For Quick Alerts
ALLOW NOTIFICATIONS  
For Daily Alerts

ಗರ್ಭಪಾತದ ಕೆಲವೇ ದಿನಗಳಲ್ಲಿ ಗರ್ಭಧಾರಣೆ ಸಾಧ್ಯವೇ?

By Poornima heggade
|

ಒಂದು ಮಗು ಹುಟ್ಟಿದರೆ ಅದು ನಮಗೆ ಎಷ್ಟು ಸಂತೋಷವನ್ನು ತರಬಲ್ಲದೋ ಅದೇ ರೀತಿ ಅನಗತ್ಯ ಗರ್ಭಧಾರಣೆಯೂ ಕೂಡ ದಂಪತಿಗಳಿಗೆ ಅಷ್ಟೇ ಒತ್ತಡಕ್ಕೆ ಕಾರಣವಾಗಬಹುದು. ಗರ್ಭಪಾತ ಇನ್ನೂ ಕುಟುಂಬವನ್ನು ಆರಂಭಿಸಲು ಸಿದ್ಧವಿರದ ಯುವ ದಂಪತಿಗಳಲ್ಲಿ ಸಾಮಾನ್ಯ. ಆದರೆ, ನೀವು ಗರ್ಭಪಾತ ಮಾಡಿಸಿಕೊಂಡ ನಂತರ ಮುಂದಿನ ಕೆಲವು ತಿಂಗಳಲ್ಲಿ ಗರ್ಭಾವಸ್ಥೆಯನ್ನು ಹೊಂದುವ ಯಾವುದೇ ಭಯವಿಲ್ಲ ಎಂದು ಆಲೋಚಿಸುತ್ತೀರೇ? ಹಾಗಾದರೆ ಓದಿ, ನಾವು ಈ ಕಲ್ಪನೆಯನ್ನು ಹಿಂದಿನ ಕೆಲವು ಸತ್ಯವನ್ನು ನಿಮ್ಮ ಅರಿವಿಗೆ ತರುತ್ತಿದ್ದೇವೆ.

ಗರ್ಭಪಾತದ ನಂತರ ಗರ್ಭಧಾರಣೆ:
ಯಾವುದೇ ಕಾರಣದಿಂದ ಈಗ ತಾನೇ ಗರ್ಭಪಾತ ಮಾಡಿಸಿಕೊಂಡ ಮಹಿಳೆ ತಕ್ಷಣದಲ್ಲಿ ಇನ್ನೊಂದು ಗರ್ಭಧಾರಣೆಗೆ ಸಿದ್ಧವಾಗಿರುವುವಿಲ್ಲ. ಗರ್ಭಪಾತ ಎಂದೂ ಬಂಜೆತನಕ್ಕೆ ಕಾರಣವಾಗುವುದಿಲ್ಲ. ಆದ್ದರಿಂದ ಯುವ ದಂಪತಿಗಳು ಗರ್ಭಧಾರಣೆಯನ್ನು ತಡೆಗಟ್ಟುವ ಕೆಲವು ಕ್ರಮಗಳನ್ನು ಅನುಸರಿಸುತ್ತಾರೆ. ಅಚಾತುರ್ಯವಾಗಿ ಮಹಿಳೆ ಪುನಃ ಗರ್ಭಧರಿಸಿದರೂ ಗಭಾವಸ್ಥೆಯನ್ನು ಮುಂದುವರಿಸಿದರೆ ಯಾವುದೇ ಅಪಾಯವಿಲ್ಲ.

Can You Get Pregnant Immediately After an Abortion?

ಈ ಪರಿಸ್ಥಿತಿಗಳಿದ್ದರೆ ಅಬಾರ್ಷನ್ ಅವಶ್ಯಕ

ಎಷ್ಟು ಬೇಗ?
ಗರ್ಭಪಾತವಾದ ನಂತರ ಮತ್ತೊಮ್ಮೆ ಗರ್ಭಧರಿಸುವುದಕ್ಕೆ ಮೂರು ತಿಂಗಳ ಕಾಲಾವಕಾಶ ತೆಗೆದುಕೊಳ್ಳುವುದು ಉತ್ತಮ. ದೈಹಿಕವಾಗಿ ಯೋಗಕ್ಷೆಮವನ್ನು ಕಾಯ್ದುಕೊಳ್ಳುವುದು ಈ ಸಂದರ್ಭದಲ್ಲಿ ಅತ್ಯಂತ ಮುಖ್ಯ. ಪ್ರೀನೆಟಲ್ ಪೋಲಿಕ್ ಆಸಿಡ್ ಮತ್ತು ಥೈರೋಡ್, ಮಧುಮೇಹ ಮೊದಲಾದವುಗಳನ್ನು ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ. ಇಲ್ಲದಿದ್ದರೆ ಇದು ಮತ್ತೆ ಗರ್ಭಪಾತವಾಗುವ ಸಾಧ್ಯತೆಗಳಿರುತ್ತದೆ.

ಗರ್ಭಧಾರಣೆಯನ್ನು ತಡೆಯುವ ಯಾವುದೇ ಕ್ರಮವನ್ನು ಅನುಸರಿಸದಿದ್ದರೆ, ಗರ್ಭಪಾತ ಮಾಡಿಸಿಕೊಂಡ ಒಂದು ವಾರದಲ್ಲಿ ಪುನಃ ಗರ್ಭಧರಿಸುವ ಸಾಧ್ಯತೆಗಳಿರುತ್ತವೆ. ಗರ್ಭಪಾತದ ನಂತರ ಮಹಿಳೆಯಲ್ಲಿ ಅಂಡಾಣುಗಳು ಉತ್ಪಾದನೆಯಾಗಲು ಆರಂಭವಾಗುತ್ತವೆ. ವೈದ್ಯರ ಸಲಹೆಯ ಪ್ರಕಾರ " ಗರ್ಭಪಾತವಾದ ನಂತರ ದೇಹ ಸುಧಾರಿಸಿಕೊಳ್ಳಲು ಕೆಲವು ಸಮಯ ಬೇಕು. ಆದ್ದರಿಂದ ಕನಿಷ್ಠ ಮೂರು ತಿಂಗಳುಗಳ ಕಾಲ ಮುಂದಿನ ಗರ್ಭಧಾರಣೆಗೆ ಕಾಯುವುದು ಒಳ್ಳೆಯದು.

ಜೊತೆಗೆ ಶೇಕಡಾ 80 ರಷ್ಟು ಮಹಿಳೆಯರಲ್ಲಿ ಗರ್ಭಪಾತವಾಗುವುದಕ್ಕೆ ಕಾರಣ, ವೀರ್ಯಾಣುಗಳು 2 ರಿಂದ 5 ತಿಂಗಳಿಗೆ ಬದಲಾವಣೆಯನ್ನು ಹೊಂದುವುದರಿಂದ ಕ್ರೋಮೋಸೊಮಿನಲ್ (ವರ್ಣತಂತು) ಅಬರೇಶನ್ (ವಿಫಥನ) ಉಂಟಾಗುತ್ತದೆ. ಆದ್ದರಿಂದ ಮುಂದಿನ ಗರ್ಭಧಾರಣೆಗೆ ಕನಿಷ್ಠ ಮೂರು ತಿಂಗಳುಗಳ ಕಾಲ ಕಾಯುವುದು ಉತ್ತಮ.

ಗರ್ಭಾವಸ್ಥೆಯಲ್ಲಿ ಚೆನ್ನಾಗಿ ತಿನ್ನಿ, ಆರೋಗ್ಯವಾಗಿರಿ

ಅಪಾಯಗಳು
ಎರಡನೇಯ ಬಾರಿಯ ಗರ್ಭಪಾತ ಸುರಕ್ಷಿತವಾಗಿದ್ದರೂ ಕೂಡ ನಿಮ್ಮ ದೇಹದಲ್ಲಿ ಕೆಲವು ಪೌಷ್ಠಿಕಾಂಶಗಳ ಕೊರತೆ ಉಂಟಾಗಬಹುದು. ಗರ್ಭಪಾತವಾದ ನಂತರ ತಕ್ಷಣದಲ್ಲಿ ಗರ್ಭಧರಿಸಲು ಸಾಧ್ಯ ಆದರೆ ಇದು ಹೆಚ್ಚು ಸುರಕ್ಷಿತವಲ್ಲ. ದೇಹದಲ್ಲಿ ಮೊದಲನೆಯ ಗರ್ಭಪಾತದಿಂದ ಸಾಕಷ್ಟು ಪೋಷಕಾಂಶಗಳು ನಷ್ಟವಾಗಿರುತ್ತವೆ. ಆದ್ದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಪುನಃ ಗಳಿಸಲು ಕೆಲವು ಸಮಯ ಕಾಲಾವಕಾಶಬೇಕು.

ಗರ್ಭಪಾತವಾದಾಗ ಅನುಸರಿಸಬೇಕಾದ ಡಯೆಟ್

ಸುರಕ್ಷಿತತೆ:
ಗರ್ಭಪಾತವಾದ ನಂತರ ಒಂದು ತಿಂಗಳಲ್ಲಿ ಪರೀಕ್ಷೆಯ ಮೂಲಕ ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳಬಹುದು. ಗರ್ಭಧಾರಣೆಯ ಖಚಿತಪಡಿಸಿಕೊಳ್ಳಲು ಪ್ರತಿವಾರ ಹಲವು ಬಾರಿ ಪರೀಕ್ಷೆಯನ್ನು ಮಾಡಿ ಬಣ್ಣದ ಬದಲಾವಣೆಯನ್ನು ಗಮನಿಸಿ. ಒಂದು ವೇಳೆ ಬಣ್ಣ ಕಡು ಗುಲಾಬಿ ಬಣ್ಣಕ್ಕೆ ತಿರುಗಿದ್ದರೆ ನೀವು ನಿಮ್ಮ ಮಗುವಿನ ಬರಮಾಡುಕೊಳ್ಳುವಿಕೆಗೆ ಸಿದ್ಧರಾಗಿದ್ದೀರಿ ಎಂದು ಅರ್ಥ. ಅಥವಾ ಬಣ್ಣ ತೆಳು ಗುಲಾಬಿ ಬಣ್ಣದಲ್ಲಿದ್ದರೆ ಪರೀಕ್ಷೆಯ ಫಲಿತಾಂಶ ಮಿಥ್ಯವಾಗಿರುವ ಸಾಧ್ಯತೆಗಳಿರುತ್ತವೆ.

English summary

Can You Get Pregnant Immediately After an Abortion?

As much happiness conceiving a child may bring, an unwanted pregnancy can cause stress to both partners. But, do you think getting an abortion means no fear of pregnancy for the next few months? Well, we unravel some truth behind this notion.
X
Desktop Bottom Promotion