For Quick Alerts
ALLOW NOTIFICATIONS  
For Daily Alerts

ಸಿಸೇರಿಯನ್ ಚಿಕಿತ್ಸೆ ಬಳಿಕ ಮಾಡಬೇಕಾದ ಮತ್ತು ಮಾಡಬಾರದ 12 ವಿಷಯಗಳು

By Hemanth P
|

ಸಿಸೇರಿಯನ್‌ನ ಪರಿಣಾಮ ಮತ್ತು ಅದರಿಂದ ಚೇತರಿಸಿಕೊಳ್ಳುವ ಸಮಯ ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿರುತ್ತದೆ. ನೀವು ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದ್ದರೆ ಮುಖ್ಯವಾಗಿ ಮಾಡಬೇಕಾದ ಮತ್ತು ಮಾಡಬಾರದ ಕೆಲವೊಂದು ವಿಷಯಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ನೋವು:
ಸಿಸೇರಿಯನ್ ಮೂಲಕ ಹೆರಿಗೆಯಾಗಿದ್ದರೆ ನಿಮಗೆ ಸರಿಯಾದ ನೋವು ನಿವಾರಕ ನೀಡದಿದ್ದರೆ ನೋವು ಅನುಭವಿಸಬೇಕಾಗುತ್ತದೆ. ನಿಮಗೆ ನೋವು ನಿವಾರಕ ನೀಡದಿದ್ದರೆ ಕೇಳಿ ಪಡೆಯಿರಿ.

ಎಪಿಡ್ಯುರಲ್:
ಎಪಿಡ್ಯುರಲ್ ಬಳಿಕ ಚಲಿಸಲು ಯಾವುದು ಸರಿಯಾದ ಸಮಯವೆಂದು ನೀವು ನರ್ಸ್ ಗಳಲ್ಲಿ ಕೇಳಿ ತಿಳಿದುಕೊಳ್ಳಿ. ನಿಮಗೆ ಕೆಮ್ಮು ಬಂದಾಗ ಮತ್ತು ಇತರ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಜಾಗದಲ್ಲಿ ಕೈಯನ್ನು ಯಾವ ರೀತಿ ಹಿಡಿಯಬೇಕೆಂದು ಅವರು ನಿಮಗೆ ತಿಳಿಸಲಿದ್ದಾರೆ. ಇದರಿಂದ ನಿಮಗೆ ನೋವಾಗದು.

ಸಿಸೇರಿಯನ್ ಬಳಿಕ ನಾರ್ಮಲ್ ಡೆಲಿವರಿಯಾಗಬಹುದೇ?

12 Important Dos and Don’ts After your Caesarean Delivery

ನಡಿಗೆ:
ನಡೆಯುವುದು ತುಂಬಾ ಕಠಿಣ. ತೂಗಾಡುತ್ತಾ ಇದ್ದರೂ ಪ್ರಯತ್ನ ಮಾಡುವುದನ್ನು ಬಿಡಬೇಡಿ. ನೀವು ನಡೆದಾಡಿದಷ್ಟು ರಕ್ತ ಸಂಚಲನ ಉತ್ತಮವಾಗಿ ಆಗಿ ಶಸ್ತ್ರಚಿಕಿತ್ಸೆ ಜಾಗದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಬಹುದು.

ಮೊಲೆಹಾಲುಣಿಸುವುದು:
ಸಾಧ್ಯವಾದಷ್ಟು ಬೇಗ ನೀವು ಮಗುವಿಗೆ ಮೊಲೆಹಾಲುಣಿಸಬೇಕು. ಇದರಿಂದ ಗರ್ಭಕೋಶ ಸಂಕುಚಿತವಾಗುತ್ತದೆ. ಸಿಸೇರಿಯನ್ ಮೂಲಕ ಹೆರಿಗೆಯಾದ ಮಹಿಳೆಯರು ಒಂದು ಬದಿಗೆ ಮಲಗಿ ಅಥವಾ ನರ್ಸಿಂಗ್ ದಿಂಬನ್ನು ಬಳಸಿಕೊಂಡು ಕುಳಿತುಕೊಂಡು ಮೊಲೆಹಾಲುಣಿಸಬೇಕು. ಇದು ನಿಮಗೆ ಮೊದಲ ಸಲವಾದರೆ ನರ್ಸ್ ಗಳ ನೆರವು ಪಡೆಯಿರಿ.

ಸಿಸೇರಿಯನ್ ನಂತರ ಪೋಷಣೆ ಹೇಗಿರಬೇಕು?

ಬಟ್ಟೆಗಳು:
ನೀವು ಸರಿಯಾದ ಬಟ್ಟೆಗಳನ್ನು ಧರಿಸಿದ್ದೀರಿ ಎಂದು ದೃಢಪಡಿಸಿಕೊಳ್ಳಿ. ಬಟ್ಟೆಗಳು ನಿಮ್ಮ ದೇಹದ ಭಾಗಕ್ಕೆ ಉಜ್ಜದಂತಿರಲಿ.

ಬೆಲ್ಟ್:
ಶಸ್ತ್ರಚಿಕಿತ್ಸೆಯ ಕೆಲವು ತಿಂಗಳ ಕಾಲ ನೀವು ಸಿಸೇರಿಯನ್ ಬೆಲ್ಟ್ ನ್ನು ಬಳಸಿ. ನೀವು ಚಲಿಸುವಾಗ ಗಾಯಕ್ಕೆ ಹಠಾತ್ ಆಗಿ ಏನು ತಾಗದಂತೆ ತಡೆಯುತ್ತದೆ ಮತ್ತು ಶಸ್ತ್ರಚಿಕಿತ್ಸೆ ಬಳಿಕ ಹೊಟ್ಟೆ ದೊಡ್ಡದಾಗುವುದನ್ನು ತಡೆಯುತ್ತದೆ.

ಮನೆಯಲ್ಲಿ:
* ನಿಮಗೆ ಚೇತರಿಕೆಗೆ ಸುಮಾರು ಆರು ವಾರಗಳು ಬೇಕಾಗುತ್ತದೆ. ಈ ಸಮಯದಲ್ಲಿ ನೀವು ಭಾರವಾದ ವಸ್ತುಗಳನ್ನು ಎತ್ತಬೇಡಿ ಅಥವಾ ನಿಮ್ಮ ಶಸ್ತ್ರಚಿಕಿತ್ಸೆಯ ಜಾಗಕ್ಕೆ ಒತ್ತಡ ಬೀಳುವಂತಹ ಮನೆಕೆಲಸ ಮಾಡಬೇಡಿ.
* ನಿಮ್ಮ ಮನೆಯಲ್ಲಿ ದೊಡ್ಡ ಮಕ್ಕಳಿದ್ದರೆ ಆಗ ಹೆಚ್ಚುವರಿ ನೆರವು ಪಡೆಯುವುದು ತುಂಬಾ ಮುಖ್ಯ. ಯಾಕೆಂದರೆ ನೀವು ಮಕ್ಕಳನ್ನು ಎತ್ತುವುದರ ಪರಿಣಾಮ ಶಸ್ತ್ರಚಿಕಿತ್ಸೆ ಮಾಡಿದ ಜಾಗದ ಮೇಲಾಗಬಹುದು.

ವ್ಯಾಯಾಮ:
ನೀವು ಭಿನ್ನವಾಗಿ ಕಾಣುವುದು ತುಂಬಾ ಸಾಮಾನ್ಯ. ಹಿಂದಿನ ಹಾಗೆ ಕಾಣಿಸಿಕೊಳ್ಳಲು ವ್ಯಾಯಾಮ ಮಾಡಿಕೊಳ್ಳಬೇಕು. ಆದರೆ ತಕ್ಷಣ ಜಿಮ್ ಗೆ ಹೋಗಬೇಡಿ. ಆರಂಭದಲ್ಲಿ ಸರಳ ಚಲನೆಗಳ ವ್ಯಾಯಾಮ ಮಾಡಿ. ನಿಧಾನಗತಿಯಲ್ಲಿ ಕಾಲಿನ ಚಲನೆಯೊಂದಿಗೆ ಸ್ವಿಂಗ್ ನಲ್ಲಿ ಸ್ವಿಂಗ್ ಮಾಡಿ.

ದೈಹಿಕ ಸಂಬಂಧ:
ನಿಮ್ಮ ಶಸ್ತ್ರಚಿಕಿತ್ಸೆ ಬಳಿಕ ಬೇಗನೆ ದೈಹಿಕ ಸಂಪರ್ಕದಲ್ಲಿ ತೊಡಗಬೇಡಿ. ವೈದ್ಯರ ಸಲಹೆ ಪಡೆದು ಮುಂದುವರಿಯಿರಿ. ನೀವು ಇದಕ್ಕಾಗಿ ದೈಹಿಕ ಮತ್ತು ಮಾನಸಿಕವಾಗಿ ತಯಾರಾಗಬೇಕು. ಇದರ ಬಗ್ಗೆ ನಿಮ್ಮ ಸಂಗಾತಿ ಜತೆ ಮಾತನಾಡಿ.

ಆಹಾರ:
ಶಸ್ತ್ರಚಿಕಿತ್ಸೆಯ ಆರಂಭದ ದಿನಗಳಲ್ಲಿ ಎಣ್ಣೆಯುಕ್ತ, ಹೊಟ್ಟೆಗೆ ಭಾರವಾಗುವ ಅಥವಾ ಕಾಬ್ರೋಹೈಡ್ರೆಟ್ ಇರುವ ಆಹಾರಗಳನ್ನು ತ್ಯಜಿಸಿ. ನಿಮ್ಮ ಅಂಗಾಂಗಗಳು ತುಂಬಾ ಸೂಕ್ಷ್ಮ ಮತ್ತು ಅದು ಚೇತರಿಕೆಯ ಹಾದಿಯಲ್ಲಿರುತ್ತದೆ.

ಡ್ರೈವಿಂಗ್
ಡ್ರೈವಿಂಗ್ ಮಾಡಲು ನೀವು ಆರು ವಾರಗಳ ತನಕ ಕಾಯಬೇಕು ಎಂದು ಯಾವುದೇ ನಿಯಮ ಕೂಡ ಹೇಳಿಲ್ಲ. ಆದರೆ ಚಾಲನೆ ಮಾಡುವಾಗ ನಿಮ್ಮ ಲಘುವಾಗಿ ಹೊಟ್ಟೆ ನೋವಾಗಬಹುದು. ಹಠಾತ್ ಆಗಿ ಬ್ರೇಕ್ ಹಾಕುವುದರಿಂದ ನೀವು ಗಾಯಾಳುವಾಗುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ವೈದ್ಯರಿಂದ ಸಲಹೆ ಪಡೆದ ಬಳಿಕ ಚಾಲನೆ ಮಾಡಬೇಕು.

ಪುನರಾವರ್ತಿತ ಗರ್ಭಪಾತಕ್ಕೆ ಕಾರಣ ಏನಿರಬಹುದು?

ಖಿನ್ನತೆ:
ಸಿಸೇರಿಯನ್ ಬಳಿಕ ಖಿನ್ನತೆ ಆವರಿಸುವುದು ಸಹಜ. ನಿಮಗೆ ಇದೇ ರೀತಿಯ ಭಾವನೆಯಾಗುತ್ತಿದ್ದರೆ ನಿಮ್ಮ ವೈದ್ಯರೊಂದಿಗೆ ಅಥವಾ ನಿಮಗೆ ತುಂಬಾ ಹತ್ತಿರವಾಗಿರುವವರ ಜತೆಗೆ ಮಾತನಾಡಿ. ಇಂತಹ ಭಾವನೆಗಳ ಬಗ್ಗೆ ಮುಜುಗರ ಪಡುವಂತಹದ್ದು ಏನೂ ಇಲ್ಲ.
ಅಂತಿಮವಾಗಿ ಮೊದಲ ಮಗು ಸಿಸೇರಿಯನ್ ಮೂಲಕವಾದರೆ ಎರಡನೇ ಮಗು ಸಾಮಾನ್ಯ ಹೆರಿಗೆಯಿಂದ ಆಗುವುದಿಲ್ಲವೆನ್ನುವುದು ಇಂದಿನ ದಿನಗಳಲ್ಲಿ ಇದು ಸತ್ಯವಾಗಿ ಉಳಿದಿಲ್ಲ ಎಂದು ನೆನಪಿರಲಿ. ಇದರಿಂದ ಹೆರಿಗೆಯ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ.

English summary

12 Important Dos and Don’ts After your Caesarean Delivery

The effects of a c-section vary from one woman to the other and so does the recovery time. Here are some important dos and don’ts for you if you have just delivered a baby through caesarean.
Story first published: Wednesday, April 30, 2014, 15:45 [IST]
X
Desktop Bottom Promotion