ಹೆರಿಗೆಯ ಬಳಿಕ ಇಂತಹ ಪಾನೀಯಗಳನ್ನು ಕುಡಿದರೆ ಬಹಳ ಒಳ್ಳೆಯದು....

By: Hemanth
Subscribe to Boldsky

ಮಹಿಳೆಯ ದೇಹವು ಮತ್ತೊಂದು ಜೀವಕ್ಕೆ ಜೀವ ನೀಡುವ ವೇಳೆ ಹಲವಾರು ಬದಲಾವಣೆ ಹಾಗೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಪ್ರಸವದ ಬಳಿಕ ಮಹಿಳೆಯ ದೇಹವು ಚೇತರಿಕೆಯಾಗಲು ತುಂಬಾ ಸಮಯ ಬೇಕಾಗುತ್ತದೆ. ಅದರಲ್ಲೂ ಭಾರತದಂತಹ ಸಂಪ್ರದಾಯಬದ್ಧ ದೇಶದಲ್ಲಿ ಬಾಣಂತಿ ಮಹಿಳೆಯು ಸುಮಾರು 40 ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವುದು ಅತೀ ಅಗತ್ಯವಾಗಿದೆ. ಈ ವೇಳೆ ಮಹಿಳೆಯ ದೇಹವು ಚೇತರಿಕೆ ಕಾಣುತ್ತಿರುವುದರಿಂದ ಇದಕ್ಕೆ ವಿಶ್ರಾಂತಿ ಅತೀ ಅಗತ್ಯ.

ಗರ್ಭಧಾರಣೆ ಸಮಯದಿಂದ ಪ್ರಸವದ ತನಕ ಮಹಿಳೆಯ ದೇಹವು ತುಂಬಾ ಬಳಲಿರುವ ಕಾರಣ ಆಕೆಯ ದೇಹಕ್ಕೆ ವಿಶ್ರಾಂತಿ ಮತ್ತು ಆರೈಕೆ ಅತೀ ಅಗತ್ಯ. ವಿಶ್ರಾಂತಿ ಪಡೆಯದೆ ಇದ್ರೆ ಅದು ಮಗು ಹಾಗೂ ತಾಯಿ ಮೇಲೆ ವಿಭಿನ್ನ ಪರಿಣಾಮ ಬೀರಬಹುದು. ಬಾಣಂತಿ ಮಹಿಳೆಯರಿಗೆ ವಿಶೇಷವಾದ ಕೆಲವೊಂದು ಆಹಾರ ನೀಡಲಾಗುತ್ತದೆ. ಇದರಿಂದ ಹಾಲಿನ ಉತ್ಪಾದನೆ ಹೆಚ್ಚಾಗಿ ದೇಹಕ್ಕೂ ಶಮನ ನೀಡುವುದು. ಮನೆಯಲ್ಲೇ ಕೆಲವೊಂದು ಆಹಾರಗಳನ್ನು ತಯಾರಿಸಿ ಬಾಣಂತಿಗೆ ನೀಡಲಾಗುತ್ತದೆ.

ಹೆರಿಗೆಯ ಬಳಿಕ, ಮಹಿಳೆಯ ಸಮಸ್ಯೆ ಕೇಳುವವರು ಯಾರು?

ಇಂತಹ ಆಹಾರವು ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲದೆ ಎದೆಹಾಲು ಸೇವಿಸುವ ಮಗುವಿನ ಆರೋಗ್ಯ ಕಾಪಾಡುವುದು. ಮನೆಯಲ್ಲೇ ತಯಾರಿಸ ಬಹುದಾದ ಮೂರು ಪರಿಣಾಮಕಾರಿ ಗಿಡಿಮೂಲಿಕೆ ಪಾನೀಯ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ನಿಯಮಿತವಾಗಿ ಈ ಪಾನೀಯ ಸೇವನೆ ಮಾಡಿದರೆ ದೇಹವು ಬೇಗನೆ ಚೇತರಿಕೆ ಕಂಡುಕೊಂಡು ಬಾಣಂತಿ ಮಹಿಳೆಯಲ್ಲಿ ಹಾಲಿನ ಉತ್ಪತ್ತಿ ಹೆಚ್ಚಿಸುವುದು. ಇದರ ಬಗ್ಗೆ ಮತ್ತಷ್ಟು ತಿಳಿಯಲು ಮುಂದಕ್ಕೆ ಓದಿಕೊಳ್ಳಿ..... 

ಬೆಳ್ಳುಳ್ಳಿ ಹಾಲು

ಬೆಳ್ಳುಳ್ಳಿ ಹಾಲು

ಬೆಳ್ಳುಳ್ಳಿಯು ಒಳ್ಳೆಯ ಕ್ಷೀರಚೋದಕವಾಗಿರುವ ಕಾರಣದಿಂದ ಇದು ಬಾಣಂತಿ ಮಹಿಳೆಯರಿಗೆ ತುಂಬಾ ಪ್ರಯೋಜಕಾರಿಯಾಗಿ ಕೆಲಸ ಮಾಡಲಿದೆ.

ಬೇಕಾಗುವ ಸಾಮಗ್ರಿಗಳು

*ಬೆಳ್ಳುಳ್ಳಿ- 3 ಎಸಲು

*ನೀರು 1 ಕಪ್

*ಹಾಲು 1 ಲೋಟ

*ಸಕ್ಕರೆ, ಜೇನುತುಪ್ಪ ಮತ್ತು ಬೆಲ್ಲ-1/2 ಚಮಚ

ವಿಧಾನ

ವಿಧಾನ

ಬೆಳ್ಳುಳ್ಳಿ ಎಸಲುಗಳನ್ನು ಒಳ್ಳೆಯ ಫೇಸ್ಟ್ ಮಾಡಿಕೊಳ್ಳಿ. ಒಂದು ತವಾಗೆ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಅದಕ್ಕೆ ನೀರು ಹಾಕಿ ಅದು ಹಾಕಿದ ಪ್ರಮಾಣದ ¼ ಭಾಗವಾಗುವ ತನಕ ಕುದಿಸಿ. ಈಗ ಹಾಲು ಹಾಕಿ ಮತ್ತು ಸರಿಯಾಗಿ ಕುದಿಸಿ.

ಗ್ಯಾಸ್ ಅನ್ನು ಹಾರಿಸಿ ಹಾಲು ತಣ್ಣಗಾಗಲು ಬಿಡಿ. ಒಂದು ಲೋಟಕ್ಕೆ ಹಾಕಿ ಅದಕ್ಕೆ ಜೇನುತುಪ್ಪ, ಬೆಲ್ಲ ಅಥವಾ ಸಕ್ಕರೆ ಹಾಕಿ. ಈ ಪಾನೀಯವನ್ನು ಬೆಳಿಗ್ಗೆ ಅಥವಾ ಬೆಳಿಗ್ಗೆ 10 ಗಂಟೆ ಸಮಯಕ್ಕೆ ಸೇವಿಸಿ.

ಬೆಳ್ಳುಳ್ಳಿ ಜಜ್ಜಿ ಹಾಕಿದ ಹಾಲು ಕುಡಿದರೆ, ಆರೋಗ್ಯ ವೃದ್ಧಿ

ಜೀರಿಗೆ ನೀರು

ಜೀರಿಗೆ ನೀರು

ಜೀರಿಗೆಯು ಹಾಲಿನ ಉತ್ಪತ್ತಿ ಹೆಚ್ಚಿಸುವುದು. ಮಗುವಿನ ಹೊಟ್ಟೆನೋವು ಶಮನ ಮಾಡುವುದು. ಮಗು ಹಾಗೂ ತಾಯಿಯಲ್ಲಿ ಜೀರ್ಣಕ್ರಿಯೆಯನ್ನು ಇದು ಹೆಚ್ಚಿಸುತ್ತದೆ.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಜೀರಿಗೆ-2 ಚಮಚ

*ನೀರು- 1 ಲೀಟರ್

*ಸಕ್ಕರೆ ಅಥವಾ ಜೇನುತುಪ್ಪ-1/2 ಚಮಚ

ಜೀರಿಗೆ ನೀರು: ಸಣ್ಣ-ಪುಟ್ಟ ಕಾಯಿಲೆಗೆ ದಿವ್ಯೌಷಧ

ವಿಧಾನ

ವಿಧಾನ

*ಒಂದು ತವಾ ತೆಗೆದುಕೊಂಡು ಅದಕ್ಕೆ ನೀರು ಹಾಕಿ ಮತ್ತು ಅದಕ್ಕೆ ಜೀರಿಗೆ ಸೇರಿಸಿಕೊಂಡು ಕುದಿಸಿ. ಇದು ಕುದಿಯುತ್ತಿರುವಾಗ ಐದು ನಿಮಿಷ ಸರಿಯಾಗಿ ತಳಮಳವಾಗಲಿ.

*ಗ್ಯಾಸ್ ನಿಂದ ತೆಗೆದು ಅದನ್ನು ಸೋಸಿಕೊಂಡು ಒಂದು ಪಾತ್ರೆಗೆ ಹಾಕಿ. ಬಿಸಿಯಾಗಿರುವ ನೀರನ್ನು ಒಂದು ಥರ್ಮಸ್ ಫ್ಲಾಸ್ಕ್ ಗೆ ಹಾಕಿಬಿಡಿ.

*ನಿಮಗೆ ಬಾಯಾರಿಕೆ ಆದಾಗ ಈ ನೀರನ್ನು ಕುಡಿಯಬಹುದು. ರುಚಿಗೆ ಬೇಕಾದರೆ ಜೇನುತುಪ್ಪ ಅಥವಾ ಸಕ್ಕರೆ ಹಾಕಿಕೊಂಡು ಕುಡಿಯಬಹುದು.

*ಪ್ರತೀ ದಿನ ತಾಜಾ ಜೀರಿಗೆ ನೀರು ಮಾಡಿ ಕುಡಿದರೆ ಒಳ್ಳೆಯದು. ಜೀರಿಗೆ ನೀರು ಕುಡಿಯಲು ಇಷ್ಟವಿಲ್ಲದೆ ಇದ್ದರೆ ಜೀರಿಗೆಯನ್ನು ಹುರಿದು ತಿನ್ನಬಹುದು.

ಓಂ ಕಾಳು(ಅಜ್ವೈನ್) ನೀರು

ಓಂ ಕಾಳು(ಅಜ್ವೈನ್) ನೀರು

ಅಜ್ವೈನ್ ನೀರು ಜೀರ್ಣಕ್ರಿಯೆ ಹಾಗೂ ಹೊಟ್ಟೆ ಸ್ವಚ್ಛಗೊಳಿಸಲು ತುಂಬಾ ಪರಿಣಾಮಕಾರಿ ಎಂದು ನಂಬಲಾಗಿದೆ. ಬಾಣಂತಿ ಮಹಿಳೆಯರು ಬೇಗನೆ ಚೇತರಿಕೆ ಕಾಣಲು ಅಜ್ವೈನ್ ನೀರು ತುಂಬಾ ನೆರವಾಗಲಿದೆ.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಅಜ್ವೈನ್ ಹುಡಿ ½ ಚಮಚ

*ನೀರು ಒಂದು ಕಪ್

*ಬೆಣ್ಣೆ-1/2 ಚಮಚ

*ಬೆಲ್ಲ-2 ಚಮಚ

ವಿಧಾನ

*ಒಂದು ತವಾ ತೆಗೆದುಕೊಂಡು ಅದರಲ್ಲಿ ಬೆಣ್ಣೆ ಬಿಸಿ ಮಾಡಿ. ಬೆಣ್ಣೆ ಬಿಸಿಯಾಗಿರುವಾಗಲೇ ಅದಕ್ಕೆ ಅಜ್ವೈನ್ ಹುಡಿ ಮತ್ತು ನೀರು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

*ಈ ಮಿಶ್ರಣವು ಕುದಿಯಲು ಆರಂಭವಾದಾಗ ಅದಕ್ಕೆ ಬೆಲ್ಲ ಹಾಕಿ. ಬೆಂಕಿ ಕಡಿಮೆ ಮಾಡಿ ಮಿಶ್ರಣವು ತಳಮಳವಾಗಲು ಬಿಡಿ. ಬೆಲ್ಲ ಸರಿಯಾಗಿ ಕರಗಿ ಹೋಗಲಿ.

*ಗ್ಯಾಸ್ ನಿಂದು ತವಾ ತೆಗೆದು ಅದು ತಣ್ಣಗಾಗಲು ಬಿಡಿ. ಮಿಶ್ರಣವನ್ನು ಸೋಸಿಕೊಳ್ಳಿ ಮತ್ತು ಸ್ವಲ್ಪ ಬಿಸಿಯಾಗಿರುವಾಗಲೇ ಕುಡಿಯಿರಿ.

*ಹೆಚ್ಚು ಕ್ಯಾಲರಿ ಬೇಡವೆಂದಿದ್ದರೆ ಬೆಣ್ಣೆ ಹಾಕಬೇಡಿ. ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಅದಕ್ಕೆ ಅಜ್ವೈನ್ ಹುಡಿ ಮತ್ತು ನೀರು ಹಾಕಿ.

*ಇದಕ್ಕೆ ಬೆಲ್ಲ ಹಾಕಿದರೆ ನೀರು ಹೆಚ್ಚು ರುಚಿಯಾಗಿರುವುದು. ನೀರನ್ನು ಸೋಸಿಕೊಂಡು ಕುಡಿಯಿರಿ.

English summary

Recipes For Healthy Drinks After The Delivery

It is traditional in many parts of India that women have to undergo a period of around 40 days of confinement after the delivery of a child. This is done to make sure that the mother gets the required amount of rest and care. The mother will be very tired during this time and her body will need to heal. Her body will also be learning how to breastfeed. The confinement period proves to be crucial for the health of both the mother and baby.
Subscribe Newsletter