For Quick Alerts
ALLOW NOTIFICATIONS  
For Daily Alerts

ಹೆರಿಗೆಯ ಬಳಿಕವೂ ಕಾಡುವ ವಾಕರಿಕೆ ಸಮಸ್ಯೆ! ಯಾಕೆ ಹೀಗೆ?

By Hemanth
|

ಗರ್ಭಧರಿಸಿದ ಮಹಿಳೆಯರಿಗೆ ಮೊದಲ ಮೂರು ತಿಂಗಳಲ್ಲಿ ವಾಕರಿಕೆ ಬಂದು ವಾಂತಿಯಾಗುವುದು ಸಾಮಾನ್ಯ. ಇದು ಕೆಲವರಲ್ಲಿ ಮುಂದುವರಿದರೂ ಇನ್ನು ಕೆಲವರಲ್ಲಿ ಮೂರೇ ತಿಂಗಳಲ್ಲಿ ನಿಂತುಬಿಡುತ್ತದೆ. ಆದರೆ ಪ್ರಸವ ಬಳಿಕವೂ ಕೆಲವು ಮಹಿಳೆಯರಲ್ಲಿ ವಾಕರಿಕೆ ಕಾಣಿಸಿಕೊಳ್ಳುವುದು. ಪ್ರಸವ ಬಳಿಕವೂ ವಾಕರಿಕೆ ಬರುವ ಮಹಿಳೆಯರಿಗೆ ಇತರ ಕೆಲವೊಂದು ಸಮಸ್ಯೆಯೂ ಕಾಣಿಸುವುದು.

ಹಾರ್ಮೋನು ಬದಲಾವಣಿಯಿಂದಾಗಿ ದೇಹದಲ್ಲಿ ಹೀಗೆ ವ್ಯತ್ಯಾಸಗಳಾಗುವುದು. ಮಗುವಿನ ಜನನದ ಬಳಿಕ ಎದೆಹಾಲು ಉಣಿಸುವ ಕಾರಣದಿಂದಾಗಿಯೂ ವಾಕರಿಕೆ ಬರುವುದು. ಸಾಮಾನ್ಯ ಹೆರಿಗೆಯಾಗಿರಲಿ ಅಥವಾ ಸಿಸೇರಿಯನ್ ಆಗಿರಲಿ ಪ್ರಸವದ ಬಳಿಕ ಎಂಟು ವಾರಗಳ ಕಾಲ ವಾಕರಿಕೆ ಬಂದರೆ ಅದರಿಂದ ಯಾವುದೇ ಸಮಸ್ಯೆಯಿಲ್ಲ.

Nauseous

ಆದರೆ ವಾಕರಿಕೆಯು ಮುಂದುವರಿದರೆ ಮತ್ತು ವಾಕರಿಕೆಯೊಂದಿಗೆ ಬೇರೆ ಯಾವುದೇ ಸಮಸ್ಯೆಗಳು ಇದ್ದರೆ ಆಗ ನೀವು ಚಿಕಿತ್ಸೆ ಪಡೆಯುವುದು ಅತೀ ಅಗತ್ಯವಾಗಿದೆ. ಪ್ರಸವದ ಬಳಿಕ ಕಾಣಿಸಿಕೊಳ್ಳುವ ವಾಕರಿಕೆಗೆ ಕಾರಣಗಳು ಏನೆಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಲಿದೆ.

ಹೆರಿಗೆಯ ಬಳಿಕ ಮಹಿಳೆ ಪಡುವ ಕಷ್ಟ, ಅನುಭವಿಸಿದವರಿಗೆಯೇ ಗೊತ್ತು!

ಆಕ್ಸಿಟೋಸಿನ್ ಬಿಡುಗಡೆ
ಆಕ್ಸಿಟೋಸಿನ್ ಎನ್ನುವ ಹಾರ್ಮೋನು ಬಿಡುಗಡೆಯಿಂದಾಗಿ ಎದೆಹಾಲುಣಿಸುವಾಗ ವಾಕರಿಕೆ ಕಾಣಿಸಿಕೊಳ್ಳುವುದು ಸಾಮಾನ್ಯ. ಪ್ರಸವದ ಎಂಟು ವಾರದ ಬಳಿಕ ಇಂತಹ ವಾಕರಿಕೆ ಮಾಯವಾಗುವುದು.

ನಿರ್ಜಲೀಕರಣ
ಮಗುವಿಗೆ ಎದೆಹಾಲು ಉಣಿಸುವ ವೇಳೆ ಮಹಿಳೆಯರು ನಿರ್ಜಲೀಕರಣದಿಂದ ಬಳಲುವ ಸಾಧ್ಯತೆ ಹೆಚ್ಚಿದೆ. ಮಗುವಿಗೆ ಎದೆ ಹಾಲು ನೀಡುವ ವೇಳೆ ತಾಯಂದಿರುವ ಹೆಚ್ಚು ನೀರು ಸೇವಿಸಬೇಕು. ದಿನಕ್ಕೆ ಎಂಟು ಲೋಟ ನೀರು ಕುಡಿದರೆ ನಿರ್ಜಲೀಕರಣ ತಪ್ಪಿಸಬಹುದು ಮತ್ತು ವಾಕರಿಕೆ ತಡೆಯಬಹುದು.

ಪ್ರಸವ ಬಳಿಕ ಚೇತರಿಕೆ
ಪ್ರಸವದ ವೇಳೆ ದೇಹವು ಹಲವಾರು ರೀತಿಯ ದೈಹಿಕ ಹಾಗೂ ಹಾರ್ಮೋನು ಬದಲಾವಣೆಗೆ ಒಳಗಾಗುತ್ತದೆ. ಕೆಲವು ಮಹಿಳೆಯರ ದೇಹವು ಮತ್ತೆ ಹಳಿಗೆ ಬರಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಪ್ರಸವದ ಬಳಿಕವೂ ಕೆಲವರಲ್ಲಿ ವಾಕರಿಕೆ ಕಂಡುಬರುತ್ತದೆ.

ಮಗುವಿನ ಬೆಳವಣಿಗೆ
ಮಗುವಿನ ಬೆಳವಣಿಗೆ ವೇಳೆ ಅದು ಹೆಚ್ಚಿಗೆ ಎದೆ ಹಾಲು ಕುಡಿಯುತ್ತದೆ. ಇದರಿಂದಾಗಿ ಹಾರ್ಮೋನು ಮಟ್ಟವು ಹೆಚ್ಚಾಗುತ್ತದೆ. ಇದರಿಂದ ಪ್ರಸವ ಬಳಿಕವೂ ವಾಕರಿಕೆ ಕಂಡುಬರುವುದು. ಸರಿಯಾದ ಆಹಾರ ಕ್ರಮ ಮತ್ತು ನೀರು ಸೇವಿಸಿದರೆ ವಾಕರಿಕೆ ತಡೆಯಬಹುದು.

ಖಿನ್ನತೆ ಶಮನಕಾರಿ ಔಷಧಿ
ಪ್ರಸವ ಬಳಿಕ ಖಿನ್ನತೆಗಾಗಿ ಔಷಧಿ ತೆಗೆದುಕೊಳ್ಳುವ ಮಹಿಳೆಯರಲ್ಲಿ ವಾಕರಿಕೆಯು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು. ಪ್ರಸವ ಬಳಿಕ ಖಿನ್ನತೆಗೆ ಒಳಗಾಗುವ ಮಹಿಳೆಯರಿಗೆ ಈ ಔಷಧಿ ನೀಡಲಾಗುತ್ತದೆ. ಔಷಧಿಯ ಪ್ರಮಾಣ ಮತ್ತು ವಿಧವನ್ನು ಅನುಸರಿಸಿ ವಾಕರಿಕೆ ಬರುವುದು.

ಮೂತ್ರನಾಳದ ಸೋಂಕು
ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಪ್ರಸವದ ಬಳಿಕ ಮಹಿಳೆಯರಲ್ಲಿ ಪ್ರತಿರೋಧಕ ಶಕ್ತಿಯು ತುಂಬಾ ಕಡಿಮೆ ಇರುತ್ತದೆ. ಇದರಿಂದಾಗಿ ಮಹಿಳೆಯರಲ್ಲಿ ಮೂತ್ರನಾಳದ ಸೋಂಕು ಕಾಣಿಸಿಕೊಳ್ಳುವುದು. ಪ್ರಸವದ ಬಳಿಕ ಜ್ವರದೊಂದಿಗೆ ವಾಕರಿಕೆ ಬರುತ್ತಾ ಇದ್ದರೆ ಆಗ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗಿದೆ.

English summary

Is it Normal to be Nauseous after Childbirth? whats the reason...

Nausea is very common during pregnancy. But there are certain women who may experience nausea even after childbirth, which is called postpartum nausea. Some women may feel it as the common morning sickness, while some others experience it along with other symptoms. Your body may take time to get settled to the changing levels of hormones and its actions. This may result in nausea for some more time even after childbirth.
X
Desktop Bottom Promotion