Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಎದೆಹಾಲುಣಿಸುವ ಮಹಿಳೆಯರು, ಆದಷ್ಟು ತರಕಾರಿ ಜ್ಯೂಸ್ ಕುಡಿಯಿರಿ
ಸಾಮಾನ್ಯವಾಗಿ ಚಾಕಲೇಟು ಎಂದರೆ ಎಲ್ಲಾ ಮಕ್ಕಳಿಗೆ ಇಷ್ಟ. ಇದೇ ವೇಳೆ ಹಸಿ ತರಕಾರಿಯಂತಹ ಆರೋಗ್ಯಕರ ಆಹಾರಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಒಂದು ವೇಳೆ ಬಲವಂತವಾಗಿ ಕ್ಯಾರೆಟ್ ಜ್ಯೂಸ್ ಕುಡಿಸಲು ಯತ್ನಿಸಿದರೆ ಮುಖ ತಿರುಗಿಸಿಬಿಡುತ್ತಾರೆ. ಆರೋಗ್ಯಕರ ಆಹಾರ ತಿನ್ನಿಸಿ ತಮ್ಮ ಮಕ್ಕಳು ಆರೋಗ್ಯವಾಗಿರಲಿ ಎಂದು ಬಯಸುವ ತಾಯಂದಿರಿಗೆ ಮಕ್ಕಳು ಹೀಗೆ ನಿರಾಕರಿಸುವುದನ್ನು ಹೇಗೆ ಎದುರಿಸಬೇಕೆಂದೇ ತಿಳಿಯುವುದಿಲ್ಲ.
ಆದರೆ ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ಮಗುವಿಗೆ ಎದೆಹಾಲು ಕುಡಿಸುವ ಸಮಯದಲ್ಲಿ ಉತ್ತಮ ಪ್ರಮಾಣದ ತರಕಾರಿಯ ರಸಗಳನ್ನು ಸೇವಿಸಿದ ತಾಯಂದಿರಿಗೆ ಈ ತೊಂದರೆ ಎದುರಾಗುವುದಿಲ್ಲ. ಈ ತಾಯಂದಿರ ಮಕ್ಕಳು ಹೆಚ್ಚು ಆರೋಗ್ಯಕರವಾಗಿರುತ್ತಾರೆ ಹಾಗೂ ಇವರಿಗೆ ಹಣ್ಣುಗಳ ರಸವನ್ನು ಕೊಟ್ಟರೆ ಇಷ್ಟಪಟ್ಟು ಕುಡಿಯುತ್ತಾರೆ ಎಂದು ಕಂಡುಕೊಳ್ಳಲಾಗಿದೆ. ಬನ್ನಿ, ಈ ಬಗ್ಗೆ ಕೆಲವು ಮಾಹಿತಿಗಳನ್ನು ಅರಿಯೋಣ....

ಎದೆಹಾಲು ಕುಡಿಸುವ ಸಮಯದಲ್ಲಿ ತರಕಾರಿಯ ರಸದ ಸೇವನೆ ಹೇಗೆ ನೆರವಾಗುತ್ತದೆ?
ಎದೆಹಾಲೂಡಿಸುತ್ತಿರುವ ತಾಯಂದಿರು ಈ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತರಕಾರಿಯ ರಸವನ್ನು ಕುಡಿಯುವ ಮೂಲಕ ಎದೆಹಾಲಿನ ಪ್ರಮಾಣ ಹೆಚ್ಚಾಗುತ್ತದೆ. ಈ ಹಾಲಿನಲ್ಲಿ ತರಕಾರಿಯ ರಸದ ಅಂಶವಿರುವ ಕಾರಣ ಮಗುವಿಗೆ ಈ ರಸದ ರುಚಿ ನಾಲಿಗೆಗೆ ಹತ್ತಿಕೊಳ್ಳುತ್ತದೆ ಹಾಗೂ ಈ ರಸಗಳು ಆರೋಗ್ಯಕರ ಆಹಾರವೆಂದು ಮಗು ಅರಿತುಕೊಳ್ಳುತ್ತದೆ.

ಸಂಶೋಧಕರು ಈ ನಿರ್ಧಾರಕ್ಕೆ ಬಂದಿದ್ದಾದರೂ ಹೇಗೆ?
ಸಂಶೋಧಕರು ಈ ಸಂಶೋಧನೆಗಾಗಿ ಸುಮಾರು ನೂರಕ್ಕೂ ಹೆಚ್ಚು ಎದೆಹಾಲೂಡಿಸುತ್ತಿರುವ ತಾಯಂದಿರನ್ನು ಆಯ್ಕೆ ಮಾಡಿಕೊಂಡಿದ್ದು ಇವರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಒಂದು ಗುಂಪಿನ ತಾಯಂದಿರಿಗೆ ಸಾಕಷ್ಟು ತರಕಾರಿಯ ರಸವನ್ನು ಸೇವಿಸಲು ನೀಡಲಾಗಿತ್ತು ಹಾಗೂ ಇತರರಿಗೆ ನೀಡಿರಲಿಲ್ಲ. ಈ ರಸಗಳಲ್ಲಿ ಕ್ಯಾರೆಟ್, ಬೀಟ್ರೂಟ್ ಹಾಗೂ ಸೆಲೆರಿ ಎಲೆಗಳ ಜ್ಯೂಸ್‌ಗಳನ್ನು ಆಯ್ಕೆ ಮಾಡಲಾಗಿತ್ತು.

ಮಕ್ಕಳು ಹೇಗೆ ತಮ್ಮ ಇಷ್ಟವನ್ನು ಪ್ರಕಟಿಸಿದವು?
ಎಂಟು ತಿಂಗಳ ಬಳಿಕ ಮಕ್ಕಳು ಕೊಂಚ ಗಟ್ಟಿಯಾದ ಆಹಾರವನ್ನು ಸೇವಿಸಲು ಶಕ್ತರಾಗುತ್ತಿದ್ದಂತೆಯೇ ಇವರಿಗೆ ವಿವಿಧ ಆಹಾರಗಳನ್ನು ಸೇವಿಸಲು ನೀಡಲಾಯಿತು. ಹಿಂದಿನ ತಿಂಗಳುಗಳಲ್ಲಿ ಹಣ್ಣಿನ ರಸವನ್ನು ಸೇವಿಸಿದ್ದ ತಾಯಂದಿರ ಮಕ್ಕಳು ಕ್ಯಾರೆಟ್ ರುಚಿ ಇರುವ ಖಾದ್ಯಗಳನ್ನು ಇಷ್ಟಪಟ್ಟು ತಿಂದರೆ ಉಳಿದ ಮಕ್ಕಳು ಸಾದಾ ಖಾದ್ಯಗಳನ್ನು ಹೆಚ್ಚು ಇಷ್ಟಪಡುವುದು ಕಂದುಬಂದಿತ್ತು.

ಮಕ್ಕಳ ಆದ್ಯತೆಗೆ ಯಾವ ಅಂಶ ಪ್ರಭಾವ ಬೀರಿತ್ತು?
ಮಕ್ಕಳು ತಾಯಿಹಾಲನ್ನು ಕುಡಿಯುವ ಸಮಯದಲ್ಲಿ ಮಗುವಿನ ಆದ್ಯತೆಗಳನ್ನು ಗಟ್ಟಿಗೊಳಿಸಲು ಸಾಧ್ಯವಾಗಿತ್ತು. ತಾಯಿಹಾಲಿನಲ್ಲಿ ತರಕಾರಿಯ ರುಚಿ ಇದ್ದಾಗ ಸ್ವಾಭಾವಿಕವಾಗಿಯೇ ಮಗು ಈ ರುಚಿಗೆ ಹೊಂದಿಕೊಂಡು ಬಿಡುವುದನ್ನು ಕಂಡುಕೊಳ್ಳಲಾಯಿತು.

ಮಕ್ಕಳು ಅಹಾರವನ್ನು ಹೇಗೆ ಅನುಭವಿಸುತ್ತಾರೆ?
ಮಗು ತನ್ನ ಆಹಾರವನ್ನು ತನ್ನ ತಾಯಿಯ ಆಹಾರದ ಆದ್ಯತೆಯ ಮೇರೆಗೆ ಆಯ್ದುಕೊಳ್ಳುತ್ತದೆ. ಹೇಗೆ? ಗರ್ಭಾವಸ್ಥೆಯಲ್ಲಿ ತಾಯಿ ಏನು ಸೇವಿಸುತ್ತಾಳೆಯೋ ಆ ಆಹಾರವೇ ಮಗುವಿಗೂ ತಲುಪುತ್ತದೆಯಲ್ಲವೇ? ಅಂತೆಯೇ ಎದೆಹಾಲು ಕುಡಿಸುವ ಸಮಯದಲ್ಲಿಯೂ ತಾಯಿ ಸೇವಿಸುವ ಆಹಾರ ಎದೆಹಾಲಿನ ರುಚಿಯ ಮೇಲೆಯೂ ಪ್ರಭಾವ ಬೀರುತ್ತದೆ.

ಸಂಶೋಧನೆಯಿಂದ ಏನು ಕಂಡುಕೊಳ್ಳಲಾಯಿತು?
ಸಂಶೋಧನೆಯಿಂದ ಕಂಡುಕೊಂಡಂತೆ ಎದೆಹಾಲಿನ ರುಚಿ ಮಗುವಿನ ಆಹಾರದ ಆದ್ಯತೆಗಳ ಮೇಲೆ ಅಪಾರವಾದ ಪ್ರಭಾವ ಬೀರುತ್ತದೆ. ತಾಯಿ ಸೇವಿಸುವ ಯಾವುದೇ ಆಹಾರ ಎದೆಹಾಲಿನಲ್ಲಿ ಆ ಆಹಾರದ ರುಚಿಯನ್ನು ಸುಮಾರು ಎಂಟು ಘಂಟೆಗಳ ಕಾಲ ಉಳಿಸುತ್ತದೆ. ಇದೇ ಕಾರಣಕ್ಕೆ ತಾಯಿ ಸೇವಿಸುವ ಆಹಾರದ ರುಚಿಯನ್ನೇ ತಾಯಿಹಾಲಿನ ಮೂಲಕ ಮಗುವೂ ಪಡೆಯುತ್ತದೆ. ಈ ಅಭ್ಯಾಸ ಮುಂದಿನ ದಿನಗಳಲ್ಲಿ ಮಗು ಆ ರುಚಿ ಇರುವ ಆಹಾರವನ್ನು ಇಷ್ಟ ಪಡಲೂ ಕಾರಣವಾಗುತ್ತದೆ.



Click it and Unblock the Notifications
