For Quick Alerts
ALLOW NOTIFICATIONS  
For Daily Alerts

ಎದೆ ಹಾಲುಣಿಸುವ ತಾಯಿ 'ಬೀನ್ಸ್' ಸೇವಿಸಬಹುದೇ?

ಮಗುವಿನ ಜನನದ ನಂತರ ತಾಯಿಯು ಮಗುವಿಗೆ ಎದೆ ಹಾಲುಣಿಸುವಾಗ ಕೆಲವೊಂದು ಅಂಶಗಳತ್ತ ಹೆಚ್ಚು ಗಮನ ಹರಿಸಬೇಕಾಗುತ್ತದೆ. ನೀವು ಸೇವಿಸುವುದು ಮಗುವಿಗೆ ನೀವು ಉಣಿಸುವ ಹಾಲಿನ ಮೂಲಕ ರವಾನೆಯಾಗುತ್ತದೆ ಎಂಬ ಅಂಶವನ್ನು ನೀವು ಮರೆಯಬಾರದು....

By Jaya Subramanya
|

ತಾಯ್ತನವೆಂಬ ಅಮೃತ ಗಳಿಗೆಯು ಸ್ತ್ರೀಯ ಜೀವನದಲ್ಲಿ ಮಹತ್ವದ ಘಟ್ಟವಾಗಿದೆ. ಹೆಣ್ಣು ಪರಿಪೂರ್ಣವಾಗುವುದು ಒಬ್ಬ ಉತ್ತಮ ಸಂಗಾತಿ ದೊರೆತು, ತಮ್ಮ ಪ್ರೀತಿಯ ಫಲವಾದ ಮುದ್ದು ಕಂದಮ್ಮನನ್ನು ಹೆಡೆದಾಗ ಒಬ್ಬ ಹೆಣ್ಣು ಪರಿಪೂರ್ಣ ಆನಂದವನ್ನು ಅನುಭವಿಸುತ್ತಾಳೆ. ಆದರೆ ಈ ತಾಯ್ತನವೆಂಬ ಘಟ್ಟ ಅತಿ ಮಹತ್ವದ್ದಾಗಿದ್ದು ಪ್ರತಿಯೊಂದು ಕ್ಷಣವನ್ನೂ ಆಕೆ ಮುನ್ನೆಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ನೀವು ಸೇವಿಸುವ ಆಹಾರವನ್ನೇ ನಿಮ್ಮ ಮಗುವೂ ಸೇವಿಸುತ್ತದೆ ಎಂಬ ಅಂಶವನ್ನು ನೀವು ಹೆಚ್ಚು ಜ್ಞಾಪಕದಲ್ಲಿಟ್ಟುಕೊಂಡು ಸೂಕ್ತವಾದುದನ್ನೇ ನೀವು ಆಯ್ಕೆಮಾಡಿಕೊಳ್ಳಬೇಕಾಗುತ್ತದೆ. ಗರ್ಭಿಣಿಯರೇ ಹಣ್ಣು-ತರಕಾರಿಗಳೆಂದರೆ ಮುಖ ಸಿಂಡರಿಸಬೇಡಿ

ಮಗುವಿನ ಜನನದ ನಂತರ ತಾಯಿಯು ಮಗುವಿಗೆ ಎದೆ ಹಾಲುಣಿಸುವಾಗ ಕೆಲವೊಂದು ಅಂಶಗಳತ್ತ ಹೆಚ್ಚು ಗಮನ ಹರಿಸಬೇಕಾಗುತ್ತದೆ. ನೀವು ಸೇವಿಸುವುದು ಮಗುವಿಗೆ ನೀವು ಉಣಿಸುವ ಹಾಲಿನ ಮೂಲಕ ರವಾನೆಯಾಗುತ್ತದೆ ಎಂಬ ಅಂಶವನ್ನು ನೀವು ಮರೆಯಬಾರದು. ಹುಟ್ಟುವ ಮಗು ಆರೋಗ್ಯವಾಗಿರಬೇಕೇ? ಆಹಾರಕ್ರಮ ಹೀಗಿರಲಿ....

ಒಮ್ಮೊಮ್ಮೆ ನಿಮ್ಮ ಆಹಾರವು ಮಗುವಿಗೆ ಅಲರ್ಜಿಯನ್ನಂಟು ಮಾಡುವ ಸಾಧ್ಯತೆ ಕೂಡ ಇರುವುದರಿಂದ ನೀವು ಈ ನಿಟ್ಟಿನಲ್ಲಿ ಹೆಚ್ಚಿನ ಗಮನವನ್ನು ಹರಿಸಬೇಕಾಗುತ್ತದೆ. ನೀವು ಮಗುವಿಗೆ ಹಾಲುಣಿಸುವಾಗ ಈ ಅಲರ್ಜಿಗಳು ಮಗುವನ್ನು ಸಮೀಪಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೀವು ಸೇವಿಸುವ ಹಣ್ಣು ತರಕಾರಿಗಳತ್ತ ಕೂಡ ನೀವು ಗಮನಹರಿಸಬೇಕು.

ಇಂದಿನ ಲೇಖನದಲ್ಲಿ ನೀವು ಹೆಚ್ಚು ಗಮನ ಹರಿಸಬೇಕಾದ ತರಕಾರಿ ಬೀನ್ಸ್ ಕುರಿತು ಕೆಲವೊಂದು ಅಂಶಗಳನ್ನು ನಾವು ತಿಳಿಸಲಿದ್ದೇವೆ. ನೀವು ಹಾಲುಣಿಸುವ ಸಂದರ್ಭದಲ್ಲಿ ಬೀನ್ಸ್ ಅನ್ನು ಸೇವಿಸಬಹುದೇ ಬೇಡವೇ ಎಂಬುದನ್ನು ಇಂದಿಲ್ಲಿ ಚರ್ಚಿಸಲಿದ್ದೇವೆ. ಬೀನ್ಸ್ ಒಂದು ಅತ್ಯುತ್ತಮ ತರಕಾರಿಯಾಗಿದ್ದರೂ ನಿಮ್ಮ ಮಗು ಇದರಿಂದ ಅಲರ್ಜಿಗೆ ಒಳಗಾಗುತ್ತಿದೆ ಎಂದಾದಲ್ಲಿ ಅದನ್ನು ಕೂಡಲೇ ನಿಲ್ಲಿಸಬೇಕು. ಅಲ್ಲದೆ ಹೆಚ್ಚುವರಿ ಕಾಳಜಿಯನ್ನು ಈ ಸಮಯದಲ್ಲಿ ನೀವು ತೆಗೆದುಕೊಳ್ಳಬೇಕು...ಮುಂದೆ ಓದಿ...

 ಹಾಲನ್ನು ಉತ್ಪಾದಿಸುವಲ್ಲಿ ಸಹಕಾರಿ

ಹಾಲನ್ನು ಉತ್ಪಾದಿಸುವಲ್ಲಿ ಸಹಕಾರಿ

ಬೀನ್ಸ್‌ನಲ್ಲಿ ಪ್ರೊಟೀನ್ ಅಂಶಗಳು ಹೆಚ್ಚು ಇದ್ದು ಇದು ಹೆಚ್ಚುವರಿ ಶಕ್ತಿ ಮತ್ತು ನ್ಯೂಟ್ರೀನ್ ಅಂಶಗಳನ್ನು ನೀಡುತ್ತದೆ. ತಾಯಿಯಲ್ಲಿ ಹಾಲನ್ನು ಉತ್ಪಾದಿಸುವಲ್ಲಿ ಕೂಡ ಪ್ರೊಟೀನ್ ಅಂಶಗಳು ಹೆಚ್ಚು ಪರಿಣಾಮಕಾರಿ ಎಂದೆನಿಸಿವೆ. ಕಿಡ್ನಿ ಬೀನ್ಸ್, ಬ್ಲ್ಯಾಕ್ ಬೀನ್ಸ್, ಲಿಮಾ ಬೀನ್ಸ್, ಬ್ಲ್ಯಾಕ್ ಐಡ್ ಪೀಸ್, ಅಲಸಂಡೆ ಮೊದಲಾದವು ಬೇರೆ ಬೇರೆ ಬೀನ್ಸ್ ವಿಧಗಳಾಗಿವೆ.

ಹೆಚ್ಚುವರಿ ನ್ಯೂಟ್ರೀನ್ ಅಂಶಗಳಿವೆ

ಹೆಚ್ಚುವರಿ ನ್ಯೂಟ್ರೀನ್ ಅಂಶಗಳಿವೆ

ಪ್ರೊಟೀನ್ ಅಂಶಗಳಲ್ಲದೆ ಬೀನ್ಸ್‌ನಲ್ಲಿ ಕಬ್ಬಿಣ ಮತ್ತು ಜಿಂಕ್ ಅಂಶಗಳೂ ಇವೆ. ಹೆಚ್ಚು ಪ್ರಮಾಣದ ಪೊಟಾಶಿಯಂ, ಫೊಲೇಟ್ ಮತ್ತು ಡಯೆಟರಿ ಅಂಶಗಳು ಬೀನ್ಸ್‌ನಲ್ಲಿದ್ದು ಹಾಲುಣಿಸುವ ತಾಯಿಗೆ ಇದು ಅತ್ಯಂತ ಮಹತ್ವದ್ದಾಗಿದೆ.

ತೂಕ ಇಳಿಕೆಗೆ ಸಹಕಾರಿ

ತೂಕ ಇಳಿಕೆಗೆ ಸಹಕಾರಿ

ಗರ್ಭಾವಸ್ಥೆಯ ನಂತರ ನೀವು ಹೆಚ್ಚುವರಿ ತೂಕವನ್ನು ಇಳಿಸುವಲ್ಲಿ ಗಮನ ಹರಿಸುತ್ತಿದ್ದೀರಿ ಎಂದಾದಲ್ಲಿ ಬೀನ್ಸ್ ಅತ್ಯುತ್ತಮ ತರಕಾರಿಯಾಗಿದೆ. ಇದರಲ್ಲಿ ಹೆಚ್ಚುವರಿ ಪ್ರೊಟೀನ್ ಇದ್ದು ನಿಮ್ಮನ್ನು ಹೆಚ್ಚು ಸಮಯದವರೆಗೆ ಸಕ್ರಿಯವಾಗಿ ಇರಿಸುತ್ತದೆ. ಅಂತೆಯೇ ಬೀನ್ಸ್‌ನಲ್ಲಿರುವ ಫೈಬರ್ ಅಂಶವು ನಿಮ್ಮ ಹೆಚ್ಚುವರಿ ಆಹಾರ ಸೇವನೆಗೆ ಕಡಿವಾಣ ಹಾಕುತ್ತದೆ ಮತ್ತು ಹೊಟ್ಟೆ ತುಂಬಿದಂತೆ ಮಾಡುತ್ತದೆ.

ಬೀನ್ಸ್ ಸೇವನೆಯನ್ನು ಯಾವಾಗ ಮಾಡಬಾರದು

ಬೀನ್ಸ್ ಸೇವನೆಯನ್ನು ಯಾವಾಗ ಮಾಡಬಾರದು

ನಿಮ್ಮ ಮಗುವಿಗೆ ಏನಾದರೂ ಅಲರ್ಜಿ ಇಲ್ಲವೇ ಹೊಟ್ಟೆನೋವು ಉಂಟಾಗುತ್ತಿದೆ ಎಂದಾದಲ್ಲಿ ಬೀನ್ಸ್ ಸೇವನೆಯನ್ನು ನಿಲ್ಲಿಸಿ. ಹಾಲುಣಿಸಿದ ನಂತರ ನಿಮ್ಮ ಮಗು ಅಳುತ್ತಿದೆಯೇ ಎಂಬುದನ್ನು ಗಮನಿಸಿ. ಆಸಿಡ್ ಅಂಶಕ್ಕೆ ದೇಹವು ಒಳಗಾಗುತ್ತಿದೆ ಎಂದಾದಲ್ಲಿ ಪ್ರೊಟೀನ್ ಅಂಶವುಳ್ಳ ಬೀನ್ಸ್‌ನಂತಹ ತರಕಾರಿ ಸೇವನೆಯನ್ನು ನಿಲ್ಲಿಸಿ.

ಬೀನ್ಸ್ ಸೇವನೆಯಿಂದ ಉಂಟಾಗುವ ಹೊಟ್ಟೆನೋವನ್ನು ತಡೆಯುವುದು ಹೇಗೆ?

ಬೀನ್ಸ್ ಸೇವನೆಯಿಂದ ಉಂಟಾಗುವ ಹೊಟ್ಟೆನೋವನ್ನು ತಡೆಯುವುದು ಹೇಗೆ?

ಬೀನ್ಸ್ ಸೇವನೆಯಿಂದ ನಿಮ್ಮ ಮಗುವಿಗೆ ಹೊಟ್ಟೆನೋವು ಉಂಟಾಗುತ್ತಿದೆ ಎಂದಾದಲ್ಲಿ ಬೀನ್ಸ್ ಅನ್ನು ಚೆನ್ನಾಗಿ ಬೇಯಿಸಿ ಹಿಸುಕಿ ನಂತರವಷ್ಟೇ ಅದನ್ನು ತಿನ್ನಿ. ಇದು ಗ್ಯಾಸ್ ಉತ್ಪಾದನೆಯನ್ನು ನಿಲ್ಲಿಸುತ್ತದೆ. ನೀರಿನಲ್ಲಿ ಬೀನ್ಸ್ ಅನ್ನು ನೆನೆಸಿಟ್ಟುಕೊಂಡು ಅದರ ನೀರನ್ನು ಎರಡು ಮೂರು ಬಾರಿ ಬದಲಾಯಿಸಿ ನಂತರ ಸೇವಿಸುವುದರಿಂದ ಕೂಡ ಮಗುವಿಗೆ ಉಂಟಾಗುವ ಹೊಟ್ಟೆನೋವು, ಅಲರ್ಜಿಯನ್ನು ತಡೆಗಟ್ಟಬಹುದಾಗಿದೆ. ಇನ್ನು ಬೀನ್ಸ್ ಜೊತೆಗೆ ಲಿಂಬೆ ಎಲೆ, ಫೆನ್ನಲ್ ಗಿಡಮೂಲಿಕೆಗಳು ಮೊದಲಾದವನ್ನು ಬೇಯಿಸಿ ಸೇವಿಸುವುದರಿಂದ ಕೂಡ ಹೊಟ್ಟೆನೋವನ್ನು ತಡೆಗಟ್ಟಬಹುದಾಗಿದೆ.

English summary

Can You Eat Beans While Breastfeeding?

Can you eat beans while breastfeeding? Read on to know.... With each phase of maternity, there would surely be a lot of doubts and confusions in the minds of new mothers. The confusion on what to eat and what not to will stay with you even after your pregnancy, and during your nursing period.
X
Desktop Bottom Promotion