Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಗುವಿಗೆ ಎದೆಹಾಲುಣಿಸುವ ತಾಯಂದಿರು, ಇಂತಹ ತಪ್ಪುಗಳನ್ನು ಮಾಡಬೇಡಿ..
ಗರ್ಭಧಾರಣೆ ವೇಳೆ ಮಹಿಳೆಯರು ತಿನ್ನುವ ಆಹಾರ ಮತ್ತು ಮಾಡುವಂತಹ ಕೆಲವೊಂದು ಕೆಲಸಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಹೆರಿಗೆ ಬಳಿಕವೂ ಈ ಕ್ರಮ ಮುಂದುವರಿಸಿಕೊಂಡು ಹೋಗಬೇಕಾಗುವುದು ಅನಿವಾರ್ಯವಾಗಿದೆ. ಯಾಕೆಂದರೆ ಎದೆ ಹಾಲುಣಿಸುವ ಸಂದರ್ಭದಲ್ಲಿ ನೀವು ತಿನ್ನುವಂತಹ ಆಹಾರವು ಹಾಲಿನ ಮೂಲಕ ಮಗುವಿಗೆ ಸಿಗುವುದು. ಇದರಿಂದ ಆರೋಗ್ಯಕಾರಿ ಹಾಗೂ ಪೋಷಕಾಂಶಗಳು ಇರುವ ಆಹಾರ ಸೇವನೆ ಮಾಡಿದರೆ ತುಂಬಾ ಒಳ್ಳೆಯದು.
ಮಗು ಕೂಡ ಇದರಿಂದ ಆರೋಗ್ಯವಾಗಿರುವುದು. ಕೆಲವೊಂದು ಆಹಾರಗಳು ಹಾಲಿನ ಉತ್ಪತ್ತಿಗೆ ಪರಿಣಾಮ ಬೀರಬಹುದು ಮತ್ತು ಇನ್ನು ಕೆಲವು ಆಹಾರಗಳು ಹಾಲಿನ ರುಚಿಯನ್ನು ಬದಲಾಯಿಸಬಹುದು. ಮಗುವಿಗೆ ಎದೆಹಾಲುಣಿಸುತ್ತಾ ಇದ್ದರೆ ಕೆಲವೊಂದು ಆಹಾರಗಳನ್ನು ಸೇವಿಸಬೇಕು ಮತ್ತು ಇನ್ನು ಕೆಲವನ್ನು ತ್ಯಜಿಸಬೇಕು. ನೀವು ಈ ಸಮಯದಲ್ಲಿ ಏನು ಮಾಡಬೇಕು ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಓದುತ್ತಾ ಸಾಗಿ....

ಸರಿಯಾಗಿ ನೀರು ಕುಡಿಯದೆ ಇರುವುದು
ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದೆ ಇದ್ದರೆ ಹಾಲಿನ ಉತ್ಪತ್ತಿಯು ಕಡಿಮೆಯಾಗಬಹುದು. ಇದರಿಂದ ದಿನವಿಡಿ ಅಗತ್ಯವಿದ್ದಷ್ಟು ನೀರು ಕುಡಿಯಿರಿ.

ಸರಿಯಾಗಿ ಊಟ ಮಾಡದಿರುವುದು
ತೂಕ ಕಳೆದುಕೊಳ್ಳುವಂತಹ ಆಹಾರ ಕ್ರಮವನ್ನು ಎದೆಹಾಲುಣಿಸುವ ಸಂದರ್ಭದಲ್ಲಿ ಪಾಲಿಸಬಾರದು. ಎದೆಹಾಲುಣಿಸುವುದರಿಂದ ಸ್ವಲ್ಪ ಕ್ಯಾಲರಿ ದಹಿಸಲ್ಪಡುವುದು. ನೀವು ಸರಿಯಾಗಿ ತಿನ್ನದೆ ಇದ್ದರೆ ನಿಶ್ಯಕ್ತಿ ಕಾಡುವುದು.

ಗರ್ಭನಿರೋಧಕ ಮಾತ್ರೆಗಳ ಸೇವನೆ
ಗರ್ಭನಿರೋಧಕ ಮಾತ್ರೆಗಳು ಹಾಲಿನ ಉತ್ಪತ್ತಿ ಮೇಲೆ ಪರಿಣಾಮ ಬೀರಬಹುದು. ಗರ್ಭನಿರೋಧಕಕ್ಕೆ ಇತರ ವಿಧಾನಕ್ಕೆ ನಿಮ್ಮ ವೈದ್ಯರಿಂದ ಸಲಹೆ ಪಡೆಯಿರಿ.

ಆಲ್ಕೋಹಾಲ್
ಆಲ್ಕೋಹಾಲ್ ಸೇವನೆಯಿಂದ ನಿಮ್ಮ ಯಾರೂ ಕೂಡ ತಡೆಯಲು ಸಾಧ್ಯವಿಲ್ಲ. ಆದರೆ ಎದೆಹಾಲುಣಿಸುವ ವೇಳೆ ಆಲ್ಕೋಹಾಲ್ ಸೇವನೆ ಮಾಡಬೇಡಿ.

ಅತಿಯಾಗಿ ಕೆಫಿನ್ ಸೇವನೆ
ಎದೆಹಾಲುಣಿಸುವ ವೇಳೆ ಅತಿಯಾಗಿ ಕೆಫಿನ್ ಸೇವನೆ ಸರಿಯಲ್ಲ. ಕಾಫಿ ಬಿಟ್ಟಿರಲು ನಿಮಗೆ ಸಾಧ್ಯವಿಲ್ಲವೆಂದಾದರೆ ದಿನಕ್ಕೆ ಒಂದು ಕಪ್ ಕಾಫಿ ಮಾತ್ರ ಸೇವಿಸಿ.

ಮೀನು ಸೇವನೆ
ಪಾದರಸ ಅತಿಯಾಗಿರುವಂತಹ ಬಂಗುಡೆ ಮತ್ತು ಇತರ ಕೆಲವೊಂದು ಮೀನುಗಳನ್ನು ಎದೆಹಾಲುಣಿಸುವ ವೇಳೆ ಸೇವಿಸಬಾರದು. ಈ ಸಮಯದಲ್ಲಿ ಎಲ್ಲಾ ರೀತಿಯ ಮೀನುಗಳ ಸೇವನೆ ಕಡೆಗಣಿಸಿದರೆ ಒಳ್ಳೆಯದು.

ಅತಿಯಾದ ಬೆಳ್ಳುಳ್ಳಿ
ಬೆಳ್ಳುಳ್ಳಿಯು ಹಾಲಿನ ರುಚಿಯನ್ನು ಬದಲಾಯಿಸುವುದು ಮತ್ತು ಮಗು ಹಾಲು ಸೇವನೆ ಕಡಿಮೆ ಮಾಡುವಂತೆ ಆಗಬಹುದು. ಇದರಿಂದ ಬೆಳ್ಳುಳ್ಳಿ ಕಡಿಮೆ ಸೇವಿಸಿ.

ಕೆಲವು ಸಪ್ಲಿಮೆಂಟ್‌ಗಳು
ಕೆಲವೊಂದು ಗಿಡಮೂಲಿಕೆಗಳು ಹಾಲಿನ ಉತ್ಪತ್ತಿ ಕಡಿಮೆ ಮಾಡಬಹುದು. ಸ್ಪಿರ್ ಮಿಂಟ್ ಮತ್ತು ಸೇಜ್ ಇದರಲ್ಲಿ ಪ್ರಮುಖವಾದದ್ದು. ನಕ್ಷತ್ರ ಸೋಂಪು ಗಿಡ ಮತ್ತು ಮಾಚಿಪತ್ರೆಯನ್ನು ಕಡೆಗಣಿಸಿ. ವೈದ್ಯರ ಸಲಹೆಯಿಲ್ಲದೆ ಯಾವುದೇ ರೀತಿಯ ಗಿಡಮೂಲಿಕೆಯ ಸೇವನೆ ಮಾಡಲು ಹೋಗಬೇಡಿ.



Click it and Unblock the Notifications
