For Quick Alerts
ALLOW NOTIFICATIONS  
For Daily Alerts

ಪ್ರಸವಪೂರ್ವ ಆರೈಕೆ ಎಂದರೇನು ?

By ಲೇಖಕ
|

ಪ್ರಸವಪೂರ್ವ ಆರೈಕೆ ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಆಕೆಯ ಹುಟ್ಟುವ ಮಗುವಿಗೆ ಒದಗಿಸಬೇಕಾದ ಆರೋಗ್ಯ, ಶಿಕ್ಷಣ, ಸಲಹೆ ಮತ್ತು ಸಂಪನ್ಮೂಲಗಳನ್ನು ಹೊಂದಿದೆ. ಪ್ರಸವಪೂರ್ವ ಆರೈಕೆ ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಸುರಕ್ಷತೆ ಮುಖ್ಯ. ನೀವು ಗರ್ಭಿಣಿ ಅಥವಾ ಆ ಬಗ್ಗೆ ನಿಮಗೆ ಸಂಶಯವಿದ್ದರೆ ತಕ್ಷಣ ನೀವು ತಿಳಿದಿರುವ ಪ್ರಸವಪೂರ್ವ ಆರೈಕೆ ನೀಡುವವರಿಗೆ ತೋರಿಸಿ ಖಚಿತಪಡಿಸಿಕೊಳ್ಳುವುದು ಮೊದಲ ಆದ್ಯತೆಯಾಗಿದೆ.

ಹಲವಾರು ತಾಯಂದಿರು ಪ್ರಸವಪೂರ್ವ ಚಿಕಿತ್ಸೆಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಆದರೆ ಇದು ಮುಂದೆ ಹುಟ್ಟುವ ಮಗುವಿನ ವಿಷಯದಲ್ಲಿ ತೊಂದರೆಯನ್ನುಂಟು ಮಾಡಬಹುದು. ಆದ್ದರಿಂದ ಪ್ರಸವ ಪೂರ್ವ ಆರೈಕೆ ಅತ್ಯಂತ ಮಹತ್ವವಾದ ಆಂಶ.

ಅರ್ಥ :

ಆರಂಭಿಕ ಪ್ರಸವಪೂರ್ವ ಆರೈಕೆ ಯು ಗರ್ಭಧಾರಣೆಯ ಪತ್ತೆ ಮತ್ತು ಈ ಗರ್ಭಧಾರಣೆ ಸಂಬಂಧಿತ ತೊಡಕುಗಳೊಂದಿಗೆ ವ್ಯವಹರಿಸುವಾಗ ಕೀಲಿಯಾಗಿದೆ.

What Is Prenatal Care?

ಹಂತಗಳು :

ಜನನ ಪೂರ್ವದ ಎಚ್ಚರಿಕೆಯ ಉದ್ದೇಶವೆಂದರೆ ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಅಭಿವೃದ್ಧಿ, ಆರೋಗ್ಯ ಮತ್ತು ಪೌಷ್ಠಿಕ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದು. ಇನ್ನೊಂದು ಪ್ರಮುಖ ಅಂಶವೆಂದರೆ ಮೆದುಳು ಮತ್ತು ಬೆನ್ನುಹುರಿ ಮೊದಲಾದ ಜನನ ದೋಷಗಳನ್ನು ತಡೆಯಲು ಫೋಲಿಕ್ ಆಮ್ಲವನ್ನು 400 ಮೈಕ್ರೋಗ್ರಾಂಗಳಷ್ಟು ಹಾಗೂ ಪ್ರಸವಪೂರ್ವ ಜೀವಸತ್ವಗಳನ್ನು ಒಂದು ದೈನಿಕ ಸೇವನೆಯಾಗಿ ಬಳಸಬೇಕು. ಜನನ ಪೂರ್ವದ ಎಚ್ಚರಿಕೆಯ ಇತರ ನಿರ್ಣಾಯಕ ಭಾಗಗಳೆಂದರೆ ಮಗುವಿಗೆ ತೊಂದರೆಯನ್ನುಂಟುಮಾಡುವ ಔಷಧಗಳು ಮತ್ತು ಎಕ್ಷರೇಗಳು, ಮದ್ಯಪಾನ ಮತ್ತು ಧೂಮಪಾನ ಮೊದಲ್ದ ಹಾನಿಕಾರಕ ವಸ್ತುಗಳನ್ನು ಸೇವಿಸಬಾರದು. ತಾಯಿ ತನ್ನ ತೂಕವನ್ನು ನಿಯಂತ್ರಿಸಬೇಕು ಮತ್ತು ಸಾಕಷ್ಟು ವ್ಯಾಯಾಮ ಮತ್ತು ವಿಶ್ರಾಂತಿಯನ್ನು ಪಡೆಯಬೇಕು. ಒಬ್ಬ ಅರ್ಹ ಆರೋಗ್ಯ ರಕ್ಷಣೆ ನೀಡುಗರು ಈ ವಿಷಯಗಳಲ್ಲಿ ಮಾರ್ಗದರ್ಶನ ನೀಡುತ್ತಾರೆ.

ಟೈಮ್ ಫ್ರೇಮ್

ನಿಮ್ಮ ವೈದ್ಯರು ನೀವು ಪ್ರಸವಪೂರ್ವ ಭೇಟಿಗಳ ಒಂದು ವೇಳಾಪಟ್ಟಿಯನ್ನು ಮೂಲಕ ನಿಮ್ಮನ್ನು ಪರೀಕ್ಷಿಸುತ್ತಾರೆ. ವೇಳಾಪಟ್ಟಿ ಶಿಫಾರಸ್ಸುಗಳು ಈ ಕೆಳಗಿನಂತಿವೆ. ಮೊದಲ 28 ವಾರಗಳ ವರೆಗೆ ತಿಂಗಳಿಗೊಂದು ಭೇಟಿ, 28 ರಿಂದ 36 ವಾರಗಳ ತನಕ ತಿಂಗಳಿಗೆರಡು ಭೇಟಿ; ನಂತರ ಮಗು ಹುಟ್ಟುವ ತನಕ ಪ್ರತೀ ವಾರ ಭೇಟಿ.

ಅಪಾಯಕಾರಿ ಗರ್ಭಧಾರಣೆಯ ತಾಯಿ, ಅಂದರೆ ಮಹಿಳೆಯರು 35 ವರ್ಷ ಮೇಲ್ಪಟ್ಟ ಮಹಿಳೆ, ಡಯಾಬಿಟಿಸ್, ಮತ್ತು ಅಧಿಕ ರಕ್ತದೊತ್ತಡ ಮತ್ತು ಇತರ ದೀರ್ಘಕಾಲದ ರೋಗಗಳ ಹೊಂದಿರುವವರು ಆಗಾಗ್ಗೆ ಪ್ರಸವಪೂರ್ವ ಭೇಟಿಗಳನ್ನು ನಿಗದಿ ಮಾಡಬಹುದು.

ಸಂಭವನೀಯ ಅಂಶಗಳು :

ಇತ್ತೀಚಿನ ಪ್ರವೃತ್ತಿಯ ಪ್ರಕಾರ ಗರ್ಭಧಾರಣೆ ಆರಂಭವಾಗುವುದಕ್ಕೂ ಯಾರೂ ಮೊದಲು ಪ್ರಸವಪೂರ್ವ ಚಿಕಿತ್ಸೆ ಪಡೆಯಲು ಹೋಗುವುದಿಲ್ಲ. ಅದರ ಬದಲಾಗಿ ಈಗ ಹೊಸ ವಿಧಾನವನ್ನು ಗರ್ಭಧಾರಣೆ ಪೂರ್ವ ಆರೈಕೆ ಎಂದು ಕರೆಯುತ್ತಾರೆ. ಇದು ಗರ್ಭಧಾರಣೆ ಪೂರ್ವ ಆರೋಗ್ಯ ಸುಧಾರಣೆ ಬಗ್ಗೆ ಗಮನ ವಹಿಸುತ್ತದೆ ಮತ್ತು ನಿಮ್ಮ ಆರೋಗ್ಯವನ್ನು ಗರ್ಭಧಾರಣೆಯ ಮೂರು ತಿಂಗಳ ಮುಂಚಿತವಾಗಿ ಫೋಲಿಕ್ ಆಸಿಡ್ ಮತ್ತು ರೋಗ ನಿರೋಧಕ ಲಸಿಕೆಗಳನ್ನು ನೀಡುವ ಮೂಲಕ ಉತ್ತಮ ಪಡಿಸುತ್ತದೆ. ನೀವು ಧೂಮಪಾನ ಮತ್ತು ಮದ್ಯಪಾನ ತಪ್ಪಿಸಬೇಕು. ಮತ್ತು ನೀವು ಒಂದು ಆರೋಗ್ಯಕರ ಆಹಾರಕ್ರಮ ಹಾಗೂ ವ್ಯಾಯಾಮ ಮಾಡಬೇಕು.

ಪರಿಣಾಮಗಳು

ಆರಂಭಿಕ ಪ್ರಸವಪೂರ್ವ ಆರೈಕೆ ನಿಮ್ಮ ಮತ್ತು ನಿಮ್ಮ ಮಗುವಿಗಾಗಿ ಮಾಡುವುದು ಉತ್ತಮ ವಿಷಯ. ಪ್ರಸವಪೂರ್ವ ಆರೈಕೆಯಿಂದಾಗಿ ಗರ್ಭಧಾರಣೆಯ ಸಂಬಂಧಿತ ತೊಡಕುಗಳು ಅಪಾಯವನ್ನು ಕಡಿಮೆಗೊಳಿಸಬಹುದು. ಮತ್ತು ಇದರಿಂದ ಅಕಾಲಿಕ ಜನನ ಕಡಿಮೆಯಾಗುತ್ತದೆ. ಪ್ರಸವಪೂರ್ವ ಆರೈಕೆ ಮಗುವಿನ ಆಗಮನಕ್ಕೆ ಪಾಲಕರು ಮಾಡುವ ಉತ್ತಮ ಕೆಲಸವಾಗಿದ್ದು ತನ್ಮೂಲಕ ತಮ್ಮನ್ನು ತಾವು ಬೆಂಬಲಿಸಲು ಸಹಾಯಕವಾಗುತ್ತದೆ. ಒಂದು ಆರೋಗ್ಯಕರ ಮತ್ತು ಸನ್ನದ್ಧ ತಾಯಿ ಆರೋಗ್ಯಕರ ಮಗುವನ್ನು ಹೆರುವುದರ ಮೂಲಕ ಉತ್ತಮ ತಾಯಿಯಾಗುವ ಅವಕಾಶವನ್ನು ಪಡೆಯುತ್ತಾಳೆ.

English summary

What Is Prenatal Care? | Tips For Women | ಪ್ರಸವಪೂರ್ವ ಆರೈಕೆ ಎಂದರೇನು ? | ಮಹಿಳೆಯರಿಗೆ ಕೆಲ ಸಲಹೆಗಳು

Prenatal care is the health care, education, counseling and resources provided for a mother and her unborn child during pregnancy.
Story first published: Thursday, January 24, 2013, 15:37 [IST]
X
Desktop Bottom Promotion