For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಪುಸ್ತಕ ಓದಿದರೆ ಮಕ್ಕಳ ಮೆದುಳು ಚುರುಕು

By Manu
|

ಉಸಿರಾಡಲು ಸಮಯವಿಲ್ಲದಂತಹ ಓಡಾಟದಲ್ಲಿ ಮಕ್ಕಳೊಂದಿಗೆ ಇರಲು ಸಾಧ್ಯವೇ ಆಗುತ್ತಿಲ್ಲ. ಅವರ ಜತೆ ಆಟವಾಡಲು, ಊಟ ಮಾಡಲು ಸಮಯವೇ ಸಿಗುತ್ತಿಲ್ಲ ಎಂದು ಕೆಲವು ಪೋಷಕರ ಅಭಿಪ್ರಾಯವಾಗಿದೆ. ಆಧುನಿಕ ಯುಗದಲ್ಲಿ ಇದು ನಿಜ ಕೂಡ. ಯಾಕೆಂದರೆ ಕಚೇರಿ ಹಾಗೂ ಕುಟುಂಬವನ್ನು ಹೊಂದಾಣಿಕೆ ಮಾಡಿಕೊಂಡು ಸಾಗುವುದು ತುಂಬಾ ಕಠಿಣ ನಿರ್ಧಾರವಾಗಿರುತ್ತದೆ.

ಆದರೆ ಇಲ್ಲೊಂದು ಅಧ್ಯಯನದ ಪ್ರಕಾರ ಎಷ್ಟೇ ವ್ಯಸ್ತರಾಗಿದ್ದರೂ ಪೋಷಕರು ಮಕ್ಕಳೊಂದಿಗೆ ಕುಳಿತು ಪುಸ್ತಕ ಓದುತ್ತಾ ಅವರಿಗೆ ಇದರ ಬಗ್ಗೆ ತಿಳಿಸಿದರೆ ಅವರ ಮೆದುಳು ತುಂಬಾ ಚುರುಕಾಗುತ್ತದೆ ಎಂದು ಹೇಳಿವೆ. ಪೋಷಕರು ಪುಸ್ತಕ ಓದುತ್ತಾ ಕೆಲವೊಂದು ಪದಗಳನ್ನು ಜೋರಾಗಿ ಓದುತ್ತಾ ಇದ್ದರೆ ಅದರಿಂದ ಮಕ್ಕಳ ಜ್ಞಾನ ಶಕ್ತಿಯು ಹೆಚ್ಚಾಗುತ್ತದೆ ಎಂದು ಅಧ್ಯಯನವೊಂದು ಹೇಳಿವೆ.

Kids Gives Their Brain A Boost

ಈ ಬಗ್ಗೆ ಪಲೊಸ್ ಒನ್ ಜರ್ನಲ್‌ನಲ್ಲಿ ವರದಿಯನ್ನು ಪ್ರಕಟಿಸಲಾಗಿದೆ. ಡಯಲಾಜಿಕ್ ರೀಡಿಂಗ್ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳು ಇದರಲ್ಲಿ ಭಾಗಿಯಾಗುವಂತೆ ಮಾಡಲಾಗಿದೆ. ಮಕ್ಕಳೊಂದಿಗೆ ಪೋಷಕರು ಪುಸ್ತಕ ಓದುತ್ತಾ ಇದ್ದರೆ ಆಗ ಮಕ್ಕಳು ಹಾಗೂ ಪೋಷಕರ ಮಧ್ಯೆ ಸಂವಾದವು ಹೆಚ್ಚುತ್ತದೆ. ಮಕ್ಕಳು ಪ್ರಶ್ನೆ ಕೇಳುತ್ತಾರೆ, ಪುಟ ತಿರುಗಿಸುತ್ತಾರೆ ಮತ್ತು ಪರಸ್ಪರ ಸಂವಾದ ನಡೆಸುತ್ತಾರೆ ಎಂದು ಅಧ್ಯಯನದ ಲೇಖಕ ಅಮೆರಿಕಾದ ಸಿನಿಸಿನಾಟಿ ಹಾಸ್ಪಿಟಲ್ ಮೆಡಿಕಲ್ ಸೆಂಟರ್ ನ ಜಾನ್ ಹಟ್ಟನ್ ತಿಳಿಸಿದ್ದಾರೆ.

ನಾಲ್ಕು ವರ್ಷದ ಮಕ್ಕಳು ಕಥೆ ಕೇಳುವಾಗ, ಕಥೆ ಸುಧಾರಣೆಗೆ ಸಲಹೆಗಳು ಹಾಗೂ ಅದನ್ನು ಅರ್ಥ ಮಾಡಿಕೊಳ್ಳುವುದರಿಂದ ಮೆದುಳಿನ ಚಟುವಟಿಕೆ ಹೆಚ್ಚಿನ ಮಟ್ಟದಲ್ಲಿರುತ್ತದೆ. ಇದು ಮೆದುಳಿನ ಚಟುವಟಿಕೆ ಅಥವಾ ಟರ್ಬೋಚಾರ್ಜ್ ಬೆಳವಣಿಗೆಯಾಗಿರಬಹುದು. ಇದರಲ್ಲಿ ಕಲಿಕೆಯ ಸಾಮರ್ಥ್ಯ ಹೆಚ್ಚಾಗುವುದು ಎಂದು ಹಟ್ಟನ್ ಹೇಳಿದ್ದಾರೆ.

ಮಕ್ಕಳು ತಾಯಿಯಂದಿರೊಂದಿಗೆ ಪುಸ್ತಕ ಓದುವಾಗ ಬೆರೆತುಕೊಂಡು ಸಂವಾದದಲ್ಲಿ ತೊಡಗಿಕೊಂಡಾಗ ಏನು ಆಗುತ್ತದೆ ಎಂದು ತಿಳಿಯಲು 4ರ ಹರೆಯದ ಸುಮಾರು 22 ಮಂದಿ ಬಾಲಕಿಯರನ್ನು ಎಂಆರ್ ಐ ಸ್ಕ್ಯಾನಿಂಗ್ ಗೆ ಒಳಪಡಿಸಲಾಯಿತು. ಕಥೆಯನ್ನು ಓದುವಾದ ಅವರಲ್ಲಿ ತಟಸ್ಥ ಚಟುವಟಿಕೆ ಮತ್ತು ಸಂಪರ್ಕ ಕಂಡುಬಂದಿದೆ.

ಮಕ್ಕಳಿಗೆ ಕಥೆ ಬಗ್ಗೆ ವಿವರಣೆಯನ್ನು ನೀಡಲು ಆರಂಭಿಸಿದಾಗ ಅವರ ಬಲ ಬದಿಯ ಮೆದುಳಿನ ಸೆರೆಬೆಲ್ಲರ್ ನಲ್ಲಿ ಕೆಲವೊಂದು ಚಟುವಟಿಕೆಗಳು ಕಂಡುಬಂದಿದೆ. ಸಾಮರ್ಥ್ಯ ಅರಿಯುವ, ಭಾಷೆಗೆ ಸಂಪರ್ಕ ಸಾಧಿಸುವುದು ಕಂಡು ಬಂದಿದೆ. ಪುಸ್ತಕ ಓದುವ ವೇಳೆ ಮಕ್ಕಳು ಮತ್ತು ಪೋಷಕರ ಮಧ್ಯೆ ಸಂವಾದ ನಡೆಯುವುದು ಅತೀ ಅಗತ್ಯವಾಗಿದೆ. ಇದರಲ್ಲಿ ಜಾಗೃತಿ ಕೂಡ ಮೂಡಬೇಕಾಗಿದೆ. ಆದರೆ ಮೊಬೈಲ್‌ನಂತಹ ಕೆಲವೊಂದು ತಡೆಗಳನ್ನು ನಿವಾರಣೆ ಮಾಡಬೇಕಾಗಿದೆ ಎಂದು ಹಟ್ಟನ್ ತಿಳಿಸಿದ್ದಾರೆ.

English summary

Reading Books To Kids Gives Their Brain A Boost

Parents, please take some time out from your busy schedule to read books to your kids and also engage them in the process. Researchers have found that engaging with children while reading books to them gives their brain a cognitive boost. An important point to note is that while reading to children has many benefits, simply speaking the words aloud may not be enough to improve cognitive development in preschoolers, according to the study.
X
Desktop Bottom Promotion