For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಸ್ಕ್ಯಾನಿಂಗ್‎: ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚು!

By Jaya subramanya
|

ಗರ್ಭಾವಸ್ಥೆಯ ಸಂದರ್ಭದಲ್ಲಿ ಸ್ತ್ರೀಯನ್ನು ಹೆಚ್ಚಿನ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಮಗುವಿನ ಚಲನವಲನ, ಬೆಳವಣಿಗೆಯ ಹಂತಗಳನ್ನು ಕಂಡುಕೊಳ್ಳಲು ಈ ಪರೀಕ್ಷೆಗಳು ನೆರವಾಗಲಿದ್ದು ವೈದ್ಯರುಗಳ ಸಮ್ಮುಖದಲ್ಲಿಯೇ ಗರ್ಭಿಣಿಯ ಮೇಲೆ ಈ ಪರೀಕ್ಷೆ ನಡೆಯುತ್ತದೆ. ಗರ್ಭಾವಸ್ಥೆಯಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾನ್ ಹೆಚ್ಚು ಸಾಮಾನ್ಯವಾಗಿದ್ದು, ಭ್ರೂಣದ ಬೆಳವಣಿಗೆಯ ಬಗ್ಗೆ ಅರಿಯಲು ಇದನ್ನು ಕೈಗೊಳ್ಳಲಾಗುತ್ತದೆ.

ಅದರಲ್ಲೂ ಗರ್ಭಾವಸ್ಥೆಯ 36 ನೇ ವಾರದಲ್ಲಿ ಹೆಚ್ಚಿನ ಸ್ಕ್ಯಾನ್‎ಗಳಿಗೆ ಗರ್ಭಿಣಿಯರು ಒಳಗಾಗುತ್ತಾರೆ. ಆದರೆ ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿರುವ ಅಂಶವೆಂದರೆ ಅಲ್ಟ್ರಾ ಸೌಂಡ್ ಸ್ಕ್ಯಾನ್‎ಗಳು ಮಗುವಿಗೆ ಹೆಚ್ಚು ಅಪಾಯಕಾರಿ ಎಂದು ತಿಳಿದುಬಂದೆ.

ಗರ್ಭಿಣಿಯ ಉದರದಲ್ಲಿರುವ ನವಜಾತ ಶಿಶುವಿಗೆ ಈ ಸ್ಕ್ಯಾನ್ ಅಪಾಯವನ್ನು ತಂದೊಡ್ಡುತ್ತದೆ. ತಾಯಿಯು ಹೆಚ್ಚು ಕಟ್ಟುನಿಟ್ಟಾಗಿ ಈ ಸ್ಕ್ಯಾನ್ ಅನ್ನು ನಿರ್ಬಂಧಿಸಬೇಕಾಗಿದ್ದು, ಗರ್ಭಾವಸ್ಥೆಯಲ್ಲಿ ಎದುರಿಸಲಾಗುವ ಅಪಾಯದಿಂದ ಕಾಪಾಡಿಕೊಳ್ಳಲು ಈ ಮಾರ್ಗವನ್ನು ಆಕೆ ಅನುಸರಿಸಲೇಬೇಕು. ಗರ್ಭಾವಸ್ಥೆಯಲ್ಲಿ ಏಕೆ ಸ್ಕ್ಯಾನಿಂಗ್ ಮಾಡಿಸಬೇಕು?

ಅಲ್ಟ್ರಾ ಸೌಂಡ್ ಸ್ಕ್ಯಾನ್ ಧ್ವನಿ ತರಂಗಗಳನ್ನು ಹೆಚ್ಚು ಆವರ್ತನದಲ್ಲಿ ಕಳುಹಿಸುವುದರಿಂದ ಈ ಹೆಚ್ಚು ಆವರ್ತನೆಯು ಅಂಗಾಂಶ ಪುಟಿಯುವಂತೆ ಮಾಡಿ ಚಿತ್ರವನ್ನು ರಚಿಸುತ್ತದೆ. ಈ ಅಲೆಗಳು ಹೆಚ್ಚು ಅಪಾಯಕಾರಿಯಾಗಿದ್ದು, ತಾಪಮಾವನ್ನು ಹೆಚ್ಚಿಸಿ ಸ್ಥಳೀಯ ಅಂಗಾಂಶಕ್ಕೆ ಒತ್ತಡವನ್ನು ಹೇರುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ಸ್ಕ್ಯಾನಿಂಗ್ ತಂದೊಡ್ಡುವ ಅಪಾಯಗಳನ್ನು ಹೆಚ್ಚು ವಿವರವಾಗಿ ನಿಮಗೆ ತಿಳಿಸುತ್ತಿದ್ದು ಇದನ್ನು ಹೇಗೆ ನಡೆಸಬೇಕು ಎಂಬ ತಿಳುವಳಿಕೆ ನಿಮಗುಂಟಾಗುತ್ತದೆ, ಮುಂದೆ ಓದಿ...

ಗರ್ಭಪಾತದ ಅಪಾಯ

ಗರ್ಭಪಾತದ ಅಪಾಯ

ಅಲ್ಟ್ರಾ ಸೌಂಡ್ ಸ್ಕ್ಯಾನ್ ತಾಯಂದಿರಲ್ಲಿ ಗರ್ಭಪಾತದ ಅಪಾಯವನ್ನು ತಂದೊಡ್ಡಲಿದೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದ್ದು, ಅವಧಿಗೂ ಮುನ್ನವೇ ಮಗುವಿನ ಹೆರಿಗೆ, ಶಿಶು ಮರಣ ನಡೆಯುವ ಸಾಧ್ಯತೆ ಇರುತ್ತದೆ.

ಅಂಗಾಂಶಗಳು ಮತ್ತು ಮೂಳೆಗಳ ಬಿಸಿಯಾಗುವಿಕೆ

ಅಂಗಾಂಶಗಳು ಮತ್ತು ಮೂಳೆಗಳ ಬಿಸಿಯಾಗುವಿಕೆ

ಗರ್ಭಾವಸ್ಥೆಯಲ್ಲಿ ನಡೆಸುವ ಪ್ರತಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಸುತ್ತಲಿನ ಅಂಗಾಂಶಗಳು ಮತ್ತು ಮೂಳೆಗಳು ಬಿಸಿಯಾಗುವಂತೆ ಮಾಡುತ್ತದೆ. ಇದು ಜೀವಕೋಶಗಳ ಮೇಲೆ ಅಡ್ಡಿಯನ್ನುಂಟು ಮಾಡುವುದರ ಜೊತೆಗೆ ಭ್ರೂಣದ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡಿ ರಕ್ತಸ್ರಾವವನ್ನು ತಂದೊಡ್ಡಬಹುದು.

ಗರ್ಭಾಶಯದೊಳಗೆ ನಿರ್ಬಂಧಕ್ಕೆ ಕಾರಣವಾಗಬಹುದು

ಗರ್ಭಾಶಯದೊಳಗೆ ನಿರ್ಬಂಧಕ್ಕೆ ಕಾರಣವಾಗಬಹುದು

5 ಅಥವಾ ಅದಕ್ಕಿಂತ ಹೆಚ್ಚಿನ ಸ್ಕ್ಯಾನ್‎ಗಳಿಗೆ ಒಳಗಾಗಿರುವ ಮಗು ಗರ್ಭಾಶಯದೊಳಗೆ ಬೆಳವಣಿಗೆಯಲ್ಲಿ ನಿರ್ಬಂಧಕ್ಕೆ ಒಳಗಾಗಬಹುದು ಎಂಬುದಾಗಿ ಅಧ್ಯಯನಗಳು ತಿಳಿಸಿವೆ. ಭ್ರೂಣದಲ್ಲಿ ಕುಂಠಿತ ಬೆಳವಣಿಗೆಯ ಕಾರಣದಿಂದಾಗಿ ಸಾಮಾನ್ಯಕ್ಕಿಂತ ಸಣ್ಣದಾಗಿ ಮಗು ಜನ್ಮತಾಳಬಹುದು.

ಸ್ಕ್ಯಾನ್ ಪರಿಣಾಮದಿಂದ ಡಿಸ್ಲೆಕ್ಸಿಯಾ ಉಂಟಾಗಬಹುದು

ಸ್ಕ್ಯಾನ್ ಪರಿಣಾಮದಿಂದ ಡಿಸ್ಲೆಕ್ಸಿಯಾ ಉಂಟಾಗಬಹುದು

ತಾಯಿಯ ಗರ್ಭದಲ್ಲಿ ಹೆಚ್ಚಿನ ಸ್ಕ್ಯಾನ್‎ಗಳಿಗೆ ಒಳಗಾಗಿರುವ ಮಗುವಿನಲ್ಲಿ ಡಿಸ್ಲೆಕ್ಸಿಯಾದಂತಹ ಮಾತನಾಡುವುದು ಮತ್ತು ಅರಿಯುವ ಸಮಸ್ಯೆಯನ್ನು ಕಂಡುಕೊಳ್ಳಬಹುದಾಗಿದೆ. ಸ್ಕ್ಯಾನ್‎ಗೆ ಒಳಗಾಗದಿರುವ ಮಗುವಿನಲ್ಲಿ ಈ ಸಮಸ್ಯೆ ಇರುವುದಿಲ್ಲ.

ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚು

ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚು

ಅಲ್ಟ್ರಾ ಸೌಂಡ್ ಸ್ಕ್ಯಾನ್ ಭ್ರೂಣದ ದೋಷಗಳನ್ನು ಪತ್ತೆಮಾಡುವಲ್ಲಿ ನೆರವಾಗುತ್ತದೆ ಎಂಬುದಾಗಿ ಹೇಳಿದ್ದರೂ ಈ ಪರೀಕ್ಷೆಯ ನಂತರ ಮಗುವು ಅಪಾಯದಿಂದ ಬಳಲುವಂತಾಗುವುದು ಖಂಡಿತ.

ಎ ಸಿ ಸೆಕ್ಶನ್ ಹೆಚ್ಚಳ ಸಾಧ್ಯತೆ

ಎ ಸಿ ಸೆಕ್ಶನ್ ಹೆಚ್ಚಳ ಸಾಧ್ಯತೆ

ಗರ್ಭಿಣಿಯರಲ್ಲಿ ಈ ಚಿಕಿತ್ಸೆಯನ್ನು ನಡೆಸುವುದು ಜರಾಯು ಪ್ರಿವಿಯಾ ರೋಗನಿರ್ಣಯವನ್ನು ಪತ್ತೆಮಾಡುವುದಕ್ಕಾಗಿ. ಈ ಸಂದರ್ಭದಲ್ಲಿ, ಗರ್ಭಕೋಶದ ಕೆಳಭಾಗದಲ್ಲಿ ತುಂಬಿರುವ ಜರಾಯು ರಕ್ತಸ್ರಾವಕ್ಕೆ ಕಾರಣವನ್ನುಂಟು ಮಾಡಬಹುದು ಹಾಗೂ ಸಿ ವರ್ಗದಲ್ಲಿ ಹೆಚ್ಚಳದ ಸಾಧ್ಯತೆಗೆ ಕಾರಣವಾಗುತ್ತದೆ. 4000 ಮಹಿಳೆಯರಲ್ಲಿ ಅಧ್ಯಯನವನ್ನು ನಡೆಸಿದಾಗ, 250 ಮಹಿಳೆಯರಲ್ಲಿ ಈ ಸಮಸ್ಯೆಯನ್ನು ಪತ್ತೆಹಚ್ಚಲಾಗಿದ್ದು, ಬರಿಯ ನಾಲ್ವರು ಹೆರಿಗೆ ಸಮಯದಲ್ಲಿ ಈ ಸಮಸ್ಯೆಯನ್ನು ಹೊಂದಿದ್ದರು.

ಜನನ ಸಮಯದಲ್ಲಿ ಕಡಿಮೆ ತೂಕ

ಜನನ ಸಮಯದಲ್ಲಿ ಕಡಿಮೆ ತೂಕ

ಅಲ್ಟ್ರಾ ಸೌಂಡ್ ಸ್ಕ್ಯಾನ್‎ಗೆ ಒಳಗಾದ ಹೆಚ್ಚಿನ ಮಕ್ಕಳಲ್ಲಿ ತೂಕವು ಕಡಿಮೆಯಾಗಿದ್ದು, ದುರ್ಬಲ ಜನನ ಸ್ಥಿತಿಗಳು, ಕಿವಿಯ ಒಳಭಾಗದ ಹಾನಿಗೆ ಈ ಮಕ್ಕಳು ಒಳಗಾಗಿದ್ದಾರೆ.

ಟೆಕ್ನೀಶಿಯನ್‎ಗೂ ಅಪಾಯ

ಟೆಕ್ನೀಶಿಯನ್‎ಗೂ ಅಪಾಯ

ಅಲ್ಟ್ರಾ ಸೌಂಡ್ ಸ್ಕ್ಯಾನ್‎ಗೆ ಒಳಗಾದ ತಾಯಂದಿರು ಮಾತ್ರ ಅಪಾಯವನ್ನು ಎದುರಿಸದೇ ಟೆಕ್ನೀಶಿಯನ್ ಕೂಡ ಸಂಚಕಾರದಲ್ಲಿ ಬೀಳುತ್ತಾರೆ. ಪರೀಕ್ಷೆಯನ್ನು ನಡೆಸುವ ತಜ್ಞೆಯು ಗರ್ಭಿಣಿಯಾಗಿದ್ದು ಆಕೆ ವಾರದಲ್ಲಿ 20 ಕ್ಕಿಂತ ಹೆಚ್ಚಿನ ಸ್ಕ್ಯಾನ್‎ಗಳನ್ನು ಕೈಗೊಂಡಲ್ಲಿ, ಸ್ವಾಭಾವಿಕ ಗರ್ಭಪಾತದ ಅಪಾಯವಿರುತ್ತದೆ ಎಂಬುದಾಗಿ ಅಧ್ಯಯನವು ತಿಳಿಸಿದೆ.

ಮಗುವಿನಲ್ಲಿ ಉಷ್ಣ ಒತ್ತಡವನ್ನು ಹೇರುತ್ತದೆ

ಮಗುವಿನಲ್ಲಿ ಉಷ್ಣ ಒತ್ತಡವನ್ನು ಹೇರುತ್ತದೆ

ಕಡಿಮೆ ತೀವ್ರತೆ ಮತ್ತು ಅವಧಿಯು ನವಜಾತ ಶಿಶುವಿನಲ್ಲಿ ಯಾವುದೇ ತೊಂದರೆಗಳನ್ನು ಉಂಟುಮಾಡದೇ ಇದ್ದರೂ, ಸ್ಕ್ಯಾನ್‎ನ ತೀವ್ರತೆ ಮತ್ತು ಅವಧಿ ಏನನ್ನೂ ಲೆಕ್ಕಿಸದೇ ಇದು ಮಗುವಿನ ಮೇಲೆ ಉಷ್ಣ ಒತ್ತಡವನ್ನು ತಂದೊಡ್ಡುತ್ತದೆ.

English summary

Side Effects Of Scanning During Pregnancy

Did you know that ultrasound was first used in 1955 to scan a human by an obstetrician from Scotland, Ian Donald? Prior to that, ultrasound machine was used to detect flaws in a metal. He used to detect abdominal tumors first; however, later, it was used on pregnant women as well. Before agreeing for a scan, a mom-to-be should carefully consider the side effects that have the potential to cause a harm to the foetus growing in her womb. Let’s look at the side effects of scanning during pregnancy.
Story first published: Thursday, July 7, 2016, 13:29 [IST]
X
Desktop Bottom Promotion