For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಮೊಟ್ಟೆ ಬಹಳ ಒಳ್ಳೆಯದು, ಆದರೆ ಮುನ್ನೆಚ್ಚರಿಕೆ ಅಗತ್ಯ...

By Hemanth
|

ದಿನಕ್ಕೊಂದು ಮೊಟ್ಟೆ ತಿಂದರೆ ನಮ್ಮ ದೇಹಕ್ಕೆ ಬೇಕಾಗಿರುವ ಫೋಷಕಾಂಶಗಳು ಲಭ್ಯವಾಗುವುದು. ಮೊಟ್ಟೆಯಲ್ಲಿ ಹೆಚ್ಚಿನ ಎಲ್ಲಾ ಪೋಷಕಾಂಶಗಳು ಇರುವ ಕಾರಣ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಇದು ಪ್ರತಿಯೊಬ್ಬರಿಗೂ ಲಾಭಕಾರಿ. ಆದರೆ ಗರ್ಭಿಣಿ ಮಹಿಳೆಯರು ಮೊಟ್ಟೆಯನ್ನು ಸೇವಿಸಬಹುದೇ ಎನ್ನುವ ಪ್ರಶ್ನೆ ಪ್ರತಿಯೊಬ್ಬರನ್ನು ಕಾಡುತ್ತಲೇ ಇರುತ್ತದೆ. ಸೇವಿಸಿದರೆ ಎಷ್ಟು ಮೊಟ್ಟೆ ಸೇವಿಸಬಹುದು ಎನ್ನುವ ಮತ್ತೊಂದು ಪ್ರಶ್ನೆಯು ಬಂದೇ ಬರುತ್ತದೆ. ಇದರ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.

ಮೊಟ್ಟೆಯಲ್ಲಿ ಪ್ರೋಟೀನ್, ಕೊಬ್ಬು ಮತ್ತು ಖನಿಜಾಂಶಗಳನ್ನು ಒಳಗೊಂಡ ಹಲವಾರು ರೀತಿಯ ಪೋಷಕಾಂಶಗಳು ಇವೆ. ಮೊಟ್ಟೆಯಲ್ಲಿ ಇರುವಂತಹ ಪೋಷಕಾಂಶಗಳು ಗರ್ಭಿಣಿ ಮಹಿಳೆಯರಿಗೆ ತುಂಬಾ ಒಳ್ಳೆಯದು. ಗರ್ಭಿಣಿ ಮಹಿಳೆಯರು ಮೊಟ್ಟೆ ಸೇವಿಸಿದರೆ ಯಾವೆಲ್ಲಾ ಲಾಭಗಳು ಸಿಗಲಿದೆ ಎಂದು ತಿಳಿಯಿರಿ.

ಮೊಟ್ಟೆಯಲ್ಲಿ ಸೆಲೆನಿಯಂ, ಸತು, ವಿಟಮಿನ್‌ಗಳಾದ ಎ, ಡಿ, ಬಿ ಸಮೃದ್ಧವಾಗಿದೆ. ಇದು ಗರ್ಭಿಣಿಯರಿಗೆ ಅಗತ್ಯವಾಗಿ ಬೇಕು. ಗರ್ಭಿಣಿ ಮಹಿಳೆಯರು ಮೊಟ್ಟೆ ತಿಂದರೆ ಅದರ ಹಲವಾರು ಲಾಭಗಳು ಸಿಗಲಿದೆ. ಆದರೆ ಮೊಟ್ಟೆ ಆಯ್ಕೆ ಮಾಡುವಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಮೊಟ್ಟೆಯ ಆರೋಗ್ಯ ಮತ್ತು ಅದರ ಸುರಕ್ಷತೆ ಕಂಡುಹಿಡಿಯಲು ಅದನ್ನು ಖರೀದಿಸುವ ಮೊದಲು ದಿನಾಂಕ ನೋಡಿಕೊಳ್ಳಿ. ಯಾವಾಗಲೂ ಮೊಟ್ಟೆಯನ್ನು ಫ್ರಿಡ್ಜ್‌ನಲ್ಲಿಡಿ.

ಮೊಟ್ಟೆಯನ್ನು ನೇರವಾಗಿ ಫ್ರಿಡ್ಜ್ ನಲ್ಲಿ ಇಡುವ ಬದಲು ಅದರ ಪೆಟ್ಟಿಗೆಯಲ್ಲಿಟ್ಟರೆ ತಾಪಮಾನ ಕಾಪಾಡಿಕೊಳ್ಳುವುದು. ಮೊಟ್ಟೆ ಒಡೆದಾಗ ಅದು ಕೆಟ್ಟ ವಾಸನೆ ಬರುತ್ತಿರಬಾರದು. ಆರೋಗ್ಯಕರ ಮೊಟ್ಟೆಯು ಕೆಟ್ಟ ವಾಸನೆ ಉಂಟು ಮಾಡುವುದಿಲ್ಲ. ಮೊಟ್ಟೆಯ ಬಿಳಿ ಲೋಳೆಯು ಜೆಲ್ ನಂತೆ ಇರಬೇಕು. ಅದು ನೀರಿನಂತಿರಬಾರದು. ಮೊಟ್ಟೆಯ ಹಳದಿ ಭಾಗವು ಗಟ್ಟಿಯಾಗಿದ್ದು, ನೀರಿನಂತಿರಬಾರದು. ಬೇಯಿಸಿದ ಅಥವಾ ತಯಾರಿಸಿದ ಮೊಟ್ಟೆಯನ್ನು ಎರಡು ಗಂಟೆ ಒಳಗಡೆ ತಿನ್ನಬೇಕು. ಸಿಪ್ಪೆ ತೆಗೆಯದೆ ಸರಿಯಾಗಿ ಬೇಯಿಸಿರುವ ಮೊಟ್ಟೆಗಳನ್ನು ಒಂದು ವಾರ ತನಕ ತೆಗೆದಿಡಬಹುದು. ಆದರೆ ನೆನಪಿಡಿ ಅರ್ಧ ಬೇಯಿಸಿದ ಅಥವಾ ಹಸಿ ಮೊಟ್ಟೆ ತಿನ್ನಬೇಡಿ. ಇದರಲ್ಲಿರುವ ಸಾಲ್ಮೊನೆಲ್ಲಾ ಸೋಂಕು ಮಗುವಿಗೂ ತಗುಲಬಹುದು.

ಮಧ್ಯಾಹ್ನ ಊಟದ ಜೊತೆ, ಒಂದು ಮೊಟ್ಟೆಯೂ ಇರಲಿ!

ಗರ್ಭಿಣಿ ಮಹಿಳೆಯರು ದಿನದಲ್ಲಿ ಕೇವಲ ಎರಡು ಮೊಟ್ಟೆ ಸೇವನೆ ಮಾಡಬೇಕು. ಮೊಟ್ಟೆಯ ಹಳದಿ ಭಾಗ ತಿನ್ನದೇ ಇರುವುದು ಒಳ್ಳೆಯದು. ಯಾಕೆಂದರೆ ಇದರಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಇರುತ್ತದೆ ಮತ್ತು ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೊಟ್ಟೆಗಳು ಕೊಲೆಸ್ಟ್ರಾಲ್ ನಿಂದ ಸಮೃದ್ಧವಾಗಿದೆ ಮತ್ತು ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ತುಂಬಾ ಕಡಿಮೆ ಇರುವ ಕಾರಣ ಇದು ತುಂಬಾ ಆರೋಗ್ಯಕಾರಿ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಗರ್ಭಿಣಿಯರು ಮೊಟ್ಟೆಯನ್ನು ತಮ್ಮ ಆರೋಗ್ಯ ಕ್ರಮದಲ್ಲಿ ಸೇರಿಸಿಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು....

ಪ್ರೋಟೀನ್ ಲಭ್ಯ

ಪ್ರೋಟೀನ್ ಲಭ್ಯ

ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದು ಗರ್ಭಿಣಿ ಮಹಿಳೆಯರಿಗೆ ಅತೀ ಅಗತ್ಯವಾಗಿರುತ್ತದೆ. ಮಗು ಬೆಳೆಯುವ ಪ್ರತಿಯೊಂದು ಕೋಶವು ಪ್ರೋಟೀನ್ ನಿಂದ ಮಾಡಲ್ಪಟ್ಟಿರುತ್ತದೆ. ಗರ್ಭಿಣಿ ಮಹಿಳೆಯರು ಹಿತಮಿತವಾಗಿ ಮೊಟ್ಟೆ ಸೇವಿಸಿದರೆ ಮಗುವಿಗೆ ಒಳ್ಳೆಯದು.

ಮೆದುಳಿನ ಬೆಳವಣಿಗೆ

ಮೆದುಳಿನ ಬೆಳವಣಿಗೆ

12 ರೀತಿಯ ವಿಟಮಿನ್ ಹಾಗೂ ಖನಿಜಾಂಶ ಹೊಂದಿರುವಂತಹ ಮೊಟ್ಟೆಯಲ್ಲಿ ಚೊಲಿನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಇವೆ. ಇದು ಮಗುವಿನ ದೇಹ ಹಾಗೂ ಮೆದುಳಿನ ಬೆಳವಣಿಗೆಗೆ ನೆರವಾಗುವುದು. ಗರ್ಭದಲ್ಲಿರುವ ಮಗುವಿನ ನರ ಕೊಳವೆ ದೋಷಗಳನ್ನು ನಿವಾರಿಸುತ್ತದೆ.

ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್

ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಸಾಮಾನ್ಯವಾಗಿರುವಂತಹ ಗರ್ಭಿಣಿ ಮಹಿಳೆಯರು ದಿನದಲ್ಲಿ ಒಂದರಿಂದ ಎರಡು ಮೊಟ್ಟೆ ತಿನ್ನಬಹುದು. ಇದರಿಂದ ಕಡಿಮೆ ಸ್ಯಾಚುರೇಟ್ ಕೊಬ್ಬಿನ ಆಹಾರ ಕ್ರಮವನ್ನು ನಿಯಂತ್ರಣದಲ್ಲಿಡಬಹುದು. ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಿದ್ದರೆ ಮೊಟ್ಟೆಯ ಹಳದಿ ಭಾಗ ತಿನ್ನಬೇಡಿ.

ಕ್ಯಾಲೋರಿ

ಕ್ಯಾಲೋರಿ

ಗರ್ಭಿಣಿ ಮಹಿಳೆಯರು ಮಗು ಹಾಗೂ ತಮ್ಮ ದೇಹಕ್ಕೆ ಪೋಷಣೆ ನೀಡಲು ಪ್ರತೀ ದಿನ 200ರಿಂದ 300 ಕ್ಯಾಲೋರಿ ಹೆಚ್ಚುವರಿಯಾಗಿ ಸೇವಿಸಬಹುದು. ಮೊಟ್ಟೆಯಲ್ಲಿ ಸುಮಾರು 70 ಕ್ಯಾಲರಿ ಇದೆ. ಇದು ದೈನಂದಿನ ಅಗತ್ಯತೆಗೆ ಸಾಕಾಗುತ್ತದೆ.

ತಿನ್ನುವುದು ಹೇಗೆ?

ತಿನ್ನುವುದು ಹೇಗೆ?

ಗರ್ಭಿಣಿ ಮಹಿಳೆಯರು ಅರ್ಧ ಬೇಯಿಸಿದ ಅಥವಾ ಹಸಿ ಮೊಟ್ಟೆ ಸೇವಿಸಲೇಬಾರದು. ಇದು ಸಾಲ್ಮೊನೆಲ್ಲಾ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಈ ಸೋಂಕಿನಿಂದ ಅಕಾಲಿಕ ಹೆರಿಗೆ, ನಿರ್ಜಲೀಕರಣ, ಭೇದಿ ಮತ್ತು ವಾಂತಿಯಾಗುವ ಸಾಧ್ಯತೆಯಿದೆ. ಸರಿಯಾಗಿ ಬೇಯಿಸಿದ ಮೊಟ್ಟೆಯನ್ನೇ ತಿನ್ನಿ.

ಎಚ್ಚರಿಕೆ ವಹಿಸಿ

ಎಚ್ಚರಿಕೆ ವಹಿಸಿ

ನಿಮಗೆ ವಾಂತಿ, ಭೇದಿ ಮತ್ತು ಆಹಾರ ವಿಷವಾಗುವ ಸಮಸ್ಯೆಯಿದ್ದರೆ ಮೊಟ್ಟೆ ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಕೆಲವು ಗರ್ಭಿಣಿ ಮಹಿಳೆಯರಲ್ಲಿ ಜೀರ್ಣಾಂಗ ವ್ಯವಸ್ಥೆಯು ತುಂಬಾ ದುರ್ಬಲವಾಗಿರುತ್ತದೆ. ಇದರಿಂದ ಮೊಟ್ಟೆಯನ್ನು ಕರಗಿಸಿಕೊಳ್ಳುವುದು ತುಂಬಾ ಕಷ್ಟವಾಗಬಹುದು.

English summary

Benefits Of Eating Eggs During Pregnancy

Eggs are a pack of nutrients which make them count as a superfood. Eggs have essential nutrients in the form of protein, fats, minerals which make it healthy. During pregnancy, there are certain healthy foods that you must include in your diet. Due to its nutritional benefits, eggs is one of the foods that you must have in your pregnancy diet. In this article, Boldsky shares with you various benefits of eating eggs during pregnancy.
X
Desktop Bottom Promotion