ಕುಳ್ಳಗಿರುವ ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ಸಮಸ್ಯೆಯಾಗಬಹುದಂತೆ!

Posted By: Divya Pandith
Subscribe to Boldsky

ಗರ್ಭಾವಸ್ಥೆಯಲ್ಲಿ ಎಷ್ಟೇ ಕಾಳಜಿ ವಹಿಸಿದರೂ ಕಡಿಮೆಯೇ ಎಂದು ಹೇಳಬಹುದು. ತಾಯಿಯಾಗುವುದು ಮಹಿಳೆಯರಿಗೆ ಪ್ರಕೃತಿ ಕೊಟ್ಟ ಒಂದು ವರದಾನವಾಗಿರಬಹುದು. ಆದರೆ ಈ ಒಂದು ವಿಶೇಷ ಸಂದರ್ಭದಲ್ಲಿ ಹೆಚ್ಚು ಕಾಳಜಿ ಹಾಗೂ ಆರೈಕೆಗೆ ಒಳಗಾಗುವ ಅನಿವಾರ್ಯತೆ ಇರುತ್ತದೆ. ಗರ್ಭಾವಸ್ಥೆಯಲ್ಲಿರುವಾಗ ಒಂದು ಬಗೆಯ ಕಾಳಜಿವಹಿಸಬೇಕಾದರೆ ಪ್ರಸವದ ಸಂದರ್ಭದಲ್ಲಿ ಹಾಗೂ ಪ್ರಸವದ ನಂತರ ವಿಶೇಷವಾದ ಪೋಷಣೆ ಅಗತ್ಯವಾಗಿರುತ್ತದೆ. ಪ್ರಸವ ಎನ್ನುವ ವಿಶೇಷ ಘಳಿಗೆಗೆ ಮಹಿಳೆಯ ಎತ್ತರವು ಬಹಳ ಪ್ರಮುಖ ಪಾತ್ರವಹಿಸುತ್ತದೆ ಎನ್ನಲಾಗುತ್ತದೆ.

ಹೌದು, ಇತ್ತೀಚೆಗೆ ಸಂಶೋಧಕರು ನಡೆಸಿದ ಕೆಲವು ಅಧ್ಯಯನದಿಂದ ದೃಢ ಪಟ್ಟಿದೆ. ಅವರು ಸುಮಾರು 3000 ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಿದ್ದರು. ಅದರಲ್ಲಿ ಎತ್ತರದಲ್ಲಿ ಕಡಿಮೆ ಇರುವ ಮಹಿಳೆಯರು ಅಕಾಲಿಕ ಪ್ರಸವಕ್ಕೆ ಕಾರಣರಾದರು ಎನ್ನಲಾಗುತ್ತದೆ. ಸುರಕ್ಷಿತವಾದ ಪ್ರಸವಕ್ಕೆ ಮಹಿಳೆಯರ ಎತ್ತರ, ಪೋಷಕಾಂಶ ಭರಿತ ಆಹಾರ, ಸೂಕ್ತ ವ್ಯಾಯಾಮ ಹಾಗೂ ಜೀವನ ಶೈಲಿಯು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಕಂಡುಕೊಂಡರು.

ಹೆರಿಗೆಯ ನಂತರದ ಹೊಟ್ಟೆ ಕರಗಿಸಲು ಸುಲಭ ಉಪಾಯಗಳು ಇಲ್ಲಿವೆ

ಅಧ್ಯಯನದಲ್ಲಿ ಎತ್ತರವಿರದ ಮಹಿಳೆಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ಹಾಗೂ ಪ್ರಸವದ ಸಮಯದಲ್ಲಿ ಯಾವೆಲ್ಲಾ ಸಮಸ್ಯೆಗಳು ಉಂಟಾಗಬಹುದು? ಹಾಗೂ ಯಾವ ಬಗೆಯ ಕಾಳಜಿಯನ್ನು ವಹಿಸಬಹುದು ಎನ್ನುವುದರ ಬಗ್ಗೆಯೂ ಅಧ್ಯಯನ ನಡೆಸಲಾಯಿತು ಎನ್ನಲಾಗುತ್ತದೆ. ಹಾಗಾದರೆ ಯಾವೆಲ್ಲಾ ಸಮಸ್ಯೆಗಳು ಕಾಡಬಹುದು? ಎನ್ನುವುದರ ಬಗ್ಗೆ ಸೂಕ್ತ ವಿವರಣೆಯನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡುತ್ತಿದೆ...

ಕಡಿಮೆ ಎತ್ತರ ಇರುವ ಮಹಿಳೆಯರ ಸಮಸ್ಯೆ

ಕಡಿಮೆ ಎತ್ತರ ಇರುವ ಮಹಿಳೆಯರ ಸಮಸ್ಯೆ

ಎತ್ತರದಲ್ಲಿ ಕಡಿಮೆ ಇರುವ ಮಹಿಳೆಯರಿಗೆ ಸಾಮಾನ್ಯವಾದ ಪ್ರಸವವು ಕಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣ ಯೂನಿಯ ಸಮಸ್ಯೆ ಎಂದು ಹೇಳಲಾಗುವುದು. ನಿರ್ದಿಷ್ಟ ಎತ್ತರ ಹೊಂದಿರದ ಮಹಿಳೆಯರಲ್ಲಿ ಯೂನಿಯ ಗಾತ್ರ ಚಿಕ್ಕದಾಗಿರುತ್ತದೆ. ಇದು ಪ್ರಸವಕ್ಕೆ ಅಡ್ಡಿಯನ್ನುಂಟುಮಾಡುವುದು. ಈ ಸಮಸ್ಯೆಯು ಐದು ಅಡಿ ಎತ್ತರಕ್ಕಿಂತ ಕಡಿಮೆ ಇರುವ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನಲಾಗುತ್ತದೆ. ಕೆಲವು ಅಪರೂಪದ ವ್ಯಕ್ತಿಗಳಿಗೆ ಸಾಮಾನ್ಯವಾಗಿಯೇ ಪ್ರಸವ ಉಂಟಾಗುವುದು ಎನ್ನಲಾಗುತ್ತದೆ.

ಅಕಾಲಿಕ ಪ್ರಸವ

ಅಕಾಲಿಕ ಪ್ರಸವ

ತಾಯಿಯ ಎತ್ತರ ಕಡಿಮೆ ಇದ್ದಾಗ ಅಕಾಲಿಕ ಪ್ರಸವ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಗರ್ಭಾವಸ್ಥೆಯ 37ನೇ ವಾರದಲ್ಲಿಯೇ ಹೆಚ್ಚಿನ ಮಹಿಳೆಯರು ಪ್ರಸವವನ್ನು ಹೊಂದುತ್ತಾರೆ ಎನ್ನಲಾಗುತ್ತದೆ. ಇದಕ್ಕೆ ಕಾರಣ ಮಗುವಿಗೆ ಸೂಕ್ತ ರೀತಿಯ ಜೀರ್ಣಕ್ರಿಯೆ ಹಾಗೂ ಉಸಿರಾಟದ ಪ್ರಕ್ರಿಯೆಗೆ ತೊಡುಕು ಉಂಟಾಗಬಹುದು. ಆ ಕಾರಣದಿಂದಲೇ ಪ್ರಸವ ಉಂಟಾಗಬಹುದು ಎಂದು ಅಧ್ಯಯನವು ತಿಳಿಸಿದೆ.

ಸೆಫಲೋಪೆಲ್ವಿಕ್ ವಿಷಮ

ಸೆಫಲೋಪೆಲ್ವಿಕ್ ವಿಷಮ

ಸೆಫಲೋಪೆಲ್ವಿಕ್ ವಿಷಮ ಸ್ಥಿತಿಯಲ್ಲಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಗುವಿನ ತಲೆಯು ಹೊರಬರಲು ವ್ಯಾಪಕವಾಗಿ ತೊಂದರೆ ಉಂಟಾಗುವುದು ಎಂದು ಅಧ್ಯನ ದೃಢಪಡಿಸಿದೆ. ಎತ್ತರ ಇರುವ ಮಹಿಳೆಯರಿಗೆ ಹೋಲಿಸಿದರೆ ಕಡಿಮೆ ಎತ್ತರ ಇರುವ ಮಹಿಳೆಯರಿಗೆ ಪೆಲ್ವಿಕ್ ಸಮಸ್ಯೆ ಇರುತ್ತದೆ ಎಂದು ಹೇಳಲಾಗುತ್ತದೆ.

ಪ್ರಸೂತಿಯ ಫಿಸ್ತುಲಾ

ಪ್ರಸೂತಿಯ ಫಿಸ್ತುಲಾ

ಪ್ರಸೂತಿಯ ಫಿಸ್ತುಲಾವು ಯೋನಿ ಮತ್ತು ಮೂತ್ರದ ಪ್ರದೇಶ ಅಥವಾ ಗುದನಾಳದ ನಡುವೆ ರೂಪುಗೊಳ್ಳುವ ರಂಧ್ರ. ಎರಡು ಅಂಗಗಳು ನಡುವಿನ ಚರ್ಮವು ಅಂಗೀಕಾರಕ್ಕೆ ದಾರಿ ನೀಡುತ್ತದೆ. ಮಗುವಿನ ಬೆಳವಣಿಗೆ ಹೆಚ್ಚಾಗಿದ್ದರೆ ಇದು ಮಗುವಿನ ತಳ್ಳುವಿಕೆಗೂ ಅನುಕೂಲವಾಗುತ್ತದೆ. ಕುಳ್ಳಗಿರುವ ಮಹಿಳೆಯರಲ್ಲಿ ಫಿಸ್ತುಲಾ ಸಂಭವನೀಯತೆಯು ಕಡಿಮೆಯಾಗಿರುತ್ತದೆ.

ಮಗುವಿನ ತೂಕದಲ್ಲಿ ಕಡಿಮೆ

ಮಗುವಿನ ತೂಕದಲ್ಲಿ ಕಡಿಮೆ

ಯೂಟ್ರಸ್ ಮತ್ತು ಪೆಲ್ವಿಕ್ ಗಾಥ್ರವು ಚಿಕ್ಕದಾಗಿರುತ್ತದೆ. ಹಾಗಾಗಿ ಮಗುವಿನ ಬೆಳವಣಿಗೆ ಅಗತ್ಯವಾಗುವಷ್ಟು ಜಾಗ ಸಿಗುವುದಿಲ್ಲ. ಇದರಿಂದಾಗಿ ಮಗುವಿನ ತೂಕ ಕಡಿಮೆಯಾಗಿರುತ್ತದೆ. ಪ್ರಸವದ ನಂತರ ಮಗುವಿನ ಎತ್ತರದ ಬೆಳವಣಿಗೆ ಹೊಂದಬಹುದು.

ಎಪಿಸೊಟಮಿ

ಎಪಿಸೊಟಮಿ

ಈ ಸಮಸ್ಯೆಯು ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಮೊದಲ ಪ್ರಸವದ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಇದನ್ನು ಅನುಭವಿಸಬೇಕಾಗುವುದು. ಪ್ರಸವದ ಸಮಯದಲ್ಲಿ ಮಗುವಿನ ತಲೆ ಹೊರ ಬರದೆ ಇರುವಾಗ ಯೋನಿಯಿಂದ ಗುದನಾಳದ ಕಡೆಗೆ ಚಿಕ್ಕದಾಗಿ ಕತ್ತರಿಸಲಾಗುತ್ತದೆ. ಇದು ಎತ್ತರವಿರುವ ಮಹಿಳೆಯರಿಗೆ ಅಷ್ಟು ಸಮಸ್ಯೆಯಾಗದು. ಅದೇ ಗಾಥ್ರದಲ್ಲಿ ಚಿಕ್ಕದಾಗಿರುವ ಮಹಿಳೆಯರಿಗೆ ಈ ಛೇದನವನ್ನು ಹೆಚ್ಚು ಆಳವಾಗಿ ಮಾಡಬೇಕಾಗುವುದು. ಅಲ್ಲದೆ ಈ ಗಾಯ ಒಣಗಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದು.

ಭ್ರೂಣದ ತೊಂದರೆ

ಭ್ರೂಣದ ತೊಂದರೆ

ಕೆಲವೊಮ್ಮೆ ಭ್ರೂಣ ಬೆಳವಣಿಗೆಗೆ ಸಮಸ್ಯೆ ಉಂಟಾಗುವುದು. ಭ್ರೂಣಕ್ಕೆ ಸೂಕ್ತ ಪ್ರಮಣದಲ್ಲಿ ಆಮ್ಲಜನಕದ ರವಾನೆ ಆಗದೆ ಇರುತ್ತದೆ. ಆ ಸಂದರ್ಭದಲ್ಲಿ ಮಗುವಿನ ಬೆಳವಣಿಗೆಗೆ ಹಾನಿಕಾರಕ ಪ್ರಭಾವ ಉಂಟಾಗುವುದು.

ವಿಪರೀತವಾದ ರಕ್ತಸ್ರಾವ

ವಿಪರೀತವಾದ ರಕ್ತಸ್ರಾವ

ಯೋನಿಯ ಗಾತ್ರವು ಕಡಿಮೆಯಾಗಿರುತ್ತವೆ. ಹಾಗಾಗಿ ಮಗು ಹೊರ ಬರುವಾಗ ಅಧಿಕವಾದ ಒತ್ತಡ ಹಾಗೂ ರಕ್ತ ಸ್ರಾವ ಉಂಟಾಗುವುದು. ಇದರಿಂದ ವಿಪರೀತವಾದ ಯೋನಿ ನೋವು ಉಂಟಾಗುವುದು. ಜೊತೆಗೆ ಅಪರಿಮಿತವಾದ ರಕ್ತಸ್ರಾವ ಉಂಟಾಗಲು ಕಾರಣವಾಗಬಹುದು.

ತೊಡಕುಗಳ ಸಾಧ್ಯತೆಯನ್ನು ಕಡಿಮೆ ಮಾಡುವ ಪರಿ

ತೊಡಕುಗಳ ಸಾಧ್ಯತೆಯನ್ನು ಕಡಿಮೆ ಮಾಡುವ ಪರಿ

ಗರ್ಭಾವಸ್ಥೆಯಲ್ಲಿ ಉಂಟಾಗುವ ಸಮಸ್ಯೆಗಳು ಸಾಮಾನ್ಯವಾಗಿ ತಾಯಿಯ ಎತ್ತರ ಹಾಗೂ ಜೀನ್ಸ್‍ಗಳನ್ನು ಒಳಗೊಂಡಿರುತ್ತದೆ. ಬಾಲ್ಯದಲ್ಲಿ ಪೌಷ್ಟಿಕಾಂಶದ ಕೊರತೆ ಅನುಭವಿಸಿದ್ದರೆ ಎತ್ತರದ ಬೆಳವಣಿಗೆಯಲ್ಲಿ ಕುಂಠಿತ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂತ ತಾಯಂದಿರುವ ಗರ್ಭಾವಸ್ಥೆಯ ಸಮಯದಲ್ಲಿ ಸೂಕ್ತ ರೀತಿಯ ಆಹಾರ ಸೇವನೆ ಮಾಡಬೇಕು. ಗರ್ಭಾವಸ್ಥೆಯ ಪ್ರಕ್ರಿಯೆಯು ಸುಲಭ ಗೊಳಿಸಲು ಸೂಕ್ತ ರೀತಿಯ ಆಹಾರ, ವ್ಯಾಯಾಮ, ತೂಕವನ್ನು ಹೊಂದಿರಬೇಕಾಗುವುದು. 18-23 ತಿಂಗಳ ಅಂತರದಲ್ಲಿ ಗರ್ಭಧಾರಣೆಯ ಅಂತರವನ್ನು ಕಾಯ್ದುಕೊಳ್ಳಬೇಕು.

English summary

do-shorter-women-have-more-complications-giving-birth

Pregnancy is a very exciting phase in life with full of surprises. The body of a woman undergoes massive transformation during this time, making herself ready for motherhood. The changes that happen can be both good and bad. With the kind of information available today, most women equip themselves to face these changes in advance. But this article is about a characteristic of a woman that cannot be changed and that influences delivery to a certain extent. It is a woman's height.