ಅಡುಗೆಮನೆಯ ರಾಣಿ, 'ಮೆಂತೆ' ಗರ್ಭಿಣಿಯರ ಆರೋಗ್ಯಕ್ಕೆ ಬಹಳ ಒಳ್ಳೆಯದು

By: Jaya subramanya
Subscribe to Boldsky

ಗರ್ಭಾವಸ್ಥೆಯಲ್ಲಿ ಗರ್ಭಿಣಿಯರಿಗೆ ಹೆಚ್ಚಿನ ಕಾಳಜಿ ಮತ್ತು ಆರೈಕೆಯನ್ನು ನೀಡಿ ಅವರನ್ನು ನೋಡಿಕೊಳ್ಳಲಾಗುತ್ತದೆ. ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ಅದೇ ಪದ್ಧತಿಗಳಿಂದಲೇ ಗರ್ಭಿಣಿಯರ ಆರೈಕೆಯನ್ನು ಮಾಡಲಾಗುತ್ತದೆ. ಆಧುನಿಕ ವೈದ್ಯ ವಿಜ್ಞಾನ ಏನೇ ಕಮಾಲುಗಳನ್ನು ಮಾಡಿದ್ದರೂ ಹಿಂದಿನ ಆಯುರ್ವೇದ ಪದ್ಧತಿಯನ್ನು ಇಂದಿಗೂ ಗರ್ಭಿಣಿಯರ ಆರೈಕೆಯಲ್ಲಿ ಮಾಡಲಾಗುತ್ತಿದೆ.

ನಿಸರ್ಗದಲ್ಲಿ ಗರ್ಭಿಣಿ ಮಹಿಳೆಯರ ಆರೈಕೆಗಾಗಿಯೇ ಸಾಕಷ್ಟು ಉತ್ಪನ್ನಗಳನ್ನು ಒದಗಿಸುತ್ತಿದ್ದು ಅದರಲ್ಲಿ ಮೆಂತೆ ಕೂಡ ಒಂದು. ಗರ್ಭಿಣಿಯರಲ್ಲಿ ಹಾಲಿನ ಉತ್ಪಾದನೆ, ಸ್ತನಗಳ ಹಿರಿದಾಗುಕುವಿಕೆ, ಜೋತು ಬೀಳುವಿಕೆಯನ್ನು ನಿಯಂತ್ರಿಸುವುದು, ಮೊದಲಾದ ಅಂಶಗಳನ್ನು ಇದು ಒಳಗೊಂಡಿದ್ದು ಗರ್ಭಿಣಿ ಮಹಿಳೆಯರ ಆರೈಕೆಯನ್ನು ಚೆನ್ನಾಗಿ ಮಾಡುತ್ತದೆ. ಇಂದಿನ ಲೇಖನದಲ್ಲಿ ಮೆಂತೆಯ ಕಮಾಲನ್ನು ಕುರಿತು ಇನ್ನಷ್ಟು ಮಾಹಿತಿಗಳನ್ನು ಅರಿತುಕೊಳ್ಳೋಣ.....

Pregnancy

ಗರ್ಭಾವಸ್ಥೆಯ ಸಂದರ್ಭದಲ್ಲಿ

ಗರ್ಭಿಣಿಯಾಗಿರುವಾಗ ಮೆಂತೆಯನ್ನು ಸರಿಯಾದ ಪ್ರಮಾಣದಲ್ಲಿ, ದಿನನಿತ್ಯದ ಅಡುಗೆಯಲ್ಲಿ ಸೇವನೆ ಮಾಡಬೇಕು, ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಅಂತೆಯೇ ಬೀಜವು ಆಕ್ಸಿಟನ್ ಅನ್ನು ಒಳಗೊಂಡಿದ್ದು ಇದು ಮೂತ್ರವನ್ನು ನಿಯಂತ್ರಿಸುತ್ತದೆ. ಆದರೆ ಇದರ ಸೇವನೆಯ ಮುನ್ನ ವೈದ್ಯರನ್ನು ನೀವು ಸಂಧಿಸುವುದು ಒಳಿತು

ಸ್ತನ ಗಾತ್ರ ಹಿರಿದಾಗುವಿಕೆ

ಇದು ಹಾರ್ಮೋನುಗಳನ್ನು ನಿಯಂತ್ರಿಸಿ ಸ್ತನದ ಗಾತ್ರ ಹಿರಿದಾಗುವುದನ್ನು ತಡೆಯುತ್ತದೆ. ಡಿಕಾಕ್ಷನ್ ಅಥವಾ ಚಹಾ ರೂಪದಲ್ಲಿ ಮೆಂತೆ ಬೀಜವನ್ನು ಸೇವಿಸಬಹುದಾಗಿದೆ. ವೈದ್ಯರ ಸಲಹೆಯ ಮೇರೆಗೆ ಇದರ ಸೇವನೆಯನ್ನು ಮಾಡಬೇಕು.

ಗರ್ಭಾವಸ್ಥೆಯಲ್ಲಿ ಇಂತಹ ಆಹಾರಗಳು, ತಾಯಿ-ಮಗುವಿಗೆ ಬಲು ಉಪಕಾರಿ

ಮಗುವಿನ ಜನನವನ್ನು ಸರಾಳಗೊಳಿಸುತ್ತದೆ 

ಮೆಂತೆ ಗರ್ಭಾಶಯದ ಕುಗ್ಗುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಹೆರಿಗೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಹೆರಿಗೆಯನ್ನು ಪ್ರಚೋದಿಸಲು ಸಹ ಇದು ಸಹಾಯಕವಾಗಿದೆ. ವೈದ್ಯರ ಸಲಹೆಯ ಮೇರೆಗೆ ಮೆಂತೆ ಸೇವನೆಯ ಪ್ರಮಾಣವು ಇರಬೇಕು.

ಹಾಲಿನ ಪ್ರಮಾಣವನ್ನು ಹೆಚ್ಚಿಸುತ್ತದೆ

ನೈಸರ್ಗಿಕ ಉತ್ಪನ್ನವಾಗಿರುವ ಮೆಂತೆ ಹಾಲುಣಿಸುವ ಮಹಿಳೆಯರಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಈ ಬೀಜಗಳನ್ನು ತಿಂದ ನಂತರ ಕೇವಲ ಒಂದು ದಿನ ಅಥವಾ ಎರಡು ದಿನಗಳಲ್ಲಿ ತಾಯಂದಿರಲ್ಲಿ 500 ಪ್ರತಿಶತ ಹೆಚ್ಚಿನ ಹಾಲು ಉತ್ಪಾದನೆ ಹೆಚ್ಚಿದೆ ಎಂದು ಅನೇಕ ಸಂಶೋಧಕರು ಹೇಳಿದ್ದಾರೆ. ಈ ಅಧ್ಯಯನಗಳು ಇನ್ನೂ ಹಾಲುಣಿಸುವ ಹಂತಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಿದ್ದರೂ ಸಹ, ಬೀಜಗಳಲ್ಲಿನ ಎಣ್ಣೆಗೆ ಯಾವ ಅಂಶದಿಂದ ಈ ಮಹತ್ವ ಬಂದಿದೆ ಎಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ. ಹಾಲುಣಿಸುವ ತಾಯಂದಿರು ಪ್ರತೀ ದಿನ 6-7 ಬೀಜಗಳು ಅಥವಾ ಒಂದು ಕ್ಯಾಪ್ಸುಲ್ ಅನ್ನು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳಬಹುದು.

Pregnancy

ಅಡ್ಡ ಪರಿಣಾಮಗಳು

ಮೆಂತೆ ಗರ್ಭಾಶಯದ ಕುಗ್ಗುವಿಕೆಯನ್ನು ಉತ್ತೇಜಿಸುವ ಕಾರಣದಿಂದ, ಪ್ರಸವಪೂರ್ವ ಆರೈಕೆಯ ಸಮಯದಲ್ಲಿ ತೆಗೆದುಕೊಂಡರೆ ಅದು ದಿನಾಂಕಕ್ಕಿಂತ ಮೊದಲೇ ಹೆರಿಗೆಯಾಗುವುದು ಅಥವಾ ಗರ್ಭಪಾತಕ್ಕೆ ಕಾರಣವಾಗಬಹುದು, ಇದರಿಂದಾಗಿ ಇದನ್ನು ನಿಮ್ಮ ಆಹಾರಕ್ರಮದ ಭಾಗವಾಗಿ ಸೇವಿಸುವಂತೆ ಗರ್ಭಿಣಿಯರಿಗೆ ತಿಳಿಸಲಾಗುತ್ತದೆ. ಗರ್ಭಧಾರಣೆಯ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳನ್ನು ಹೊರತುಪಡಿಸಿ, ಮೆಂತೆಯು ವಾಕರಿಕೆ, ಜಠರಗರುಳಿನ ಅಸ್ವಸ್ಥತೆ, ಚರ್ಮ ಕೆರಳಿಕೆ ಮತ್ತು ದದ್ದುಗಳನ್ನು ಉಂಟು ಮಾಡಬಹುದು, ಆದ್ದರಿಂದ ಮೆಂತೆ ಸೇವನೆಯ ಮುನ್ನ ವೈದ್ಯರನ್ನು ಭೇಟಿಯಾಗಲೇಬೇಕು. 

ಗರ್ಭಿಣಿಯರು ತಪ್ಪದೇ ಅನುಸರಿಸಬೇಕಾದ ವೈಯಕ್ತಿಕ ಕಾಳಜಿಗಳಿವು

English summary

Pregnancy Benefits Of Fenugreek

The culinary spice Fenugreek is also said to be very beneficiary for pregnant women. Fenugreek is said to play a vital role in prenatal care. From curing postnatal mastitis to milk production, controlling enlargement of breasts, has natural remedies all the postnatal related ailments. Today, take a look at how fenugreek can benefit pregnant women.
Story first published: Wednesday, August 9, 2017, 23:42 [IST]
Subscribe Newsletter