For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಪ್ರಾಣ ಹಿಂಡುವ ವಾಂತಿ ಸಮಸ್ಯೆಗೆ ಕಡಿವಾಣ ಹಾಕುವುದು ಹೇಗೆ?

By manu
|

ಗರ್ಭಿಣಿಯಾಗಿರುವಾಗ ಕಂಡು ಬರುವ ನಾಸಿಯಾ ಮತ್ತು ವಾಂತಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೂ ದೇಹದಲ್ಲಿ ಕಂಡು ಬರುವ ಕ್ಷಿಪ್ರ ಹಾರ್ಮೋನ್‍ಗಳ ಬದಲಾವಣೆಯು ಇದಕ್ಕೆ ಮೂಲ ಕಾರಣವೆಂದು ತಿಳಿದುಬಂದಿದೆ. ಈ ಹಾರ್ಮೊನುಗಳು ಜಠರದ ಸ್ನಾಯುಗಳ ಕುಗ್ಗುವಿಕೆ ಮತ್ತು ವಿಶ್ರಾಂತಿಯ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಇದು ಮುಂದೆ ನಾಸಿಯಾ ಮತ್ತು ವಾಂತಿಯಾಗುವಿಕೆಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಕೆಲವೊಂದು ವಾಸನೆಗಳು, ನಿರ್ದಿಷ್ಟ ಆಹಾರಗಳು, ಸ್ಥೂಲಕಾಯ, ಒತ್ತಡ, ಉದ್ವೇಗ, ಸೂಕ್ಷ್ಮವಾದ ಜಠರ ಮತ್ತು ವಿಟಮಿನ್ ಅಥವಾ ಖನಿಜಾಂಶದ ಕೊರತೆಗಳು ಸಹ ನಾಸಿಯಾ ಮತ್ತು ವಾಂತಿಗೆ ಕಾರಣವಾಗುತ್ತವೆ. ಗರ್ಭಾವಸ್ಥೆಯಲ್ಲಿ ರಕ್ತಸ್ರಾವ: ಮಗುವಿನ ಮೇಲೆ ಪರಿಣಾಮ ಬೀರಬಹುದೇ?

ನಾಸಿಯಾ ಮತ್ತು ವಾಂತಿಯು ಬೆಳ್ಳಂಬೆಳಗ್ಗೆಯೇ ಕಾಣಿಸಿಕೊಳ್ಳುತ್ತದೆ, ದಿನ ಕಳೆದಂತೆಲ್ಲ ಇದು ಕಡಿಮೆಯಾಗುತ್ತ ಸಾಗುತ್ತದೆ. ಕೆಲವು ಹೆಂಗಸರಲ್ಲಿ ಈ ಲಕ್ಷಣಗಳು ದಿನದ ಇತರೆ ಅವಧಿಯಲ್ಲಿ ಕಾಣಿಸಿಕೊಳ್ಳುತ್ತವೆ. ಬಹುತೇಕ ಮಹಿಳೆಯರಲ್ಲಿ ಮೊದಲನೆ ತ್ರೈಮಾಸಿಕ ಅವಧಿಯ ನಂತರ ಈ ಸಮಸ್ಯೆಯು ಪರಿಹಾರವಾಗುತ್ತದೆ. ಆದರೆ ಕೆಲವರಲ್ಲಿ ಇದು ಮತ್ತೂ ಮುಂದುವರಿಯುತ್ತದೆ. ಈ ಲಕ್ಷಣಗಳು ನಿಮಗೆ ಅಸೌಖ್ಯವನ್ನುಂಟು ಮಾಡುವುದರ ಜೊತೆಗೆ, ನಿಮ್ಮ ದೈನಂದಿನ ಕಾರ್ಯದ ಮೇಲೆ ಸಹ ಪ್ರಭಾವ ಬೀರುತ್ತವೆ. ಆದರೆ ಇದನ್ನು ನೀವು ಮನೆಯಲ್ಲಿಯೇ ದೊರೆಯುವ ಕೆಲವೊಂದು ಮನೆ ಮದ್ದುಗಳ ಸಹಾಯದಿಂದ ಮತ್ತು ನಿಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತರುವುದರ ಮೂಲಕ ಸರಿಪಡಿಸಿಕೊಳ್ಳಬಹುದು. ಇಲ್ಲಿ ನಾವು ನಿಮಗಾಗಿ ಅಂತಹ ಟಾಪ್ 10 ಮನೆಮದ್ದುಗಳನ್ನು ನೀಡಿದ್ದೇವೆ ಓದಿಕೊಳ್ಳಿ. ನೀವು ಗರ್ಭಿಣಿಯಾಗಿರುವ ಪಾಲಿಸಿ, ಇಲ್ಲವೆ ಈ ಸಮಸ್ಯೆಯಿಂದ ಬಳಲುತ್ತಿರುವ ಗರ್ಭಿಣಿಯರಿಗೆ ಮಾರ್ಗದರ್ಶನ ಮಾಡಿ.

ನೀರನ್ನು ಕುಡಿಯಿರಿ

ನೀರನ್ನು ಕುಡಿಯಿರಿ

ನೀರು ಕುಡಿಯುವುದು ನಾಸಿಯಾ ಮತ್ತು ವಾಂತಿಗೆ ಒಂದು ಒಳ್ಳೆಯ ಮದ್ದಾಗಿದೆ. ವಿಶೇಷವಾಗಿ ಗರ್ಭಿಣಿಯರು ಆಗಾಗ ಗಂಟೆಗೊಮ್ಮೆ ಒಂದು ಲೋಟ ನೀರನ್ನು ಸೇವಿಸುವುದರಿಂದ ಮಾರ್ನಿಂಗ್ ಸಿಕ್‍ನೆಸ್‍ನಿಂದ ಮುಕ್ತರಾಗಬಹುದು. ಇದರ ಜೊತೆಗೆ ನೀರನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ನೀರಿನಂಶ ದೊರೆಯುತ್ತದೆ. ಇದು ತಾಯಿ ಮತ್ತು ಮುಂದು ಹುಟ್ಟುವ ಮಗು ಇಬ್ಬರಿಗು ಅತ್ಯಗತ್ಯವಾಗಿ ಬೇಕಾಗಿರುತ್ತದೆ. ನಿಮ್ಮ ಹಾಸಿಗೆಯ ಪಕ್ಕ ಯಾವಾಗಲು ಒಂದು ಲೋಟ ನೀರನ್ನು ಇಟ್ಟುಕೊಳ್ಳಿ. ಎದ್ದ ಕೂಡಲೆ ಒಂದೆರಡು ಗುಟುಕು ನೀರನ್ನು ಸೇವಿಸಿ. ನಿಮ್ಮ ಜಠರವು ಯಥಾಸ್ಥಿತಿಗೆ ಬರುವವರೆಗೆ ಸ್ವಲ್ಪ ಹೊತ್ತು ಕಾದು ನಂತರ ಹಾಸಿಗೆಯಿಂದ ಮೇಲೆ ಏಳಿ. ಇಡೀ ದಿನ ಆಗಾಗ ನೀರನ್ನು ಸೇವಿಸುತ್ತ ಇರಿ. ದೇಹದಲ್ಲಿ ಸಂಗ್ರಹವಾಗುವ ಅಧಿಕ ನೀರು, ನಿಮ್ಮ ಮೂಡ್ ಮತ್ತು ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಜೊತೆಗೆ ನೀರು ನಿಮ್ಮ ಆರೋಗ್ಯವನ್ನು ಸಹ ಸುಧಾರಿಸುತ್ತದೆ.

ಪುದಿನಾ

ಪುದಿನಾ

ಪುದಿನಾ ಸಹ ಬೆಳಗಿನ ಸುಸ್ತು ಅಥವಾ ವಾಂತಿಯಾಗುವುದನ್ನು ಕಡಿಮೆ ಮಾಡಲು ಬಳಸುವ ಮನೆ ಮದ್ದಾಗಿದೆ. ಇದು ಸಹ ಜಠರವನ್ನು ಶಾಂತಗೊಳಿಸುತ್ತದೆ ಮತ್ತು ನಾಸಿಯಾವನ್ನು ಕಡಿಮೆ ಮಾಡುತ್ತದೆ.

ಒಂದು ಲೋಟ ನೀರಿಗೆ ಒಣಗಿದ ಪುದಿನಾ ಪುಡಿಯನ್ನ ಒಂದು ಕಪ್ ಬಿಸಿ ನೀರಿನಲ್ಲಿ ಹಾಕಿ. ಅದನ್ನು ಐದರಿಂದ ಹತ್ತು ನಿಮಿಷಗಳ ಕಾಲ ಆ ಲೋಟವನ್ನು ಮುಚ್ಚಿ. ನಂತರ ಇದನ್ನು ಶೋಧಿಸಿಕೊಂಡು ಸೇವಿಸಿ. ಇದಕ್ಕೆ ನೀವು ಸಕ್ಕರೆ ಅಥಾಅ ಜೇನುತುಪ್ಪವನ್ನು ಬೆರೆಸಿಕೊಳ್ಳಬಹುದು. ಈ ಟೀಯನ್ನು ಬೆಳಗ್ಗೆ ಎದ್ದ ಕೂಡಲೆ ಸೇವಿಸಿ.

ಮತ್ತೊಂದು ಆಯ್ಕೆಯೆಂದರೆ, ಒಂದಿಷ್ಟು ಪುದಿನಾ ಎಣ್ಣೆಯ ಹನಿಗಳನ್ನು ನಿಮ್ಮ ಕರವಸ್ತ್ರದ ಮೇಲೆ ಹಾಕಿಕೊಳ್ಳಿ. ಯಾವಗ ನಿಮಗೆ ನಾಸಿಯಾದ ಅನುಭವವಾಗುತ್ತದೆಯೋ, ಆಗ ಇದನ್ನು ಮೂಸಿ ನೋಡಿ.

ಗಮನಿಸಿ: ಕೆಲವು ಮಹಿಳೆಯರಿಗೆ ಪುದಿನಾ ಪರಿಮಳವೇ ನಾಸಿಯಾವನ್ನು ಹೆಚ್ಚಿಸಬಹುದು. ಅಂತಹ ಸಂದರ್ಭದಲ್ಲಿ ಈ ಪರಿಹಾರವನ್ನು ಬಳಸಿಕೊಳ್ಳಬೇಡಿ.

ವಿಟಮಿನ್ ಬಿ6 ಅನ್ನು ಒದಗಿಸುತ್ತದೆ

ವಿಟಮಿನ್ ಬಿ6 ಅನ್ನು ಒದಗಿಸುತ್ತದೆ

ನಿಖರವಾದ ಕಾರಣಗಳು ತಿಳಿದುಬಂದಿಲ್ಲವಾದರು ವಿಟಮಿನ್ ಬಿ6 ಗರ್ಭಿಣಿಯರಲ್ಲಿ ಮಾರ್ನಿಂಗ್ ಸಿಕ್‍ನೆಸ್ ತಡೆಯಲು ಸಹಾಯ ಮಾಡುತ್ತದೆ ಎಂದು ಕಂಡು ಬಂದಿದೆ. ಈ ವಿಟಮಿನ್ ಗರ್ಭಕೋಶಕ್ಕೆ ಮತ್ತು ಭ್ರೂಣಕ್ಕೆ ಹಾನಿ ಮಾಡುವುದಿಲ್ಲವಾದ್ದರಿಂದ ಇದನ್ನು ಗರ್ಭಾವಧಿಯಲ್ಲಿ ನಿಶ್ಚಿಂತೆಯಿಂದ ಸೇವಿಸಬಹುದು.

ಇದಕ್ಕಾಗಿ ವಿಟಮಿನ್ ಬಿ6 ಮಾತ್ರೆಗಳನ್ನು ಸಹ ನೀವು ಸೇವಿಸಬಹುದು. ಸಾಮಾನ್ಯವಾಗಿ ಇದು 25 ಮಿ.ಗ್ರಾಂ ಡೋಸ್‍ನಲ್ಲಿ ಬರುತ್ತದೆ. ದಿನಕ್ಕೆ 3 ಬಾರಿ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿ ವಿಟಮಿನ್ ಬಿ6 ಒದಗಿಸಬಹುದು. ಆದರೆ ಇದನ್ನು ನೀವು ನೇರವಾಗಿ ತೆಗೆದುಕೊಳ್ಳುವ ಮೊದಲು ನಿಮ್ಮ ವೈಧ್ಯರನ್ನು ಕಂಡು ಅವರಿಂದ ಸಲಹೆ ಪಡೆಯುವುದು ಉತ್ತಮ. ಗರ್ಭಿಣಿಯರು ವಿಟಮಿನ್ ಬಿ6 ಅಧಿಕ ಪ್ರಮಾಣದಲ್ಲಿರುವ ಆರೋಗ್ಯಕರವಾದ ಮತ್ತು ಸಮತೋಲನದಿಂದ ಕೂಡಿದ ಆಹಾರವನ್ನು ಸೇವಿಸುವ ಮೂಲಕ ವಾಂತಿಯಾಗುವ ಸಂಭವವನ್ನು ಕಡಿಮೆ ಮಾಡಿಕೊಳ್ಳಬಹುದು. ಅದಕ್ಕಾಗಿ ಕುಸುಬಲಕ್ಕಿ, ಅವೊಕ್ಯಾಡೊಗಳು, ಬಾಳೆಹಣ್ಣು, ಮೀನು, ಕಾರ್ನ್ ಮತ್ತು ಒಣಹಣ್ಣುಗಳಂತಹ ವಿಟಮಿನ್ ಬಿ6 ಅಧಿಕವಾಗಿರುವ ಆಹಾರವನ್ನು ಸೇವಿಸಿ.

ಗರಿಗರಿಯಾದ ಸ್ನ್ಯಾಕ್ಸ್ ಸೇವಿಸಿ

ಗರಿಗರಿಯಾದ ಸ್ನ್ಯಾಕ್ಸ್ ಸೇವಿಸಿ

ಗರಿಗರಿಯಾದ ಸ್ನ್ಯಾಕ್ಸ್‌ಗಳನ್ನು ಬೆಳಗ್ಗೆ ಎದ್ದ ಕೂಡಲೆ ಸೇವಿಸುವುದರಿಂದ ಬೆಳಗಿನ ಸಿಕ್‍ನೆಸ್ ಅನ್ನು ದೂರ ಮಾಡಬಹುದು. ಇದರಿಂದ ನಾಸಿಯಾ ಮತ್ತು ವಾಂತಿ ನಿಲ್ಲುತ್ತದೆ. ಸ್ನ್ಯಾಕ್ಸ್‌ಗಳಲ್ಲಿ ಕಾರ್ಬೋಹೈಡ್ರೇಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳ ರುಚಿಯು ಸಹ ನಿಮಗೆ ಹಿಡಿಸುವುದರಲ್ಲಿ ಸಂದೇಹವಿಲ್ಲ. ರಾತ್ರಿಯೆಲ್ಲ ಆಸಿಡ್‌ಗಳಿಂದ ಅಲ್ಲೋಲ ಕಲ್ಲೋಲವಾದ ನಿಮ್ಮ ಜಠರಕ್ಕೆ ಇದು ಬೆಳಗ್ಗೆಯೇ ಉಪಶಮನವನ್ನು ಒದಗಿಸುತ್ತದೆ. ಅದಕ್ಕಾಗಿ ನಿಮ್ಮ ಹಾಸಿಗೆಯ ಪಕ್ಕದಲ್ಲಿ ಒಂದು ಬಾಕ್ಸ್ ಸ್ನ್ಯಾಕ್ಸ್‌ಗಳನ್ನು ಇರಿಸಿಕೊಳ್ಳಿ. ಬೆಳಗ್ಗೆ ಎದ್ದ ಕೂಡಲೆ ಇದನ್ನು ಸ್ವಲ್ಪ ಸೇವಿಸಿ. ಹಾಗೆಯೇ ಮಲಗಿ, ಇದು ಜೀರ್ಣವಾಗಲು ಸ್ವಲ್ಪ ಸಮಯವನ್ನು ಕೊಡಿ. ನಂತರ ನಿಧಾನವಾಗಿ ಹಾಸಿಗೆಯನ್ನು ಬಿಟ್ಟು ಮೇಲೆ ಏಳಿ. ಆದರೆ ಒಂದು ಮಾತು ನೆನಪಿಡಿ, ಸ್ನ್ಯಾಕ್ಸ್‌ಗಳನ್ನು ನಿಮಗೆ ಹೊಟ್ಟೆ ಹಸಿಯುವ ಮೊದಲು ಮತ್ತು ವಾಂತಿ ಬರುವ ಮೊದಲು ಸೇವಿಸಬೇಕು.

ರೆಡ್ ರಾಸ್ಪ್‌ಬೆರ್ರಿ ಎಲೆ

ರೆಡ್ ರಾಸ್ಪ್‌ಬೆರ್ರಿ ಎಲೆ

ರೆಡ್ ರಾಸ್ಪ್‌ಬೆರ್ರಿ ಎಲೆಯು ಗರ್ಭಿಣಿಯರಲ್ಲಿ ನಾಸಿಯಾ ಮತ್ತು ವಾಂತಿಯನ್ನು ತಡೆಯುತ್ತದೆ ಎಂದು ಗಿಡ ಮೂಲಿಕೆಗಳ ತಜ್ಞರು ಅಭಿಪ್ರಾಯಪಡುತ್ತಾರೆ. ಇದು ಜಠರವನ್ನು ಮತ್ತು ಗರ್ಭಕೋಶವನ್ನು ಶಾಂತಗೊಳಿಸುವ ಗುಣಗಳನ್ನು ಹೊಂದಿದೆ. ಈ ಎಲೆಗಳಲ್ಲಿ ವಿಟಮಿನ್ ಬಿ, ಕಬ್ಬಿಣಾಂಶ, ಮ್ಯೆಗ್ನಿಶಿಯಂ ಮತ್ತು ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಇವುಗಳೆಲ್ಲವು ಗರ್ಭಿಣಿಯರ ಆರೋಗ್ಯಕ್ಕೆ ಅತ್ಯಾವಶ್ಯಕವಾಗಿ ಬೇಕು.

1. 1 ರಿಂದ 2 ಒಣಗಿದ ರೆಡ್ ರಾಸ್ಪ್‌ಬೆರ್ರಿ ಎಲೆಯ ಪುಡಿಯನ್ನು ಒಂದು ಕಪ್ ಬಿಸಿ ನೀರಿಗೆ ಹಾಕಿ.

2. ಇದನ್ನು 5 ರಿಂದ 10 ನಿಮಿಷಗಳ ಕಾಲ ಮುಚ್ಚಿ ಬಿಡಿ. ನಂತರ ಗ್ಲಾಸಿಗೆ ಬಸಿದುಕೊಳ್ಳಿ.

3. ಈ ಪಾನೀಯವನ್ನು ಬೆಳಗ್ಗೆ ಎದ್ದ ಕೂಡಲೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಆಕ್ಯುಪ್ರೆಷರ್

ಆಕ್ಯುಪ್ರೆಷರ್

ಆಕ್ಯುಪ್ರೆಷರ್‌ನ ವ್ರಿಸ್ಟ್ ಬ್ಯಾಂಡ್ (ಕೈಗೆ ಹಾಕಿಕೊಳ್ಳುವ ಬ್ಯಾಂಡ್) ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ. ಇದು ಸಹ ನಿಮಗೆ ವಾಂತಿ ಮತ್ತು ನಾಸಿಯಾವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಬ್ಯಾಂಡ್‍ಗಳು ಪ್ರಾಚೀನವಾದ ಆಕ್ಯುಪ್ರೆಷರ್ ಪರಿಹಾರದಲ್ಲಿ ದೊರೆಯುವ ಪ್ರಯೋಜನಗಳನ್ನೆ ನೀಡುತ್ತದೆ. ಇದನ್ನು ನಿಮ್ಮ ಕೈಗೆ ಧರಿಸುವುದರಿಂದ ಕೈನ ಗೊತ್ತಾದ ಜಾಗಗಳ ಮೇಲೆ ನಿರ್ದಿಷ್ಟ ಪ್ರಮಾಣದ ಒತ್ತಡ ಬೀಳುತ್ತ ಇರುತ್ತದೆ. ಈ ಭಾಗಗಳ ಮೇಲೆ ಬೀಳುವ ಒತ್ತಡವೇ ನಿಮಗೆ ವಾಂತಿ ಬರದಂತೆ ತಡೆಯುತ್ತದೆ.

1. ಆಕ್ಯುಪ್ರೆಷರ್ ವ್ರಿಸ್ಟ್ ಬ್ಯಾಂಡ್‍ಗಳನ್ನು ನಿಮ್ಮ ಎರಡು ಕೈನ ಮಣಿಕಟ್ಟಿನ ಭಾಗದಲ್ಲಿ ಅಂದರೆ, ಮಣಿಕಟ್ಟು ಮತ್ತು ಮೊಣಕೈ ನಡುವಿನ ಭಾಗದಲ್ಲಿ, ಕೈನ ಒಳ ಭಾಗಕ್ಕೆ ಬರುವಂತೆ ಧರಿಸಿಕೊಳ್ಳಿ.

2. ಯಾವಾಗ ನಿಮಗೆ ನಾಸಿಯಾ ಬರುವ ಅನುಭವವಾಗುತ್ತದೆಯೋ, ಆಗ ಒಂದು ವ್ರಿಸ್ಟ್ ಬ್ಯಾಂಡ್ ಮೇಲೆ ತಲಾ ಒಂದು ಸೆಕೆಂಡ್ ಬಿಡುವು ನೀಡಿ 20 ಬಾರಿ ಒತ್ತಿರಿ.

3. ಈ ವಿಧಾನವನ್ನು ಮತ್ತೊಂದು ವ್ರಿಸ್ಟ್ ಬ್ಯಾಂಡ್ ಮೇಲೆ ಸಹ ಪ್ರಯೋಗಿಸಿ.

4. ಇದನ್ನು ಕೆಲ ನಿಮಿಷಗಳ ಕಾಲ ಮಾಡಿ. ನಾಸಿಯಾವು ಕಡಿಮೆಯಾಗುವುದನ್ನು ನೀವೇ ನೋಡಬಹುದು.

ನಿಯಮಿತವಾಗಿ ನಡೆದಾಡಿ

ನಿಯಮಿತವಾಗಿ ನಡೆದಾಡಿ

ನಡಿಗೆ ಅಥವಾ ವಾಕಿಂಗ್ ಎಂಬುದು ಗರ್ಭಿಣಿಯರಿಗೆ ಅತ್ಯಾವಶ್ಯಕವಾಗಿ ಉಪಯೋಗವಾಗುವ ಒಂದು ಲಘು ವ್ಯಾಯಾಮವಾಗಿದೆ. ಎಲ್ಲಿಯವರೆಗು ನಿಮ್ಮ ವೈಧ್ಯರು ಬೇಡ ಎಂದು ಹೇಳುತ್ತಾರೋ, ಅಲ್ಲಿಯವರೆಗೆ ಈ ಲಘು ವ್ಯಾಯಾಮವನ್ನು ನೀವು ನಿಶ್ಚಿಂತೆಯಾಗಿ ಮಾಡಬಹುದು. ವಾಕಿಂಗ್ ಮಾಡುವುದರಿಂದ ನಿಮಗೆ ಮಾರ್ನಿಂಗ್ ಸಿಕ್‍ನೆಸ್ ಬರುವ ಕಾರಣಗಳಲ್ಲೊಂದಾದ ಪ್ರೊಜೆಸ್ಟಿರೋನ್ ಹಾರ್ಮೋನನ್ನು ಕರಗಿಸಬಹುದು. ನಡಿಗೆ ಇದನ್ನು ನಿಮ್ಮ ದೇಹದಲ್ಲಿ ಕರಗುವಂತೆ ಮಾಡಿಬಿಡುತ್ತದೆ.

ಇದರ ಜೊತೆಗೆ ನಡಿಗೆಯು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ನಿಮಗೆ ವಾಂತಿಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಇದಲ್ಲದೆ ನೀವು ಹೊರಗಡೆ ವಾಕ್ ಮಾಡುವಾಗ, ತಾಜಾ ಗಾಳಿಯು ನಿಮಗೆ ಮುದ ನೀಡುತ್ತದೆ.

ರಾತ್ರಿ ಊಟವಾದ ನಂತರ, 15 ರಿಂದ 20 ನಿಮಿಷಗಳ ಕಾಲ ಹೊರಗೆ ವಾಕ್ ಮಾಡಿ. ಒಂದು ವೇಳೆ ನಿಮಗೆ ಹೊರಗೆ ಹೋಗಲು ಸಾಧ್ಯವಾಗದಿದ್ದರೆ, ಮನೆಯೊಳಗೆ ಸ್ವಲ್ಪ ಹೊತ್ತು ವಾಕ್ ಮಾಡಿ.

ಹೆಚ್ಚುವರಿ ಸಲಹೆಗಳು

ಹೆಚ್ಚುವರಿ ಸಲಹೆಗಳು

ಆದಷ್ಟು ಹೆಚ್ಚಿನ ಪ್ರಮಾಣದ ಆಹಾರವನ್ನು ಸೇವಿಸಬೇಡಿ. ಇದರ ಬದಲಿಗೆ ದಿನವಿಡೀ ಚಿಕ್ಕ ಪ್ರಮಾಣದಲ್ಲಿ ಆಗಾಗ್ಗೆ ಆಹಾರವನ್ನು ಸೇವಿಸಿ. ಖಾಲಿ ಹೊಟ್ಟೆಯಲ್ಲಿ ಇರಬೇಡಿ. ಊಟದ ನಡುವೆ ಸ್ವಲ್ಪ ತಿಂಡಿಗಳನ್ನು ಸೇವಿಸುತ್ತ ಇರಿ. ಕರಿದ, ಕೊಬ್ಬಿರುವ ಮತ್ತು ಜೀರ್ಣವಾಗದ ಹಾಗು ವಾಂತಿಯುಂಟು ಮಾಡುವಂತಹ ಆಹಾರಗಳಿಂದ ದೂರವಿರಿ.

*ಕಾರ್ಬೋಹೈಡ್ರೆಟ್ ಮತ್ತು ಪ್ರೋಟಿನ್ ಅಧಿಕ ಪ್ರಮಾಣದಲ್ಲಿರುವ ಮತ್ತು ಕಡಿಮೆ ಕೊಬ್ಬು ಇರುವ, ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ. ಯಾವ ಆಹಾರವನ್ನು ಸೇವಿಸಿದಾಗ ನಿಮಗೆ ನಾಸಿಯಾ ಬರುತ್ತದೆಯೋ, ಅಂತಹ ಆಹಾರವನ್ನು ನಿಯಂತ್ರಿಸಿ.

*ಒಂದು ವೇಳೆ ಬಿಸಿ ಆಹಾರದ ವಾಸನೆಯು ನಿಮಗೆ ನಾಸಿಯಾವನ್ನು ಉಂಟು ಮಾಡಿದರೆ, ತಣ್ಣಗಿರುವ ಆಹಾರವನ್ನು ಸೇವಿಸಿ.

*ಆದಷ್ಟು ಬೇಗ ಮತ್ತು ಹೆಚ್ಚು ನಿದ್ದೆ ಮಾಡಿ ಅಥವಾ ಹಗಲಿನಲ್ಲು ಸಹ ಸ್ವಲ್ಪ ನಿದ್ದೆ ಮಾಡಿ. ಗರ್ಭಿಣಿಯರ ದೇಹಕ್ಕೆ ವಿಶ್ರಾಂತಿಯ ಅಗತ್ಯವಿರುತ್ತದೆ. ನಿದ್ದೆ ಸ್ವಲ್ಪ ಹೆಚ್ಚಿಗೆ ಮಾಡಬೇಕು ಎಂಬುದನ್ನು ಮರೆಯಬೇಡಿ.

*ನಿಮಗೆ ಅಗತ್ಯವಾದರೆ ಯೋಗವನ್ನು ಸಹ ಮಾಡಬಹುದು. ಆದರೆ ತಜ್ಞರ ಸಹಾಯ ಪಡೆಯುವುದು ಉತ್ತಮ. ಸುಲಭವಾದ ಉಸಿರಾಟದ ವ್ಯಾಯಾಮ ಮತ್ತು ಧ್ಯಾನಗಳನ್ನು ನೀವೇ ಮಾಡಬಹುದು. ಇದು ಸಹ ನಾಸಿಯಾವನ್ನು ನಿಯಂತ್ರಿಸುತ್ತದೆ.

*ಯಾವಾಗಲು ತಂಪಾದ, ಹಣ್ಣಿನ ಸ್ವಾದದ ಐಸ್‍ಕ್ಯಾಂಡಿ (ಪಾಪ್ಸಿಕಲ್ಸ್) ಗಳನ್ನು ಬೆಳಗ್ಗೆಯೇ ಸೇವಿಸುವುದರಿಂದ ಸಹ ಮಾರ್ನಿಂಗ್ ಸಿಕ್‌ನೆಸ್ ಅನ್ನು ದೂರ ಮಾಡಿಕೊಳ್ಳಬಹುದು.

*ರಾತ್ರಿ ಊಟವಾದ ನಂತರ ಕನಿಷ್ಠ 30 ನಿಮಿಷಗಳವರೆಗೆ ನಿದ್ರೆ ಮಾಡಲು ಹೋಗಬೇಡಿ.

English summary

Foods That Help You Deal With Vomiting During Pregnancy

While some women sail through pregnancy with ease, for many it can be really difficult due to nausea and vomiting. Vomiting, also known as morning sickness, is a normal part of pregnancy, especially during the first three months (first trimester). In fact, more than 65 percent of women have this problem during pregnancy
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X