For Quick Alerts
ALLOW NOTIFICATIONS  
For Daily Alerts

ಹೆರಿಗೆಯ ಬಳಿಕ ಪಿರಿಯಡ್ಸ್‌: ಯಾವ ಲಕ್ಷಣಗಳು ಸಹಜವಲ್ಲ?

|

ಚೊಚ್ಚಲ ಮಗುವಾದ ಬಳಿಕ ಆ ತಾಯಿಗೆ ಎಲ್ಲವೂ ಹೊಸತು. ಮಗುವಿನ ಆರೈಕೆ, ದೇಹದಲ್ಲಾಗುವ ಬದಲಾವಣೆ, ಮಾನಸಿಕ ಒತ್ತಡ ಎಲ್ಲವೂ ಹೊಸದಾಗಿರುತ್ತದೆ. ಅವುಗಳನ್ನು ನಿಭಾಯಿಸಿಕೊಂಡು ಹೋಗುವುದನ್ನು ಕಲಿತಿರುತ್ತಾಳೆ.

ಮಗುವಾದ ಬಳಿಕ ದೇಹ ಮೊದಲಿನ ಸ್ಥಿತಿಗೆ ಬರಲು ತುಂಬಾ ಸಮಯ ಬೇಕಾಗುವುದು. ಅಂದ್ರೆ ಮುಟ್ಟಿನ ಚಕ್ರ ಪ್ರಾರಂಭವಾಗಲು ಕೆಲವು ತಿಂಗಳು ಬೇಕಾಗುವುದು. ಕೆಲವರಿಗೆ ಮಗುವಾಗಿ 2 ತಿಂಗಳ ಬಳಿಕ ಋತುಚಕ್ರ ಪ್ರಾರಂಭವಾದರೆ ಇನ್ನು ಕೆಲವರಿಗೆ 6 ತಿಂಗಳಾಗುವುದು, ಮತ್ತೆ ಕೆಲವರು ಒಂದು ವರ್ಷ ಕಳೆಯಬಹುದು.

ಮಗುವಾದ ಬಳಿಕ ಮೊದಲ ಋತುಚಕ್ರ ಪ್ರಾರಂಭವಾದಾಗ ಕೆಲವರಿಗೆ ತಮ್ಮ ಋತುಚಕ್ರದಲ್ಲಿ ವ್ಯತ್ಯಾಸವಾಗಿದೆ ಎಂದು ಅನಿಸಬಹುದು. ಅಂದ್ರೆ ಕೆಲವರಿಗೆ ಅತ್ಯಧಿಕ ರಕ್ತಸ್ರಾವ ಕಂಡು ಬಂದರೆ ಇನ್ನು ಕೆಲವರಿಗೆ ತುಂಬಾ ದಿನಗಳವರೆಗೆ ಬ್ಲೀಡಿಂಗ್ (ರಕ್ತಸ್ರಾವ) ಕಂಡು ಬರುವುದು, ಮತ್ತೆ ಕೆಲವರಿಗೆ ರಕ್ತಸ್ರಾವದ ಪ್ರಮಾಣ ಮೊದಲಿಗಿಂತ ತುಂಬಾ ಕಡಿಮೆ ಇರುತ್ತದೆ. ಹೀಗೆ ಮಗುವಾದ ಬಳಿಕ ಮುಟ್ಟಾದಾಗ ಕೆಲವು ವ್ಯತ್ಯಾಸಗಳು ಕಂಡು ಬರುವುದು ಸಹಜ. ಹೀಗಾದಾಗ ಈ ರೀತಿ ಉಂಟಾಗುವುದು ಸಹಜವೇ, ಅಸಹಜವೇ ಎಂಬ ಸಂಶಯ ಬರುವುದು.

ಇದರ ಕುರಿತ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ ನೋಡಿ:

ಹೆರಿಗೆ ಬಳಿಕ ಋತುಚಕ್ರ ಯಾವಾಗ ಪ್ರಾರಂಭವಾಗುವುದು?

ಹೆರಿಗೆ ಬಳಿಕ ಋತುಚಕ್ರ ಯಾವಾಗ ಪ್ರಾರಂಭವಾಗುವುದು?

ಹೆರಿಗೆಯ ಬಳಿಕ ಋತುಚಕ್ರ ಬೇಗನೇ ಪ್ರಾರಂಭವಾಗುವುದಿಲ್ಲ. ಎದೆಹಾಲುಣಿಸುವುದದರಿಂದ ನಿಮ್ಮ ಮುಟ್ಟು ನಿಧಾನವಾಗಬಹುದು, ಅಂದ್ರೆ ಹೆರಿಗೆಯಾಗಿ 6-8 ತಿಂಗಳ ಬಳಿಕ ಋತುಚಕ್ರ ಪ್ರಾರಂಭವಾಗಬಹುದು. ಇದು ಮಹಿಳೆಯಿಂದ- ಮಹಿಳೆಗೆ ವ್ಯತ್ಯಾಸವಿರುತ್ತದೆ. ಕೆಲವರಿಗೆ ಇನ್ನೂ ಲೇಟಾದರೆ ಮತ್ತೆ ಕೆಲವರಿಗೆ 6 ತಿಂಗಳಿಗಿಂತ ಮುಂಚೆಯೇ ಋತುಚಕ್ರ ಪ್ರಾರಂಭವಾಗಬಹುದು.

ಎದೆ ಹಾಲುಣಿಸುವುದು ಋತುಚಕ್ರದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

ಎದೆ ಹಾಲುಣಿಸುವುದು ಋತುಚಕ್ರದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

ಎದೆ ಹಾಲುಣಿಸುವಾಗ ಹಾರ್ಮೋನಲ್‌ ಬದಲಾವಣೆಯಾಗುತ್ತದೆ. ಪ್ರೊಲ್ಯಾಕ್ಟಿನ್ ಹಾರ್ಮೋನ್ ಹಾಲಿನ ಉತ್ಪತ್ತಿ ಹೆಚ್ಚಿಸಿ ಸಂತಾನೋತ್ಪತ್ತಿ ಹಾರ್ಮೋನ್ ಪ್ರಮಾಣ ತಗ್ಗಿಸುತ್ತದೆ. ಹೆರಿಗೆಯ ಬಳಿಕ ಮುಟ್ಟಾದಾಗ ಅದು ಎದೆ ಹಾಲಿನ ಮೇಲೂ ಪರಿಣಾಮ ಬೀರುವುದು. ಎದೆ ಹಾಲಿನ ರುಚಿಯಲ್ಲಿ ಬದಲಾವಣೆಯಾಗಬಹುದು, ಆಗ ಮಗು ಹಾಲು ಕುಡಿಯಲು ಹಿಂದೇಟು ಹಾಕಬಹುದು, ಈ ಬದಲಾವಣೆಗಳು ತಾತ್ಕಾಲಿಕ, ಹೆಚ್ಚು ಚಿಂತಿಸಬೇಕಾಗಿಲ್ಲ.

ಹೆರಿಗೆಯ ಬಳಿಕ ಮೊದಲ ಮುಟ್ಟು, ಏನು ನಿರೀಕ್ಷಿಸಬಹುದು?

ಹೆರಿಗೆಯ ಬಳಿಕ ಮೊದಲ ಮುಟ್ಟು, ಏನು ನಿರೀಕ್ಷಿಸಬಹುದು?

ನಿಮ್ಮ ದೇಹ ಮೊದಲಿನ ಸ್ಥಿತಿಗೆ ಮರಳುತ್ತಿರುತ್ತದೆ, ಆಗ ದೇಹದಲ್ಲಿಯೂ ಸ್ವಲ್ಪ ಬದಲಾವಣೆಯಾಗುವುದರಿಂದ ಮುಟ್ಟಾದಾಗ ಈ ರೀತಿ ಕಂಡು ಬರುವುದು ಸಹಜ.

* ಅತ್ಯಧಿಕ ರಕ್ತಸ್ರಾವ

* ಕಿಬ್ಬೊಟ್ಟೆ ನೋವು

* ರಕ್ತ ಹೆಪ್ಪುಗಟ್ಟಿದಂತೆ ಹೋಗುವುದು

* ಅನಿಯಮಿತ ಮುಟ್ಟು

ಸಿ ಸೆಕ್ಷನ್‌ ಬಳಿಕ

ಸಿ ಸೆಕ್ಷನ್‌ ಬಳಿಕ

ಸಿ ಸೆಕ್ಷನ್‌ ಆದವರಿಗೆ ಹಾಗೂ ಸಹಜ ಹೆರಿಗೆಯಾದವರಿಗೆ ಮುಟ್ಟಿನ ಚಕ್ರದಲ್ಲಿ ತುಂಬಾ ವ್ಯತ್ಯಾಸವೇನೂ ಉಂಟಾಗುವುದಿಲ್ಲ.

ಕೆಲವರಿಗೆ ಕಡಿಮೆ ಪ್ರಮಾಣದ ರಕ್ತಸ್ರಾವ ಕಂಡು ಬರುವುದು.

ಇನ್ನು ಸಿ ಸೆಕ್ಷನ್ ಬಳಿಕ ಮೊದಲಿಗೆ ಅಧಿಕ ರಕ್ತಸ್ರಾವ ಕಂಡು ಬರುವುದು, ನಂತರ ಸ್ವಲ್ಪ-ಸ್ವಲ್ಪ ಹೋಗಲಾರಂಭಿಸುತ್ತದೆ, ಈ ರೀತಿ 6 ವಾರಗಳವರೆಗೆ ಇರಬಹುದು. ರಕ್ತ ತೆಳು ಬಣ್ಣದಲ್ಲಿರುವುದು, ಅದಾದ ಬಳಿಕ ಕೆಲವು ತಿಂಗಳುಗಳ ನಂತರ ಋತುಚಕ್ರ ಪ್ರಾರಂಭವಾಗುವುದು. ಆಗ ರಕ್ತಸ್ರಾವ ಅಸಹಜವಾಗಿದೆ ಎಂದು ನಿಮಗನಿಸಿದರೆ ವೈದ್ಯರನ್ನು ಭೇಟಿಯಾಗಿ.

ಎಕ್ಟೋಪಿಕ್ ಪ್ರೆಗ್ನೆನ್ಸಿ ಬಳಿಕ ಮುಟ್ಟಾಗುವುದು

ಎಕ್ಟೋಪಿಕ್ ಪ್ರೆಗ್ನೆನ್ಸಿ ಬಳಿಕ ಮುಟ್ಟಾಗುವುದು

ಎಕ್ಟೋಪಿಕ್ ಪ್ರೆಗ್ನೆನ್ಸಿ ಎಂದರೆ ಗರ್ಭಕೋಶದ ಹೊರಗಡೆ ಮಗು ಬೆಳೆಯುವುದು. ಹೀಗಾದರೆ ಮಗುವನ್ನು ತೆಗೆಯಲಾಗುವುದು. ಈ ರೀತಿ ಉಂಟಾಗುವುದು ಅಪರೂಪದ ಪ್ರಕರಣವಾಗಿದೆ. ಎಕ್ಟೋಪಿಕ್ ಪ್ರೆಗ್ನೆನ್ಸಿ ಆದವರಿಗೆ 2 ತಿಂಗಳಾದ ಬಳಿಕ ಮುಟ್ಟಾಗುವುದು, ಆಗ ತುಂಬಾ ನೋವು ಇರುವುದು.

ಯಾವ ಲಕ್ಷಣಗಳು ಕಂಡು ಬಂದರೆ ವೈದ್ಯರಿಗೆ ತೋರಿಸಬೇಕು?

ಯಾವ ಲಕ್ಷಣಗಳು ಕಂಡು ಬಂದರೆ ವೈದ್ಯರಿಗೆ ತೋರಿಸಬೇಕು?

* ಅತ್ಯಧಿಕ ರಕ್ತಸ್ರಾವ (ಗಂಟೆಗೊಮ್ಮೆ ಪ್ಯಾಡ್ ಬದಲಾಯಿಸಬೇಕಾದ ಪರಿಸ್ಥಿತಿ)

* ರಕ್ತಸ್ರಾವ ಜೊತೆಗೆ ವಿಪರೀತ ನೋವು

* ಜ್ವರ

* 7 ದಿನಗಳು ಕಳೆದ ಬಳಿಕವೂ ರಕ್ತಸ್ರಾವ

* ದಪ್ಪ-ದಪ್ಪವಾಗಿ ರಕ್ತ ಹೆಪ್ಪುಗಟ್ಟಿ ಹೋಗುವುದು

* ದುರ್ವಾಸನೆ

* ಉಸಿರಾಟದಲ್ಲಿ ತೊಂದರೆ

* ಮೂತ್ರ ವಿಸರ್ಜನೆ ಮಾಡುವಾಗ ನೋವಾಗುವುದು

ಈ ರೀತಿಯ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

ಎದೆ ಹಾಲುಣಿಸುವುದು ನಿಲ್ಲಿಸಿದ ಬಳಿಕ ಅನಿಯಮಿ ಮುಟ್ಟು

ಎದೆ ಹಾಲುಣಿಸುವುದು ನಿಲ್ಲಿಸಿದ ಬಳಿಕ ಅನಿಯಮಿ ಮುಟ್ಟು

ಎದೆ ಹಾಲುಣಿಸುವುದನ್ನು ನಿಲ್ಲಿಸಿದ ಬಳಿಕ 3 ತಿಂಗಳಾದರೂ ಮುಟ್ಟಾಗದಿದ್ದರೆ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿ.

ಹೆರಿಗೆಯಾದ ಬಳಿಕ ಮೊದಲ ಬಾರಿಗೆ ಮುಟ್ಟಾದಾಗ 2-7 ದಿನಗಳವರೆಗೆ ರಕ್ತಸ್ರಾವ ಕಂಡು ಬರುವುದು.

ಕೊನೆಯದಾಗಿ: ಹೆರಿಗೆಯ ಬಳಿಕ ತಾಯಿಯ ದೇಹದಲ್ಲಿ ಅನೇಕ ಬದಲಾವಣೆಗಳಾಗುವುದು. ದೇಹ ಮೊದಲಿನ ಸ್ಥಿತಿಗೆ ಬರಲು ಕೆಲವು ತಿಂಗಳುಗಳೇ ಬೇಕಾಗುವುದು. ಹೆರಿಗೆಯ ಬಳಿಕ ನಿಮ್ಮ ಋತುಚಕ್ರದಲ್ಲಿ ವ್ಯತ್ಯಾಸವಿದೆ ಎಂದು ಅನಿಸಿದರೆ ಸ್ತ್ರೀ ರೋಗ ತಜ್ಞರನ್ನು ಕಂಡು ಸಲಹೆ ಪಡೆಯಿರಿ.

FAQ's
  • ಹೆರಿಗೆಯಾದ ತಕ್ಷಣ ಋತುಚಕ್ರ ಪ್ರಾರಂಭವಾಗುವುದೇ?

    ಹೆರಿಗೆಯಾಗಿ 6 ವಾರದೊಳಗೆ ಕೆಲವರಿಗೆ ಋತು ಚಕ್ರ ಪ್ರಾರಂಭವಾಗುವುದು. ಇದು ಮಹಿಳೆಯಿಂದ-ಮಹಿಳೆಗೆ ಭಿನ್ನವಾಗಿರುತ್ತೆ.

  • ಹೆರಿಗೆಯ ಬಳಿಕ ಮೊದಲ ಋತುಚಕ್ರ ಪ್ರಾರಂಭವಾಗುವ ಮುನ್ನವೇ ಮತ್ತೊಮ್ಮೆ ಗರ್ಭಧಾರಣೆಯಾಗಬಹುದೇ?

    ಹೌದು. ಹೆರಿಗೆಯ ಬಳಿಕ ಯಾವುದೇ ಸುರಕ್ಷಿತ ಕ್ರಮವಿಲ್ಲದ ಲೈಂಗಿಕ ಕ್ರಿಯೆ ನಡೆಸಿದರೆ ಮೊದಲ ಋತುಚಕ್ರ ಪ್ರಾರಂಭವಾಗುವ ಮುನ್ನವೇ ಎರಡನೇ ಗರ್ಭ ನಿಲ್ಲಬಹುದು.

  • ಸಿ ಸೆಕ್ಷನ್ ಬಳಿಕ ಮುಟ್ಟಿನ ನೋವು ಹೆಚ್ಚುವುದೇ?

    ಹಾಗೇನಿಲ್ಲ, ಸಿ ಸೆಕ್ಷನ್ ಆದವರಿಗೂ, ಸಹಜ ಹೆರಿಗೆಯಾದವರಿಗೂ ಹೆರಿಗೆ ಬಳಿಕ ಮೊದಲ ಬಾರಿ ಮುಟ್ಟಾದಾಗ ತುಂಬಾ ನೋವು ಕಂಡು ಬರಬಹುದು.

  • ಮುಟ್ಟಾದಾಗ ಎದೆಗಹಾಲಿನ ಮೇಲೆ ಪರಿಣಾಮ ಬಿರುವುದೇ?

    ಹೌದು, ಈ ಸಮಯದಲ್ಲಿ ಎದೆ ಹಾಲಿನ ಪ್ರಮಾಣ ಕಡಿಮೆಯಾಗುವುದು ಜೊತೆಗೆ ರುಚಿಯಲ್ಲೂ ವ್ಯತ್ಯಾಸ ಆಗಬಹುದು.

English summary

First Period After Delivery? What Is Normal And What Is Not in kannada

First period after delivery? What is normal and what is not in kannada, Read ...
X
Desktop Bottom Promotion