For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆ: 'ಆಹಾರ ಪಥ್ಯ' ಕಡ್ಡಾಯವಾಗಿ ಪಾಲಿಸಲೇಬೇಕು....

By Jaya
|

ಗರ್ಭಾವಸ್ಥೆಯ ಸಂದರ್ಭದಲ್ಲಿ ತಾಯಿಯಾಗುವ ಸ್ತ್ರೀಗೆ ಒಂದೆಡೆ ಪುಟ್ಟ ಕಂದಮ್ಮನ ಆಗಮನದ ಸಂತಸ ಒಂದೆಡೆಯಾದರೆ ಇನ್ನೊಂದೆಡೆ ತಾವು ತಿನ್ನುವ ಆಹಾರ ಮಗುವಿಗೇನಾದರೂ ಹಾನಿ ಮಾಡಿದರೆ ಎಂಬ ಭಯ, ಈ ಸಮಯದಲ್ಲಿ ಸಿಕ್ಕ ಸಿಕ್ಕದ್ದನ್ನೆಲ್ಲಾ ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಎಂಬ ಹಿರಿಯರ ಹಿತೋಪದೇಶದ ಜೊತೆಗೆ ದೇಹದ ಆರೈಕೆಯನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ, ಸುಸ್ತು ಬಳಲಿಕೆ ದೇಹವನ್ನು ಹಿಂಡುತ್ತಿರುತ್ತದೆ.

Tips to Eating Healthy During Pregnancy

ಗರ್ಭಿಣಿಯರಿಗೆ ಆಹಾರದ ಮೇಲಿನ ಒಲವು ಈ ಸಂದರ್ಭದಲ್ಲಿ ಅಧಿಕವಾಗಿದ್ದರೂ ತುಸು ಹೊತ್ತಿನಲ್ಲೇ ತಿಂದದ್ದೆಲ್ಲಾ ವಾಂತಿಯಾಗಿ ಪುನಃ ಹಸಿವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ ಹೆಚ್ಚಿನ ಪೌಷ್ಟಿಕ ಆಹಾರ ಮತ್ತು ಆರೈಕೆ ಅತ್ಯಗತ್ಯ. ಅಂತೆಯೇ ಗರ್ಭಿಣಿ ಸೇವಿಸುವ ಆಹಾರ ಯಾವುದಿರಬೇಕು, ಎಷ್ಟಿರಬೇಕು ಮತ್ತು ಯಾವುದನ್ನು ಸೇವಿಸಬಾರದು ಎಂಬ ಬಗ್ಗೆ ಸೂಕ್ತ ಮಾಹಿತಿ ಇರುವುದು ಅವಶ್ಯಕ. ಬನ್ನಿ ಬೋಲ್ಡ್ ಸ್ಕೈ ಇಂದು ಗರ್ಭಾವಸ್ಥೆಯಲ್ಲಿ ಸೇವಿಸಬೇಕಾದ ಆಹಾರ ಕ್ರಮದ ಬಗ್ಗೆ ಸೂಚಿಸುತ್ತಿದ್ದೇವೆ, ಮುಂದೆ ಓದಿ.... ಗರ್ಭಿಣಿಯರ ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರೆಯ ಹಂಗೇಕೆ?

ಹಸಿರು ಸೊಪ್ಪು
ಹಸಿರು ಸೊಪ್ಪುಗಳಲ್ಲಿ ಸಮೃದ್ಧವಾದ ಸತುವಿನ ಅಂಶವಿರುತ್ತದೆ. ಸತುವು ಮಗುವಿನ ಅಂಗಾಂಗಗಳ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುವ ಅಂಶವಾಗಿರುತ್ತದೆ. ಪಾಲಕ್ ಸೊಪ್ಪುಗಳು, ಲೆಟ್ಯೂಸ್ ಮತ್ತು ಫೆನುಗ್ರೀಕ್‍ಗಳಲ್ಲಿ ಸಹ ಸತುವಿನ ಅಂಶ ಯಥೇಚ್ಛವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಮ್ಯಾಂಗನೀಸ್, ನಾರಿನಂಶ ಮತ್ತು ಇನ್ನಿತರ ವಿಟಮಿನ್‍ಗಳು ಸಹ ಇರುವುದರಿಂದ ಗರ್ಭಿಣಿಯರು ಇವುಗಳನ್ನು ತಪ್ಪದೆ ಸೇವಿಸಬೇಕಾಗುತ್ತದೆ.

ಸೀತಾಫಲ

ಪೋಷಕಾ೦ಶಗಳನ್ನು ಅತ್ಯುತ್ಕೃಷ್ಟ ಪರಿಮಾಣಗಳಲ್ಲಿ ಒಳಗೊ೦ಡಿರುವುದರಿ೦ದ ಸೀತಾಫಲವು ಗರ್ಭಿಣಿ ಸ್ತ್ರೀಯರ ಪಾಲಿಗೆ ಸ೦ಜೀವಿನಿಯ೦ತಿದೆ. ಸೀತಾಫಲವು ಖನಿಜಗಳು, ವಿಟಮಿನ್, ಪ್ರೋಟೀನ್‌ಗಳು, ನಾರಿನ೦ಶ, ಶರ್ಕರಪಿಷ್ಟಗಳು, ಹಾಗೂ ಅವಶ್ಯಕ ಕೊಬ್ಬಿನಾ೦ಶಸಗಳ ರೂಪದಲ್ಲಿ ನಾನಾ ಪೋಷಕ ತತ್ವಗಳನ್ನು ಒಳಗೊ೦ಡಿರುತ್ತದೆ. ಶರೀರಕ್ಕೆ, ಅದರಲ್ಲೂ ವಿಶೇಷವಾಗಿ ಗರ್ಭಿಣಿಯರ ಆರೋಗ್ಯಕ್ಕೆ ಅವಶ್ಯಕವಾಗಿರುವ ಎಲ್ಲಾ ಪೋಷಕ ತತ್ವಗಳು ಯಾವುದಾದರೂ ಒ೦ದು ಹಣ್ಣಿನಲ್ಲಿ ಅಡಕಗೊ೦ಡಿರುವುದೇ ಹೌದೆ೦ದಾದರೆ ಆ ಹಣ್ಣು ಸೀತಾಫಲವಲ್ಲದೇ ಬೇರಾವುದೂ ಅಲ್ಲ. ಸೀತಾಫಲ ಹಣ್ಣಿನ ನ೦ಬಲಸಾಧ್ಯವಾದ ಆರೋಗ್ಯವರ್ಧಕ ಗುಣಗಳು

ನೆನೆಸಿಟ್ಟ ಬಾದಾಮಿ
ಬಾದಾಮಿ ಕೆಲವು ಬಾದಾಮಿಗಳನ್ನು ನೀರಿನಲ್ಲಿ ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ನೆನೆಸಿಟ್ಟು ಬಳಿಕ ಸೇವಿಸಬೇಕು. ಇದು ಮಗುವಿನಲ್ಲಿ ಅಲರ್ಜಿಯನ್ನು ಕಡಿಮೆ ಮಾಡುವುದು, ಗರ್ಭಿಣಿಯ ದೇಹದಲ್ಲಿ ನೀರು ತುಂಬಿಕೊಂಡು ರಕ್ತದೊತ್ತಡ ಹೆಚ್ಚಾಗುವ (preeclampsia) ತೊಂದರೆಯನ್ನು ಮತ್ತು ಮಲಬದ್ಧತೆಯಾಗುವ ಸಾಧ್ಯತೆಯಿಂದ ರಕ್ಷಿಸುತ್ತದೆ. ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!
ಪುದೀನಾ ನೀರು


ಒಂದು ಲೋಟ ನೀರಿಗೆ ಒಣಗಿದ ಪುದೀನಾ ಪುಡಿಯನ್ನು ಒಂದು ಕಪ್ ಬಿಸಿ ನೀರಿನಲ್ಲಿ ಹಾಕಿ. ಅದನ್ನು ಐದರಿಂದ ಹತ್ತು ನಿಮಿಷಗಳ ಕಾಲ ಆ ಲೋಟವನ್ನು ಮುಚ್ಚಿ. ನಂತರ ಇದನ್ನು ಶೋಧಿಸಿಕೊಂಡು ಸೇವಿಸಿ. ಇದಕ್ಕೆ ನೀವು ಸಕ್ಕರೆ ಅಥಾವ ಜೇನುತುಪ್ಪವನ್ನು ಬೆರೆಸಿಕೊಳ್ಳಬಹುದು. ಈ ಟೀಯನ್ನು ಬೆಳಗ್ಗೆ ಎದ್ದ ಕೂಡಲೆ ಸೇವಿಸಿ. ಇದು ಗರ್ಭಾವಸ್ಥೆಯಲ್ಲಿ ಕಾಡುವ ವಾಂತಿಯ ಸಮಸ್ಯೆಯನ್ನು ಕಡಿವಾಣ ಹಾಕುವುದರ ಜೊತೆಗೆ ಗರ್ಭಿಣಿಯರ ಆರೋಗ್ಯಕ್ಕೂ ಒಳ್ಳಯದು
ಎಳನೀರನ್ನು ಸೇವಿಸಿ
ಎಳನೀರನ್ನು ನಿಯಮಿತವಾಗಿ ಪ್ರತಿನಿತ್ಯ ಕುಡಿಯುವುದರಿಂದ ಗರ್ಭಿಣಿಯರಲ್ಲಿ ಮಲಬದ್ಧತೆ ಕಾಣಿಸಿಕೊಳ್ಳುವುದಿಲ್ಲ. ಇನ್ನು ಕೆಲವೊಂದು ಮೂಲಗಳ ಪ್ರಕಾರ ಎಳನೀರು ಕುಡಿಯುವುದರಿಂದ ಗರ್ಭಿಣಿಯರಲ್ಲಿ ಎದೆ ಉರಿ ಕಾಣಿಸಿಕೊಳ್ಳುವುದಿಲ್ಲವಂತೆ. ಇದು ಗರ್ಭಿಣಿಯರಿಗೆ ವರದಾನವಾಗುವ ಒಂದು ಪ್ರಯೋಜನವಾಗಿದೆ.
English summary

Tips to Eating Healthy During Pregnancy

Pregnancy demands a special diet. It is important to eat nutritious foods during pregnancy. Nutrition plays a vital role during pregnancy. Nutrition is readily available in the form of fruits and veggies. There are some of the food that you should include in your pregnancy diet. In this article, we at Boldsky will be listing out some of the nutritious foods that should be consumed during pregnancy. Read on to know more about it.
X
Desktop Bottom Promotion