ಅಧ್ಯಯನ ವರದಿ: ಗರ್ಭದಲ್ಲಿರುವ ಮಗುವಿಗೆ ಎಲ್ಲವೂ ಅರ್ಥವಾಗುತ್ತದೆಯಂತೆ!

By: Hemanth
Subscribe to Boldsky

ಮಹಾಭಾರತದಲ್ಲಿ ಶ್ರೀಕೃಷ್ಣನು ಚಕ್ರವ್ಯೂಹ ಭೇದಿಸುವ ರಹಸ್ಯದ ಬಗ್ಗೆ ಹೇಳುತ್ತಾ ಇದ್ದಾಗ ಗರ್ಭದಲ್ಲಿದ್ದ ಅಭಿಮನ್ಯು ಅದನ್ನು ಕೇಳುತ್ತಿದ್ದ. ಆದರೆ ಅರ್ಧ ಕೇಳಿದಾಗ ಆತನ ತಾಯಿಗೆ ನಿದ್ರೆ ಬಂತು ಮತ್ತು ಇದರಿಂದ ಆತನಿಗೆ ಚಕ್ರವ್ಯೂಹದಿಂದ ಹೊರಬರುವುದು ಹೇಗೆಂದು ತಿಳಿಯಲಿಲ್ಲ ಎನ್ನುವ ಕಥೆಯಿದೆ. ಇದರ ಬಗ್ಗೆ ಹಲವಾರು ಸಂಶಯಗಳು ಇದ್ದವು. ಗರ್ಭದಲ್ಲಿರುವ ಮಗು ಹೊರಗಿನವರ ಮಾತನ್ನು ಕೇಳಲು ಸಾಧ್ಯವೇ ಎಂದು ಪ್ರಶ್ನಿಸುವವರು ಇದ್ದರು. ಆದರೆ ಸಂಶೋಧನೆಗಳ ಪ್ರಕಾರ ಗರ್ಭದಲ್ಲಿರುವ ಮಗು ನಮ್ಮ ಮಾತುಗಳನ್ನು ಕೇಳಬಲ್ಲದು!

ಗರ್ಭದಲ್ಲಿರುವ ಕಂದಮ್ಮನಿಗೆ ಎಲ್ಲವೂ ಅರ್ಥವಾಗುತ್ತದೆಯಂತೆ!

ಗರ್ಭದಲ್ಲಿರುವ ಮಗು 9ನೇ ತಿಂಗಳಲ್ಲಿ ಹೊರಗಿನ ಶಬ್ಧಗಳನ್ನು ತಿಳಿದುಕೊಳ್ಳುತ್ತದೆ ಮತ್ತು ಅದಕ್ಕೆ ಶಬ್ಧಗಳ ನಡುವಿನ ಅಂತರವೂ ತಿಳಿದುಬರುತ್ತದೆ. ಮನುಷ್ಯರ ಮಾತು ಹಾಗೂ ಬೇರೆ ಶಬ್ಧಗಳ ವ್ಯತ್ಯಾಸವನ್ನು ಮಗು ಕಂಡುಹಿಡಿಯುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಇದರಿಂದಲೇ ಮಗು ಗರ್ಭದಲ್ಲಿರುವಾಗಲೇ ತಾಯಿ ತನ್ನ ಮಗುವಿನೊಂದಿಗೆ ಮಾತನಾಡಿ ಭಾಂದವ್ಯ ಬೆಳೆಸಿಕೊಳ್ಳುವುದು. ಗರ್ಭದಲ್ಲಿರುವ ಮಗು ಬೇರೆ ಶಬ್ಧಗಳನ್ನು ಕೇಳಿದರೆ ಆಗ ಅದರ ಎದೆಬಡಿತವು ವ್ಯತ್ಯಾಸವಾಗುತ್ತಾ ಇತ್ತು. ಅದೇ ಒಂದೇ ರೀತಿಯ ಶಬ್ಧ ಕೇಳಿದರೆ ಮಗುವಿನ ಹೃದಯ ಬಡಿತದಲ್ಲಿ ಬದಲಾವಣೆಯಾಗುತ್ತಾ ಇರಲಿಲ್ಲ ಎಂದು ಅಧ್ಯಯನಗಳು ತಿಳಿಸಿವೆ.... 

ಮಗುವಿನ ಕೇಳುವ ಸಾಮರ್ಥ್ಯ

ಮಗುವಿನ ಕೇಳುವ ಸಾಮರ್ಥ್ಯ

ಗರ್ಭದಲ್ಲೇ ಮಗುವಿಗೆ ಭಾಷೆ ಮತ್ತು ಕೇಳುವ ಸಾಮರ್ಥ್ಯವು ಇರುತ್ತದೆ. ಆದರೆ ಜನನದ ಕೆಲವು ವರ್ಷಗಳ ಬಳಿಕ ಇದು ಬೆಳವಣಿಗೆಯಾಗುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.

ಪ್ರಸವಪೂರ್ವ ಸೂಕ್ಷ್ಮತೆ

ಪ್ರಸವಪೂರ್ವ ಸೂಕ್ಷ್ಮತೆ

ಕೆಲವೊಂದು ಶಬ್ಧಗಳನ್ನು ಗರ್ಭದಲ್ಲಿರುವ ಮಗುವಿನ ಕಿವಿಗಳು ಕೇಳಿಸಿಕೊಳ್ಳುತ್ತವೆ. ಇದನ್ನು ನಾವು ಪ್ರಸವಪೂರ್ವ ಸೂಕ್ಷ್ಮತೆಯ ಶಬ್ಧವೆಂದು ಕರೆಯುತ್ತೇವೆ. ಇದು ಕೇಳುವ ಸಾಮರ್ಥ್ಯ ಮತ್ತು ಭಾಷೆಗೆ ಅಡಿಗಲ್ಲಿನಂತೆ ಕೆಲಸ ಮಾಡುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.

ಸಂಶೋಧನೆ

ಸಂಶೋಧನೆ

ಸಂಶೋಧನೆ ವೇಳೆ ಸುಮಾರು 20 ಮಂದಿ ಎಂಟು ತಿಂಗಳ ಗರ್ಭಿಣಿಯರನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಕೆಲವು ಶಬ್ಧ ಮಾಡಿದಾಗ ಆ ಶಬ್ಧವನ್ನು ಗರ್ಭದಲ್ಲಿರುವ ಮಗು ಕೇಳಿಸಿಕೊಳ್ಳುತ್ತಾ ಇರುವುದು ಪತ್ತೆಯಾಗಿದೆ ಎಂದು ಅಧ್ಯಯನಗಳು ಹೇಳಿವೆ.

ಮಗುವಿಗೆ ಶಬ್ಧ ಕೇಳುವುದೇ?

ಮಗುವಿಗೆ ಶಬ್ಧ ಕೇಳುವುದೇ?

ದೇಹದ ಒಳಗಿನ ಭಾಗದಲ್ಲಿ ಆಗುವಂತಹ ಕೆಲವೊಂದು ಶಬ್ಧಗಳು ಗರ್ಭದಲ್ಲಿರುವ ಮಗುವಿಗೆ ಕೇಳುತ್ತದೆ. ತಾಯಿಯ ದೇಹದ ಒಳಗಿನ ಭಾಗದಲ್ಲಿ ಆಗುವ ಕೆಲವು ಶಬ್ಧಗಳು ಮಗುವಿನ ಕಿವಿಗೆ ಕೇಳಿಸುವುದು. ಈ ಶಬ್ಧಗಳೊಂದಿಗೆ ಹೊರಗಿನ ಕೆಲವು ಶಬ್ಧಗಳು ಕೂಡ ಮಗುವಿಗೆ ಕೇಳುತ್ತದೆ.

ಆಡಿಟರಿ ಕಾರ್ಟೆಕ್ಸ್

ಆಡಿಟರಿ ಕಾರ್ಟೆಕ್ಸ್

ಮಗು ಕೇಳುವಂತಹ ಪ್ರತಿಯೊಂದು ಶಬ್ಧವು ನಿಧಾನವಾಗಿ ಅಡಿಟರಿ ಕಾರ್ಟೆಕ್ಸ್ ಆಗಿ ಬೆಳವಣಿಗೆಯಾಗುವುದು. ಜನನದ ಬಳಿಕ ಮಗು ಭಾಷೆ ಕಲಿಯುತ್ತದೆ ಎಂದು ಅಧ್ಯಯನಗಳು ಹೇಳಿವೆ.

English summary

Can An Unborn Baby Hear Your Voice?

Expecting parents would love to talk to their baby much before the delivery. The baby in the womb can actually identify certain sounds during the 9th month of pregnancy, says a new study. Research claims that a foetus can hear sounds and also be able to distinguish the difference between random sounds and human speech.
Subscribe Newsletter