For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಹಣ್ಣು ಸೇವಿಸಿದರೆ, ಮಗುವಿನ ಬುದ್ಧಿ ಶಕ್ತಿ ವೃದ್ಧಿ!

By Jaya subramanya
|

ಮಗು ದೊಡ್ಡವರಾಗುತ್ತಿದ್ದಂತೆ ಅವರ ಪಾಲನೆ ಪೋಷಣೆಯಲ್ಲಿ ಹೆತ್ತವರು ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಶಿಸ್ತಿನ ಜೊತೆಗೆ ಪ್ರೀತಿಯಿಂದ ಅವರಿಗೆ ತಿಳಿಸಿ ಹೇಳುವ ಕಲೆಯನ್ನು ಪೋಷಕರು ಅಳವಡಿಸಿಕೊಂಡಲ್ಲಿ ನಿಮ್ಮ ಮಗು ಹಠಮಾರಿಯಾಗುವುದು, ಕೋಪಗೊಳ್ಳುವ ಪ್ರವೃತ್ತಿಯನ್ನು ಕಡಿಮೆ ಮಾಡುತ್ತದೆ.

ಯಾವುದೇ ಮಗು ಕೂಡ ತನ್ನ ತಂದೆ ತಾಯಿಗಳ ಹಾಜರಾತಿಯನ್ನು ಬಯಸುತ್ತಿರುತ್ತಾರೆ. ತಮ್ಮನ್ನು ತಿದ್ದುವ, ಮುದ್ದು ಮಾಡುವ, ತಪ್ಪು ಮಾಡಿದರೆ ದಂಡಿಸುವ ಹೆತ್ತವರು ತಮ್ಮೊಂದಿಗೆ ಇರಬೇಕು ಎಂದೇ ಪ್ರತೀ ಮಗು ಕೂಡ ಬಯಸುತ್ತದೆ. ಆದ್ದರಿಂದ ಆ ಮಗುವಿನ ಜೀವನದಲ್ಲಿ ಹೆತ್ತವರ ಪಾತ್ರ ಅತ್ಯಂತ ಹಿರಿದಾದುದಾಗಿದೆ.

ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಗು ಎಲ್ಲಾ ಮಕ್ಕಳಿಗಿಂತಲೂ ಮುಂದಿರಬೇಕೆಂಬ ಹಂಬಲ ಎಲ್ಲಾ ತಂದೆ ತಾಯಿಯದ್ದಾಗಿರುತ್ತದೆ. ಆದರೆ ಇದು ನಿಮ್ಮ ಮಕ್ಕಳಿಗೆ ಹೊರೆಯಾಗದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ಒತ್ತಡಕ್ಕೆ ಸಿಲುಕಿ ಮಗು ಮಾನಸಿಕ ಖಿನ್ನತೆಯನ್ನು ಅನುಭವಿಸಿ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುವುದು ಈ ಒತ್ತಡಕ್ಕೆ ಸಿಲುಕಿಯೇ ಆಗಿದೆ.

Try This Pregnancy Tip To Make Your Baby Smarter!

ಆದ್ದರಿಂದ ಅವರನ್ನು ತಯಾರು ಮಾಡಲು ಒತ್ತಡವನ್ನು ಅವರ ಮೇಲೆ ಹೇರದೇ ಅವರು ಏನಾಗಬಯಸುತ್ತಾರೋ ಅದಕ್ಕೆ ಪೂರಕವಾಗಿ ತಂದೆ ತಾಯಿ ಬೆಂಬಲವಾಗಿ ನಿಂತರೆ ಸಾಕು. ಅವರನ್ನು ಹೆಚ್ಚು ಹೆಚ್ಚು ಚಟುವಟಿಕೆಗಳಾದ ನೃತ್ಯ, ಹಾಡುಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು, ಹವ್ಯಾಸಗಳನ್ನು ಅಭಿವೃದ್ಧಿಪಡಿಸುವುದು, ಅವರಲ್ಲಿರುವ ಕ್ರಿಯಾತ್ಮಕತೆಯನ್ನು ಪೋಷಿಸುವುದು ಹೀಗೆ ಮಕ್ಕಳನ್ನು ಇನ್ನಷ್ಟು ಚಟುವಟಿಕೆಯಿಂದ ಇರಿಸಲು ಹೆತ್ತವರು ಮಾಡಬಹುದಾದ ಅಂಶಗಳಾಗಿವೆ. ಗರ್ಭಿಣಿಯರು ತಿನ್ನಲೇಬೇಕಾದ ಟಾಪ್ 9 ಹಣ್ಣುಗಳು

ಇಂದಿಲ್ಲಿ ನಾವು ನಿಮಗೆ ತಿಳಿಸಲಿರುವುದು ಮಗುವು ತಾಯ ಗರ್ಭದಲ್ಲಿರುವಾಗ ಮಗುವಿನ ಮೆದುಳಿನ ಚಟುವಟಿಕೆ ಯಾವ ರೀತಿಯದಾಗಿರುತ್ತದೆ ಎಂಬುದಾಗಿದೆ. ನಿಮ್ಮ ಮಗು ಉತ್ತಮ ಅರಿವಿನ ಬೆಳವಣಿಗೆಯನ್ನು ಪಡೆಯಬೇಕು ಎಂಬುದು ನಿಮ್ಮ ಇಚ್ಛೆಯಾಗಿದ್ದಲ್ಲಿ ಗರ್ಭಾವಸ್ಥೆಯಲ್ಲಿಯೇ ಇದಕ್ಕೆ ಬೇಕಾದ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಹೆಚ್ಚು ವಿಟಮಿನ್ ಮತ್ತು ಮಿನರಲ್‌ಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸುವುದನ್ನು ತಾಯಿಯು ರೂಢಿಸಿಕೊಂಡಿರಬೇಕು. ಇದು ಮಗುವಿನ ಆರೋಗ್ಯಕ್ಕೆ ಹೆಚ್ಚು ಅಗತ್ಯವಾಗಿದ್ದು ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳಲೇಬೇಕು.

ಗರ್ಭಾವಸ್ಥೆಯಲ್ಲಿ ಹೆಚ್ಚು ಪ್ರಮಾಣದ ಹಣ್ಣುಗಳನ್ನು ಸೇವಿಸುವುದು ನಿಮ್ಮ ಮಗುವನ್ನು ಹೆಚ್ಚು ಸ್ಮಾರ್ಟ್ ಆಗಿಸುತ್ತದೆ ಎಂಬುದಾಗಿ ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ಐಕ್ಯೂ ಮಟ್ಟದ ಪರೀಕ್ಷೆಯನ್ನು 688 ಮಕ್ಕಳಲ್ಲಿ ಈ ಅಧ್ಯಯನವು ನಡೆಸಿತು. ಈ ಸಂದರ್ಭದಲ್ಲಿ ತಾಯಿಯು ತನ್ನ ಗರ್ಭಾವಸ್ಥೆ ಸಮಯದಲ್ಲಿ ಹಣ್ಣು ಮತ್ತು ಹಣ್ಣಿನ ರಸವನ್ನು ಪ್ರತೀ ದಿನ ತೆಗೆದುಕೊಂಡಿದ್ದಾರೋ ಅವರ ಮಗು ಹೆಚ್ಚು ಐಕ್ಯೂ ಮಟ್ಟವನ್ನು ಪಡೆದುಕೊಂಡಿದೆ. ಇದು ಹಣ್ಣುಗಳನ್ನು ಮತ್ತು ಅದರ ಅಂಶಗಳನ್ನು ಸೇವಿಸದೇ ಇರುವ ಇತರ ತಾಯಂದಿರಿಗಿಂತ ಹೆಚ್ಚಿದೆ. ಮಕ್ಕಳ ಬುದ್ಧಿ ಶಕ್ತಿ ಹೆಚ್ಚಲು ನೀಡಬೇಕಾದ ಆಹಾರಗಳು

ಗರ್ಭಾವಸ್ಥೆಯಲ್ಲಿ ಗರ್ಭಿಣಿಯು ಹೆಚ್ಚು ಹಣ್ಣನ್ನು ಸೇವಿಸಿದಂತೆ, ಅವರ ಮಕ್ಕಳಲ್ಲಿ ಅರಿವಿನ ಬೆಳವಣಿಗೆ ವೃದ್ಧಿಯಾಗುತ್ತದೆ ಎಂದಾಗಿದೆ. ಇದು ಗಮನಕ್ಕೆ ಬರುವುದು ಮಗುವು 12 ವಯಸ್ಸನ್ನು ತಲುಪಿದಾಗ ಆಗಿದೆ. ಉತ್ಕರ್ಷಣ ನಿರೋಧಿ ಅಂಶಗಳು, ವಿಟಮಿನ್‌ಗಳು ಮತ್ತು ಮಿನರಲ್‌ಗಳು ತಾಜಾ ಹಣ್ಣುಗಳಲ್ಲಿ ಮತ್ತು ಹಣ್ಣಿನ ರಸಗಳಲ್ಲಿದ್ದು ಹುಟ್ಟದೇ ಇರುವ ಮಗುವಿನ ಮೆದುಳಿನ ಕೋಶಗಳನ್ನು ಪೋಷಿಸುತ್ತದೆ. ಇದು ಉತ್ತಮ ಅರಿವಿನ ಪೋಷಣೆಯನ್ನು ಮಾಡುತ್ತದೆ.

ಗರ್ಭಾವಸ್ಥೆಯಲ್ಲಿ ಯಾರು ಹಣ್ಣುನ್ನು ಹೆಚ್ಚು ಸೇವಿಸಿರುತ್ತಾರೋ ಅವರ ಮಕ್ಕಳು ವೇಗವಾದ ಗ್ರಹಣ ಶಕ್ತಿಯನ್ನು ಪಡೆದುಕೊಳ್ಳುವುದರ ಜೊತೆಗೆ ಆ ಮಗುವಿನ ಉತ್ತಮ ಸ್ಮರಣ ಶಕ್ತಿಗೂ ನೆರವನ್ನು ನೀಡುತ್ತದೆ ಹಾಗೂ ಕಲಿಯುವಿಕೆ ಅಸಾಮರ್ಥ್ಯಗಳನ್ನು ಇದು ಕುಗ್ಗಿಸುತ್ತದೆ ಎಂದಾಗಿದೆ. ಆದ್ದರಿಂದ ಗರ್ಭಿಣಿ ಸ್ತ್ರೀಯರು ಪ್ರತೀ ದಿನ 4-5 ಹಣ್ಣುಗಳನ್ನು ಸೇವಿಸುವುದು ಕಡ್ಡಾಯವಾಗಿದೆ.

English summary

Try This Pregnancy Tip To Make Your Baby Smarter!

Do you remember the happy smiles on your parents' faces when you told them you scored well in your exams? It's a great moment to cherish, right? Children are the joy and pride of their parents, this is a fact. Parents take utmost pleasure in boasting about their kids' skills and achievements. Naturally, most parents would want their children to be smart, healthy and active. Parents do everything they can to help their kids to improve on their cognitive functions, so that when they become adults, they can lead successful lives.
X
Desktop Bottom Promotion