Just In
Don't Miss
- Movies
ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆ ಸಲ್ಮಾನ್ ಖಾನ್!
- Finance
ಡಿಸೆಂಬರ್ 7ರ ಚಿನ್ನ- ಬೆಳ್ಳಿ ದರ ಹೀಗಿದೆ
- News
ತೆಲಂಗಾಣ ಎನ್ಕೌಂಟರ್ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಹೇಳಿದ್ದೇನು?
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Technology
ಫೋಕಸ್ ಮೂಡ್ ಆಯ್ಕೆ ಪರಿಚಯಿಸಿದ ಗೂಗಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಕೇಸರಿಯ ಹಾಲು ಗರ್ಭಿಣಿಯರು ಕುಡಿಯಬಹುದೇ?
ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಹೆಚ್ಚು ಕಾಳಜಿಯನ್ನು ಮಹಿಳೆಯು ತಾವು ಸೇವಿಸುವ ಆಹಾರದ ಕಡೆಗೆ ನೀಡಬೇಕಾಗುತ್ತದೆ. ನೀವು ಈ ಸಮಯದಲ್ಲಿ ಯಾವ ಬಗೆಯ ಆಹಾರವನ್ನು ತೆಗೆದುಕೊಳ್ಳುತ್ತೀರಿ ಎಂಬುದನ್ನು ಆಧರಿಸಿ ನಿಮ್ಮ ಮತ್ತು ಮಗುವಿನ ಆರೋಗ್ಯ ಸುಸ್ಥಿತಿಯಲ್ಲಿರಲಿದೆ. ಗರ್ಭಾವಸ್ಥೆಯಲ್ಲಿ ಹೆಚ್ಚಾಗಿ ಮಹಿಳೆಯರಿಗೆ ಪ್ರೊಟೀನ್ ವಿಟಮಿನ್ ಉಳ್ಳ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ, ಇದರ ಜೊತೆಗೆ ತಾಯಿ ಕೂಡ ತನಗೆ ಸೇರುವ ಆಹಾರವನ್ನು ಗಮನವಿಟ್ಟು ಸೇವಿಸಬೇಕು. ವಾಕರಿಕೆ, ವಾಂತಿ, ಹಸಿವಿಲ್ಲ ಎಂಬ ಕಾರಣಕ್ಕೆ ಆಹಾರಗಳನ್ನು ಸರಿಯಾಗಿ ತೆಗೆದುಕೊಳ್ಳದೇ ಇರುವುದು ಮುಂದೆ ಹಲವಾರು ಸಮಸ್ಯೆಗಳನ್ನು ತಂದೊಡ್ಡಬಹುದು. ಆಹಾರ ಸೇವನೆಗೂ ಮುಂಚೆ ನಿಮ್ಮ ವೈದ್ಯರನ್ನು ಆಗಾಗ ಸಮಾಲೋಚಿಸುವುದು ಒಳಿತು.
ಚರ್ಮಕ್ಕೆ ಹಾಲು ಮತ್ತು ಕೇಸರಿ ಬಳಸಿ ಅದ್ಭುತ ನೋಡಿ!
ಏಕೆಂದರೆ ನೀವು ಸೇವಿಸುವ ಎಲ್ಲಾ ಆಹಾರ ನಿಮ್ಮ ದೇಹಕ್ಕೆ ಒಗ್ಗಬೇಕೆಂದೇನಿಲ್ಲ, ಆ ಸಮಯದಲ್ಲಿ ಸಾಧ್ಯವಾದಷ್ಟು ಕಾಳಜಿಯನ್ನು ತೆಗೆದುಕೊಳ್ಳುವುದು ಸೂಕ್ತ. ಇಂದಿನ ಲೇಖನದಲ್ಲಿ ನಾವು ಚರ್ಚಿಸುತ್ತಿರುವ ವಿಷಯ ಕೇಸರಿಯ ಕುರಿತಾಗಿದೆ. ಹುಟ್ಟುವ ಮಗು ಕೆಂಪಗೆ, ದುಂಡಗೆ ಇರಬೇಕು ಎಂದರೆ ಹಾಲಿಗೆ ಕೇಸರಿ ಹಾಕಿ ಗರ್ಭಿಣಿಯರಿಗೆ ನಮ್ಮ ಅಜ್ಜಿಯಂದಿರ ಕಾಲದಿಂದಲೂ ನೀಡುತ್ತಿದ್ದಾರೆ. ವೈದ್ಯಲೋಕ ಕೂಡ ಗರ್ಭಿಣಿಯು ಕೇಸರಿಯನ್ನು ತಮ್ಮ ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳಬೇಕೆಂದೇ ಸಲಹೆಯನ್ನು ನೀಡುತ್ತಾರೆ. ಹೆಚ್ಚಿನ ಆರೋಗ್ಯ ಅಂಶಗಳನ್ನು ಕೇಸರಿಯು ತನ್ನಲ್ಲಿ ಒಳಗೊಂಡಿದ್ದು ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಸ್ತಮಾ ಮೊದಲಾದ ಕಾಯಿಲೆಗಳಿಗೆ ಔಷಧವನ್ನು ಇದು ಒಳಗೊಂಡಿದೆ.
ಕೇಸರಿ+ ಜೇನು ತುಪ್ಪದ ಫೇಸ್ ಪ್ಯಾಕ್-ದುಬಾರಿಯಾದರೂ ತ್ವಚೆಗೆ ಒಳ್ಳೆಯದು
ನೀವು ಕುಡಿಯುವ ಹಾಲಿಗೆ ಚಿಟಿಕೆಯಷ್ಟು ಕೇಸರಿಯನ್ನು ಹಾಕಿಕೊಂಡು ಸೇವಿಸಿ. ಕೇಸರಿ ಸೇವನೆಯನ್ನು ನಿಮ್ಮ ಎರಡನೇ ತ್ರೈಮಾಸಿಕದಿಂದ ಆರಂಭಿಸಿ ಎಂಬುದಾಗಿ ವೈದ್ಯರು ಸಲಹೆ ನೀಡುತ್ತಾರೆ. ಇನ್ನು ಕೇಸರಿಯ ಖರೀದಿಯನ್ನು ಮಾಡುವಾಗ ಕೂಡ ನೀವು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಪ್ಯಾಕ್ ಮಾಡದೇ ಇರುವ ಕೇಸರಿಯನ್ನು ಅಂಗಡಿಯಿಂದ ಖರೀದಿಸಬೇಡಿ. ಸೀಲ್ ಆಗಿರುವ ಉತ್ತಮ ಗುಣಮಟ್ಟದ ಕೇಸರಿಯನ್ನೇ ಮಾಡಿ. ಹಾಗಿದ್ದರೆ ಬನ್ನಿ ಕೇಸರಿಯ ಕುರಿತಾದ ಇನ್ನಷ್ಟು ಉಪಯೋಗಕಾರಿ ಅಂಶಗಳನ್ನು ಇಂದಿಲ್ಲಿ ತಿಳಿದುಕೊಳ್ಳೋಣ...

ಜೀರ್ಣಕ್ರಿಯೆಗೆ ಸಹಕಾರಿ
ಗರ್ಭಿಣಿ ಸ್ತ್ರೀಯರಲ್ಲಿ ಕೇಸರಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹಸಿವನು ಹೆಚ್ಚಿಸುತ್ತದೆ. ಜೊತೆಗೆ ಇದು ಇಡೀ ದೇಹದಲ್ಲಿ ರಕ್ತವು ಸಮ ಪ್ರಮಾಣದಲ್ಲಿ ಪಸರಿಸುವಂತೆ ಮಾಡುತ್ತದೆ. ಜೊತೆಗೆ ಇದು ಗ್ಯಾಸ್ಟ್ರೊಇಂಟೆಸ್ಟೆನಿಲ ಆಸಿಡಿಟಿಯನ್ನು ತಡೆಯುತ್ತದೆ. ಹೀಗೆ ಮಾಡಲು ಇದು ಜಠರದಲ್ಲಿ ಒಂದು ಪೊರೆಯನ್ನು ಸೃಷ್ಟಿಸುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ರಕ್ತದೊತ್ತಡ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಲು ಹಾಲಿನೊಂದಿಗೆ 3-4 ಎಳೆಗಳನ್ನು ಬೆರೆಸಿಕೊಂಡು ಸೇವಿಸಿ. ಇದರಿಂದ ಜೊತೆಗೆ ಮಹಿಳೆಯರಲ್ಲಿ ಮೂಡ್ ಸ್ವಿಂಗ್ ಆಗುವ ಸಮಸ್ಯೆಯು ಸಹ ಕಡಿಮೆಯಾಗುತ್ತದೆ. ಜೊತೆಗೆ ಇದರಲ್ಲಿ ಸ್ನಾಯುಗಳನ್ನು ವಿಶ್ರಾಂತಿ ನೀಡುವ ಹಲವಾರು ಅಂಶಗಳು ಇರುತ್ತವೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಗರ್ಭಕೋಶದ ಉದ್ಧೀಪಕವಾಗಿ ಕೆಲಸ ಮಾಡುತ್ತದೆ.

ಬೆಳಗ್ಗಿನ ವಾಕರಿಕೆ ನಿಯಂತ್ರಣ
ಗರ್ಭಾವಸ್ಥೆಯಲ್ಲಿ ಬೆಳಗ್ಗಿನ ಸುಸ್ತು, ವಾಕರಿಕೆ, ಹೊಟ್ಟೆ ತೊಳೆಸುವಿಕೆಯನ್ನು ನಿಯಂತ್ರಣದಲ್ಲಿಡಲು ಕೇಸರಿ ನಿಮಗೆ ಸಹಕಾರಿ ಎಂದೆನಿಸಲಿದೆ. ಕೇಸರಿ ಚಹಾವನ್ನು ಸೇವಿಸಿ. ಇದರ ಪರಿಮಳವು ನಿಮ್ಮ ಮೂಡ್ ಅನ್ನು ತಾಜಾಗೊಳಿಸುತ್ತದೆ ಮತ್ತು ಬೆಳಗ್ಗಿನ ಸಮಯದಲ್ಲಿ ತುಸು ಆರಾಮವನ್ನು ನೀಡುತ್ತದೆ.

ಅನೀಮಿಯಾ ತಡೆ
ಕಬ್ಬಿಣದ ಅಂಶವನ್ನು ಕೇಸರಿಯು ಹೊಂದಿದ್ದು, ಇದು ರಕ್ತದಲ್ಲಿ ಕೆಂಪು ಕಣಗಳನ್ನು ಉತ್ಪಾದಿಸುತ್ತದೆ. ಈ ಸಮಯದಲ್ಲಿ ಹೆಚ್ಚಿನ ಗರ್ಭಿಣಿಯರು ಆಯಾಸಕ್ಕೆ ಒಳಗಾಗುತ್ತಾರೆ. ಮತ್ತು ಕೆಂಪು ರಕ್ತಕಣಗಳ ಕೊರತೆಯನ್ನು ಎದುರಿಸುತ್ತಾರೆ. ಆದ್ದರಿಂದ ಕೇಸರಿಯ ಸೇವನೆಯನ್ನು ತಪ್ಪದೆ ಮಾಡಿ.

ನಿದ್ದೆಯನ್ನು ಹೆಚ್ಚಿಸುತ್ತದೆ
ಗರ್ಭಿಣಿಯರಿಗೆ ನಿದ್ರಾಕೊರತೆ ಕಾಡುತ್ತಿದೆ ಎಂದಾದಲ್ಲಿ ಕೇಸರಿಯು ನಿದ್ದೆಮಾತ್ರೆಯಂತೆ ಕೆಲಸ ಮಾಡುತ್ತದೆ. ಒಂದು ಗ್ಲಾಸ್ ಹಾಲಿಗೆ ಚಿಟಿಕೆಯಷ್ಟು ಕೇಸರಿಯನ್ನು ಬೆರೆಸಿ ಕುಡಿಯಿರಿ. ನಿಮಗೆ ಧನಾತ್ಮಕ ಫಲಿತಾಂಶ ದೊರೆಯುವುದು ಖಂಡಿತ.

ಅಲರ್ಜಿಗಳ ಜೊತೆ ಹೋರಾಡುತ್ತದೆ
ಗರ್ಭಾವಸ್ಥೆಯಲ್ಲಿ ಕೇಸರಿಯ ಪ್ರಯೋಜನವೇನು? ಈ ಸಮಯದಲ್ಲಿ ನಿಮಗೆ ಬೇರೆ ಬೇರೆ ಅಲರ್ಜಿಗಳು ಕಾಡಬಹುದು. ತುರಿಕೆ, ತ್ವಚೆಯ ಸಮಸ್ಯೆಗಳು, ಕೆಮ್ಮು ಮತ್ತು ನೆಗಡಿ ಇತ್ಯಾದಿ. ಈ ಸಮಯದಲ್ಲಿ ಕೇಸರಿಯನ್ನು ಬಳಸಿ. ನಿಮಗೆ ಜ್ವರವಿದ್ದರೆ ಉಷ್ಣತೆಯನ್ನು ಕಡಿಮೆ ಮಾಡಲು ಕೇಸರಿ ಮತ್ತು ಶ್ರೀಗಂಧವನ್ನು ಅರೆದುಕೊಂಡು ಆ ಪೇಸ್ಟ್ ಅನ್ನು ಹಚ್ಚಿಕೊಳ್ಳಿ.

ಮಗುವಿನ ಚಲನೆ
ಮಗುವಿನ ಚಲನವಲನಗಳು ಗರ್ಭಿಣಿ ಮಹಿಳೆಯರು 5 ತಿಂಗಳ ನಂತರ ಮಗುವಿನ ಚಲನವಲನವನ್ನು ತಮ್ಮ ಹೊಟ್ಟೆಯಲ್ಲಿಯೇ ಅನುಭವಿಸಬಹುದು. ಕೇಸರಿಯನ್ನು ಹಾಲಿನಲ್ಲಿ ಬೆರೆಸಿಕೊಂಡು ಸೇವಿಸುವುದರಿಂದ ಇದರ ಪರಿಣಾಮ ಉತ್ತಮವಾಗಿರುತ್ತದೆ. ಇದು ದೇಹದ ಉಷ್ಣಾಂಶವನ್ನು ಅಧಿಕ ಮಾಡುತ್ತದೆ. ಹಾಗಾಗಿ ಗರ್ಭಿಣಿಯರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಲು ಹೋಗಬಾರದು.