Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಹೆರಿಗೆ ಬಳಿಕವೂ ಕೂಡ ಮಹಿಳೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ!
ಗರ್ಭಧಾರಣೆ ವೇಳೆ ದೈಹಿಕ ಬದಲಾವಣೆಗೆ ಗುರಿಯಾಗುವಂತಹ ಮಹಿಳೆಯು ಹೆರಿಗೆ ವೇಳೆ ಇನ್ನಿಲ್ಲದ ನೋವನ್ನು ಅನುಭವಿಸುವಳು. ಹೆರಿಗೆ ಬಳಿಕವೂ ಕೆಲವೊಂದು ದೈಹಿಕ ಬದಲಾವಣೆಗಳಿಂದ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ. ಅದರಲ್ಲೂ ಕೆಲವು ನೋವು ಹಾಗೂ ಸೆಳೆತಗಳು ಸಾಮಾನ್ಯವೆನ್ನುವಂತದ್ದಾಗಿದೆ.
ಹೆರಿಗೆ ಬಳಿಕವೂ ಕೆಲವು ನೋವು ಹಾಗೂ ಸೆಳೆತಗಳು ಮಹಿಳೆಯರನ್ನು ಕಾಡುತ್ತಾ ಇರುತ್ತದೆ. ಇದರಿಂದ ಆಕೆ ದೈಹಿಕ ಹಾಗೂ ಮಾನಸಿಕವಾಗಿಯೂ ಕುಸಿಯುತ್ತಾಳೆ. ಹೆರಿಗೆ ಬಳಿಕ ಮಹಿಳೆ ಎದುರಿಸುವಂತಹ ಸೆಳೆತ ಹಾಗೂ ನೋವುಗಳು ಯಾವುದು ಎಂದು ಬೋಲ್ಡ್ ಸ್ಕೈ ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದೆ...

ಸ್ತನ ನೋವು
ಹೆರಿಗೆ ಬಳಿಕ ಸ್ತನಗಳಲ್ಲಿ ಹಾಲಿನ ಉತ್ಪಾದನೆ ಆರಂಭವಾದಾಗ ಅವುಗಳು ದೊಡ್ಡದಾಗುತ್ತದೆ. ಮಗು ಸ್ತನದ ತೊಟ್ಟನ್ನು ಸರಿಯಾಗಿ ಚೀಪದೆ ಇದ್ದರೆ ಆಗ ಸಂಪೂರ್ಣ ಹಾಲು ಸ್ತನದಿಂದ ಹೊರಗೆ ಹೋಗುವುದಿಲ್ಲ. ಇದರಿಂದ ಊತ ಮತ್ತು ನೋವು ಕಾಣಿಸಿಕೊಳ್ಳಬಹುದು. ಇದನ್ನು ಹೊರತುಪಡಿಸಿ ಊತ ಮತ್ತು ಸ್ತನದ ತೊಟ್ಟು ಒಡೆದು ಹೋಗಿರುವುದರಿಂದಲೂ ನೋವಾಗಬಹುದು.

ಮೂಲಾಧಾರ ನೋವು
ಕೆಲವೊಂದು ಸಲ ಯೋನಿ ಮತ್ತು ಮೂಲಾಧಾರದ ನೋವಿನ ವ್ಯತ್ಯಾಸ ತಿಳಿಯಲು ತುಂಬಾ ಕಷ್ಟವಾಗುವುದು. ಮೂಲವ್ಯಾಧಿ, ಮಲಬದ್ಧತೆ ಮತ್ತು ಸಾಮಾನ್ಯ ಊತವು ಸ್ನಾಯುಗಳಲ್ಲಿ ಊತ ಹಾಗೂ ನೋವು ಉಂಟು ಮಾಡಬಹುದು. ಮೂಲಾಧಾರದ ನೋವಿನಿಂದ ಹೆಚ್ಚು ಕಾಲ ಕುಳಿತುಕೊಳ್ಳಲು ಸಾಧ್ಯವಾಗಲ್ಲ ಮತ್ತು ಮಗುವಿಗೆ ಹಾಲುಣಿಸಲು ಸಮಸ್ಯೆಯಾಗುವುದು.

ಯೋನಿಯ ನೋವು
ಹೆರಿಗೆ ಬಳಿಕ ಯೋನಿಯು ಗುಣಮುಖವಾಗಿ ನೋವಿಲ್ಲದಂತೆ ಆಗಲು ಸಮಯ ಬೇಕಾಗುವುದು. ಹೆರಿಗೆ ಬಳಿಕ ಯೋನಿಯ ನೋವು ಸಾಮಾನ್ಯ. ಸಿಸೇರಿಯನ್ ಮಾಡಿದ್ದರೆ ಮತ್ತು ಹೆರಿಗೆ ಬಳಿಕ ಮಲಬದ್ಧತೆ ಉಂಟಾಗುತ್ತಾ ಇದ್ದರೆ ನೋವು ಇರುವುದು. ಶಸ್ತ್ರಚಿಕಿತ್ಸೆ ವೇಳೆ ಹಾಕಿರುವ ಹೊಲಿಗೆಗಳು ಒಣಗದೆ ಇದ್ದರೆ ಇದು ಕರುಳಿನ ಚಲನೆಯ ಮೇಲೆ ಪರಿಣಾಮ ಬೀರುವುದು.

ಯುಟಿಐ ಸೋಂಕು
ಹೆರಿಗೆ ಬಳಿಕ ಯುಟಿಐ ಸಾಮಾನ್ಯ. ಆದರೆ ಬ್ಯಾಕ್ಟೀರಿಯಾಗಳು ಮೂತ್ರನಾಳದ ಮೂಲಕವಾಗಿ ಕಿಡ್ನಿಯನ್ನು ಪ್ರವೇಶ ಮಾಡಿದರೆ ಆಗ ಮೂತ್ರವಿಸರ್ಜನೆ ವೇಳೆ ನೋವು ಮತ್ತು ಉರಿ ಕಾಣಿಸಿಕೊಳ್ಳುವುದು.



Click it and Unblock the Notifications
