For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಆರೋಗ್ಯಕ್ಕೆ ಮಾವಿನ ಹಣ್ಣು ಒಳ್ಳೆಯದೇ..?

By Jaya Subramanya
|

ಸ್ತ್ರೀಯ ಬಾಳಿನಲ್ಲಿ ಗರ್ಭಾವಸ್ಥೆ ಎಂಬುದು ಒಂದು ಸುಂದರ ಕ್ಷಣಗಳು. ಈ ಸಮಯದಲ್ಲಿ ಬೇರೆ ಬೇರೆ ಆಹಾರಗಳನ್ನು ತಿನ್ನುವ ಬಯಕೆ ಆಕೆಯಲ್ಲಿ ಉಂಟಾಗುವುದು ಸಹಜವೇ ಆಗಿದೆ. ತಾನು ದಪ್ಪಗೊಳ್ಳುತ್ತಿದ್ದೇನೆ ಎಂಬುದನ್ನು ಚಿಂತಿಸದೆ ಆಕೆ ತನ್ನಿಷ್ಟದ ಆಹಾರಗಳನ್ನು ಸೇವಿಸುತ್ತಾಳೆ.

ಗರ್ಭಾವಸ್ಥೆಯಲ್ಲಿ ಚೆನ್ನಾಗಿ ಆಹಾರ ಸೇವಿಸುವುದೂ ಕೂಡ ಆರೋಗ್ಯಕರ ಎಂದೆನಿಸಿದ್ದು, ತನಗೆ ಮತ್ತು ತನ್ನ ಮಗುವಿಗಾಗಿ ಆರೋಗ್ಯಕರವಾದ ಆಹಾರವನ್ನೇ ಸೇವಿಸಬೇಕಾಗುತ್ತದೆ. ತಾಯಿ ಸೇವಿಸುವ ಆಹಾರವೇ ಮಗುವಿಗೆ ನೇರವಾಗಿ ಹೋಗಿ ತಲುಪುತ್ತದೆ.

Is It Safe To Eat Mangoes During Pregnancy?

ಆಹಾರದಲ್ಲಿರುವ ನ್ಯೂಟ್ರೀನ್ ಅಂಶಗಳು ಗರ್ಭಿಣಿಯ ದೇಹದಲ್ಲಿರುವ ಮಗುವಿಗೆ ಗರ್ಭಾಶಯದ ಮೂಲಕ ದೊರೆಯುತ್ತದೆ. ಆದ್ದರಿಂದ ತಾನು ತಿನ್ನುವ ಆಹಾರದ ಮೇಲೆ ಆಕೆ ಹೆಚ್ಚು ಗಮನವನ್ನು ಹರಿಸಬೇಕಾಗಿರುತ್ತದೆ. ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಗರ್ಭಿಣಿಯು ಅನುಸರಿಸ ಬೇಕಾಗಿರುವುದರಿಂದ ವಿಟಮಿನ್‎ಗಳು ಮತ್ತು ನ್ಯೂಟ್ರಿನ್‎ಗಳು ಮಗುವಿನ ಆರೋಗ್ಯಕರ ಹುಟ್ಟುವಿಕೆಗಾಗಿ ಅಗತ್ಯವಾಗಿದೆ. ತನ್ನ ವೈದ್ಯರೊಂದಿಗೆ ಸಮಾಲೋಚಿಸಿ ನಂತರವಷ್ಟೇ ಆಕೆ ಆಹಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಕೆಲವೊಂದು ಆಹಾರಗಳು ಗರ್ಭಿಣಿ ಸ್ತ್ರೀಗೆ ಉತ್ತಮವಾಗಿದ್ದರೂ ಇನ್ನು ಕೆಲವು ಆಹಾರಗಳು ಆಕೆಗೆ ಮತ್ತು ಮಗುವಿಗೆ ಉತ್ತಮವಾಗಿರುವುದಿಲ್ಲ. ಉತ್ತಮವಾದ ಆಹಾರಗಳು ಯಾವುವು ಎಂಬುದಾಗಿ ಗರ್ಭಿಣಿಗೆ ಹಲವಾರು ಸಂದೇಹಗಳಿದ್ದು ಇದರಲ್ಲಿ ಮಾವಿನ ಹಣ್ಣನ್ನು ತಾನು ಸೇವಿಸಬಹುದೇ ಎಂಬುದೂ ಸೇರಿರುತ್ತದೆ. ಇಂದಿನ ಲೇಖನದಲ್ಲಿ ರಸಭರಿತ ಮಾವಿನ ಹಣ್ಣನ್ನು ಗರ್ಭಿಣಿಯು ಸೇವಿಸಬಹುದೇ ಬೇಡವೇ ಎಂಬುದನ್ನು ತಿಳಿಸಲಿದೆ.

ಸೀಸನ್ ಹಣ್ಣಾಗಿರುವ ಮಾವು ವಿಟಮಿನ್ ಸಿ, ಎ ಮತ್ತು ಬಿ6 ಅಂಶಗಳೊಂದಿಗೆ ಬಂದಿದೆ. ಅಂತೆಯೇ ಇದರಲ್ಲಿ ಪೊಟಾಶಿಯಮ್ ಮತ್ತು ಫೋಲಿಕ್ ಆಸಿಡ್ ಇದೆ. ಗರ್ಭಿಣಿ ಸ್ತ್ರೀಗೆ ಮತ್ತು ಮಗುವಿಗೆ ವಿಟಮಿನ್ ಸಿ ಮತ್ತು ಫೋಲಿಕ್ ಆಸಿಡ್ ಮುಖ್ಯವಾಗಿ ಬೇಕಾಗಿರುವುದು ನಮಗೆಲ್ಲಾ ತಿಳಿದೇ ಇದೆ.

ಮಾವಿನ ಹಣ್ಣು ಉತ್ಕರ್ಷಣ ನಿರೋಧಿ ಅಂಶಗಳಿಂದ ಕೂಡಿರುವುದರಿಂದ ಗರ್ಭಿಣಿಯನ್ನು ಇದು ಶಕ್ತಿಯುತವಾಗಿ ಇರಿಸುತ್ತದೆ ಅಂತೆಯೇ ಆಕೆಗೆ ಬಲವಾದ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ, ಅಲ್ಲದೆ ಈ ಹಣ್ಣುಗಳಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ಗರ್ಭಾವಸ್ಥೆ ಸಂದರ್ಭದಲ್ಲಿ ಸಿಹಿ ತಿನ್ನಬೇಕೆಂಬ ಬಯಕೆಯುಳ್ಳ ಸ್ತ್ರೀಯರು ಮಾವಿನ ಹಣ್ಣನ್ನು ತಿನ್ನಬಹುದಾಗಿದೆ. ನೈಸರ್ಗಿಕ, ಆರೋಗ್ಯಕರ ಪರ್ಯಾಯ ವ್ಯವಸ್ಥೆಯಾಗಿ ಈ ಹಣ್ಣು ಇರುವುದರಿಂದ ಅಜೀರ್ಣ ಮತ್ತು ಬೊಜ್ಜಿನ ಸಮಸ್ಯೆಗಳನ್ನು ದೂರಮಾಡುತ್ತದೆ. ಆದ್ದರಿಂದ ಗರ್ಭಿಣಿ ಸ್ತ್ರೀಯು ಯಾವುದೇ ಭಯವಿಲ್ಲದೆ ಮಾವಿನ ಹಣ್ಣುಗಳನ್ನು ಸೇವಿಸಬಹುದಾಗಿದೆ.

ನೆನಪಿನಲ್ಲಿಡಬೇಕಾದ ಅಂಶಗಳು
*ಮಧುಮೇಹ ಸಮಸ್ಯೆಯುಳ್ಳ ಗರ್ಭಿಣಿಯರು ಮಾವಿನ ಹಣ್ಣನ್ನು ಹೆಚ್ಚು ಸೇವಿಸಬಾರದು ಇದರಲ್ಲಿ ಹೆಚ್ಚು ಪ್ರಮಾಣದ ಸಕ್ಕರೆ ಇರುತ್ತದೆ.
*ನೀವು ಸಾವಯವ ಮಾವಿನ ಹಣ್ಣುಗಳನ್ನು ಖರೀದಿಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ, ರಾಸಾಯನಿಕವಾಗಿ ಬಲಿತ ಮತ್ತು ಕೃತಕ ಮಾವಿನ ಹಣ್ಣಿನಿಂದ ಮಗುವಿನ ಆರೋಗ್ಯಕ್ಕೆ ತೊಂದರೆಯುಂಟಾಗಬಹುದು.

English summary

Is It Safe To Eat Mangoes During Pregnancy?

Pregnancy is a phase in a woman's life which, among other things, is also famous for the food cravings! A healthy diet that is rich in various vitamins and nutrients is required for a healthy pregnancy and child-birth. Today, Boldsky tells you whether juicy mangoes, that most people love, are safe to be consumed during pregnancy or not.
X
Desktop Bottom Promotion