ ಕೊಂಚ ಹೆಚ್ಚೇ ಎನಿಸುವಷ್ಟು ಗಾಢಗೊಳ್ಳುತ್ತವೆ.ಅಲ್ಲದೇ ಚಿಕ್ಕ ಚಿಕ್ಕ ಗುಳ್ಳೆಗಳಂತೆ ಚರ್ಮ ಕಂಡುಬರುತದೆ. ಇವು ನಿರಪಾಯಕಾರಿಯಾಗಿದ್ದು ಹೆರಿಗೆಯ ಬಳಿಕ ಕಡಿಮೆಯಾಗುತ್ತವೆ. ವೈದ್ಯಕೀಯ ಪದಗಳಲ್ಲಿ ಈ ಗುಳ್ಳೆಗಳಿಗೆ Montgomery's Tubercles ಎಂದು ಕರೆಯುತ್ತಾರೆ.

ಈ ಗುಳ್ಳೆಗಳು ವಾಸ್ತವದಲ್ಲಿ ಒಂದು ರೀತಿಯ ಎಣ್ಣೆಯನ್ನು ಸ್ರವಿಸುವ ಗ್ರಂಥಿಗಳಾಗಿದ್ದು ಇದರಿಂದ ವಿಸ್ತಾರಗೊಳ್ಳುವ ಸ್ತನದ ಚರ್ಮ ಬಿರುಕು ಬೀಳದಂತೆ ಕಾಪಾಡುತ್ತದೆ ಹಾಗೂ ತೊಟ್ಟುಗಳಿಗೆ ಅಗತ್ಯವಿರುವ ಜಾರುಕವನ್ನು ನೀಡುತ್ತದೆ. ಈ ಎಣ್ಣೆಪಸೆಯ ರುಚಿ ಮಗುವಿನ ಹಸಿವನ್ನು ಹೆಚ್ಚಿಸುತ್ತದೆ. ಅಲ್ಲದೇ ಎರಡನೇ ತಿಂಗಳಿನಿಂದ ಕಾಣುವ ಈ ಗ್ರಂಥಿಗಳ ಜೊತೆಗೇ ವರ್ತುಲದ ಅಂಚುಗಳಲ್ಲಿ ಕೆಲವು ಕೂದಲುಗಳೂ ಬೆಳವಣಿಗೆ ಪಡೆಯಬಹುದು.

English summary

Reasons For Breast Colour Change During Pregnancy

Motherhood is a very exciting phase in any woman's life. It is full of surprises, especially if you are going to be a new mom. You never know what might come your way over the course of the nine months. Even though you may know about the possible changes that might happen to the body, there are others which are less discussed and given less importance to.
X
Desktop Bottom Promotion