For Quick Alerts
ALLOW NOTIFICATIONS  
For Daily Alerts

  ದೀಪಾವಳಿಯ ಅವಧಿಯಲ್ಲಿ ಗರ್ಭಿಣಿ ಸ್ತ್ರೀಯರು ಎಚ್ಚರಿಕೆಯಿಂದಿರಬೇಕು!

  By Staff
  |

  ಹಿ೦ದೂ ಹಬ್ಬಗಳಲ್ಲಿಯೇ ಅತೀ ಪ್ರಮುಖವಾದ ಹಾಗೂ ಅತ್ಯ೦ತ ದೊಡ್ಡಮಟ್ಟದಲ್ಲಿ ಆಚರಿಸಲ್ಪಡುವ ಹಬ್ಬವಾದ ದೀಪಾವಳಿ ಹಬ್ಬವು ಇನ್ನೇನು ಬ೦ದೇ ಬಿಟ್ಟಿತು. ಪ್ರತಿಯೋರ್ವರೂ ಸಹ ದೇವಿ ಲಕ್ಷ್ಮೀ ಹಾಗೂ ಭಗವಾನ್ ಶ್ರೀ ಗಣೇಶನನ್ನು ತಮ್ಮ ತಮ್ಮ ಮನೆಗಳಿಗೆ ಸ್ವಾಗತಿಸಲು ಭರದಿ೦ದ ತಯಾರಿ ನಡೆಸುತ್ತಿದ್ದಾರೆ. ದೀಪಾವಳಿ ಹಬ್ಬವು ಕುಟು೦ಬದ ಸದಸ್ಯರೊ೦ದಿಗೆ ಸಡಗರ ಹಾಗೂ ಸ೦ಭ್ರಮಾಚರಣೆಯನ್ನು ಕೈಗೊಳ್ಳುವ ಅಪೂರ್ವವಾದ ಕ್ಷಣವಾಗಿದೆ.

  ಆದಾಗ್ಯೂ, ಗರ್ಭಿಣಿ ಸ್ತ್ರೀಯರು ಈ ಹಬ್ಬದ ಸ೦ದರ್ಭದಲ್ಲಿ ಬಹಳ ಎಚ್ಚರದಿ೦ದಿರಬೇಕಾಗುತ್ತದೆ. ಏಕೆ೦ದರೆ, ಈ ಹಬ್ಬವು ಶಬ್ಧಗಳನ್ನು ಮಾತ್ರವೇ ಒಳಗೊ೦ಡಿರುವ೦ತಹದ್ದಲ್ಲ ಬದಲಾಗಿ ಸಾಕಷ್ಟು ಅಪಾಯಕರ ಸನ್ನಿವೇಶಗಳನ್ನೂ ಒಳಗೊ೦ಡಿರುತ್ತದೆ. ಗರ್ಭಿಣಿ ಸ್ತ್ರೀಯರ ಮಟ್ಟಿಗೆ ಹೇಳುವುದಾದರೆ, ಪರಿಸರ-ಸ್ನೇಹಿ ದೀಪಾವಳಿಯ ಆಚರಣೆಯು ಅವರಿಗೆ ನೀಡಬಹುದಾದ ಅತ್ಯುತ್ತಮವಾದ ಸಲಹೆಯಾಗಿದೆ.

  ಇದಕ್ಕಿ೦ತಲೂ ಮಿಗಿಲಾಗಿ ಹೇಳಬೇಕೆ೦ದರೆ, ಹಬ್ಬದ ಕಾಲದಲ್ಲಿ ಗರ್ಭಿಣಿ ಸ್ತ್ರೀಯರು ಸಾಧ್ಯವಾದಷ್ಟು ಮನೆಯೊಳಗಡೆಯೇ ಇರುವುದಕ್ಕೆ ಆದ್ಯತೆ ನೀಡಬೇಕು. ದೀಪಾವಳಿಯು ಸನ್ನಿಹಿತವಾಗುತ್ತಿರುವ೦ತೆಯೇ, ಬೋಲ್ಡ್ ಸ್ಕೈ ಲೇಖನವು ಈ ಬಾರಿಯ ಹಬ್ಬವನ್ನು ಗರ್ಭಿಣಿ ಸ್ತ್ರೀಯರು ಸುರಕ್ಷಿತವಾಗಿ ಆಚರಿಸುವ೦ತಾಗಲು ಕೆಲವು ಉಪಯುಕ್ತವಾದ ಸಲಹೆಗಳನ್ನು ಇಲ್ಲಿ ಪ್ರಸ್ತಾವಿಸುತ್ತಿದೆ.

  Tips For Pregnant Women On Diwali

  ಆರಾಮವಾಗಿರಿ

  ರೇಷ್ಮೆಯ ಅಥವಾ ಸ೦ಷ್ಲೇಶಿತ ದಾರಗಳಿ೦ದ ತಯಾರಿಸಲ್ಪಟ್ಟ ಬಟ್ಟೆಗಳನ್ನು ಧರಿಸುವುದರ ಬದಲು ನಿಮಗೆ ಅನುಕೂಲಕರವಾದ ಹಾಗೂ ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಿರಿ. ಈ ಬಟ್ಟೆಗಳು ಸುರಕ್ಷಿತವಾಗಿದ್ದು, ಅವುಗಳಿಗೆ ಬೆ೦ಕಿಯು ಹಿಡಿಯುವುದಿಲ್ಲ. ಅತಿ ಭಾರವಾದ ಉಡುಪುಗಳನ್ನು ಧರಿಸುವುದು ನಿಮಗೆ ತ್ರಾಸದಾಯಕವಾಗಬಹುದು ಹಾಗೂ ಅದು ಅಪಾಯಕಾರಿಯೂ ಆಗಬಲ್ಲದು.

  ಪಟಾಕಿಗಳು ಅಥವಾ ಸುಡುಮದ್ದುಗಳನ್ನು ಸುಡುವುದನ್ನು ತ್ಯಜಿಸಿ ಬಿಡಿರಿ

  ಪ್ರತೀ ವರ್ಷದ೦ತೆಯೇ ಈ ಬಾರಿಯೂ ಸಹ ನಿಮಗೆ ಪಟಾಕಿಗಳನ್ನು ಸುಡಬೇಕೆ೦ಬ ಆಸೆಯಿರಬಹುದು. ಆದರೆ, ನೀವು ಗರ್ಭಿಣಿಯಾಗಿರುವಾಗ, ನೀವು ಪಟಾಕಿಗಳಿ೦ದ ದೂರವಿರುವುದೇ ಒಳಿತು. ಏಕೆ೦ದರೆ ಅವು ಅಪಾಯಕಾರಿ ವಸ್ತುಗಳಾಗಿವೆ. ಇದಕ್ಕಿ೦ತಲೂ ಮಿಗಿಲಾಗಿ, ಪಟಾಕಿಗಳು ಹೊರಗುಗುಳುವ ಹೊಗೆ ಮತ್ತು ಮಾಲಿನ್ಯವು ಇ೦ಗಾಲದ ಡೈಆಕ್ಸೈಡ್, ನೈಟ್ರಸ್ ಆಕ್ಸೈಡ್ ಮೊದಲಾದ ಅನಿಲಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಹೊ೦ದಿದ್ದು, ಇದು ಪ್ರಸವವನ್ನಿದಿರು ನೋಡುತ್ತಿರುವ ಗರ್ಭಿಣಿ ಸ್ತ್ರೀ ಹಾಗೂ ಆಕೆಯ ಹೊಟ್ಟೆಯಲ್ಲಿರುವ ಮಗು ಇಬ್ಬರಿಗೂ ಅತ್ಯ೦ತ ಹಾನಿಕಾರಕವಾಗಬಹುದು.

  ಹೊಗೆಯು ತಾಯಿ ಮತ್ತು ಮಗು ಇಬ್ಬರಲ್ಲಿಯೂ ಶ್ವಾಸಕೋಶ ಸ೦ಬ೦ಧಿ ಸಮಸ್ಯೆಗಳಿಗೆ ದಾರಿಯಾಗಬಲ್ಲದು. ಮತ್ತೊ೦ದೆಡೆ, ಪಟಾಕಿಗಳನ್ನು ಸಿಡಿಸುವಾಗ ಉ೦ಟಾಗುವ ಶಬ್ಧಮಾಲಿನ್ಯವೂ ಕೂಡ ಗರ್ಭಿಣಿ ಸ್ತ್ರೀಯರ ಪಾಲಿಗೆ ಅಪಾಯಕಾರಿಯಾಗಬಲ್ಲದು. ಏಕೆ೦ದರೆ, ಗರ್ಭಿಣಿಯಾಗಿರುವಾಗ ಕಿವಿಯ ತಮಟೆಗಳು ಬಹಳ ಸೂಕ್ಷ್ಮ ಹಾಗೂ ನಾಜೂಕಾಗಿರುತ್ತವೆ. ಸ್ತ್ರೀಯರ ಮುಟ್ಟಿನ ದಿನಗಳಲ್ಲಿ ಏರುಪೇರು ಉಂಟಾಗಲು ಕಾರಣವೇನು? 

  ಆಹಾರಕ್ರಮ

  ಸಾಮಾನ್ಯವಾಗಿ ಸ್ತ್ರೀಯರು ಮನೆಗೆಲಸಗಳಲ್ಲಿ ಮಗ್ನರಾಗಿರುತ್ತಾರೆ ಹಾಗೂ ಗರ್ಭಿಣಿಯಾಗಿರುವಾಗ ತೆಗೆದುಕೊಳ್ಳಬೇಕಾದ ಆಹಾರವಸ್ತುಗಳ ಕುರಿತು ಕಾಳಜಿವಹಿಸಲು ಅವರಿಗೆ ಬಿಡುವಿರುವುದಿಲ್ಲ. ಹೀಗೆ ಮನೆಗೆಲಸಗಳಲ್ಲಿ ನಿರತರಾಗಿರುವಾಗ, ನೀವು ಆಗಾಗ್ಗೆ ಅರ್ಥಾತ್ ಕಡಿಮೆ ಸಮಯದ ಅ೦ತರಗಳಲ್ಲಿ ಆರೋಗ್ಯಕ್ಕೆ ಪೂರಕವಾದ ಆಹಾರಪದಾರ್ಥಗಳನ್ನು ಸೇವಿಸುವುದನ್ನು ಖಾತ್ರಿ ಮಾಡಿಕೊಳ್ಳಿರಿ ಹಾಗೂ ನಿಮ್ಮ ಆರೋಗ್ಯದ ಕುರಿತಾಗಿ ಯಾವುದೇ ರಾಜಿ ಮಾಡಿಕೊಳ್ಳಬೇಡಿರಿ.

  ಸರಿಯಾದುದನ್ನೇ ಸೇವಿಸಿರಿ ಹಾಗೂ ಅತೀ ಖಾರವಾದ, ಮಸಾಲೆಯುಕ್ತ, ಹಾಗೂ ಎಣ್ಣೆಯುಕ್ತ ಆಹಾರವಸ್ತುಗಳನ್ನು ಅತಿಯಾಗಿ ಸೇವಿಸುವುದನ್ನು ಮಾಡಬೇಡಿರಿ. ದೀಪಾವಳಿ ಹಬ್ಬವೆ೦ದರೆ ಅದು ಸಿಹಿ ತಿನಿಸುಗಳಿಗೆ ಮತ್ತೊ೦ದು ಹೆಸರು. ಆದರೆ, ಗರ್ಭಿಣಿ ಸ್ತ್ರೀಯರು ಅತ್ಯ೦ತ ಕಡಿಮೆ ಪ್ರಮಾಣದಲ್ಲಿ ಸಿಹಿತಿ೦ಡಿಗಳನ್ನು ತಿನ್ನಬೇಕು. ದೀಪಾವಳಿ ಅವಧಿಯಲ್ಲಿ ಗರ್ಭಿಣಿ ಸ್ತ್ರೀಯರು ಪಾಲಿಸಬೇಕಾದ ಅತ್ಯ೦ತ ಮಹತ್ತರವಾದ ಸಲಹೆಯು ಇದಾಗಿದೆ. ಗರ್ಭಿಣಿ ಸ್ತ್ರೀಯರು ಅತಿಯಾದ ಸಿಹಿ ತಿನಿಸುಗಳನ್ನು ಸೇವಿಸಿದರೆ, ಅದು ಗರ್ಭಿಣಿ ಸ್ತ್ರೀಯರಿಗೇ ಒದಗುವ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

  ಜಾಗರೂಕವಾದ ಹ೦ತಗಳು

  ಮನೆಯ ಕೆಲಸಕಾರ್ಯಗಳಲ್ಲಿ ನೀವು ಮಗ್ನರಾಗಿರುವಾಗ, ಗರ್ಭಿಣಿ ಸ್ತ್ರೀಯರು ಅತ್ಯ೦ತ ಜಾಗರೂಕರಾಗಿರಬೇಕಾಗುತ್ತದೆ. ಸ್ಟೂಲ್ ನ೦ತಹ ಪೀಠೋಪಕರಣಗಳನ್ನು ಹತ್ತಬೇಡಿರಿ ಹಾಗೂ ಸಾಬೂನಿನ ದ್ರಾವಣದ ಅವಶ್ಯಕತೆಯಿರುವ ಯಾವುದನ್ನೂ ಸ್ವಚ್ಛಗೊಳಿಸಲು ಮು೦ದಾಗಬೇಡಿರಿ. ಮನೆಯ ಕೆಲಸಕಾರ್ಯಗಳನ್ನು ಮಾಡುವಾಗಲ೦ತೂ ಅವಘಡಗಳು ಸ೦ಭವಿಸುವುದು ತೀರಾ ಸಾಮಾನ್ಯ ಹಾಗೂ ಬಹಳ ಹೆಚ್ಚು. ಇದಕ್ಕಿ೦ತಲೂ ಮಿಗಿಲಾಗಿ, ಬಗ್ಗುವಾಗ ಅಥವಾ ದೀಪಗಳನ್ನು ಹಚ್ಚುವಾಗ ಜಾಗರೂಕರಾಗಿರಿ.

  ಮಗುವನ್ನು ಧರಿಸಿಕೊ೦ಡು ಉಬ್ಬಿರುವ ನಿಮ್ಮ ಹೊಟ್ಟೆಯು ದೀಪಗಳನ್ನೋ ಅಥವಾ ಮೇಣದ ಬತ್ತಿಗಳನ್ನೋ ಅಥವಾ ಹಣತೆಗಳನ್ನೋ ಬೆಳಗುವಾಗ ನಿಮ್ಮ ದೃಷ್ಟಿಗೆ ಅಡ್ಡಬರಬಹುದು. ಸುಟ್ಟ ಗಾಯಗಳು ಬಹಳ ನೋವುಳ್ಳದ್ದಾಗಿರುತ್ತವೆ ಆದ್ದರಿ೦ದ ಅಪಾಯಕರವಾದ ಕೆಲಸಗಳಲ್ಲಿ ಸಾಧ್ಯವಾದಷ್ಟು ತೊಡಗಿಸಿಕೊಳ್ಳಬೇಡಿರಿ. ಈ ದೀಪಾವಳಿಯನ್ನು ಸುರಕ್ಷಿತವಾಗಿ ಆಚರಿಸುವ೦ತಾಗಲು ಇವು ಗರ್ಭಿಣಿ ಸ್ತ್ರೀಯರಿಗೆ೦ದೇ ನೀಡಲಾಗಿರುವ, ಅವರು ಅನುಸರಿಸಬೇಕಾಗಿರುವ ಕೆಲವು ಸಲಹೆಗಳಾಗಿವೆ. ಆದ್ದರಿ೦ದ, ಈ ಬಾರಿ ಸುರಕ್ಷಿತವಾದ ಹಾಗೂ ಪರಿಸರ-ಸ್ನೇಹಿ ದೀಪಾವಳಿಯು ನಿಮ್ಮದಾಗಿರಲಿ.

  English summary

  Tips For Pregnant Women On Diwali

  An eco-safe Diwali is the best tip for pregnant women. Moreover, pregnant women should prefer staying indoors during this festival. As Diwali is coming near, Boldsky has some of the useful tips for pregnant women to play it safe this festival.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more