ಹಾಲುಣಿಸುವ ಹಂತದಲ್ಲಿ ತಾಯಿಯ ದೇಹದಲ್ಲಾಗುವ ಬದಲಾವಣೆಗಳು

By: jaya subramanya
Subscribe to Boldsky

ತಾಯಿಯ ಮಡಿಲಲ್ಲಿ ಮಗು ಬೆಳವಣಿಗೆ ಹೊಂದುವಾಗ ತಾಯಿಯ ದೇಹದಲ್ಲೂ ಅನೇಕ ಬದಲಾವಣೆಗಳಾಗುತ್ತವೆ. ತಿಂಗಳಿಂದ ತಿಂಗಳಿಗೆ ಬೆಳವಣಿಗೆ ಹೊಂದುತ್ತಿದ್ದಂತೆಯೇ ತಾಯಿಯ ಹೊಟ್ಟೆ ಗಾತ್ರವೂ ಹಿಗ್ಗುತ್ತಾ ಸಾಗುತ್ತದೆ. ಪ್ರಸವದ ನಂತರ ಮಗುವಿನ ಆಹಾರಕ್ಕಾಗಿ ಎದೆಹಾಲಿನಲ್ಲೂ ಮಾರ್ಪಾಡುಗಳುಂಟಾಗುತ್ತಲೇ ಇರುತ್ತವೆ. ಇದಕ್ಕನುಗುಣವಾಗಿ ಸ್ತನದ ಗಾತ್ರದಲ್ಲೂ ಬದಲಾವಣೆಯಾಗುವುದು.

ಎದೆಹಾಲು ಹೀರಲು ಅನುಕೂಲವಾಗುವಂತೆ ಮಾರ್ಪಾಡಾಗಿರುತ್ತದೆ. ಮಗುವಿನ ಸಂಪೂರ್ಣ ಬೆಳವಣಿಗೆಗೆ ಮತ್ತು ಪೋಷಣೆಗೆ ಪ್ರಕೃತಿಯ ವರವೆಂದು ಹೇಳಬಹುದು. ಸೂಕ್ಷ್ಮ ಮನಸ್ಸಿನ ಮಹಿಳೆಯರು ತಮ್ಮ ದೇಹದಲ್ಲುಂಟಾಗುವ ಬದಲಾವಣೆಗೆ ಭಯ ಹಾಗೂ ಬೇಸರಕ್ಕೊಳಗಾಗುವ ಸಾಧ್ಯತೆ ಇರುತ್ತದೆ.  

ಸ್ತನಗಳು ಇಳಿ ಬೀಳಲು- ಎದೆ ಹಾಲುಣಿಸುವುದು ಕಾರಣವಲ್ಲ!

ಪ್ರತಿಯೊಬ್ಬ ತಾಯಿಯೂ ಗರ್ಭಾವಸ್ಥೆ ಹಾಗೂ ಪ್ರಸವದ ನಂತರ ತಮ್ಮ ದೇಹ ಸ್ಥಿತಿಯನ್ನು ಮೊದಲಿನಂತೆ ಮಾಡಿಕೊಳ್ಳಬಹುದು. ಅದಕ್ಕೆ ಸ್ವಲ್ಪ ಸಮಯ ಬೇಕಾಗುವುದಷ್ಟೆ. ಬನ್ನಿ ಎದೆಹಾಲು ಉಣಿಸುವ ಸಂದರ್ಭದಲ್ಲಿ ತಾಯಿಯ ಸ್ತನದಲ್ಲಿ ಯಾವೆಲ್ಲಾ ಬದಲಾವಣೆಗಳಾಗುತ್ತವೆ ಎನ್ನುವ ಅರಿವಿನ ವಿಚಾರ ಇಲ್ಲಿದೆ ನೋಡಿ... 

ಸ್ತನದ ತೊಟ್ಟು

ಸ್ತನದ ತೊಟ್ಟು

ಗರ್ಭಾವಸ್ಥೆಯಿಂದಲೇ ಸ್ತನಗಳಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಸ್ತನದ ತೊಟ್ಟು ಗಾಢವಾದ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರ ಸುತ್ತಲೂ ಸಣ್ಣ ಉಬ್ಬುಗಳಿರುತ್ತವೆ. ಇವು ಮಗು ತೊಟ್ಟನ್ನು ಗುರುತಿಸಲು ಅನುಕೂಲವಾಗಲು ಉದ್ದೇಶ ಎನ್ನಲಾಗುತ್ತದೆ.

ಜಿಡ್ಡಿನ ದ್ರವ

ಜಿಡ್ಡಿನ ದ್ರವ

ಸ್ತನದ ತೊಟ್ಟಿನ ಸುತ್ತ ಒಂದು ಬಗೆಯ ಜಿಡ್ಡಿನ ದ್ರವ ಸ್ರವಿಸುತ್ತದೆ. ಅದು ತೊಟ್ಟಿನ ಶುದ್ಧೀಕರಣ ಮತ್ತು ಮೃದುಗೊಳಿಸಲು ಸಹಾಯಮಾಡುವುದು.

ಸ್ತನಗಳು ಆಮ್ನಿಯೋಟಿಕ್ ದ್ರವದ ವಾಸನೆಯನ್ನು ಸೂಸುತ್ತದೆ

ಸ್ತನಗಳು ಆಮ್ನಿಯೋಟಿಕ್ ದ್ರವದ ವಾಸನೆಯನ್ನು ಸೂಸುತ್ತದೆ

ಹಾಲುಣಿಸುವ ಹಂತದಲ್ಲಿ ಸ್ತನಗಳು ಆಮ್ನಿಯೋಟಿಕ್ ದ್ರವದ ವಾಸನೆಯನ್ನು ಸೂಸುತ್ತದೆ. ಇದು ಮಗುವಿಗೆ ತೊಟ್ಟನ್ನು ಗುರುತಿಸಲು ಸಹಾಯ ಮಾಡುವುದು.

ಎದೆಹಾಲು ಕುಡಿಸಲು ಉಪಾಯಗಳು ಮತ್ತು ಸಲಹೆಗಳು

ಹಾಲು ಉತ್ಪಾದನೆಯ ಸಮಯದಲ್ಲಿ

ಹಾಲು ಉತ್ಪಾದನೆಯ ಸಮಯದಲ್ಲಿ

ಸ್ತನದ ಒಳಭಾಗದಲ್ಲಿ ಹಾಲು ಶೇಖರವಾಗಲು ಚಿಕ್ಕ ಚಿಕ್ಕ ಚೀಲಗಳ ಸಮೂಹವಿರುತ್ತದೆ. ಪ್ರೊಲ್ಯಾಕ್ಟಿನ್ ಎನ್ನುವ ಹಾರ್ಮೋನ್‍ಗಳಿಂದ ಹಾಲು ಉತ್ಪಾದನೆಯಾಗುತ್ತದೆ.

ಕೊಲೆಸ್ಟ್ರಾಮ್

ಕೊಲೆಸ್ಟ್ರಾಮ್

ಮೊದಲು ಹಾಲಿನಂತೆ ಕಾಣುವ ಪ್ರೋಟೀನ್ ಭರಿತ ಕೊಲೆಸ್ಟ್ರಾಮ್ ಸ್ರವಿಸುತ್ತದೆ. ಪ್ರೊಲ್ಯಾಕ್ಟಿನ್ ಹಾರ್ಮೋನ್ ಸಕ್ರಿಯಗೊಂಡ ನಂತರ ಹಾಲು ಉತ್ಪಾದನೆಯಾಗುತ್ತದೆ.

 ಜುಮ್ಮೆನ್ನುವ ಸಂವೇದನೆ

ಜುಮ್ಮೆನ್ನುವ ಸಂವೇದನೆ

ಮಗು ಹಾಲುಣಲು ಪ್ರಾರಂಭಿಸಿದಾಗ ಸ್ತನದಲ್ಲಿ ಸುಡುವ ಅನುಭವವಾಗುವ ಸಾಧ್ಯೆತೆ ಇರುತ್ತದೆ. ಕೆಲವರಿಗೆ ಜುಮ್ಮೆನ್ನುವ ಸಂವೇದನೆ ಉಂಟಾಗಬಹುದು. ಇವು ಕ್ರಮೇಣ ಕಡಿಮೆಯಾಗುತ್ತವೆ.

ಹೊಟ್ಟೆಯಲ್ಲಿ ಒಂದು ಬಗೆಯ ಕಿರಿಕಿರಿ

ಹೊಟ್ಟೆಯಲ್ಲಿ ಒಂದು ಬಗೆಯ ಕಿರಿಕಿರಿ

ಹಾಲುಣಿಸುವ ಆರಂಭದ ಹಂತದಲ್ಲಿ ತಾಯಿಗೆ ಹೊಟ್ಟೆಯಲ್ಲಿ ಒಂದು ಬಗೆಯ ಕಿರಿಕಿರಿ ಉಂಟಾಗಬಹುದು. ಅದು ಆಕ್ಸಿಟೋಸಿನ್ನಿಂದ ಉಂಟಾಗುವುದು ಎನ್ನಲಾಗುತ್ತದೆ.

ಎದೆ ಹಾಲುಣಿಸುವ ತಾಯಿ 'ಬೀನ್ಸ್' ಸೇವಿಸಬಹುದೇ?

English summary

What Happens To Breasts During Breastfeeding

There could be many changes in the breasts during the breastfeeding stage. The size could increase either during the pregnancy or during the breastfeeding stage. All changes that occur during that phase have only one purpose behind them. To help the mother feed the baby properly. So, here are a few of such changes that occur during the breastfeeding stage.
Subscribe Newsletter