For Quick Alerts
ALLOW NOTIFICATIONS  
For Daily Alerts

ಅಮೃತ ಸಮಾನವಾದ ಎದೆಹಾಲನ್ನು ವೃದ್ಧಿಸುವ ಆಹಾರಗಳು

|

ಹೆಣ್ಣಿಗೆ ಗರ್ಭಿಣಿಯಾಗುವುದೆಂದರೆ ಅದು ಜೀವನದ ಅತೀ ರೋಮಾಂಚನದ ಕ್ಷಣ. ಅದರಲ್ಲೂ ಹೆರಿಗೆಯಾಗಿ ಮಗುವಿನ ಮುಖ ವೀಕ್ಷಿಸಿದರೆ ಆಗ ಆಕೆಗೆ ಸ್ವರ್ಗವೇ ಧರೆಗಿಳಿದಂತೆ. ಹೆಣ್ಣಿಗೆ ಗರ್ಭಧಾರಣೆಯೇ ಒಂದು ಅದ್ಭುತ ಅನುಭವ, ಅದರಲ್ಲೂ ಮಗುವಿಗೆ ಹಾಲುಣಿಸುವ ಸಮಯ ವಿಶೇಷವಾಗಿರುವಂತಹದ್ದು. ಎದೆ ಹಾಲು ಮಗುವಿನ ಸಿಗುವ ಅತೀ ಶ್ರೇಷ್ಠ ನೈಸರ್ಗಿಕ ಆಹಾರ.

ಇದು ಕೇವಲ ಮಗುವಿಗೆ ಆಹಾರ ಮಾತ್ರವಲ್ಲದೆ, ಹಲವಾರು ರೀತಿಯ ಅನಾರೋಗ್ಯದಿಂದ ಮಗುವನ್ನು ಕಾಪಾಡುತ್ತದೆ. ಯಾಕೆಂದರೆ ಎದೆ ಹಾಲು ರಕ್ತಕ್ಕೆ ವಿವಿಧ ರೀತಿಯ ರೋಗನಿರೋಧಕಗಳನ್ನು ಪೂರೈಸುತ್ತದೆ.

ಅಷ್ಟೇ ಅಲ್ಲದೆ ಎದೆ ಹಾಲಿನಲ್ಲಿ ಮೂರು ಖನಿಜಗಳು ಅಂದರೆ ಕ್ಯಾಲ್ಶಿಯಂ, ರಂಜಕ ಮತ್ತು ಕಬ್ಬಿಣಾಂಶಗಳು ಸಹ ಇರುತ್ತವೆ. ಎದೆಹಾಲಿನಲ್ಲಿ ಈ ಖನಿಜಗಳು ಉನ್ನತವಾದ ಜೈವಿಕ ಲಭ್ಯತೆಯ ಪರಿಮಾಣಗಳಲ್ಲಿ ಲಭಿಸುತ್ತದೆ.

Foods that help increase breast milk naturally

ಉದಾಹಾರಣೆಗೆ, ತಾಯಿಯ ಎದೆಹಾಲಿನಲ್ಲಿ ಮಗುವು ಶೇ.50 ರಿಂದ 75 ರಷ್ಟು ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತದೆ. ಲಿಪೇಸ್ ಹೊರತು ಪಡಿಸಿ ಮಗುವಿನ ಜೀರ್ಣಕ್ರಿಯೆಗೆ ಸಹಕರಿಸುವ ಇನ್ನಿತರ ಕಿಣ್ವಗಳು ಎದೆಹಾಲಿನಲ್ಲಿ ಲಭಿಸುತ್ತವೆ. ಇದಕ್ಕಾಗಿ ತಾಯಿಹಾಲಿನ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿರುವುದು ಅವಶ್ಯವಾಗಿದೆ. ಹಾಗಾದರೆ ಬನ್ನಿ ಎದೆ ಹಾಲನ್ನು ಹೆಚ್ಚಿಸಲು ನೆರವಾಗುವ ಪ್ರಮುಖ ಆಹಾರಗಳನ್ನು ಇಲ್ಲಿ ವಿವರಿಸಲಾಗಿದೆ. ಮುಂದೆ ಓದಿ... ಮಗುವಿನ ದೈಹಿಕ ಕ್ಷಮತೆಗೆ ತಾಯಿಯ ಎದೆ ಹಾಲು ಅತ್ಯಗತ್ಯ

ಬೆಳ್ಳುಳ್ಳಿ
ಬೆಳ್ಳುಳ್ಳಿಯ ಕೊಂಚ ಖಾರವಾದ ವಾಸನೆಗೆ ಮುಖ್ಯ ಕಾರಣ ಇದರಲ್ಲಿ ಪ್ರಮುಖವಾಗಿರುವ ಗಂಧಕದ ಸಂಯುಕ್ತ ವಸ್ತುಗಳ ಪ್ರಮಾಣ. ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ (Allicin) ಎಂಬ ಪೋಷಕಾಂಶವು ಜೀವಿರೋಧಿ (antibacterial) ವೈರಸ್ ವಿರೋಧಿ (anti-viral), ಮತ್ತು ಆಂಟಿ ಆಕ್ಸಿಡೆಂಟು ಗುಣಗಳನ್ನು ಹೊಂದಿರುವುದರಿಂದ ಹಲವು ರೀತಿಯಲ್ಲಿ ಆರೋಗ್ಯವನ್ನು ರಕ್ಷಿಸುತ್ತದೆ. ಅಷ್ಟೇ ಏಕೆ ಜೀರ್ಣಶಕ್ತಿಯನ್ನು ಹೆಚ್ಚಿಸುವ ಬೆಳ್ಳುಳ್ಳಿಗೆ

ತಾಯಿಹಾಲನ್ನು ಹೆಚ್ಚಿಸುವ ಶಕ್ತಿಯೂ ಇದೆ
ಹಾಗಾಗಿ ಮೂರು ಎಸಳು ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಕೊಚ್ಚಿ ಒಂದು ಲೋಟ ನೀರಿನಲ್ಲಿ ಕುದಿಸಿ. ಕುದಿಬಂದ ಬಳಿಕ ಜ್ವಾಲೆಯನ್ನು ಚಿಕ್ಕದಾಗಿಸಿ ಈ ನೀರು ಕಾಲುಭಾಗವಾಗುವವರೆಗೂ ಮುಂದುವರೆಸಿ. ಈಗ ಒಂದು ಕಪ್ ಹಸುವಿನ ಹಾಲನ್ನು ಹಾಕಿ ಮತ್ತೊಮ್ಮೆ ಕುದಿ ಬರಿಸಿ. ಕುದಿಬಂದ ಬಳಿಕ ಇಳಿಸಿ ಸೋಸಿ ಅರ್ಧ ಚಮಚ ಜೇನು ಸೇರಿಸಿ ಕಲಕಿ. ಈ ದ್ರವವನ್ನು ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಸುಮಾರು ಆರು ತಿಂಗಳವರೆಗೂ ಇದನ್ನು ಕುಡಿಯುವುದು ಶ್ರೇಯಸ್ಕರ.

ಬಾದಾಮಿ ಮತ್ತು ಗೋಡಂಬಿ
ಗೋಡ೦ಬಿ ಬೀಜಗಳು ಕಡಿಮೆ ಪ್ರಮಾಣದಲ್ಲಿ ಸೋಡಿಯ೦ ಅನ್ನು ಒಳಗೊ೦ಡಿದ್ದು, ಪೊಟ್ಯಾಶಿಯ೦ ಅನ್ನು ಅತ್ಯಧಿಕ ಪ್ರಮಾಣದಲ್ಲಿ ಒಳಗೊ೦ಡಿವೆ. ಅಷ್ಟೇ ಏಕೆ ಗೋಡ೦ಬಿ ಬೀಜಗಳಲ್ಲಿ ಸೆಲೇನಿಯ೦ ಹಾಗೂ ವಿಟಮಿನ್ E ಗಳ ರೂಪದಲ್ಲಿ ಆ೦ಟಿ ಆಕ್ಸಿಡೆ೦ಟ್ ಗಳು ಸಮೃದ್ಧವಾಗಿವೆ. ಹಾಗಾಗಿ ಪ್ರತಿದಿನ ಕೆಲವು ಬಾದಾಮಿ ಬೀಜದ ಜೊತೆ ಗೋಡಂಬಿಗಳನ್ನು ಸೇವಿಸುವ ಮೂಲಕವೂ ತಾಯಿಹಾಲನ್ನು ಹೆಚ್ಚಿಸಬಹುದು. ಆದರೆ ಒಂದು ದಿನಕ್ಕೆ ಹತ್ತಕ್ಕಿಂತ ಹೆಚ್ಚು ಬಾದಾಮಿ ಅಥವಾ ಗೋಡಂಬಿಯನ್ನು ಸೇವಿಸಬೇಡಿ.

ಶುಂಠಿಯ ಪೇಸ್ಟ್


ಆರೋಗ್ಯದ ಆಗರವಾಗಿರುವ ಶುಂಠಿ ವಿಟಮಿನ್‌ಗಳು, ಮ್ಯಾಂಗನೀಸ್ ಮತ್ತು ತಾಮ್ರದಂತಹ ಖನಿಜಗಳು ದೇಹದ ಕಾರ್ಯಕ್ಷಮತೆಗೆ ಅತಿ ಅಗತ್ಯವಾಗಿವೆ. ಹಾಗಾಗಿ ಗರ್ಭಿಣಿಯರು ಶುಂಠಿಯನ್ನು ಅರೆದು, ರಸ ತೆಗೆದು, ಮಸಾಲೆಯಲ್ಲಿ ಮಿಶ್ರಣ ಮಾಡಿ, ನೀರಿನಲ್ಲಿ ಕುದಿಸಿ ಮೊದಲಾದ ವಿವಿಧ ರೀತಿಯಲ್ಲಿ ಬಳಸಬಹುದು.
ಅಲ್ಲದೆ ನಿತ್ಯದ ಅಡುಗೆಗಳಲ್ಲಿ ಶುಂಠಿ ಯಥೇಚ್ಛವಾಗಿರುವಂತೆ ನೋಡಿಕೊಳ್ಳಿ. ಹಸಿಶುಂಠಿಯ ಪೇಸ್ಟ್ ಮಾಡಿಕೊಂಡು ನಿಮ್ಮ ನಿತ್ಯದ ಅಡುಗೆಗಳಾದ ಸಾರು, ಪಲ್ಯ ಮೊದಲಾದವುಗಳ ಜೊತೆ ಸೇರಿಸುವ ಮೂಲಕ ರುಚಿಯನ್ನು ಹೆಚ್ಚಿಸುವ ಜೊತೆಗೆ ತಾಯಿಯ ಎದೆ ಹಾಲಿನ ಉತ್ಪಾದನೆಯಲ್ಲಿಯೂ ಹೆಚ್ಚಳವಾಗುತ್ತದೆ.

ನೀರು ಮತ್ತು ಹಾಲು

ದೇಹದ ಎಲ್ಲಾ ಕಾರ್ಯಗಳಿಗೆ ನೀರು ಅಗತ್ಯವಾಗಿರುವಂತೆಯೇ ತಾಯಿಹಾಲಿನ ಉತ್ಪಾದನೆಯಲ್ಲಿಯೂ ನೀರು ಅಗತ್ಯವಾಗಿದೆ. ಈ ಅಗತ್ಯವನ್ನು ಪೂರೈಸುವಲ್ಲಿ ಅತ್ಯುತ್ತಮವಾದುದು ಹಸುವಿನ ಹಾಲು. ಇದರಲ್ಲಿ ಶೇಖಡಾ ಎಂಭತ್ತು ಅಪ್ಪಟ ನೀರು ಇರುವುದರಿಂದ ಹಾಗೂ ಹಾಲಿನಲ್ಲಿರುವ ಇತರ ಪೋಷಕಾಂಶಗಳು ತಾಯಿಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಬೇರೆ ಸಮಯದಲ್ಲಿ ಎಂಟು ಲೋಟ ನೀರು ನಿಮಗೆ ಅಗತ್ಯವಿದೆ. ಪ್ರಥಮ ತಿಂಗಳುಗಳಲ್ಲಿ ಈ ಪ್ರಮಾಣವನ್ನು ಸುಮರು ಹನ್ನೆರಡು ಲೋಟಗಳಿಗೆ ಹೆಚ್ಚಿಸುವುದು ಒಳಿತು.
English summary

Foods that help increase breast milk naturally

You may be wondering if your body is producing enough milk to meet your baby's growing needs or if there is anything else you can do to boost your milk supply. Certain foods are popularly believed to increase the supply of breastmilk and some are even backed by research. Here are some important tips to increase your breast milk have a look
Story first published: Monday, July 13, 2015, 16:46 [IST]
X
Desktop Bottom Promotion