For Quick Alerts
ALLOW NOTIFICATIONS  
For Daily Alerts

ಮಗುವಿಗೆ ಎದೆಹಾಲು ಕುಡಿಸಲು ಕೂಡ ವೇಳಾಪಟ್ಟಿ ಅನುಸರಿಸಬೇಕೇ?

By Hemanth
|

ಹೆರಿಗೆ ಬಳಿಕ ಮಗುವಿನ ಲಾಲನೆ ಪಾಲನೆ ಮಾಡುವುದು ಮಹಿಳೆಯರಿಗೆ ತುಂಬಾ ಸವಾಲಿನ ಕೆಲಸವಾಗಿರುವುದು. ಮಗುವಿನ ಅಗತ್ಯತೆಗಳನ್ನು ಅದರ ಸನ್ನೆಗಳ ಮೂಲಕವೇ ಅರಿತುಕೊಂಡು ಪೂರೈಸಬೇಕಾಗುತ್ತದೆ. ಮೊದಲ ಹೆರಿಗೆ ವೇಳೆ ಮಹಿಳೆಯರಿಗೆ ಇದು ತುಂಬಾ ಕಿರಿಕಿರಿ ಕೂಡ ಉಂಟು ಮಾಡಬಹುದು. ಯಾಕೆಂದರೆ ಮಗುವಿಗೆ ಹಾಲುಣಿಸಿದರೂ ಅಳುತ್ತಾ ಇರುವುದು. ಇದರಲ್ಲಿ ಪ್ರಮುಖವಾಗಿರುವುದು ಸ್ತನ್ಯಪಾನ. ಮಗುವಿಗೆ ಪ್ರತಿನಿತ್ಯವು ಕೆಲವೊಂದು ವೇಳಾಪಟ್ಟಿಯನ್ನು ತಯಾರಿಸಿಕೊಂಡು ಸ್ತನ್ಯಪಾನ ಮಾಡಿಸಬೇಕೇ ಎನ್ನುವ ಪ್ರಶ್ನೆ ಮಹಿಳೆಯರಲ್ಲಿ ಇದೆ. ಮಹಿಳೆಯರಲ್ಲಿ ಇಂತಹ ಹಲವಾರು ರೀತಿಯ ಪ್ರಶ್ನೆಗಳು ಬರುತ್ತಲೇ ಇರುವುದು. ಇದರಿಂದ ಸ್ತನ್ಯಪಾನದ ಬಗ್ಗೆ ಈ ಲೇಖನದಲ್ಲಿ ನಿಮಗೆ ಮಾಹಿತಿ ನೀಡಲಾಗಿದೆ. ಇದನ್ನು ನೀವು ತಿಳಿದುಕೊಂಡು ಮಗುವಿನ ಆರೈಕೆಯಲ್ಲಿ ತೊಡಗಬಹುದು.

how often should you breastfeed baby

ಮಗುವಿಗೆ ಎಷ್ಟು ಸಲ ಎದೆಹಾಲುಣಿಸಬೇಕು?

ಸಣ್ಣ ಮಗುವಿಗೆ ಸಾಮಾನ್ಯವಾಗಿ 2-3 ಗಂಟೆಗೊಮ್ಮೆ ಎದೆಹಾಲುಣಿಸಬೇಕು. 24 ಗಂಟೆಯಲ್ಲಿ ಸುಮಾರು 8-12 ಸಲ ಮಗುವಿಗೆ ಹಾಲು ನೀಡಬೇಕು. ಸಣ್ಣ ಶಿಶುಗಳಲ್ಲಿ ಹೊಟ್ಟೆಯು ತುಂಬಾ ಸಣ್ಣದಾಗಿರುವುದು ಮತ್ತು ಎದೆಹಾಲು ಬೇಗನೆ ಜೀರ್ಣವಾಗುವುದು. ಇದರಿಂದ ಮಗುವಿಗೆ ಪದೇ ಪದೇ ಹಾಲುಣಿಸಬೇಕು.

ಶಿಶುವಿಗೆ ಹಾಲುಣಿಸುವ ಮಾದರಿಗಳು

ಕೆಲವು ಸಣ್ಣ ಮಕ್ಕಳು ಪ್ರತೀ 2-3 ಗಂಟೆಗೊಮ್ಮೆ ಎದ್ದು ಎದೆಹಾಲು ಸೇವನೆ ಮಾಡುತ್ತದೆ. ಇದು ಗಡಿಯಾರದ ಪ್ರಕ್ರಿಯೆಯಂತೆ ನಡೆಯುತ್ತಲೇ ಇರುವುದು. ಆದರೆ ಮಗುವಿಗೆ ಸಣ್ಣ ಸಣ್ಣ ಅವಧಿಯಲ್ಲಿ ಎದೆಹಾಲುಣಿಸುತ್ತಾ ಇರಬೇಕು. ಇದರಿಂದ ಮಗು ದೀರ್ಘಕಾಲ ನಿದ್ರೆ ಮಾಡಬಹುದು.
ಎದೆಹಾಲುಣಿಸಲು ಎರಡು ಮಾದರಿಗಳು ಇವೆ. ಒಂದು ಮಗು ತನಗೆ ಹಸಿವಾದಾಗ ಅದೇ ಎದ್ದು ಅಳುವುದು. ಇನ್ನು ಕೆಲವು ಮಕ್ಕಳು ದೀರ್ಘವಾಗಿ ನಿದ್ರೆ ಮಾಡುವುದು. ಈ ವೇಳೆ ಮಗುವನ್ನು ಎಬ್ಬಿಸಿ ಅದಕ್ಕೆ ಎದೆಹಾಲುಣಿಸಬೇಕು.

ಮಗುವಿಗೆ ಎದೆಹಾಲುಣಿಸಲು ವೇಳಾಪಟ್ಟಿ ಹೇಗೆ?

ಮಗುವಿಗೆ ಸ್ತನ್ಯಪಾನ ಮಾಡಿಸುವುದು ಅದರ ಬೇಡಿಕೆ ಅಥವಾ ಯಾವುದೇ ಸಮಯದಲ್ಲೂ ಮಾಡಿಸಬಹುದು. ನೀವು ವೇಳಾಪಟ್ಟಿಯಂತೆ ಕಾದು ಕುಳಿತುಕೊಂಡು ಹಾಲುಣಿಸುವ ಬದಲು ಮಗುವಿಗೆ ಹಸಿವು ಆದಾಗ ಹಾಲುಣಿಸಿದರೆ ಒಳ್ಳೆಯದು. ಇದರಿಂದ ಮಗುವಿಗೆ ಭದ್ರತೆ ಮತ್ತು ಆರಾಮದ ಭಾವನೆ ಸಿಗುವುದು. ಬೇಡಿಕೆಯಂತೆ ಹಾಲುಣಿಸಿದರೆ ಆಗ ಹಾಲಿನ ಉತ್ಪತ್ತಿಯು ಹೆಚ್ಚಾಗುವುದು ಮತ್ತು ಇದರಿಂದ ಮಗುವಿನ ಬೆಳವಣಿಗೆಗೆ ಬೇಕಾಗುವ ಪೋಷಕಾಂಶಗಳು ಲಭ್ಯವಾಗುವುದು. ಮಗು ದೊಡ್ಡದಾಗುತ್ತಾ ಸಾಗಿದಂತೆ ದಿನಚರಿ ಬದಲಾವಣೆ ಮಾಡಬಹುದು.

ಮಗುವಿಗೆ ಹಸಿವಾಗಿದೆ ಎಂದು ತಿಳಿದು ಸ್ತನ್ಯಪಾನ ಮಾಡಿಸಿ

ಮಗು ತನಗೆ ಹಸಿವಾಗಿದೆ ಎಂದು ಮಾತಿನ ಮೂಲಕ ಹೇಳಲ್ಲ. ಆದರೆ ಅದು ಕೆಲವೊಂದು ಸನ್ನೆಗಳನ್ನು ಮಾಡಿ ಇದನ್ನು ಹೇಳಬಹುದು. ಮಗುವಿಗೆ ಹಸಿವಾಗಿದೆ ಅಥವಾ ಹಾಲು ಕುಡಿಯಲು ತಯಾರಾಗಿದೆ ಎನ್ನುವ ಸೂಚನೆಗಳು.

1. ಎಚ್ಚರಗೊಳ್ಳುವುದು, ಚುರುಕಾಗುವುದು
2. ಕೈಬೆರಳುಗಳನ್ನು ಚೀಪುವುದು
3. ತುಟಿಗಳ ಚಲನೆ
4. ನಾಲಗೆ ಹೊರಗೆ ಹಾಕುವುದು
5. ಏನಾದರೂ ಸದ್ದು ಮಾಡುವುದು.
6. ತುಳಿಯುವುದು
7. ತಲೆಯನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ತಿರುಗಿಸುವುದು.
8. ಜಾರುವುದು
9. ಮಗುವನ್ನು ಹಿಡಿದಾಗ ಅದು ಎದೆಗೆ ತಲೆ ಇಡುವುದು.
10. ತೆವಳುವುದು

ಮಗುವಿಗೆ ಹಸಿವಾಗಿದೆ ಎನ್ನುವ ಕಾರಣಕ್ಕೆ ಈ ಸನ್ನೆಗಳನ್ನು ಮಗು ತೋರಿಸಬಹುದು. ಮಗುವಿಗೆ ಹಸಿವಾಗಿದೆ ಎನ್ನುವ ಈ ಸನ್ನೆಗಳು ನಿಮ್ಮ ಗಮನಕ್ಕೆ ಬರದೇ ಇರಬಹುದು. ಆದರೆ ದಿನ ಕಳೆದಂತೆ ನಿಮಗೆ ಇದು ತಿಳಿದುಬರುವುದು.

ಎದೆಹಾಲುಣಿಸಲು ಮಗು ಅಳುವುದನ್ನು ಕಾಯಬೇಕೇ?

ಮಗು ಅಳುವುದಕ್ಕೆ ಮೊದಲು ನೀವು ಅದಕ್ಕೆ ಎದೆಹಾಲುಣಿಸಲು ಪ್ರಾರಂಭಿಸಿ. ಅಳುವುದು ತುಂಬಾ ಕೆಟ್ಟ ಮತ್ತು ಹಸಿವಾಗಿದೆ ಎಂದು ಸೂಚಿಸುವ ಕೊನೆಯ ಸನ್ನೆ. ಮಗು ಅಳಲು ಆರಂಭಿಸಿದರೆ ಆಗ ಅದನ್ನು ಸಮಾಧಾನ ಮಾಡಲು ತುಂಬಾ ಕಷ್ಟಪಡಬೇಕಾಗುತ್ತದೆ. ಸಣ್ಣ ಶಿಶು ಅಳುವುದರಿಂದ ಶಕ್ತಿ ಕಳೆದುಕೊಳ್ಳಬಹುದು. ಇದರಿಂದ ಮಗು ನಿದ್ರೆಗೆ ಜಾರಬಹುದು. ಇದನ್ನು ತಪ್ಪಿಸಬೇಕು.

ಮಗುವಿಗೆ ಎಷ್ಟು ದೀರ್ಘ ಸ್ತನ್ಯಪಾನ ಮಾಡಿಸಬೇಕು?

ಆರಂಭದಲ್ಲಿ ಮಗು ಎಷ್ಟು ದೀರ್ಘಕಾಲ ಎದೆಹಾಲು ಸೇವಿಸುತ್ತದೆಯಾ ಅಷ್ಟು ಹೊತ್ತು ನೀವು ಅದಕ್ಕೆ ಎದೆಹಾಲು ನೀಡಬೇಕು. ಮಗುವಿಗೆ ತೃಪ್ತಿಯಾಗಿದೆ ಎನ್ನುವ ಕೆಲವು ಲಕ್ಷಣಗಳು ನಿಮಗೆ ತಿಳಿದುಬರುವುದು. ಇದರಿಂದ ಮಗು ಸರಿಯಾಗಿ ಹಾಲು ಸೇವನೆ ಮಾಡಿದೆ ಎಂದು ಗೊತ್ತಾಗುವುದು. ದೀರ್ಘಕಾಲ ಎದೆಹಾಲುಣಿಸಿದರೆ ಆಗ ಹಾಲಿನ ಉತ್ಪತ್ತಿ ಉತ್ತೇಜಿಸುವುದು ಮತ್ತು ಹಾಲು ಹೆಚ್ಚಾಗುವುದು. ಆರಂಭದಲ್ಲಿ ಮಗುವಿಗೆ 10-15 ನಿಮಿಷ ಕಾಲ ಹಾಲು ನೀಡಿ. ಮಗು ದೊಡ್ಡದಾಗುತ್ತಾ ಹೋದಂತೆ ಇದನ್ನು ಕಡಿಮೆ ಮಾಡಿ.

ಮಗುವಿಗೆ ತೃಪ್ತಿಯಾಗಿದೆ ಎನ್ನುವುದರ ಸನ್ನೆಗಳು

1. ಮಗು ಹಾಲು ತಿನ್ನುವುದನ್ನು ನಿಲ್ಲಿಸಿ ಸ್ತನದಿಂದ ಬಾಯಿ ತೆಗೆಯಬಹುದು.
2. ಚೀಪುವುದನ್ನು ನಿಲ್ಲಿಸಬಹುದು ಮತ್ತು ಸ್ತನಗಳು ತುಂಬಿರದಂತೆ ಆಗುವುದು.
3. ಮಗು ನಿದ್ರೆಗೆ ಜಾರಬಹುದು ಮತ್ತು ಸ್ತನಗಳು ತುಂಬಿರದಂತೆ ಆಗುವುದು.
4. ಸ್ತನಗಳಿಂದ ಮಗು ದೂರ ಹೋಗಬಹುದು.

ಎದೆಹಾಲುಣಿಸಲು ಮಗುವನ್ನು ಎಬ್ಬಿಸಿ

ಕೆಲವು ಮಕ್ಕಳು ದೀರ್ಘವಾಗಿ ನಿದ್ರೆ ಮಾಡುತ್ತವೆ. ಮಗು ತುಂಬಾ ನಿದ್ರೆ ಮಾಡುತ್ತಲಿದ್ದರೆ ಆಗ ನೀವು ಮಗುವನ್ನು ಎಬ್ಬಿಸಿ ಹಾಲುಣಿಸಬೇಕು. ಆರಂಭದಲ್ಲಿ ಮಗುವನ್ನು ಎಬ್ಬಿಸಿ, 31/2 ಗಂಟೆಗೊಮ್ಮೆ ಹಾಲುಣಿಸಬೇಕು. ಮಗು ದೊಡ್ಡದಾದ ಬಳಿಕ ಅಂತರ ಹೆಚ್ಚಾಗುವುದು.

ಪದೇ ಪದೇ ಎದೆಹಾಲು ಕೇಳುವುದು ಮತ್ತು ಹಾಲು ಸೇವನೆ ನಿಲ್ಲಿಸದೆ ಇರುವುದು ಸಾಮಾನ್ಯ ವಿಚಾರ

ಕೆಲವೊಂದು ಸಂದರ್ಭದಲ್ಲಿ ಮಗುವಿಗೆ ತುಂಬಾ ಹಸಿವಾಗಿರುತ್ತದೆ ಮತ್ತು ಪದೇ ಪದೇ ಎದೆಹಾಲು ಬೇಕಾಗುವುದು. ಆದರೆ ಇದು ಸಾಮಾನ್ಯ ವಿಚಾರ ಮತ್ತು ಇದು ಮಗುವಿಗೆ ಹಸಿವು ಹೆಚ್ಚಾಗಿದೆ ಎನ್ನುವುದರ ಸೂಚನೆ. ಮಗು ಬೆಳೆಯುತ್ತಾ ಹೋದಂತೆ ಹಾಲು ಹೆಚ್ಚು ಬೇಕಾಗುವುದು. 1-2 ದಿನಗಳ ಕಾಲ ಆರಂಭದಲ್ಲಿ ಹೀಗೆ ಆಗಬಹುದು.

ಏನಾದರೂ ಅಸಹಜವಿದ್ದರೆ ವೈದ್ಯರಿಗೆ ಕರೆ ಮಾಡಿ

ಮಗುವಿಗೆ ಸರಿಯಾಗಿ ಎದೆಹಾಲು ಸಿಗುತ್ತಿಲ್ಲ ಮತ್ತು ಹಾಲು ತಿನ್ನುತ್ತಿಲ್ಲವೆಂದು ನಿಮಗೆ ಅನಿಸಿದರೆ ಆಗ ನೀವು ಮಕ್ಕಳ ತಜ್ಞರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯಿರಿ. ಮಗುವಿನ ಪರೀಕ್ಷೆ ಮಾಡಿಕೊಂಡ ಬಳಿಕ ವೈದ್ಯರು ನಿಮಗೆ ಸಲಹೆ ನೀಡುವರು. ಮಗುವಿನ ತೂಕ ಪರೀಕ್ಷೆ ಕೂಡ ಮಾಡುವರು. ನಿಮ್ಮ ಎಲ್ಲಾ ರೀತಿಯ ಪ್ರಶ್ನೆಗಳಿಗೆ ವೈದ್ಯರು ಉತ್ತರಿಸುವರು.

Read more about: ಹಾಲು ತಾಯಿ breast
English summary

How Often Should You Breastfeed Your Newborn?

If you have a baby, then it's probable that you have lots of questions constantly about his/her requirements and all the necessities and how to satisfy him/her to the fullest, including breastfeeding. You might need to know how many times your baby needs to eat daily, and whether there is a strict breastfeeding schedule which you should follow. We have received all the common queries that you might have and listed up all the important things below that you should know about breastfeeding your precious little one.
X
Desktop Bottom Promotion