For Quick Alerts
ALLOW NOTIFICATIONS  
For Daily Alerts

ಮಾನಸಿಕ ಒತ್ತಡ, ಮಗುವಿನ ಮೇಲೆ ಪರಿಣಾಮ ಬೀರಬಹುದು..

By Arshad
|

ಹಿಂದೆ ಕೂಡುಕುಟುಂಬಗಳಿದ್ದಾಗ ಮನೆಯ ವಿಷಯಗಳನ್ನು ಪ್ರಸ್ತಾಪಿಸುವ ಸಮಯದಲ್ಲಿ ಗರ್ಭಿಣಿ ಅಕ್ಕಪಕ್ಕದಲ್ಲಿದ್ದರೆ ಗಂಭೀರ ವಿಷಯಗಳು ಸುಳಿಯದಂತೆ, ಅದರಲ್ಲೂ ಗರ್ಭಿಣಿಗೆ ಸಂಬಂಧಪಟ್ಟ ವಿಷಯಗಳನ್ನು ಪ್ರಸ್ತಾಪಿಸದೇ ಇರುವಂತೆ ಹಿರಿಯರು ನೋಡಿಕೊಳ್ಳುತ್ತಿದ್ದರು. ಏಕೆಂದರೆ ಇದರಿಂದ ಗರ್ಭಿಣಿ ಎದುರಿಸುವ ಮಾನಸಿಕ ಒತ್ತಡ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದಾಗಿತ್ತು.

Does Maternal Stress Impact Birth Weight?

ಈ ವಿಷಯ ಸತ್ಯ ಎಂದು ಇತ್ತೀಚಿನ ಸಂಶೋಧನೆಗಳು ದೃಢೀಕರಿಸಿವೆ. ಗರ್ಭಿಣಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾದಷ್ಟೂ ಹುಟ್ಟುವ ಮಗುವಿನ ತೂಕ ಕಡಿಮೆಯಾಗುತ್ತದೆ. ಗರ್ಭಾವಸ್ಥೆಯಲ್ಲಿ ಗರ್ಭಿಣಿ ಅನುಭವಿಸುವ ಮಾನಸಿಕ ತೊಳಲಾಟ ಮಗುವಿನ ತೂಕ ನಿರ್ಧರಿಸಲು ಸಾಧ್ಯ ಎಂದು ಈ ಸಂಶೋಧನೆ ತಿಳಿಸುತ್ತದೆ.

ಇದಕ್ಕೆ ಪ್ರಮುಖ ಕಾರಣ ಕಾರ್ಟಿಸೋಲ್ ಎಂಬ ರಸದೂತ. ಒತ್ತಡ ಸಮಯದಲ್ಲಿ ಈ ರಸದೂತದ ಪ್ರಮಾಣ ಕಡಿಮೆಯಾಗಿ ಮೆದುಳಿನ ಕ್ಷಮತೆಯೂ ಕಡಿಮೆಯಾಗುತ್ತದೆ. ಇದು ಪರೋಕ್ಷವಾಗಿ ಮಗುವಿನ ಬೆಳವಣಿಗೆಯ ಗತಿಯ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಒತ್ತಡ ರಹಿತ ಜೀವನ ಸಾಗಿಸುವುದು ಗರ್ಭಾವಸ್ಥೆಯಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯತೆ ಪಡೆದರೂ ಇತರ ಸಮಯದಲ್ಲಿಯೂ ಪ್ರಾಮುಖ್ಯತೆ ನೀಡಬೇಕಾದ ವಿಷಯವಾಗಿದೆ.

ಈ ಸಂಶೋಧನೆ ನಡೆಸಿದ ತಜ್ಞರ ತಂಡ ಸುಮಾರು ನೂರೈವತ್ತಕ್ಕೂ ಹೆಚ್ಚಿನ ಗರ್ಭಿಣಿಯರು ಮತ್ತು ಹೆರಿಗೆಯ ಬಳಿಕ ಅವರ ಮಕ್ಕಳನ್ನು ಪರೀಕ್ಷಿಸಿ ಹಲವು ಪ್ರಶ್ನೆಗಳ ಮೂಲಕ ಮಾಹಿತಿಗಳನ್ನು ಸಂಗ್ರಹಿಸಿ, ಇದನ್ನು ಸಾಬೀತುಪಡಿಸಲು ಹಲವರು ಪರೀಕ್ಷೆಗಳನ್ನು ನಡೆಸಿ ಎಲ್ಲಾ ಅಂಕಿಅಂಶಗಳನ್ನು ಪರಾಮರ್ಶಿಸಿದ ಬಳಿಕವೇ ಈ ತೀರ್ಮಾನಕ್ಕೆ ಬಂದಿದ್ದಾರೆ. ಗರ್ಭಾವಸ್ಥೆಯಲ್ಲಿ ಗರ್ಭಿಣಿ ಸಂತೋಷವಾಗಿದ್ದಷ್ಟೂ ಕಾರ್ಟಿಸೋಲ್ ಪ್ರಮಾಣ ಹೆಚ್ಚುವ ಮೂಲಕ ಉತ್ತಮ ಆರೋಗ್ಯ ಮತ್ತು ಪರಿಪೂರ್ಣ ತೂಕದ ಮಗು ಜನಿಸಲು ನೆರವಾಗುತ್ತದೆ.

ವ್ಯತಿರಿಕ್ತವಾಗಿ ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ಮನಸ್ಸು ವ್ಯಾಕುಲಗೊಂಡಿದ್ದರೆ, ದುಃಖ, ಉದ್ವೇಗ, ತಳಮಳ, ಆತಂಕ ಮೊದಲಾದವುಗಳು ಆವರಿಸಿದ್ದರೆ ಇದು ಆಕೆಯ ಗರ್ಭದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಮಗುವಿನ ತೂಕ ಕಡಿಮೆಯಾಗುವುದು ಮಾತ್ರವಲ್ಲ, ಹುಟ್ಟಿದ ಮಗುವಿನ ಮಾನಸಿಕ ಬೆಳವಣಿಗೆಯಲ್ಲಿಯೂ ಕೊರತೆ ಇರುವುದನ್ನು ಗಮನಿಸಲಾಗಿದೆ.

ಗರ್ಭಿಣಿಯ ಮಾನಸಿಕ ಒತ್ತಡದಿಂದ ಕಡಿಮೆ ತೂಕದ ಮಗು ಜನಿಸುವುದು ಮಾತ್ರವಲ್ಲ. ಜನನದ ಸಮಯದಲ್ಲಿಯೇ ಮೃತಪಡುವ ಸಾಧ್ಯತೆಯೂ ಹೆಚ್ಚುತ್ತದೆ ಹಾಗೂ ಮಗುವಿನ ಹೃದಯ ಪರಿಚಲನಾ ವ್ಯವಸ್ಥೆಯೂ ಕುಂಠಿತಗೊಂಡಿರುವ ಸಂಭವವಿದೆ. ಆದ್ದರಿಂದ ಗರ್ಭಿಣಿಯಾಗಿರುವ ಅಥವಾ ಗರ್ಭ ಧರಿಸುವ ಇಚ್ಛೆಯುಳ್ಳವರು ತಾವು ಮಾನಸಿಕರಾಗಿ ಯಾವುದೇ ಒತ್ತಡದಲ್ಲಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡೇ ಮುಂದುವರೆಯುವುದು ಉತ್ತಮ ಮತ್ತು ಅನಿವಾರ್ಯ.

English summary

Does Maternal Stress Impact Birth Weight?

A new study says that stress in pregnant women may also increase the chances of low birth weight. In fact, health experts say that a woman's physiological stress conditions may predict whether she gives birth to a baby of healthy weight or low birth weight.
X
Desktop Bottom Promotion