ಹೆರಿಗೆಯ ಬಳಿಕವೂ ಉಬ್ಬಿದ ಹೊಟ್ಟೆ ಇಳಿಯದೇ ಇದ್ದರೆ! ಸಮಸ್ಯೆ ಇದೆಯೇ?

By: Arshad
Subscribe to Boldsky

ಹೆರಿಗೆಯ ಸಮಯದಲ್ಲಿ ಹೊಟ್ಟೆಯುಬ್ಬುವುದು ಅನಿವಾರ್ಯ ಹಾಗೂ ಈ ಅವಧಿಯಲ್ಲಿ ಉಬ್ಬಿದ ಹೊಟ್ಟೆಯನ್ನು ಪ್ರದರ್ಶಿಸಲು ಯಾವುದೇ ಅಳುಕು ಉಂಟಾಗುವುದಿಲ್ಲ. ಗರ್ಭಾವಸ್ಥೆಯ ದಿನಗಳು ಮುಂದುವರೆದಂತೆಯೇ ಹೊಟ್ಟೆಯ ಗಾತ್ರವೂ ಹೆಚ್ಚುತ್ತಾ ಹೋಗುತ್ತದೆ. 

ಹೆರಿಗೆಯ ಬಳಿಕ ಮಹಿಳೆ ಪಡುವ ಕಷ್ಟ, ಅನುಭವಿಸಿದವರಿಗೆಯೇ ಗೊತ್ತು!

ಸಾಮಾನ್ಯವಾಗಿ ಹೆರಿಗೆಯ ಬಳಿಕ ಹೊಟ್ಟೆಯ ಗಾತ್ರ ಮೊದಲಿನಂತೆ ಆಗಬೇಕು. ದೇಹವೂ ಹೆಚ್ಚೂ ಕಡಿಮೆ ಮೊದಲಿನ ಗಾತ್ರವನ್ನೇ ಪಡೆಯಬೇಕು. ಆದರೆ ಕೆಲವು ಸಂದರ್ಭಗಳಲ್ಲಿ ಹೆರಿಗೆಯ ಒಂದು ತಿಂಗಳ ಬಳಿಕವೂ ಹೊಟ್ಟೆಯ ಗಾತ್ರ ಕಡಿಮೆಯೇ ಆಗದಿದ್ದರೆ? ಇದು ಕೊಂಚ ಆತಂಕಕಾರಿಯಲ್ಲವೇ? ಕೆಲವು ತಾಯಂದಿರಿಗೆ, ವಿಶೇಷವಾಗಿ ಸಿಸೇರಿಯನ್ ಹೆರಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾದ ತಾಯಂದಿರಿಗೆ ಈ ತೊಂದರೆ ಒಂದು ತಿಂಗಳಿಗೂ ಮೀರುತ್ತದೆ. ಈ ಬಗ್ಗೆ ಕೆಲವು ಮಾಹಿತಿಗಳು ಇಂತಿವೆ..

ಹೆಚ್ಚಿನ ಹೆರಿಗೆಗಳಲ್ಲಿ ಏನಾಗುತ್ತದೆ?

ಹೆಚ್ಚಿನ ಹೆರಿಗೆಗಳಲ್ಲಿ ಏನಾಗುತ್ತದೆ?

ಆರೋಗ್ಯ ತಜ್ಞರ ಪ್ರಕಾರ ಹೆಚ್ಚಿನ ಮಹಿಳೆಯರು ಹೆರಿಗೆಯ ಬಳಿಕ ಒಂದರಿಂದ ಎರಡು ವಾರಗಳಲ್ಲಿ ತಮ್ಮ ಹಿಂದಿನ ಅಂಗಸೌಷ್ಠವವನ್ನು ಪಡೆಯುತ್ತಾರೆ. ಸಾಮಾನ್ಯ ಹೆರಿಗೆಯಲ್ಲಿ ಎರಡು ವಾರಗಳ ಬಳಿಕ ಹೊಟ್ಟೆಯ ಆಕಾರ ಮೊದಲಿನಂತಾಗುತ್ತದೆ.

ಈ ಉಬ್ಬರಿಕೆ ಉಳಿದರೆ ಏನಾಗುತ್ತದೆ?

ಈ ಉಬ್ಬರಿಕೆ ಉಳಿದರೆ ಏನಾಗುತ್ತದೆ?

ಒಂದು ವೇಳೆ ಹೆರಿಗೆಯ ಎರಡು ವಾರಗಳ ಬಳಿಕವೂ ಹೊಟ್ಟೆ ಮೊದಲಿನ ಸ್ಥಿತಿಗೆ ಬಂದಿರದೇ ಇದ್ದರೆ ಇದಕ್ಕೆ ಗರ್ಭಾವಸ್ಥೆಯ ಸಮಯದಲ್ಲಿ ಸೆಳೆದಿದ್ದ ಹೊಟ್ಟೆಯ ಸ್ನಾಯುಗಳು ಕಾರಣವಿರಬಹುದು. ಹೆರಿಗೆಯ ಬಳಿಕ ಈ ಸ್ನಾಯುಗಳು ಸಂಕುಚಿತಗೊಳ್ಳಬೇಕು ಹಾಗೂ ಮೊದಲಿನ ಸ್ಥಿತಿಗೆ ಬರಬೇಕು.

ಈ ಸ್ಥಿತಿಗೆ ಗರ್ಭಾಶಯ ದೊಡ್ಡದಾಗಿರುವುದೂ ಕಾರಣವೇ?

ಈ ಸ್ಥಿತಿಗೆ ಗರ್ಭಾಶಯ ದೊಡ್ಡದಾಗಿರುವುದೂ ಕಾರಣವೇ?

ಗರ್ಭಾವಸ್ಥೆಯಲ್ಲಿದ್ದಾಗ ಮಗುವಿನ ಗಾತ್ರದೊಂದಿಗೇ ಗರ್ಭಾಶಯವೂ ಹಿಗ್ಗುತ್ತಾ ಹೋಗುತ್ತದೆ. ಹೆರಿಗೆಯ ಬಳಿಕ ಗರ್ಭಾಶಯ ಸಂಕುಚಿತಗೊಳ್ಳುತ್ತಾ ಮೊದಲಿನ ಗಾತ್ರಕ್ಕೆ ಬರತ್ತದೆ. ಆದರೆ ಉಬ್ಬಿದ ಹೊಟ್ಟೆ ಹಿಂದಿನ ಗಾತ್ರಕ್ಕೆ ಬರಲು ತಡವಾಗುತ್ತಿದ್ದರೆ ಗರ್ಭಾಶಯ ಸಂಕುಚಿತಗೊಳ್ಳುವ ಗತಿ ನಿಧಾನವಾಗಿರಲೂಬಹುದು.

ಇದು ನೋವು ನೀಡುತ್ತದೆಯೇ?

ಇದು ನೋವು ನೀಡುತ್ತದೆಯೇ?

ಗರ್ಭಾಶಯ ಸಂಕುಚಿತಗೊಂಡು ಮೊದಲ ಸ್ಥಾನಕ್ಕೆ ತಲುಪುವವರೆಗೂ ಸಣ್ಣದಾಗಿ ನೋಯುವುದು ಸ್ವಾಭಾವಿಕವಾಗಿದೆ.

ಹೊಟ್ಟೆಯುಬ್ಬರಿಕೆಗೆ ದ್ರವಗಳು ಕಾರಣವಿರಬಹುದೇ?

ಹೊಟ್ಟೆಯುಬ್ಬರಿಕೆಗೆ ದ್ರವಗಳು ಕಾರಣವಿರಬಹುದೇ?

ಹೆರಿಗೆಯ ಬಳಿಕ ಗರ್ಭಾಶಯವನ್ನು ಸುತ್ತುವರೆದು ಆಘಾತದಿಂದ ರಕ್ಷಿಸುತ್ತಿದ್ದ ಆಮ್ನಿಯಾಟಿಕ್ ದ್ರವ ಕರಗಿ ವಿಸರ್ಜನೆಗೊಳ್ಳಬೇಕು. ಇದು ರಕ್ತ ಹಾಗೂ ನೀರಿನೊಡನೆ ಬೆರೆತು ದ್ರವರೂಪದಲ್ಲಿ ವಿಸರ್ಜನೆಗೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಈ ದ್ರವ ಪೂರ್ಣವಾಗಿ ಹೊರಹೋಗದೇ ಕೊಂಚ ಅಲ್ಲಿಯೇ ಉಳಿದು ಹೊಟ್ಟೆಯು ಉಬ್ಬಿಯೇ ಇರಲು ಕಾರಣವಾಗಬಹುದು.

ಈ ಸ್ಥಿತಿಯಿಂದ ಸಾಮಾನ್ಯ ಸ್ಥಿತಿಗೆ ಮರಳಲು ಸಾಧ್ಯವೇ

ಈ ಸ್ಥಿತಿಯಿಂದ ಸಾಮಾನ್ಯ ಸ್ಥಿತಿಗೆ ಮರಳಲು ಸಾಧ್ಯವೇ

ಆರೋಗ್ಯ ತಜ್ಞರ ಪ್ರಕಾರ ಹೆರಿಗೆಯ ನಂತರದ ಎರಡು ತಿಂಗಳುಗಳಲ್ಲಿ ಬಾಣಂತಿ ತನ್ನ ಸಾಮಾನ್ಯ ಆರೋಗ್ಯವನ್ನು ಪಡೆಯುತ್ತಾಳೆ ಹಾಗೂ ಉಬ್ಬಿದ ಹೊಟ್ಟೆಯೂ ಈ ಅವಧಿಯಲ್ಲಿ ಮೊದಲಿನಂತಾಗುತ್ತದೆ. ಆದರೆ ಹೊಟ್ಟೆ ಇಳಿಯುವ ಸೂಚನೆಗಳೇ ಕಾಣದಿದ್ದರೆ ಮಾತ್ರ ತಡಮಾಡದೇ ಸ್ತ್ರೀರೋಗ ತಜ್ಞರಲ್ಲಿ ಪರೀಕ್ಷೆಗೊಳಪಟ್ಟು ಇದಕ್ಕೆ ಕಾರಣವನ್ನು ಕಂಡುಕೊಂಡು ಸೂಕ್ತ ಚಿಕಿತ್ಸೆ ಹಾಗೂ ವ್ಯಾಯಾಮಗಳನ್ನು ಅನುಸರಿಸುವ ಮೂಲಕ ಹಿಂದಿನ ಅಂಗಸೌಷ್ಠವವನ್ನು ಮತ್ತೊಮ್ಮೆ ಪಡೆಯಬಹುದು.

English summary

What If The Baby Bump Doesn't Go Away Even After Delivery?

When do you get a baby bump? During pregnancy, right? What if there's baby bump after delivery? When you get pregnant and gradually as the size of the foetus grows, developing a 'baby bump' is quite natural.But after the childbirth, the size of the belly decreases and the body comesback to the original shape and size.But what happens if the baby bump doesn't go away even after a month? That sounds a bit scary, right? In most of the cases, it comes back to normal size, but in rare cases the bump might remain for some more time! Here are some facts.
Subscribe Newsletter