Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಗರ್ಭಿಣಿಯರೇ ನೆನಪಿಡಿ, ಆದಷ್ಟು ಮನೆಗೆಲಸಗಳಿಂದ ದೂರವಿರಿ!
ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ಗರ್ಭಿಣಿಯ ದೇಹ ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಶರೀರಕ್ಕೆ ಹೆಚ್ಚಿನ ದಣಿವು ನೀಡದ ಕೆಲಸಗಳನ್ನು ನೀಡದಿರುವುದೇ ಉತ್ತಮ. ಸೂಕ್ತ ಆಹಾರ ಸೇವನೆ, ಮಿತವಾದ ವ್ಯಾಯಾಮ ಹಾಗೂ ಮುಖ್ಯವಾಗಿ ಗರ್ಭಾವಸ್ಥೆಯಲ್ಲಿ ಉದ್ವೇಗ, ಒತ್ತಡವಿಲ್ಲದ ಮನಸ್ಸನ್ನು ಕಾಯ್ದುಕೊಳ್ಳುವುದು ಅಗತ್ಯ.
ಈ ಅವಧಿಯಲ್ಲಿ ನಿಮ್ಮ ಸಂಗಾತಿ ಹಾಗೂ ಮನೆಯ ಇತರ ಸದಸ್ಯರು ನಿಮ್ಮ ಕೆಲಸಗಳನ್ನು ವಹಿಸಿಕೊಂಡು ನಿಮಗೆ ಸಾಕಷ್ಟು ವಿರಾಮ ನೀಡುವುದೂ ಅಗತ್ಯ. ಕೆಲವೊಂದು ಕೆಲಸಗಳನ್ನು ಗೃಹಿಣಿಯಾದವಳು ತಾನೇ ಮಾಡಿದರೆ ಮಾತ್ರ ತೃಪ್ತಿಪಡುತ್ತಾಳೆ. ಆದರೆ ಗರ್ಭಾವಸ್ಥೆಯಲ್ಲಿ ಈ ಕೆಲಸಗಳನ್ನು ಮಾಡದಿರುವುದೇ ಒಳ್ಳೆಯದು. ಇವು ಯಾವುವು ಎಂಬುದನ್ನು ನೋಡೋಣ....

ಸ್ವಚ್ಛತಾ ಕೆಲಸಕ್ಕೆ ತೊಡಗುವುದು ಅಷ್ಟು ಸೂಕ್ತವಲ್ಲ
ನೀವು ಗರ್ಭಿಣಿಯಾಗಿದ್ದಾಗ ಮನೆಯ ಸಾಮಾನ್ಯ ಸ್ವಚ್ಛತಾ ಕೆಲಸಕ್ಕೆ ತೊಡಗುವುದು ಅಷ್ಟು ಸೂಕ್ತವಲ್ಲ. ಏಕೆಂದರೆ ಈ ಕೆಲಸದಲ್ಲಿ ಬಳಕೆಯಾಗುವ ಸೋಪು, ಫಿನಾಯಿಲ್, ಡಿಟರ್ಜೆಂಟುಗಳು ಮೊದಲಾದ ಸ್ವಚ್ಛಕಾರಕ ವಸ್ತುಗಳಲ್ಲಿ ಕೆಲವು ಕಣಗಳು ಅಲರ್ಜಿಕಾರಕವಾಗಿದ್ದು ಅನಗತ್ಯವಾದ ಪರಿಣಾಮಗಳು ಎದುರಾಗಬಹುದು. ಏಕೆಂದರೆ ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹ ಅತಿ ಸೂಕ್ಷ್ಮವಾದ ಹಂತವನ್ನು ದಾಟುತ್ತಿರುವ ಕಾರಣ ಈ ಅಲರ್ಜಿಗಳು ಸುಲಭವಾಗಿ ಅಂಟಿಕೊಳ್ಳಬಹುದು.

ಹೆಚ್ಚಾಗಿ ಬಗ್ಗುವಂತಹ ಕೆಲಸ ಮಾಡಬೇಡಿ
ಮನೆಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಅತಿ ಹೆಚ್ಚಾಗಿ ಬಗ್ಗುವಂತಹ ಕೆಲಸಗಳನ್ನು ಮಾಡಕೂಡದು. ಏಕೆಂದರೆ ಈ ಪರಿ ಬಗ್ಗುವುದರಿಂದ sciatic nerve ಅಥವಾ ಬೆನ್ನುಮೂಳೆಯ ಕೆಳಭಾಗದಿಂದ ಕಾಲಿಗೆ ಧಾವಿಸುವ ನರದ ಮೇಲೆ ಹೆಚ್ಚಿನ ಒತ್ತಡ ಬಿದ್ದು ಈ ನರವನ್ನು ಘಾಸಿಗೊಳಿಸಬಹುದು.

ಗುಡಿಸುವುದು, ಭಾರವಾದ ವಸ್ತುಗಳನ್ನು ಮೇಲಿಡುವುದು, ಬಟ್ಟೆ ಒಣಗಿಸುವುದು
ಗರ್ಭಾವಸ್ಥೆಯಲ್ಲಿ ದೇಹದ ಪ್ರಮುಖ ಗಂಟುಗಳು ಮತ್ತು ಮಡಚುವ ಮೂಳೆಗಳ ಭಾಗಗಳು ಕೊಂಚ ಮೆತ್ತಗಾಗುತ್ತವೆ. ಆದ್ದರಿಂದ ಇತರ ಸಮಯದಲ್ಲಿ ಸುಲಭವಾಗುತ್ತಿದ್ದ ಕೆಲಸಗಳು ಈಗ ಕಷ್ಟವಾಗುತ್ತವೆ. ಆದ್ದರಿಂದ ಈ ಕೆಲಸಗಳಿಗೆಲ್ಲಾ ಮನೆಯವರ ಅಥವಾ ಕೆಲಸದವರ ಸಹಾಯ ಪಡೆಯುವುದು ಒಳ್ಳೆಯದು. ಗುಡಿಸುವುದು, ಭಾರವಾದ ವಸ್ತುಗಳನ್ನು ಮೇಲಿಡುವುದು, ಬಟ್ಟೆ ಒಣಗಿಸುವುದು ಮೊದಲಾದ ಕೆಲಸಗಳಿಗೆ ಸಹಾಯ ಪಡೆದುಕೊಳ್ಳುವುದೇ ಜಾಣತನವಾಗಿದೆ.

ಬೆಕ್ಕಿನ ಸಂಗ
ಒಂದು ವೇಳೆ ನಿಮ್ಮ ಮನೆಯಲ್ಲಿ ಸಾಕಿರುವ ಬೆಕ್ಕು ಇದ್ದರೆ ಬೆಕ್ಕಿನ ಸಂಗ ಈ ಸಮಯದಲ್ಲಿ ಸಲ್ಲದು. ವಿಶೇಷವಾಗಿ ಬೆಕ್ಕಿನ ಉಚ್ಛಿಷ್ಟವನ್ನು ಸ್ವಚ್ಛಗೊಳಿಸುವುದಿರಲಿ, ಬಳಿಗೂ ಸುಳಿಯಕೂಡದು. ಏಕೆಂದರೆ ಇದರಲ್ಲಿ ಕೆಲವು ಪರಾವಲಂಬಿ ಕ್ರಿಮಿಗಳಿದ್ದು ಗರ್ಭಿಣಿಗೆ ಮಾರಕವಾಗುತ್ತವೆ. ಅಷ್ಟೇ ಅಲ್ಲ, ಬೆಕ್ಕಿನ ಕೂದಲು ಯಾವುದೇ ಕಾರಣಕ್ಕೂ ಆಹಾರ ಅಥವಾ ನೀರಿನ ಮೂಲಕ ದೇಹ ಪ್ರವೇಶಿಸಬಾರದು. ಇದು ಭಾರೀ ಅಲರ್ಜಿಕಾರಕವಾಗಿದ್ದು ಗರ್ಭಿಣಿಯ ಆರೋಗ್ಯವನ್ನು ಕೆಡಿಸಬಹುದು.

ಶೌಚಾಲಯ ಸ್ವಚ್ಛತೆ
ಶೌಚಾಲಯ ಸ್ವಚ್ಛತೆಗಾಗಿ ಬಳಸುವ ಕೆಲವು ಸ್ವಚ್ಛಕಾರಕ ಸಾಮಾಗ್ರಿಗಳು ಹೊಗೆ ಅಥವಾ ಕಟುವಾದ ವಾಸನೆಯನ್ನು ಬೀರುತ್ತವೆ. ಗರ್ಭಾವಸ್ಥೆಯಲ್ಲಿ ಇವು ಮಾರಕವಾಗಿವೆ. ಆದ್ದರಿಂದ ಈ ಕೆಲಸಗಳನ್ನೂ ಕೆಲಸದವರ ಮೂಲಕ ಮಾಡಿಸಿಕೊಳ್ಳಿ.

ಬಟ್ಟೆ ಒಗೆಯುವ ಕೆಲಸವನ್ನೂ ಮಾಡದಿರಿ
ಬಟ್ಟೆ ಒಗೆಯುವ ಕೆಲಸವನ್ನೂ ಮಾಡದಿರಿ. ಏಕೆಂದರೆ ಬಟ್ಟೆಯನ್ನು ನೆನೆಸಲು ಮೊದಲಾದ ಕೆಲಸಗಳಿಗೆ ಅನಿವಾರ್ಯವಾಗಿ ಬಗ್ಗಬೇಕಾದುದು ಮಗುವಿನ ದೇಹವನ್ನು ಸಂಕುಚಿಸಬಹುದು. ಅಷ್ಟೇ ಅಲ್ಲ, ಬಟ್ಟೆ ಒಗೆಯುವ ಸಂದರ್ಭದಲ್ಲಿ ತೇವವಾಗಿರುವ ನೆಲವನ್ನು ಕೊಂಚ ಹಿಂದಕ್ಕೆ ವಾಲಿರುವ ನಿಮ್ಮ ದೇಹ ಇತರ ಸಮಯದಂತೆ ದೃಢವಾಗಿ ನಡೆಯಲು ಸಾಧ್ಯವಾಗದಿರಬಹುದು. ಹಾಗಾಗಿ ಜಾರಿ ಬೀಳುವ ಸಾಧ್ಯತೆ ಹೆಚ್ಚು. ಗರ್ಭಾವಸ್ಥೆಯಲ್ಲಿ ಜಾರಿಬೀಳುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸಿ ತೇವವಾಗಿರುವ ನೆಲದಲ್ಲಿ ಅತಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು.
ಗರ್ಭಿಣಿಯರು ಮಾಡಬಾರದ 10 ಕಾರ್ಯಗಳು

ಭಾರವಾದ ವಸ್ತುಗಳನ್ನು ಎತ್ತುವುದು ಅಪಾಯಕಾರಿ
ಯಾವುದೇ ಭಾರವಾದ ವಸ್ತುಗಳನ್ನು ಎತ್ತುವುದು ಅಪಾಯಕಾರಿ. ಏಕೆಂದರೆ ಇದು ಬೆನ್ನು ಮೂಳೆಯ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತದೆ. ಅಷ್ಟೇ ಅಲ್ಲ, ಮೆಟ್ಟಿಲುಗಳನ್ನು ಏರುವುದು ನಿಮಗೆ ಪ್ರಥಮ ಮೂರು ತಿಂಗಳಲ್ಲಿ ಸಂಪೂರ್ಣ ನಿಷಿದ್ಧ. ಇದು ಗರ್ಭಪಾತಕ್ಕೆ ಕಾರಣವೂ ಆಗಬಹುದು. ಉಳಿದ ತಿಂಗಳುಗಳಲ್ಲಿಯೂ ಅತ್ಯಂತ ಅನಿವಾರ್ಯವಾಗದ ಹೊರತು ಮೆಟ್ಟಿಲುಗಳನ್ನು ಏರಲೇಬಾರದು.
ಗರ್ಭಿಣಿಯರೇ ಹುಷಾರು! ಭಾರ ಎತ್ತುವ ಕೆಲಸದಿಂದ ದೂರವಿರಿ

ಆದಷ್ಟು ಜಾಗ್ರತೆವಹಿಸಿ
ಹೆರಿಗೆಯಾಗಿ ಬಾಣಂತನ ಮುಗಿಯುವವರೆಗೂ ನಿಮ್ಮನ್ನು ನೋಡಿಕೊಳ್ಳಲು ಮನೆಯವರು ಯಾರಾದರೂ ಸದಾ ಹತ್ತಿರವಿದ್ದರೆ ಅತ್ಯುತ್ತಮ. ಆದರೆ ಇಂದಿನ ದಿನಗಳಲ್ಲಿ ಇದು ಸಾಧ್ಯವಾಗದೇ ಹೋದರೂ ಮೇಲಿನ ಮುನ್ನೆಚ್ಚರಿಕೆಗಳನ್ನು ಪಾಲಿಸುವಷ್ಟಾದರೂ ಸಹಾಯವನ್ನು ಮಾತ್ರ ತಪ್ಪದೇ ಪಡೆಯಬೇಕು.



Click it and Unblock the Notifications











