Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ನಿಮ್ಮ ಈ ಆರೈಕೆಗಳಿಂದ ಮಗು ಆರೋಗ್ಯಕರವಾದ ಬೆಳವಣಿಗೆ ಕಾಣುವುದು
ಒಂದು ಮಗುವಿಗೆ ಜನ್ಮ ನೀಡುವುದು ಪ್ರಕೃತಿದತ್ತವಾದ ಕೊಡುಗೆ. ಈ ಪ್ರಕ್ರಿಯೆಯು ಪ್ರತಿಯೊಂದು ಪ್ರಾಣಿ ಪಕ್ಷಿಗಳ ಸ್ವಾಭಾವಿಕ ಕ್ರಿಯೆ ಎಂತಲೂ ಹೇಳಬಹುದು. ಮಗುವನ್ನು ಹೆರುವುದು ಮುಖ್ಯವಲ್ಲ. ಅದನ್ನು ಹೇಗೆ ಬೆಳೆಸುತ್ತೇವೆ ಎನ್ನುವುದು ಸಹ ಬಹು ಮುಖ್ಯವಾದ ವಿಚಾರವಾಗಿರುತ್ತದೆ. ತಾಯಿಯ ಗರ್ಭದಿಂದ ಹೊರ ಬಂದ ಮಗು ಪ್ರಪಂಚದಲ್ಲೊಂದಾಗಿ ಬೆರೆತು ಬಾಳಬೇಕು ಎಂದಾದರೆ ಆ ಮಗುವಿನ ಬೆಳವಣಿಗೆ ಸೂಕ್ತ ರೀತಿಯಲ್ಲಿ ಆಗಿರಬೇಕು. ಮಾನಸಿಕವಾಗಿ ಹಾಗೂ ದೈಹಿಕವಾಗಿ ಯಾವ ನ್ಯೂನತೆಯೂ ಇರಬಾರದು.
ಇಂತಹ ಒಂದು ಉತ್ತಮ ಪರಿಕಲ್ಪನೆಯಲ್ಲಿ ಮಗುವನ್ನು ಬೆಳೆಸುವುದು ಎಂದರೆ ಪೋಷಕರಿಗೊಂದು ಸವಾಲಿನ ಕೆಲಸವೆಂದೇ ಹೇಳಬಹುದು. ಹೊಸ ವರ್ಷದ ಆಚರಣೆಯ ಸಂಭ್ರಮದಲ್ಲಿರುವವರು ಏನಾದರೂ ಹೊಸತೊಂದು ಗುರಿ ಅಥವಾ ನಿಲುವನ್ನು ಹೊಂದಬೇಕು ಎಂದುಕೊಂಡಿರುತ್ತಾರೆ. ನೀವೇನಾದರೂ ಗರ್ಭಿಣಿ ಅಥವಾ ಪಾಲಕರಾಗಿದ್ದೀರಿ ಎಂದಾರೆ ಕೆಲವು ಪ್ರಮುಖ ಆರೈಕೆಯ ಮೂಲಕ ಮಗುವನ್ನು ಬೆಳೆಸುತ್ತೇನೆ ಎನ್ನುವ ನಿಲುವನ್ನು ಹೊಂದಿ.
ಮಗುವಿನ ಮನಸ್ಸು ಬಿಳಿಯ ಕಾಗದ ಇದ್ದಂತೆ. ಅದರ ಮೇಲೆ ನಾವೇನು ಬರೆಯುತ್ತೇವೆಯೋ ಅದೇ ಚಿತ್ರಣ ಮೂಡಿ ಬರುತ್ತದೆ. ಕಲಿಕೆಯ ಹಂತದಲ್ಲಿ ಬಹು ಚತುರತೆಯನ್ನು ಮಗು ಹೊಂದಿರುತ್ತದೆ. ಹಾಗಾಗಿ ನಾವೇನು ಮಾಡುತ್ತೇವೆಯೋ ಅದೇ ರೀತಿಯಲ್ಲಿ ಮಗು ಅನುಕರಣೆ ಮಾಡಲು ಪ್ರಾರಂಭಿಸುತ್ತದೆ. ನಾವು ಕೆಟ್ಟ ವಿಚಾರವನ್ನು ಅನುಸರಿಸಿದರೆ ಮಗು ಸಹ ಕೆಟ್ಟದ್ದನ್ನೇ ಕಲಿಯುತ್ತದೆ. ಅದಕ್ಕಾಗಿಯೇ ಬೋಲ್ಡ್ ಸ್ಕೈ ಕೆಲವು ಉತ್ತಮ ವಿಧಾನಗಳನ್ನು ನಿಮಗಾಗಿ ಪರಿಚಯಿಸುತ್ತಿದೆ...

ನಿಮ್ಮನ್ನು ನೀವು ಆರೈಕೆ ಮಾಡಿ
ಇದರ ಅರ್ಥ ನಿಮ್ಮ ಆರೈಕೆ ಮಾಡಿಕೊಳ್ಳುವುದನ್ನು ನೀವು ಮರೆಯಬಾರದು. ನಿಮ್ಮ ಜೀವನದಲ್ಲಿ ಸಂತೋಷ, ತೃಪ್ತಿ ಮತ್ತು ತಾಳ್ಮೆಯಿಂದಿರಿ. ಉತ್ತಮ ನಿದ್ರೆ ಪಡೆಯಿರಿ. ಹೀಗೆ ಮಾಡುವುದರ ಮೂಲಕ ಪೋಷಕರ ಸವಾಲುಗಳನ್ನು ಎದುರಿಸಲು ನೀವು ಸಿದ್ಧರಾಗಬಹುದು. ಚೆನ್ನಾಗಿ ತಿಂದು ಆರೋಗ್ಯದಿಂದ ಇರಿ. ಎಲ್ಲಾ ನಕಾರಾತ್ಮಕತೆಯಿಂದ ನಿಮ್ಮ ಮನಸ್ಸನ್ನು ನೆನೆಸಿ ಮತ್ತು ಧನಾತ್ಮಕ ಧ್ವನಿಯನ್ನು ತುಂಬಿಕೊಳ್ಳಿ. ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ನಿಧಾನವಾಗಿ ಎಲ್ಲಾ ಸೌಂದರ್ಯ ಮತ್ತು ಪ್ರತಿ ಕ್ಷಣದ ಸಂತೋಷವನ್ನೂ ತೆಗೆದುಕೊಳ್ಳಿ.

ಪ್ರೀತಿಯ ವಾತಾವರಣವನ್ನು ಸೃಷ್ಟಿಸಿ ಕೊಡಿ
ಮಕ್ಕಳು ಬಯಸುವುದು ಮುಗ್ಧವಾದ ಪ್ರೀತಿಯನ್ನು. ನೀವು ತೋರಿಸುವ ಪ್ರೀತಿಯಿಂದಲೇ ಮಕ್ಕಳು ಅನೇಕ ವಿಚಾರಗಳನ್ನು ಕಲಿತುಬಿಡುತ್ತಾರೆ. ಮನೆಯಲ್ಲಿ ಅಜ್ಜಾ, ಅಜ್ಜಿ, ಅಕ್ಕಾ ತಂಗಿ, ಅಣ್ಣ, ತಮ್ಮ, ನೆರೆಹೊರೆಯವರು ಹೀಗೆ ನಿಮ್ಮ ಸಂಬಂಧಿಕರ ನಡುವೆ ಮುಕ್ತವಾದ ವರ್ತನೆ ತೋರುವುದು ಹಾಗೂ ಪ್ರೀತಿಯಿಂದ ಇರುವುದನ್ನು ಕಲಿಸಿ. ಈ ರೀತಿಯ ವರ್ತನೆ ಹಾಗೂ ಪ್ರೀತಿಯಿಂದ ಕಾಣುವ ಗುಣವು ಅವರ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯವಾಗುತ್ತದೆ.

ನಿಮ್ಮ ಮಗುವಿನೊಂದಿಗೆ ಸಂಪರ್ಕವಿರಲಿ
ಒಂದೇ ಮನೆಯಲ್ಲಿ ಇದ್ದರೂ ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ಅನೇಕರು ಮಕ್ಕಳೊಂದಿಗೆ ಮಾತನಾಡದೆ ಇರುವಂತಹ ಪರಿಸ್ಥಿತಿ ಸೃಷ್ಟಿಯಾಗಿರುತ್ತದೆ. ಇಂತಹ ಸಮಸ್ಯೆಗಳು ಮುಂದುವರಿದರೆ ಮಗುವಿನ ಮಾನಸಿಕ ಸ್ಥಿತಿಯು ದುರ್ಬಲ ಗೊಳ್ಳುವ ಸಾಧ್ಯತೆ ಇರುತ್ತದೆ. ನಿತ್ಯವೂ ನಿಮ್ಮ ಮಕ್ಕಳೊಂದಿಗೆ ಮಾತನಾಡಿ. ನಿತ್ಯವೂ ಮಗುವನ್ನು ಸ್ಪರ್ಶಿಸುವುದು, ಅವರ ಚಟುವಟಿಕೆಯ ಬಗ್ಗೆ ಪ್ರಶಂಸೆ ಹಾಗೂ ಕುಶಲ ಕ್ಷೇಮದ ವಿಚಾರಣೆಯನ್ನು ನಡೆಸಿ.

ಮಕ್ಕಳನ್ನು ಗೌರವಿಸಿ
ಮಕ್ಕಳು ಹಿರಿಯರನ್ನು ಗೌರವಿಸಬೇಕುಎಂದು ಬಯಸುವುದು ಸಹಜ. "ಗೌರವವನ್ನು ಕೊಟ್ಟು, ಗೌರವವನ್ನು ಪಡೆಯಬೇಕು" ಎನ್ನುವ ಮಾತಿನಂತೆ ನಾವು ಮಕ್ಕಳಿಗೆ ಗೌರವವನ್ನು ಕೊಟ್ಟರೆ ಅವರೂ ನಮಗೆ ಗೌರವವನ್ನು ಕೊಡುತ್ತಾರೆ. ಜೊತೆಗೆ ಹಿರಿಯರೊಂದಿಗೆ ಹೇಗೆ ನಡೆದುಕೊಳ್ಳುವುದು ಎನ್ನುವುದನ್ನು ಅರಿಯುತ್ತಾರೆ.

ಅವರ ತಪ್ಪನ್ನು ಕ್ಷಮಿಸಿ
ಮಕ್ಕಳು ತಪ್ಪು ಮಾಡುವುದು ಸಹಜ. ಆದರೆ ಆ ತಪ್ಪನ್ನು ಪದೇ ಪದೇ ಅವರ ಮನಸ್ಸಿಗೆ ನೋವುಂಟಾಗುವಂತೆ ಎತ್ತಿ ಹೇಳುತ್ತಿರಬಾರದು. ಮಕ್ಕಳು ತಪ್ಪು ಮಾಡಿದಾಗ ಅದು ತಪ್ಪು, ಹಾಗೆ ಮಾಡಿದರೆ ಏನಾಗುತ್ತದೆ ಎನ್ನುವುದನ್ನು ತಿಳಿಸಿಕೊಡಬೇಕು. ಪುನಃ ಪುನಃ ಅಂತಹ ತಪ್ಪನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು ಎನ್ನುವುದನ್ನು ನೀವು ಹೇಳಿಕೊಡಬೇಕು. ಅವರ ತಪ್ಪನ್ನು ಮನ್ನಿಸುವ ಗುಣವನ್ನು ಮೊದಲು ಪೋಷಕರು ಕಲಿಯಬೇಕು.

ಮಗುವಿನ ಭಾವನಾತ್ಮಕ ಅಗತ್ಯತೆಯನ್ನು ಅರಿಯಿರಿ
ಮಗು ಸದಾ ಪಾಲಕರ ಪ್ರೀತಿ ಹಾಗೂ ಭಾವನಾತ್ಮಕ ವರ್ತನೆಯನ್ನು ಬಯಸುತ್ತದೆ. ಮಗು ಅತ್ತಾಗ, ಖುಷಿಯಲ್ಲಿರುವಾ ಅದನ್ನು ಮುದ್ದಿಸುವುದು, ಸಾಂತ್ವಾನ ನೀಡುವ ಪ್ರಕ್ರಿಯೆಯನ್ನು ಮಾಡಿ. ಮಗು ಯಾವುದೋ ವಿಚಾರವನ್ನು ನಿಮ್ಮೊಂದಿಗೆ ಹೇಳಿಕೊಳ್ಳಲು ಪ್ರಯತ್ನಿಸುವಾಗ ಅದು ಏನು ಎನ್ನುವುದನ್ನು ಕೇಳುವುದು ಹಾಗೂ ಅದರ ಮಾತಿಗೆ ಪ್ರತಿಕ್ರಿಯೆ ನೀಡುವ ಪ್ರಕ್ರಿಯೆಯನ್ನು ರೂಢಿಸಿಕೊಳ್ಳಬೇಕು.

ಅವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಹೇಳಿಕೊಡಿ
ಕೆಲವೊಮ್ಮೆ ಮಕ್ಕಳು ಚೀರುವುದು, ಇತರ ಮಕ್ಕಳಿಗೆ ಹೊಡೆಯುವುದು, ಇತರರ ಕೈಯಲ್ಲಿ ಇರುವುದನ್ನು ತೆಗೆದುಕೊಳ್ಳಲು ಪ್ರಯತ್ನಿಸುವುದು ಅಥವಾ ಕಚ್ಚುವುದು ಹೀಗೆ ಕೆಲವು ಕೆಟ್ಟ ಗುಣಗಳನ್ನು ತೋರುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ತಪ್ಪಿನ ಅರಿವನ್ನು ಅವರಿಗಾಘುವಂತೆ ಮಾಡಬೇಕು. ಅಂತಹ ತಪ್ಪು ಮುಂದೆ ಮಾಡದಂತೆ ನೋಡಿಕೊಳ್ಳಬೇಕು. ನಿಮ್ಮ ಮಕ್ಕಳು ನಿಮ್ಮ ಹಿಂದೆ ಏನು ಮಾಡುತ್ತಾರೆ? ಎನ್ನುವುದರ ಬಗ್ಗೆ ನೀವು ಕಾಳಜಿ ಅಥವಾ ನಿಗಾ ವಹಿಸಬೇಕು.

ಹೊಡೆಯುವುದು ತಪ್ಪು ಎನ್ನುವುದನ್ನು ತಿಳಿಸಿ
ಅನೇಕ ಬಾರಿ ಮಕ್ಕಳಿಗೆ ಸಿಟ್ಟು ಬಂದಾಗ ಮನಸ್ಸಿಗೆ ಬಂದಂತೆ ಮಾಡುತ್ತಾರೆ. ಅಣ್ಣ ತಮ್ಮಂದಿರು ಅಥವಾ ಅಕ್ಕ ತಂಗಿಯರಿದ್ದರೆ ಸಿಟ್ಟಿನಲ್ಲಿ ಅವರಿಗೆ ಹೊಡೆಯುತ್ತಾರೆ. ಅಥವಾ ಶಾಲೆಗಳಿಗೆ ಹೋದಾಗ ಅಲ್ಲಿ ಗಲಾಟೆ ನಡೆದರೆ ಹೊಡೆಯುವ ಪ್ರವೃತ್ತಿಯನ್ನು ತೋರಬಹುದು. ಹಾಗಾಗಿ ಮಕ್ಕಳಿಗೆ ಸಿಟ್ಟು ಬಂದಾಗ ಮೊದಲು ನಿಯಂತ್ರಣ ಹಾಗೂ ಮಾತಿನಲ್ಲಿ ಹೇಗೆ ಕೇಳಬೇಕು ಎನ್ನುವುದನ್ನು ಹೇಳಿಕೊಡಿ. ಒಮ್ಮೆಲೆ ಹೊಡೆಯುವುದು ಅಥವಾ ಮೈಮುಟ್ಟಿ ಹಲ್ಲೆ ಮಾಡುವುದು ತಪ್ಪು ಎನ್ನುವುದನ್ನು ತಿಳಿಸಿಕೊಡಬೇಕು.



Click it and Unblock the Notifications
