ವೈದ್ಯರೇ ಹೇಳುತ್ತಾರೆ, ಗರ್ಭಿಣಿಯರು ಕೂಡ ಆ ಕೆಲಸ ಮಾಡಬಹುದು...

By: Deepu
Subscribe to Boldsky

ಗರ್ಭನಿಂತ ಬಳಿಕ ಮಹಿಳೆಯ ದೇಹದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಕೆಲವಾರು ರಸದೂತಗಳ ಸ್ರವಿಕೆಯ ಕಾರಣ, ವಿಶೇಷವಾಗಿ ಈಸ್ಟ್ರೋಜೆನ್ ಹಾಗೂ ಪ್ರೊಜೆಸ್ಟರಾನ್ ಎಂಬ ರಸದೂತಗಳು ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಿಗೆ ಕಾರಣವಾಗುತ್ತವೆ. ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ಗರ್ಭವತಿಯ ಮನೋಭಾವ ಬದಲಾಗುತ್ತಾ ಹೋಗುತ್ತದೆ.

ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸಬಹುದಾ?

ಹುಳಿ ತಿನ್ನುವ ಬಯಕೆಯಂತೆಯೇ ಮಿಲನಕ್ಕೂ ಮನಸ್ಸು ಹೆಚ್ಚು ಬಯಸುತ್ತದೆ. ಇತರ ಸಮಯದಲ್ಲಿ ದೈಹಿಕ ಹಸಿವನ್ನು ತಣಿಸಲು ಮಿಲನ ಅಥವಾ ಸ್ವಮೈಥುನ ನೆರವಾಗುತ್ತಿದ್ದರೂ ಈಗ ಗರ್ಭಾವಸ್ಥೆಯಲ್ಲಿ ಗರ್ಭದಲ್ಲಿರುವ ಮಗುವಿಗೆ ಏನಾದರೂ ಅಪಾಯವಾಗಬಹುದೋ ಎಂಬ ದುಗುಡದಿಂದ ಈ ಬಯಕೆಯನ್ನು ಹೆಚ್ಚಿನವರು ಹತ್ತಿಕ್ಕುತ್ತಾರೆ.

ಆದರೆ ಈ ಬಗ್ಗೆ ಪ್ರಸೂತಿ ತಜ್ಞರಲ್ಲಿ ವಿಚಾರಿಸಿದರೆ ಗರ್ಭಾವಸ್ಥೆಯಲ್ಲಿ ಸ್ವಮೈಥುನದಿಂದ ಏನೂ ತೊಂದರೆ ಇಲ್ಲ, ಆದರೆ ಹೆಚ್ಚಿನ ಕಾಳಜಿ ಅಗತ್ಯವಿರುವ ಸಂದರ್ಭದಲ್ಲಿ ಮಾತ್ರ ಈ ಬಗ್ಗೆ ಹೆಚ್ಚು ಎಚ್ಚರಿರಬೇಕು ಎಂದು ವೈದ್ಯರೇ ತಿಳಿಸುತ್ತಾರೆ. ಗರ್ಭವತಿಯ ಸ್ಥಿತಿ ಸಾಮಾನ್ಯವೋ ಅತಿ ಹೆಚ್ಚಿನ ಕಾಳಜಿಯ ಅಗತ್ಯವುಳ್ಳದ್ದೋ ಎಂದು ವೈದ್ಯರು ಪ್ರಾರಂಭದಲ್ಲಿಯೇ ತಿಳಿಸುತ್ತಾರೆ. ಒಂದು ವೇಳೆ ಸಾಮಾನ್ಯ ಆರೋಗ್ಯ ಹೊಂದಿದ್ದರೆ ಗರ್ಭವತಿ ಇತರ ಸಮಯದಂತೆ ಸ್ವಮೈಥುನವನ್ನು ಮುಂದುವರೆಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.... 

ಒತ್ತಡದಿಂದ ಬಿಡುಗಡೆ

ಒತ್ತಡದಿಂದ ಬಿಡುಗಡೆ

ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಗರ್ಭಿಣಿ ದೈಹಿಕವಾಗಿಯೂ ಮಾನಸಿಕವಾಗಿಯೂ ಕೆಲವು ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಸ್ವಮೈಥುನದಲ್ಲಿಯೂ ಪಡೆಯಬಹುದಾದ ಪರಾಕಾಷ್ಠೆಯಿಂದ ದೇಹದಲ್ಲಿ ಬಿಡುಗಡೆಯಾಗುವ ರಸದೂತಗಳು ವಿವಿಧ ಒತ್ತಡಗಳಿಂದ ನಿರಾಳತೆ ದೊರಕಿಸುತ್ತದೆ. ಆದ್ದರಿಂದ ಈ ವಿಧಾನವನ್ನು ವೈದ್ಯರೂ ಪುರಸ್ಕರಿಸುತ್ತಾರೆ.

ನಿರಾಳತೆ

ನಿರಾಳತೆ

ಗರ್ಭಾವಸ್ಥೆಯಲ್ಲಿ ಗರ್ಭಿಣಿ ಎದುರಿಸುವ ಸಾಮಾನ್ಯ ತೊಂದರೆಗಳಾದ ವಾಕರಿಕೆ, ಊದಿಕೊಂದಿರುವ ಪಾದಗಳು, ಕೆಳಬೆನ್ನಿನಲ್ಲಿ ನೋವು, ತೊಡೆಗಳ ಹಿಂಭಾಗದಲ್ಲಿ ನೋವು ಮೊದಲಾದವುಗಳನ್ನು ಕಡಿಮೆಮಾಡಲು ಸುಖದ ಪರಾಕಾಷ್ಠೆ ನೆರವಾಗುತ್ತದೆ. ಇದರಿಂದ ಒತ್ತಡ ನಿವಾರಣೆಗೊಂಡು ಹೆಚ್ಚಿನ ತೊಂದರೆಗಳ ಪ್ರಮಾಣ ಕಡಿಮೆಯಾಗುತ್ತದೆ.

ರೋಗ ನಿರೋಧಕ ಶಕ್ತಿ

ರೋಗ ನಿರೋಧಕ ಶಕ್ತಿ

ಗರ್ಭಾವಸ್ಥೆಯಲ್ಲಿ ಸುಖದ ಪರಾಕಾಷ್ಠೆಯನ್ನು ಪಡೆಯುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚುವುದನ್ನು ಕಂಡುಕೊಳ್ಳಲಾಗಿದೆ. ಈ ಮೂಲಕ ದೇಹದಲ್ಲಿ ವಿವಿಧ ಆಂಟಿ ಬಾಡಿಗಳು ಉತ್ಪತ್ತಿಯಾಗಿ ದೇಹದಲ್ಲಿ ಶೀತ ನೆಗಡಿ ಮೊದಲಾದವುಗಳನ್ನು ಉಂಟುಮಾಡುವ ರೋಗಾಣುಗಳ ವಿರುದ್ಧ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ.

ಉತ್ತಮ ಆಯ್ಕೆ

ಉತ್ತಮ ಆಯ್ಕೆ

ಗರ್ಭಾವಸ್ಥೆಯಲ್ಲಿ ಮಿಲನಕ್ಕಿಂತಲೂ ಸ್ವಮೈಥುನ ಹೆಚ್ಚು ಸುರಕ್ಷಿತವಾಗಿದೆ.ಅಲ್ಲದೇ ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಆಗುವ ಬದಲಾವಣೆಗಳ ಸಮಯದಲ್ಲಿ ಮಿಲನವನ್ನು ವೈದ್ಯರು ಪುರಸ್ಕರಿಸುವುದಿಲ್ಲ. ಆದರೆ ಈ ಹಂತದಲ್ಲಿ ಸ್ವಮೈಥುನವನ್ನು ಮುಂದುವರೆಸುವುದು ಉತ್ತಮ ಆಯ್ಕೆಯಾಗಿದೆ.

ಹೆಚ್ಚಿನ ಸುಖ

ಹೆಚ್ಚಿನ ಸುಖ

ಗರ್ಭಾವಸ್ಥೆಯಲ್ಲಿ ಪಡೆಯುವ ಸುಖದ ಪರಾಕಾಷ್ಠೆ ಇತರ ಸಮಯದಲ್ಲಿ ಪಡೆಯುವುದಕ್ಕಿಂತ ಹೆಚ್ಚು ಸುಖಕರವಾಗಿರುತ್ತದೆ. ಇದಕ್ಕೆ ದೇಹದಲ್ಲಿ ಸ್ರವಿಸುವ ಕೆಲವಾರು ಹಾರ್ಮೋನುಗಳು ಕಾರಣವಾಗಿದ್ದು ಹೆಚ್ಚಿನ ರಕ್ತ ಪರಿಚಲನೆಗೆ ಒತ್ತು ನೀಡುತ್ತವೆ. ವಿಶೇಷವಾಗಿ ಜನನಾಂಗಗಳ ಭಾಗದಲ್ಲಿ ಹೆಚ್ಚಿನ ರಕ್ತಪರಿಚಲನೆಯುಂಟಾಗುವ ಮೂಲಕ ಪರಾಕಾಷ್ಠೆಯೂ ಹೆಚ್ಚಿನದ್ದೇ ಆಗಿರುತ್ತದೆ.

ಆಕ್ಸಿಟೋಸಿನ್ ಬಿಡುಗಡೆ

ಆಕ್ಸಿಟೋಸಿನ್ ಬಿಡುಗಡೆ

ಮನೋಭಾವವನ್ನು ಸರಿಪಡಿಸಲು ಮೆದುಳಿನಲ್ಲಿ ಆಕ್ಸಿಟೋಸಿನ್ ಎಂಬ ರಸದೂತ ಬಿಡುಗಡೆಯಾಗುತ್ತದೆ. ಮಿಲನ ಅಥವಾ ಸ್ವರತಿಯ ಬಳಿಕ ಮೆದುಳಿಗೆ ಈ ಆಕ್ಸಿಟೋಸಿನ್ ಸರಬರಾಜಾಗುವುದರಿಂದಲೇ ಸುಖದ ಪರಾಕಾಷ್ಠೆಯ ಅನುಭವವಾಗುತ್ತದೆ.

ಇದು ಹೆಚ್ಚು ಸುರಕ್ಷಿತ

ಇದು ಹೆಚ್ಚು ಸುರಕ್ಷಿತ

ಸಾಮಾನ್ಯವಾಗಿ ಸ್ವರತಿಗೂ ಮುನ್ನ ಪ್ರತಿ ಗರ್ಭವತಿಯೂ ಈ ಕಾರ್ಯದಿಂದ ಗರ್ಭದಲ್ಲಿರುವ ಮಗುವಿಗೇನೂ ತೊಂದರೆಯಾಗಲಾರದು ತಾನೇ ಎಂಬ ದುಗುಡವಿರುತ್ತದೆ. ವಾಸ್ತವವಾಗಿ ಸ್ವರತಿಯಿಂದ ಗರ್ಭದಲ್ಲಿರುವ ಮಗುವಿಗೆ ಯಾವುದೇ ಹಾನಿಯಿಲ್ಲ.

ಎಚ್ಚರಿಕೆ

ಎಚ್ಚರಿಕೆ

ಒಂದು ವೇಳೆ ವೈದ್ಯರು ಗರ್ಭಿಣಿಯ ಆರೋಗ್ಯ, ರಕ್ತಸ್ರಾವ, ಗರ್ಭಕಂಠದ ಆರೋಗ್ಯ ಮೊದಲಾದ ಮಾಹಿತಿಗಳನ್ನು ಪರಿಶೀಲಿಸಿ ಹೆರಿಗೆಗೂ ಮುನ್ನ ಮಿಲನ ಅಥವಾ ಸ್ವರತಿಯಲ್ಲಿ ತೊಡಗುವುದನ್ನು ನಿಷೇಧಿಸಿದರೆ ಇದನ್ನು ತಪ್ಪದೇ ಪಾಲಿಸಬೇಕಾಗಿರುತ್ತದೆ.

English summary

Is It Safe To Masturbate During Pregnancy?

Is it safe to masturbate during pregnancy? Pregnancy is a phase when hormones can play havoc. Estrogen, testosterone and progesterone are responsible for many moods, cravings and feelings during pregnancy. In certain times during pregnancy, even the cravings for intercourse may arise. But many women put aside the idea of masturbation during pregnancy as they perceive it unsafe for the foetus.
Story first published: Friday, August 18, 2017, 12:26 [IST]
Subscribe Newsletter